ರಾಜೇಶ್ ನಟರಂಗ ಪ್ರೊಫೈಲ್: ಅಮೃತಧಾರೆ ಸೀರಿಯಲ್‌ನ ಡುಮ್ಮ ಸಾರ್ ಓದಿದ್ದೇನು? ಪತ್ನಿ ಚೈತ್ರಾ ಜೊತೆಯಾಗಿದ್ದು ಹೇಗೆ? ಮಗಳು ಏನ್ಮಾಡ್ತಿದ್ದಾರೆ?
ಕನ್ನಡ ಸುದ್ದಿ  /  ಮನರಂಜನೆ  /  ರಾಜೇಶ್ ನಟರಂಗ ಪ್ರೊಫೈಲ್: ಅಮೃತಧಾರೆ ಸೀರಿಯಲ್‌ನ ಡುಮ್ಮ ಸಾರ್ ಓದಿದ್ದೇನು? ಪತ್ನಿ ಚೈತ್ರಾ ಜೊತೆಯಾಗಿದ್ದು ಹೇಗೆ? ಮಗಳು ಏನ್ಮಾಡ್ತಿದ್ದಾರೆ?

ರಾಜೇಶ್ ನಟರಂಗ ಪ್ರೊಫೈಲ್: ಅಮೃತಧಾರೆ ಸೀರಿಯಲ್‌ನ ಡುಮ್ಮ ಸಾರ್ ಓದಿದ್ದೇನು? ಪತ್ನಿ ಚೈತ್ರಾ ಜೊತೆಯಾಗಿದ್ದು ಹೇಗೆ? ಮಗಳು ಏನ್ಮಾಡ್ತಿದ್ದಾರೆ?

Rajesh Nataranga: ಕನ್ನಡ ಕಿರುತೆರೆ ಮತ್ತು ಸಿನಿಮಾರಂಗದಲ್ಲಿ ತಮ್ಮ ನಟನೆ ಮೂಲಕವೇ ಛಾಪು ಮೂಡಿಸಿರುವ ನಟ ರಾಜೇಶ್‌ ನಟರಂಗ. ಪೋಷಕ ಪಾತ್ರಗಳ ಮೂಲಕ ಗಮನ ಸೆಳೆದ ಇದೇ ರಾಜೇಶ್‌ ಅವರ ವೈಯಕ್ತಿಕ ಬದುಕು ಹೇಗಿದೆ? ಮಡದಿ, ಮಕ್ಕಳು ಏನ್ಮಾಡ್ತಿದ್ದಾರೆ? ಇಲ್ಲಿದೆ ವಿವರ.

ಅಮೃತಧಾರೆ ಸೀರಿಯಲ್‌ ರಾಜೇಶ್‌ ನಟರಂಗ ಜೀವನದ ಕಿರುಪರಿಚಯ
ಅಮೃತಧಾರೆ ಸೀರಿಯಲ್‌ ರಾಜೇಶ್‌ ನಟರಂಗ ಜೀವನದ ಕಿರುಪರಿಚಯ

Amruthadhaare Serial Gowtam Diwan aka Rajesh Nataranga: ಕನ್ನಡ ಕಿರುತೆರೆ ಮತ್ತು ಸಿನಿಮಾಗಳಲ್ಲಿ ತಮ್ಮ ನೈಜ ನಟನೆಯಿಂದಲೇ ಗಮನ ಸೆಳೆದು, ಪೋಷಕ ಪಾತ್ರಗಳಿಗೆ ಜೀವ ತುಂಬುವ ನಟ ರಾಜೇಶ್‌ ನಟರಂಗ. ಸದ್ಯ ಇವರನ್ನು ಇದೇ ಕಿರುತೆರೆ ವೀಕ್ಷಕರು ಡುಮ್ಮ ಸರ್‌ ಎಂದೇ ಗುರುತಿಸುತ್ತಾರೆ. ಅದಕ್ಕೆ ಕಾರಣ; ಅಮೃತಧಾರೆ ಸೀರಿಯಲ್.‌ ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ಈ ಧಾರಾವಾಹಿ ಸದ್ಯ, ಟಿಆರ್‌ಪಿ ವಿಚಾರದಲ್ಲಿ ಟಾಪ್‌ ಲಿಸ್ಟ್‌ನಲ್ಲಿದೆ. ಕಳೆದ ವಾರದ ಟಿಆರ್‌ಪಿ ರೇಟಿಂಗ್‌ನಲ್ಲಿ ಅತಿ ಹೆಚ್ಚು ಟಿಆರ್‌ಪಿ ಪಡೆದು ಮೊದಲ ಸ್ಥಾನಕ್ಕೆ ಬಂದಿತ್ತು ಅಮೃತಧಾರೆ ಸೀರಿಯಲ್.‌ ಈಗ ಇದೇ ಸೀರಿಯಲ್‌ನ ಮೇನ್‌ ಲೀಡ್‌ ರಾಜೇಶ್‌ ನಟರಂಗ ಅವರ ವೈಯಕ್ತಿಕ ಬದುಕಿನ ಬಗ್ಗೆ ತಿಳಿದುಕೊಳ್ಳೋಣ.

