ಅಮೃತಧಾರೆ: ಇವಳು ಮಲ್ಲಿ ಜೈದೇವ್ ದಿವಾನ್ ಎಂದ ಭೂಮಿಕಾ; ಒನ್‌ಮೋರ್ ಒನ್‌ಮೋರ್ ಬಜ್ಜಿ ತಿಂದ ಗೌತಮ್; ಜೀವನ್‌ಗೆ ಸಿಗ್ತು ಮಹಿಮಾಳ ಕೈತುತ್ತು
Amruthadhaare Serial Story: ಮಲ್ಲಿ ಈ ಮನೆ ಸೊಸೆ ಎಂದು ಭೂಮಿಕಾ ಹೇಳುತ್ತಾಳೆ. ಶಕುಂತಲಾದೇವಿಗೆ ಸ್ನೇಹಿತೆಯರ ಮುಂದೆ ಅಪಮಾನವಾಗುತ್ತದೆ. ಇನ್ನೊಂದೆಡೆ ಭೂಮಿಕಾ ಮತ್ತು ಗೌತಮ್ ಪ್ರೀತಿಮಾತುಗಳು ಹೆಚ್ಚಾಗಿವೆ. ಮತ್ತೊಂದೆಡೆ ಮಹಿಮಾ ಸಾಕಷ್ಟು ಬದಲಾಗಿದ್ದಾಳೆ. ಜೀವನ್‌ಗೆ ಕೈತುತ್ತು ತಿನ್ನಿಸ್ತಾಳೆ.
ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿ ಧೈರ್ಯವಾಗಿ ಮಾತನಾಡುತ್ತಾಳೆ. ಕೆಲಸದವಳು ಎಂದುಕೊಂಡು ಅತಿಥಿಯಲ್ಲಿ ಒಬ್ಬರು ಮಲ್ಲಿಯ ಕೆನ್ನೆಗೆ ಹೊಡೆಯಲು ಮುಂದಾಗುತ್ತಾಳೆ. ತಕ್ಷಣ ಆಕೆಯ ಕೈಯನ್ನು ಭೂಮಿಕಾ ತಡೆಯುತ್ತಾಳೆ. ಯಾಕೆ ಕೈ ಮಾಡಿದ್ರಿ, ತಪ್ಪಲ್ವ ಎಂದು ಭೂಮಿಕಾ ಕೇಳುತ್ತಾಳೆ. ಆಕೆ ಕೆಲಸದವಳು ಎನ್ನುತ್ತಾರೆ ಶಕುಂತಲಾದೇವಿ ಸ್ನೇಹಿತೆ. "ಇವಳು ಕೆಲಸದವಳು ಅಲ್ಲ, ಈ ಮನೆಯ ಸೊಸೆ, ಹೀಗಾಗಿ ಮಾತನಾಡಿದ್ದಾಳೆ" ಎನ್ನುತ್ತಾರೆ ಭೂಮಿಕಾ. ವಾಟ್ ಇವಳು ಈ ಮನೆಯ ಸೊಸೆಯಾ? ಎಂದು ಅಚ್ಚರಿಯಿಂದ ಪ್ರಶ್ನಿಸಿದಾಗ "ಹೌದು ಇವಳು ಈ ಮನೆಯ ಸೊಸೆ, ಈ ಮನೆಯ ಜೈದೇವ್ ಅವರ ಪತ್ನಿ" ಎಂದು ಭೂಮಿಕಾ ವಿವರಿಸುತ್ತಾಳೆ. ಇದನ್ನು ಕೇಳಿ ಗೆಳತಿಯರಿಗೆ ಆಶ್ಚರ್ಯವಾಗುತ್ತದೆ. ಶಕುಂತಲಾದೇವಿ ಪರಿಸ್ಥಿತಿ ಹೇಳಿ ಉಪಯೋಗವಿಲ್ಲ. "ಇವಳು ಮಲ್ಲಿ ಜೈದೇವ್ ದಿವಾನ್" ಎಂದು ಪರಿಚಯಿಸುತ್ತಾಳೆ ಭೂಮಿಕಾ. ಯಾರನ್ನೂ ಲುಕ್‌ನಿಂದ ಅಳೆಯಬಾರದು, ಯಾರ ಸರ್‌ನೇಮ್ ಏನಾಗಿರುತ್ತದೆ ಎಂದು ಅರಿಯಲಾಗುವುದಿಲ್ಲ. ನಮ್ಮ ಮನೆಯ ಗೆಸ್ಟ್ ನೀವು. ಗೆಸ್ಟ್ ಆಗಿ ಬಂದು ಮನೆಯವರ ಬಗ್ಗೆಯೇ ಈ ರೀತಿ ಕೆಟ್ಟದಾಗಿ ಮಾತನಾಡಿದರೆ ಅದಕ್ಕೆ ಹೇಗೆ ಉತ್ತರ ಕೊಡಬೇಕೆಂದು ಇವಳಿಗೂ ಗೊತ್ತಿರುತ್ತದೆ ಅಲ್ವಾ" ಎಂದು ಭೂಮಿಕಾ ಪ್ರಶ್ನಿಸುತ್ತಾಳೆ. ನೀವೆಲ್ಲರೂ ದೊಡ್ಡವರು ಎನ್ನುವ ಕಾರಣಕ್ಕೆ ಇವಳು ಸಾರಿ ಕೇಳ್ತಾಳೆ ಎಂದಾಗ ಮಲ್ಲಿ ಕ್ಷಮಿಸಿ ಎನ್ನುತ್ತಾಳೆ. ಈಗ ನೀವು ಮಾಡಿದ ತಪ್ಪಿಗೆ ಸಾರಿ ಕೇಳಿ ಎಂದು ಭೂಮಿಕಾ ಹೇಳುತ್ತಾಳೆ. ಅನಿವಾರ್ಯವಾಗಿ ಆ ಮೂವರೂ ಸಾರಿ ಕೇಳುತ್ತಾರೆ.
