ಕನ್ನಡ ಸುದ್ದಿ  /  Entertainment  /  Television News Amruthadhaare Serial Episode Sunday Deepanshu Propose To Mahima, Apeksha Showstopper Dreams Pcp

Amruthadhaare: ಮಹಿಮಾಳಿಗೆ ಐ ಲವ್‌ ಯು ಎಂದು ಬ್ಲ್ಯಾಕ್‌ಮೇಲ್‌ ಮಾಡಿದ ದೀಪಾನ್ಶು; ಅಪೇಕ್ಷಾಳ ಶೋಸ್ಟಾಪರ್‌ ಕನಸಿಗೆ ವಿಘ್ನ

Amruthadhaare Serial Story: ಗೌತಮ್‌ ಮತ್ತು ಭೂಮಿಕಾ ಒಬ್ಬರಿಗೊಬ್ಬರು ಪ್ರಪೋಸ್‌ ಮಾಡಬೇಕೆಂದುಕೊಂಡಾಗ ಅದನ್ನು ತಡೆಯಲು ಶಕುಂತಲಾದೇವಿ ಅನಾರೋಗ್ಯದ ನಾಟಕವಾಡುತ್ತಾರೆ. ಇನ್ನೊಂದೆಡೆ ಮಹಿಮಾಳಿಗೆ ದೀಪಾನ್ಶು ಪ್ರಪೋಸ್‌ ಮಾಡುತ್ತಾನೆ. ಅವಳು ಒಪ್ಪದೆ ಇದ್ದಾಗ ಬೆದರಿಕೆ ಹಾಕುತ್ತಾನೆ. ಶೋ ಸ್ಟಾಪರ್ಸ್‌ ಆಗುವ ಅಪೇಕ್ಷಾಳ ಕನಸಿಗೆ ತೊಂದರೆಯಾಗಿದೆ.

Amruthadhaare: ಮಹಿಮಾಳಿಗೆ ಐ ಲವ್‌ ಯು ಎಂದು ಬ್ಲ್ಯಾಕ್‌ಮೇಲ್‌ ಮಾಡಿದ ದೀಪಾನ್ಶು
Amruthadhaare: ಮಹಿಮಾಳಿಗೆ ಐ ಲವ್‌ ಯು ಎಂದು ಬ್ಲ್ಯಾಕ್‌ಮೇಲ್‌ ಮಾಡಿದ ದೀಪಾನ್ಶು

Amruthadhaare Serial: ಭೂಮಿಕಾಳ ಲವ್‌ ಲೆಟರ್‌ ಅನ್ನು ಗೌತಮ್‌ ನೋಡಬಾರದು, ಗೌತಮ್‌ ಭೂಮಿಕಾಳಿಗೆ ಪ್ರಪೋಸ್‌ ಮಾಡಬಾರದು ಎಂದುಕೊಳ್ಳುತ್ತಾರೆ ಶಕುಂತಲಾದೇವಿ. ಮಲ್ಲಿ ಮನೆಯಲ್ಲಿ ಸುಂದರವಾದ ಸೀರೆ ಉಟ್ಟುಕೊಂಡು ಬಂದಿದ್ದಾಳೆ. ಜೈದೇವ್‌ ಅವರು ಸೀರೆ ತಂದುಕೊಟ್ಟಿದ್ದಾರೆ ಎಂದಾಗ ಭೂಮಿಕಾಳಿಗೆ ನಂಬಲಾಗುತ್ತಿಲ್ಲ. "ಕೆಲವೊಂದು ಒಳ್ಳೆಯದು ಕೂಡ ಕೆಟ್ಟದರ ಸೂಚನೆ" ಎಂದು ಭೂಮಿಕಾ ಅಂದುಕೊಳ್ಳುತ್ತಾಳೆ. "ಅವರು ನಿಜವಾಗಿಯೂ ಬದಲಾಗಿದ್ದಾರೆ" ಎಂದು ಮಲ್ಲಿ ಹೇಳುತ್ತಾಳೆ. "ಜೈದೇವ್‌ ಹೀಗೆಲ್ಲ ಬದಲಾಗೋರಲ್ಲ ಅಲ್ವ" ಎಂದು ಭೂಮಿಕಾ ಹೇಳುತ್ತಾಳೆ.

