ಕನ್ನಡ ಸುದ್ದಿ  /  Entertainment  /  Television News Amruthadhaare Serial Episode April 3 Deepansu Torture Bhumika, Goutham Tention About Jataka Pcp

Amruthadhaare: ನಾನು ಕರೆದಾಗ ಬರಬೇಕು ಎಂಬ ದೀಪಾನ್ಶು ಬೆದರಿಕೆಯಿಂದ ಮಹಿಮಾಗೆ ಆತಂಕ; ಗೌತಮ್‌ ನೆಮ್ಮದಿಗೂ ಭಂಗ

Amruthadhaare Serial: ಒಂದೆಡೆ ಭೂಮಿಕಾ ಮತ್ತು ಗೌತಮ್‌ ಅವರನ್ನು ದೂರ ಮಾಡಲು ಜ್ಯೋತಿಷಿ ಬಳಿ ಶಕುಂತಲಾದೇವಿ ಸುಳ್ಳು ಹೇಳಿಸಿದ್ದಾರೆ. ಇನ್ನೊಂದೆಡೆ ದೀಪಾನ್ಶುವಿನ ಟಾರ್ಚರ್‌ ತಡೆಯಲಾಗದೆ ಮಹಿಮಾ ಪರಿತಪಿಸುತ್ತಿದ್ದಾಳೆ.

Amruthadhaare: ನಾನು ಕರೆದಾಗ ಬರಬೇಕು ಎಂಬ ದೀಪಾನ್ಶು ಬೆದರಿಕೆಯಿಂದ ಮಹಿಮಾಗೆ ಆತಂಕ
Amruthadhaare: ನಾನು ಕರೆದಾಗ ಬರಬೇಕು ಎಂಬ ದೀಪಾನ್ಶು ಬೆದರಿಕೆಯಿಂದ ಮಹಿಮಾಗೆ ಆತಂಕ

ದಿವಾನ್‌ ಮನೆಯ ಜ್ಯೋತಿಷಿ-ಗುರು "ಗೌತಮ್‌-ಭೂಮಿಕಾ ದೈಹಿಕವಾಗಿ ದೂರ ಇರಬೇಕು" ಎಂದು ಹೇಳಿದಾಗ ಗೌತಮ್‌ಗೆ ಆತಂಕವಾಗುತ್ತದೆ. ಆದರೆ, ಇದೆಲ್ಲ ಶಕುಂತಲಾದೇವಿ ಪ್ಲ್ಯಾನ್‌ ಎನ್ನುವುದು ಗೌತಮ್‌ಗೆ ಗೊತ್ತಿರುವುದಿಲ್ಲ. ಭೂಮಿಕಾಳಿಂದ ಗೌತಮ್‌ ದೂರ ಇರಬೇಕೆಂದು ಕುತಂತ್ರ ಮಾಡಿರುತ್ತಾರೆ. ಆದರೆ, ಈ ಸತ್ಯ ಸಂಗತಿ ತಿಳಿಯದ ಗೌತಮ್‌ಗೆ ನಿಜಕ್ಕೂ ಆತಂಕವಾಗಿರುತ್ತದೆ. "ಥ್ಯಾಂಕ್ಸ್‌ ಗುರುಗಳೇ, ನೀವು ಕೊಟ್ಟ ಡೋಸ್‌ ಚೆನ್ನಾಗಿ ವರ್ಕ್‌ ಆಗುತ್ತದೆ" ಎಂದು ಮನಸ್ಸಿನಲ್ಲಿಯೇ ಶಕುಂತಲಾ ಅಂದುಕೊಳ್ಳುತ್ತಾರೆ.