ಇದನ್ನು ಓದಿ: ಅಮೃತಧಾರೆ ಧಾರಾವಾಹಿಯ ಎಲ್ಲಾ ಸಂಚಿಕೆಗಳು
ಸ್ನೇಹಿತೆಯರ ಮುಂದೆ ತಲೆತಗ್ಗಿಸಿದ ಶಕುಂತಲಾದೇವಿ
ಮಲ್ಲಿ ಮತ್ತು ಭೂಮಿಕಾ ಹೋದ ಬಳಿಕ "ಏನು ಶಕುಂತಲಾದೇವಿ, ನಿನ್ನ ಸ್ಟೇಟಸ್ ಏನು? ಈ ಕೆಲಸದವಳನ್ನು ಸೊಸೆ ಮಾಡಿಕೊಂಡ್ಯಾ?" ಎಂದೆಲ್ಲ ಕೇಳುತ್ತಾರೆ. "ಮಗನ ಒತ್ತಾಯಕ್ಕೆ ಹೀಗೆ ಮಾಡಿದೆ" ಎಂದು ಶಕುಂತಲಾ ಹೇಳುತ್ತಾರೆ. ನಮ್ಮ ರಿಲೇಷನ್‌ನಲ್ಲೂ ಹೀಗೆ ಆಗಿತ್ತು, ನೀನು ಹೀಗೆ ಮಾಡಬಾರದಿತ್ತು, ಯಾಕಾದ್ರೂ ನಿಮ್ಮ ಮನೆಗೆ ಬಂದ್ವೋ ಎಂದೆಲ್ಲ ಹೇಳಿ ಹೋಗುತ್ತಾರೆ. ಇದರಿಂದ ಶಕುಂತಲಾದೇವಿ ಕಸಿವಿಸಿಗೆ ಒಳಗಾಗುತ್ತಾರೆ.
ಇನ್ನೊಂದೆಡೆ ಗೌತಮ್‌ಗೆ ಫೋನ್ ಬರುತ್ತದೆ. ಭೂಮಿಕಾ ಫೋನ್ ಮಾಡ್ತಾರೆ. ಎಷ್ಟೊತ್ತಿಗೆ ಬರ್ತಿರಾ? ನಿಮಗೆ ಏನು ತಿಂಡಿ ಮಾಡ್ಲಿ ಎಂದು ಕೇಳುತ್ತಾಳೆ. ಬಜ್ಜಿ ಮಾಡಿ ಅನ್ತಾರೆ ಗೌತಮ್. ಏನ್ ಗೆಳೆಯ ಹೋಟೆಲ್‌ನಲ್ಲಿ ಆರ್ಡರ್ ಮಾಡಿದ ಹಾಗೆ ಮಾಡ್ತ ಇದ್ದೀ ಎಂದು ಆನಂದ್ ಹೇಳುತ್ತಾನೆ. ಬಜ್ಜಿ ಜತೆಗೆ ಚಿಂಟು ಪಿಂಟು ಎರಡು ಮಕ್ಕಳು ಇದ್ದರೆ ಒಳ್ಳೆಯದು ಎನ್ನುತ್ತಾನೆ ಆನಂದ್. ಹೋಗೋದು ಹೋಗ್ತಿಯಾ ಹೋಗುವಾಗ ಮಲ್ಲಿಗೆ ಹೂವು ತೆಗೆದುಕೊಂಡು ಹೋಗು ಎಂದು ಸಲಹೆ ನೀಡುತ್ತಾನೆ ಆನಂದ್.