ಇನ್ನೊಂದೆಡೆ ಶಕುಂತಲಾದೇವಿ ಟೆನ್ಷನ್‌ನಲ್ಲಿದ್ದಾರೆ. ಅತ್ತಿಗೆ ಅಣ್ಣನಿಗೆ ಲವ್‌ ಲೆಟರ್‌ ಬರೆದಿದ್ದಾರೆ ಎಂದು ಅಶ್ವಿನಿ ಹೇಳುತ್ತಾಳೆ. ನಾವು ಅಂದುಕೊಂಡಂತೆ ಏನೂ ನಡೆಯುತ್ತಿಲ್ಲ ಎಂದು ಅವರಿಬ್ಬರು ಮಾತನಾಡಿಕೊಳ್ಳುತ್ತಾರೆ. ಅಷ್ಟೊತ್ತಿಗೆ ಶಕುಂತಲಾದೇವಿ ತಲೆತಿರುಗಿ ಬಿದ್ದಂಗೆ ಬೀಳುತ್ತಾರೆ.

ಒಂದು ಕಡೆ ಹೂವು ಹಿಡಿದುಕೊಂಡು ಗೌತಮ್‌ ಬರುತ್ತಾನೆ. ಇನ್ನೊಂದು ಕಡೆ ಲವ್‌ ಲೆಟರ್‌ ಹಿಡಿದುಕೊಂಡು ಬರುತ್ತಾಳೆ. ಮತ್ತೊಂದು ಕಡೆ ಶಕುಂತಲಾದೇವಿ ತಲೆತಿರುಗಿ ಬಿದ್ದಾಂಗೆ ನಾಟಕ ಮಾಡ್ತಾರೆ. ಅಶ್ವಿನಿ ಅವಳು ಎಲ್ಲರನ್ನೂ ಕರೆಯಲು ಓಡಿ ಬರುತ್ತಾಳೆ. ಗೌತಮ್‌ ಮತ್ತು ಭೂಮಿಕಾ ಪ್ರೇಮದ ಭಾವನೆಯಲ್ಲಿದ್ದಾಗ "ಅಣ್ಣಾ ಅಮ್ಮ ತಲೆಸುತ್ತಿ ಬಿದ್ದಿದ್ದಾರೆ" ಎಂದು ಅಶ್ವಿನಿ ಕೂಗುತ್ತಾಳೆ. ಅಲ್ಲಿಗೆ ಅವರಿಬ್ಬರ ಪ್ರಪೋಸ್‌ ಸ್ಟೋರಿಗೆ ತಾತ್ಕಾಲಿಕ ಬ್ರೇಕ್‌ ಬೀಳುತ್ತದೆ. ಯಾವ ರೀತಿ ಹೇಳಬೇಕೆಂದು ಡಾಕ್ಟರ್‌ಗೂ ಶಕುಂತಲಾದೇವಿ ಸೂಚನೆ ನೀಡಿರುತ್ತಾರೆ. ಡಾಕ್ಟರ್‌ ಬಂದು "ಬಿಪಿ ಹೆಚ್ಚಾಗಿದೆ" ಎನ್ನುತ್ತಾರೆ.