ಇನ್ನೊಂದೆಡೆ ಮಹಿಮಾಳಿಗೆ ಸಂಕಷ್ಟ ಆರಂಭವಾಗಿದೆ. ದೀಪಾನ್ಶು ಈಕೆಯ ಬೆನ್ನು ಬಿದ್ದಿದ್ದಾನೆ. ಅನಿವಾರ್ಯವಾಗಿ ಕೆಳಗೆ ಕಾಯುತ್ತಿರುವ ದೀಪಾನ್ಶುವನ್ನು ಭೇಟಿಯಾಗಲು ಬರುತ್ತಾಳೆ. "ನಿನ್ನ ಸೀಕ್ರೆಟ್‌ ಎಲ್ಲಾ ಹೊರಕ್ಕೆ ಬಂದರೆ ಏನಾಗಬಹುದು" ಎಂದು ಹೇಳುತ್ತಾನೆ. "ಬ್ಲ್ಯಾಕ್‌ಮೇಲ್‌ ಮಾಡ್ತಾ ಇದ್ದೀಯಾ. ನೀನು ನನ್ನ ದಾರಿಗೆ ಬರಲು ನಾನು ಹೀಗೆ ಮಾಡುತ್ತ ಇದ್ದೇನೆ" ಎಂದು ಆತ ಹೇಳುತ್ತಾನೆ. "ನಾನು ನಿನ್ನ ಲವರ್‌ ಆಗಿದ್ದೆ. ಆದರೆ, ನೀನು ಅರ್ಥ ಮಾಡಿಕೊಂಡಿಲ್ಲ. ನಿನ್ನ ಅಬಾರ್ಷನ್‌ ವಿಷಯ ಮನೆಯವರಿಗೆ ಹೇಳಿದರೆ ಏನಾಗುತ್ತದೆ ಎಂದು ತಿಳಿದುಕೋ. ನಾವು ಎಲ್ಲಾದರೂ ಆಚೆ ಹೋಗಿ ಸುತ್ತಾಡಿ ಬರೋಣ. ನಾನು ಕರೆದಾಗ ಎಲ್ಲಾ ಬರಬೇಕು. ನನ್ನ ಜತೆ ಒಬಿಡಿಯೆಂಟ್‌ ಆಗಿರಬೇಕು" ಎಂದು ಬೆದರಿಸುತ್ತಾನೆ. ಮನೆಗೆ ವಾಪಸ್‌ ಬಂದ ಮಹಿಮಾ ಟೆನ್ಷನ್‌ನಲ್ಲಿದ್ದಾಳೆ. ಯಾರದ್ದೇ ಫೋನ್‌ ಬಂದರೂ ಭಯ ಪಡುತ್ತಾಳೆ. ಈ ದೀಪಾನ್ಶುವಿನಿಂದ ನನ್ನ ನೆಮ್ಮದಿ ಹಾಳಾಗುತ್ತಾಳೆ. ಮಹಿಮಾ ಏನೂ ತಿಂಡಿ ತಿನ್ನುವುದಿಲ್ಲ. ಮನೆಯವರ ಕಾಳಜಿ ನೋಡಿಯೂ ಆತಂಕವಾಗುತ್ತದೆ.

ಮಲ್ಲಿ ಮತ್ತು ಭೂಮಿಕಾ ಮಾತನಾಡುತ್ತ ಇರುತ್ತಾರೆ. ಜ್ಯೋತಿಷಿ ಮಾತು ಕೇಳಿ ಭಯ ಆಗಿತ್ತು ಎಂದೆಲ್ಲ ಮಲ್ಲಿ ಹೇಳುತ್ತಾಳೆ. "ನೀನು ಈ ಮನೆಯಿಂದ ಹೊರಗೆ ಹೋಗುವ ಪರಿಸ್ಥಿತಿ ಬಂದರೆ ನಾವೆಲ್ಲ ಜತೆಯಾಗಿ ಹೋಗೋಣ" ಎಂದು ಭೂಮಿಕಾ ಹೇಳುತ್ತಾಳೆ. ಇದಾದ ಬಳಿಕ ಗಂಡನ ಹೇಗೆ ಪ್ರೀತಿಸಬೇಕು, ಹೇಗೆ ಪ್ರೀತಿಯ ಸೂತ್ರದಲ್ಲಿ ಕಟ್ಟಿ ಹಾಕಬೇಕು ಎಂದೆಲ್ಲ ಭೂಮಿಕಾ ಮಲ್ಲಿಗೆ ಸಲಹೆ ನೀಡುತ್ತಾಳೆ.