ಭೂಮಿಕಾಳಿಗೆ ಹೂವು ಮುಡಿಸಿದ ಗೌತಮ್
ಗೌತಮ್ ಮನೆಗೆ ಮಲ್ಲಿಗೆ ಹೂವು ಹಿಡಿದುಕೊಂಡು ಬಂದಿದ್ದಾನೆ. ಭೂಮಿಕಾಳಿಗೆ ನೀಡುತ್ತಾನೆ. ಒಂದಿಷ್ಟು ಪ್ರೀತಿಯ ಮಾತು ನಡೆಯುತ್ತದೆ. ಕೊನೆಗೆ ಗೌತಮ್ ತಾನೇ ಕೈಯಾರೆ ಮಲ್ಲಿಗೆ ಹೂವನ್ನು ಭೂಮಿಕಾಳಿಗೆ ಮುಡಿಸುತ್ತಾನೆ. ಹೂವಿಗೆ ಹೂವು ಮುಡಿಸಿದಂತೆ ಆಯ್ತು ಎನ್ನುತ್ತಾನೆ. ಇತ್ತೀಚೆಗೆ ನಿಮಗೆ ಹೂವು ಇಷ್ಟ ಎಂದು ನನಗೆ ಹೂವು ಅಲರ್ಜಿ ಆಗುತ್ತಿಲ್ಲ ಅನ್ನುತ್ತಾನೆ. ಮಲ್ಲಿಗೆ ಸ್ಟೋರಿ ಸಂಪೂರ್ಣವಾಗಿ ಓದಿ: Amruthadhaare: ಘಮಘಮ ಮೈಸೂರು ಮಲ್ಲಿಗೆ ತಂದ ಗೌತಮ್; ಹೂವನ್ನೇ ಹೂವು ಮುಡಿದುಕೊಂಡ ಹಾಗೆ ಅಂದಾಗ ನಾಚಿಕೊಂಡ್ರು ಭೂಮಿಕಾ ಮೆಲ್ಲಗೆ
ಮನೆಹಾಳ ಮಾವನೂ ಶಕುಂತಲಾದೇವಿ ಮಾತನಾಡುತ್ತಾರೆ. ನಿನಗೆ ಅವಮಾನವಾಯ್ತಲ್ಲ ಎನ್ನುತ್ತಾನೆ ಸಹೋದರ. ನನಗೆ ನೆನಪಿಸಿಕೊಂಡರೆ ಮೈ ಉರಿಯುತ್ತದೆ ಎಂದು ಶಕುಂತಲಾ ಹೇಳುತ್ತಾರೆ. "ನಾವು ಸಮಯ ಕಾದು ನಿಧಾನವಾಗಿ ಅವರಿಗೆ ಮೂಗುದಾರ ಹಾಕಬೇಕು" ಎನ್ನುತ್ತಾರೆ ಮನೆಹಾಳ ಮಾವ ಹೇಳುತ್ತಾನೆ. "ಇನ್ನು ಸುಮ್ಮನೆ ಕುಳಿತುಕೊಳ್ಳಲಾಗುವುದಿಲ್ಲ. ಅದಕ್ಕೂ ಮೊದಲು ಆ ಮಲ್ಲಿಗೆ ಈ ಮನೆಯಿಂದ ಗೇಟ್‌ಪಾಸ್ ನೀಡಬೇಕು" ಎನ್ನುತ್ತಾಳೆ. "ಅದು ಆಗಬೇಕಾದರೆ ಭೂಮಿಕಾಳನ್ನು ಈ ಮನೆಯಿಂದ ಸ್ವಲ್ಪ ದಿನ ಆಚೆಗೆ ಕಳುಹಿಸಬೇಕು" ಎಂದು ಅವರಿಬ್ಬರು ಮಾತನಾಡಿಕೊಳ್ಳುತ್ತಾರೆ.