ಶಕುಂತಲಾ ದೇವಿಯ ಆರೋಗ್ಯದ ಕುರಿತು ಗೌತಮ್‌ ಕಾಳಜಿ ವಹಿಸುತ್ತಾನೆ. "ಯಾವ ವಿಚಾರದ ಕುರಿತು ಟೆನ್ಷನ್‌ ಮಾಡಿಕೊಳ್ಳಬೇಡಿ" ಎಂದು ಹೇಳುತ್ತಾನೆ. ಮನಸ್ಸಿನ ಮಾತು ಹೇಳಲು ಇದು ಸರಿಯಾದ ಸಮಯವಲ್ಲ ಎಂದು ಭೂಮಿಕಾ ಮನಸ್ಸಿನಲ್ಲಿ ಅಂದುಕೊಳ್ಳುತ್ತಾಳೆ.

ಮಹಿಮಾಳನ್ನು ಪಾರ್ಟಿಗೆ ಬರಲು ದೀಪಾನ್ಶು ಕರೆಯುತ್ತಾನೆ. ಅವಳು ಒಪ್ಪುವುದಿಲ್ಲ. ಲಾಂಗ್‌ ಡ್ರೈವ್‌ಗೂ ಒಪ್ಪುವುದಿಲ್ಲ. "ನಾನು ಯಾಕೆ ನಿನ್ನ ಜತೆ ಬರಬೇಕು" ಎಂದು ಮಹಿಮಾ ಹೇಳಿದಾಗ "ನಾನು ನಿನ್ನನ್ನು ಲವ್‌ ಮಾಡ್ತಾ ಇದ್ದೀನಿ" ಎಂದು ದೀಪಾನ್ಶು ಹೇಳುತ್ತಾನೆ. "ಐ ಲವ್‌ ಯು, ಯು ಮಸ್ಟ್‌ ಲವ್‌ ಮಿ" ಎಂದು ದೀಪಾನ್ಶು ಹೇಳುತ್ತಾನೆ. "ನೀನು ನನ್ನ ಲವ್‌ನ ಒಪ್ಪಿಕೊಳ್ಳಬೇಕು, ಇಲ್ಲಾಂದ್ರೆ ಏನು ಬೇಕಾದ್ರೂ ಆಗಬಹುದು" ಎಂದು ಬೆದರಿಕೆ ಹಾಕುತ್ತಾನೆ. ಮನೆಯಲ್ಲಿ ಕುಳಿತುಕೊಂಡು ಮಹಿಮಾ ಟೆನ್ಷನ್‌ನಲ್ಲಿ ಇರುತ್ತಾಳೆ. ಇದೇ ಸಮಯದಲ್ಲಿ ಅಪೇಕ್ಷಾ ಬರುತ್ತಾಳೆ. ನಾಳೆ ಎಷ್ಟು ಗಂಟೆಗೆ ಹೋಗೋಣ ಎಂದುಕೊಳ್ಳುತ್ತಾಳೆ. ನಾಳೆ ಬೇಡ ಎನ್ನುತ್ತಾಳೆ ಮಹಿಮಾ.

ಗೌತಮ್‌ ಯೋಚನೆ ಮಾಡುತ್ತಾ ಇರುತ್ತಾನೆ. ಭೂಮಿಕಾಳ ಜತೆ ಮಾತನಾಡುತ್ತಾನೆ. ಮನೆಯವರ ಬಗ್ಗೆ ಎಷ್ಟು ಕೇರ್‌ ತೆಗೆದುಕೊಳ್ಳಬೇಕು ಎಂದು ಹೇಳುತ್ತಾನೆ. "ಅಮ್ಮನ ವಿಷಯದಲ್ಲಿ ಆಸ್ಪತ್ರೆ ಟೆನ್ಷನ್‌ ಆರಂಭವಾಗಿದೆ" ಎಂದು ಹೇಳುತ್ತಾನೆ. "ಅಮ್ಮ ಈ ಮನೆಗೆ ತುಂಬಾ ಇಂಪರ್ಟೆಂಟ್‌" ಎಂದೆಲ್ಲ ಹೇಳುತ್ತಾನೆ. ಭೂಮಿಕಾ ಸಮಧಾನದ ಮಾತುಗಳನ್ನು ಹೇಳುತ್ತಾಳೆ.

IPL_Entry_Point