ಗೌತಮ್‌ ಗಂಭೀರವಾಗಿ ಯೋಚಿಸುತ್ತ ಇದ್ದಾನೆ. ಜ್ಯೋತಿಷಿ ಹೇಳಿದ ಮಾತುಗಳು ನೆನಪಾಗುತ್ತವೆ. ಆಗ ನಾಟಕದ ಸೂತ್ರಧಾರಿ ಶಕುಂತಲಾ ಬರುತ್ತಾರೆ. ಗೌತಮ್‌ಗೆ ಒಂದಿಷ್ಟು ಸಮಧಾನ ಹೇಳುತ್ತಾರೆ. "ಭೂಮಿಕಾಳಿಗೆ ಏನಾಗುತ್ತದೆ ಎಂದು ಭಯವಾಗುತ್ತದೆ" ಎಂದು ಗೌತಮ್‌ ಹೇಳುತ್ತಾನೆ. "ಎಲ್ಲಾ ಸಮಸ್ಯೆಗೂ ಪರಿಹಾರ ಇದ್ದೇ ಇರುತ್ತದೆ. ನಾವ್ಯಾಕೆ ಬೇರೆ ಜ್ಯೋತಿಷಿಗಳಿಗೆ ತೋರಿಸಿ ಸೆಕೆಂಡ್‌ ಒಪಿನಿಯನ್‌ ಪಡೆಯುವುದು ಒಳ್ಳೆಯದು" ಎಂದು ಹೇಳುತ್ತಾನೆ. "ಯಾರ ಹತ್ರ ಹೋದರೂ ಜಾತಕ ಒಂದೇ ಅಲ್ವ" ಎಂದು ಶಕುಂತಲಾ ಹೇಳುತ್ತಾವೆ. "ಜಾತಕ ಒಂದೇ ಆದ್ರೂ ನೋಡುವವರು ಬೇರೆಬೇರೆ ಅಲ್ವ?" ಎನ್ನುತ್ತಾನೆ. "ನಾಳೆನೇ ನಾನು ಬೇರೆ ಶಾಸ್ತ್ರಿಗಳಿಗೆ ತೋರಿಸುವೆ" ಎಂದು ಶಕುಂತಲಾ ಹೇಳುತ್ತಾಳೆ. "ನಾನು ಬರ್ತಿನಿ" ಎಂದು ಹೇಳುತ್ತಾನೆ. ಅದಕ್ಕೆ ಶಕುಂತಲಾ "ಬೇಡ, ನೀನು ಟೆನ್ಷನ್‌ ಮಾಡಿಕೊಳ್ಳುವೆ" ಎಂದೆಲ್ಲ ಹೇಳುತ್ತಾನೆ.

"ಯಾವುದೇ ಕಾರಣಕ್ಕೆ ಈ ವಿಚಾರ ಭೂಮಿಕಾಳಿಗೆ ಗೊತ್ತಾಗಬಾರದು" ಎಂದು ಇಬ್ಬರು ಮಾತನಾಡುತ್ತಾರೆ.