ಒನ್‌ಮೋರ್ ಒನ್‌ಮೋರ್ ಬಜ್ಜಿ
ಗೌತಮ್‌ಗೆ ಭೂಮಿಕಾ ಬಜ್ಜಿ ನೀಡುತ್ತಾರೆ. "ನೀವು ಬಜ್ಜಿಯಂಗಡಿ ಇಟ್ಟರೆ ಸಿಕ್ಕಾಪಟ್ಟೆ ಫೇಮಸ್ ಆಗ್ತಿರಿ" ಅನ್ತಾರೆ ಗೌತಮ್. "ಹೂಂ ಎಲ್ಲರೂ ಒನ್‌ಮೋರ್ ಒನ್ ಮೋರ್ ಅನ್ತಾ ಕೇಳ್ತಾರೆ ಅಲ್ವ" ಎಂದು ಬೆಳ್ಳುಳ್ಳಿ ಕಬಾಬ್ ಡೈಲಾಗ್ ಹೇಳ್ತಾರೆ ಭೂಮಿಕಾ. ಈ ಮೂಲಕ ಸೀರಿಯಲ್ ಡೈರೆಕ್ಟರ್ ಇತ್ತೀಚಿನ ವಿದ್ಯಮಾನಗಳಿಗೆ ಸೀರಿಯಲ್ ಅನ್ನು ಕನೆಕ್ಟ್ ಮಾಡಿ ನಮ್ಮ ಸುತ್ತಮುತ್ತಲು ನಡೆಯುತ್ತಿರುವ ಘಟನೆಯಂತೆ ಅಮೃತಧಾರೆ ಧಾರಾವಾಹಿಯನ್ನು ಪ್ರೇಕ್ಷಕರ ಮುಂದಿಡುತ್ತಿದ್ದಾರೆ. ತಿಂಡಿ ತಿನ್ನುವುದನ್ನು ಅನುಭವಿಸಿಕೊಂಡು ತಿನ್ನಬೇಕು ಇತ್ಯಾದಿ ಗೌತಮ್ ಆಹಾರದ ಕುರಿತು ಮಾತನಾಡುತ್ತಾರೆ. ಅತ್ತೆ ಚೆಕ್‌ಗೆ ಸಹಿ ಮಾಡಲು ಹೇಳಿದ್ರಲ್ವ ಅದಕ್ಕೆ ನೀವು ಸಹಿ ಹಾಕಿಲ್ಲ ಎಂದು ಭೂಮಿಕಾ ನೆನಪಿಸ್ತಾರೆ. ನಿಮ್ಮಲ್ಲಿ ಅತ್ತೆ ಪದೇಪದೇ ಚೆಕ್ ಕೇಳುವ ಬದಲು ನೀವು ಒಂದಿಷ್ಟು ಬ್ಲಾಂಕ್ ಚೆಕ್‌ಗೆ ಸಹಿ ಹಾಕಿ ಅವರಿಗೆ ಕೊಡಬಹುದಲ್ವ ಎಂದು ಭೂಮಿಕಾ ಹೇಳುತ್ತಾಳೆ. ಒಳ್ಳೆ ಐಡಿಯಾ ಅಂತಾರೆ ಗೌತಮ್. ಮುಂದಿನ ದಿನಗಳಲ್ಲಿ ಚೆಕ್‌ನಲ್ಲಿ ಹೆಚ್ಚು ಹಣ ಡ್ರಾ ಮಾಡಿ ಭೂಮಿಕಾ ಹೆಸರಿಗೆ ಬರುವಂತೆ ಮಾಡುವ ಸೀನ್ ಏನಾದರೂ ಇರುವುದೇ ಕಾದು ನೋಡಬೇಕಿದೆ.
ಜೀವನ್‌ಗೆ ಸಿಗ್ತು ಮಹಿಮಾಳ ಕೈತುತ್ತು
ಸದಾಶಿವ ಟೆನ್ಷನ್‌ನಲ್ಲಿ ಕಾಯ್ತಾ ಇದ್ದಾರೆ. ಜೀವ ಯಾಕೆ ಇನ್ನೂ ಬಂದಿಲ್ಲ ಅನ್ತಾರೆ. ಸ್ವಲ್ಪ ಹೊತ್ತಲ್ಲಿ ಜೀವನ್ ಬರುತ್ತಾನೆ. ಯಾಕೆ ಲೇಟ್ ಎಂದು ಅಪ್ಪ ಕೇಳಿದಾಗ "ಮಂತ್ ಎಂಡ್, ಇಯರ್ ಎಂಡ್" ಅನ್ತಾನೆ ಜೀವನ್. ವಿಪರೀತ ಕೆಲಸ, ವಿಪರೀತ ಟಾರ್ಗೆಟ್‌ಗಳೆಂದು ಸದಾಶಿವ ಈಗಿನ ಕೆಲಸದ ಜಗತ್ತಿನ ಕುರಿತು ಮಾತನಾಡುತ್ತಾರೆ. ಇದಾದ ಬಳಿಕ ಜೀವನ್ ಮತ್ತು ಮಹಿಮಾ ಮಾತುಕತೆ ಇರುತ್ತದೆ. ಮಹಿಮಾಳೇ ಜೀವನ್‌ಗೆ ಊಟ ಮಾಡಿಸ್ತಾಳೆ.
ವಿಭಾಗ