ಜೀವನ್‌ ಬಂದಾಗಲೂ ಮಹಿಮಾ ಟೆನ್ಷನ್‌ನಲ್ಲಿದ್ದಾಳೆ. ಜೀವನ್‌ ಬಂದಾಗ ಕುಳಿತಿರುತ್ತಾಳೆ. "ಏನು ನಿನ್ನ ಮೊಬೈಲ್‌ ಸರಿ ಇಲ್ವ. ದೀಪಾನ್ಶು ಫೋನ್‌ ಮಾಡ್ತಾ ಇದ್ದ. ನಿನ್ನ ಮೊಬೈಲ್‌ಗೆ ಕಾಲ್‌ ಹೋಗ್ತಾ ಇಲ್ಲ ಎಂದ" ಎಂದು ದೀಪಾನ್ಸು ಮೆಸೆಜ್‌ ಮಾಡಿದ ಸಂಗತಿಯನ್ನು ಜೀವನ್‌ ಹೇಳುತ್ತಾನೆ. ಈ ಮೂಲಕ ದೀಪಾನ್ಶು ಜೀವನ್‌ಗೂ ಕಾಲ್‌ ಮಾಡಿರುವ ಸಂಗತಿ ಮಹಿಮಾಳಿಗೆ ತಿಳಿಯುತ್ತದೆ. "ಅದೇನಿಲ್ಲ, ಟ್ರಿಪ್‌ ಪ್ಲಾನಿಂಗ್‌ ಬಗ್ಗೆ ಒತ್ತಾಯ ಮಾಡ್ತಾ ಇದ್ರು. ನಾನು ಬರೋಲ್ಲ ಅಂದೆ" ಎಂದು ಸುಳ್ಳು ಹೇಳುತ್ತಾಳೆ. "ಟ್ರಿಪ್‌ಗೆ ಹೋಗು" ಎಂದು ಜೀವನ್‌ ಹೇಳುತ್ತಾನೆ. "ಹಾಗಾದ್ರೆ ನೀನು ಲೀವ್‌ಗೆ ಅಪ್ಲೈ ಮಾಡು. ಇಬ್ರೇ ಹೋಗೋಣ" ಎಂದು ಹೇಳುತ್ತಾಳೆ. "ನನಗೆ ಇಯರ್‌ ಎಂಡ್‌, ಮ್ಯಾನೇಜರ್‌ ಬಿಡೋಲ್ಲ" ಅನ್ನುತ್ತಾನೆ. "ನೀನು ಬರೋಲ್ಲ ಎಂದರೆ ನಾನೂ ಬರೋದಿಲ್ಲ" ಎನ್ನುತ್ತಾಳೆ. ಆ ಸಮಯದಲ್ಲಿ ಜೀವನ್‌ ನಂಬರ್‌ಗೆ ದೀಪಾನ್ಶು ಕಾಲ್‌ ಮಾಡುತ್ತಾನೆ. ಜೀವನ್‌ ಆ ಫೋನ್‌ ಅನ್ನು ಮಹಿಮಾಳಿಗೆ ನೀಡುತ್ತಾನೆ. "ನನಗೆ ನಿನ್ನ ಎಲ್ಲಾ ಕಾಂಟ್ಯಾಕ್ಟ್‌ ಗೊತ್ತು. ಬಿಡೋಲ್ಲ" ಎಂದು ಬೆದರಿಸುತ್ತಾನೆ. ದೀಪಾನ್ಶುವನ್ನು ಭೇಟಿಯಾಗುತ್ತಾಳೆ. "ಏನಾಗಿದೆ ನಿನಗೆ, ನನಗೆ ಯಾಕೆ ಮೆಂಟಲ್‌ ಟಾರ್ಚರ್‌ ಕೊಡ್ತಿಯಾ" ಎಂದು ಕೇಳುತ್ತಾಳೆ. "ನಾನು ಏನು ಹೇಳ್ತಿನೋ ಅದನ್ನೇ ಮಾಡ್ತಿನಿ. ನಿನ್ನ ಮನೆಯವರ ಮುಂದೆ ಅಬಾರ್ಷನ್‌ ವಿಷಯ ಹೇಳಿದ್ರೆ ಏನಾಗುತ್ತದೆ" ಎಂದೆಲ್ಲ ಬೆದರಿಸುತ್ತಾನೆ.

ಭೂಮಿಕಾ ಮ್ಯಾಚ್‌ ನೋಡುತ್ತಾ ಇರುತ್ತಾಳೆ. ಗೌತಮ್‌ ಬರುತ್ತಾನೆ. ಭೂಮಿಕಾಳನ್ನು ನೋಡುತ್ತ ಮನಸ್ಸಲ್ಲಿ ದುಃಖವಾಗುತ್ತದೆ. ಏನಾಗಿದೆ ಇವರಿಗೆ, ಆಫೀಸ್‌ ಟೆನ್ಷನ್‌ ಇರಬೇಕು ಎಂದುಕೊಳ್ಳುತ್ತಾಳೆ ಭೂಮಿಕಾ. "ನಾನು ಆಗಿನಿಂದ ನೋಡುತ್ತಾ ಇದ್ದೇನೆ. ನಿಮಗೆ ಏನಾಗಿದೆ" ಎಂದು ಕೇಳಿದರೂ ಅನ್ಯಮನಸ್ಕನಾಗಿಯೇ ಇರುತ್ತಾನೆ. ಈ ಸಮಯದಲ್ಲಿ ಗೌತಮ್‌ ಬೆನ್ನಿನ ಮೇಲೆ ಕೈ ಇಡುತ್ತಾಳೆ. ಆತನ ಮನಸ್ಸಲ್ಲಿ ಆತಂಕ ಮೂಡುತ್ತದೆ.

IPL_Entry_Point