ಹುಟ್ಟು, ಓದು, ನಟರಂಗ..

ಬಾಂಬೆಯಲ್ಲಿ1973ರ ಏಪ್ರಿಲ್‌ 18ರಂದು ರಾಜೇಶ್‌ ನಟರಂಗ ಜನಿಸಿದ್ದಾರೆ. ಬೆಳೆದಿದ್ದು ಬೆಂಗಳೂರಿನಲ್ಲಿ. ಓದಿದ್ದು ಬಸವನ ಗುಡಿಯ ನ್ಯಾಶನಲ್‌ ಕಾಲೇಜಿನಲ್ಲಿ ಬಿಎಸ್ಸಿ ಎಲೆಕ್ಟ್ರಾನಿಕ್ಸ್. ಕಾಲೇಜಿನಲ್ಲಿ ಓದುತ್ತಿರುವಾಗಲೇ ನಾಟಕಗಳಲ್ಲಿ ರಾಜೇಶ್‌ ಅವರಿಗೆ ಎಲ್ಲಿಲ್ಲದ ಆಸಕ್ತಿ. ಆ ಆಸಕ್ತಿಯಿಂದಲೇ ನಟರಂಗ ರಂಗ ಸಂಸ್ಥೆ ಸೇರಿಕೊಂಡರು. ಅದಾದ ಬಳಿಕ ದೆಹಲಿಗೂ ತೆರಳಿ, ಅಲ್ಲಿಯೂ ತೆರೆಹಿಂದಿನ ಒಂದಷ್ಟು ಕೆಲಸಗಳನ್ನು ಕಲಿತುಕೊಂಡರು. ಬೆಂಗಳೂರಿಗೆ ಬಂದು ನಿರ್ದೇಶಕರಾಗಿ, ನಿರ್ಮಾಣ ವ್ಯವಸ್ಥಾಪಕರಾಗಿಯೂ ಕೆಲಸ ಮಾಡಿದರು.

ಕಿರುತೆರೆ ಪ್ರವೇಶ

ಹೀಗಿರುವಾಗಲೇ 1998ರಲ್ಲಿ ಟಿ.ಎನ್‌ ಸೀತಾರಾಮ್‌ ಅವರ ನಿರ್ದೇಶನದ ಮಾಯಾಮೃಗ ಸೀರಿಯಲ್‌ನಲ್ಲಿ ಶ್ರೀಧರ್‌ ಎಂಬ ಪಾತ್ರದ ಮೂಲಕ ಬಣ್ಣದ ಲೋಕಕ್ಕೆ ಪರಿಚಿತರಾದರು. ಈ ಸೀರಿಯಲ್‌ ಡಿಡಿ ಚಂದನದಲ್ಲಿ ಪ್ರಸಾರ ಕಂಡಿತ್ತು. ಆ ಸೀರಿಯಲ್‌ ಸುದೀರ್ಘ ವರ್ಷಗಳ ಕಾಲ ಪ್ರಸಾರ ಕಂಡಿತು. ಅದಾದ ಬಳಿಕ 2003ರಲ್ಲಿ ವಿಜಯ ನಿರ್ದೇಶನದ ಗುಪ್ತಗಾಮಿನಿ ಸೀರಿಯಲ್‌ನಲ್ಲಿಯೂ ನಟಿಸಿದರು. ಈಟಿವಿಯಲ್ಲಿ ಪ್ರಸಾರವಾದ ಈ ಸೀರಿಯಲ್‌ನಲ್ಲಿ ತೇಜಸ್ವಿ ಪಾತ್ರ ನೋಡುಗರ ಗಮನ ಸೆಳೆಯಿತು.

ಚಂದನವನದಲ್ಲೂ ಖ್ಯಾತಿ

ಹೀಗೆ ಒಂದಾದ ಮೇಲೊಂದರಂತೆ, ಬದುಕು, ಮುಕ್ತ, ಶಕ್ತಿ, ತ್ರಿವೇಣಿ ಸಂಗಮ ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ. ಸದ್ಯ ಅಮೃತಧಾರೆ ಸೀರಿಯಲ್‌ ಮೂಲಕ ಇನ್ನಷ್ಟು ಎತ್ತರಕ್ಕೇರಿದ್ದಾರೆ. ಬರೀ ಸೀರಿಯಲ್‌ ಮಾತ್ರವಲ್ಲ, ಸಿನಿಮಾಗಳಿಂದಲೂ ಹೆಚ್ಚಿನ ಮನ್ನಣೆ ಗಿಟ್ಟಿಸಿಕೊಂಡರು ರಾಜೇಶ್‌ ನಟರಂಗ. 2002ರಲ್ಲಿ ನಾಗರಹಾವು ಸಿನಿಮಾ ಮೂಲಕ ಆರಂಭವಾದ ಚಂದನವನದ ಪ್ರಯಾಣ, ಅಲ್ಲಿಂದ ಇಲ್ಲಿಯವರೆಗೂ 80ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. 2021ರಲ್ಲಿ ಉದಯ ಟಿವಿಯಲ್ಲಿ ಪ್ರಸಾರವಾದ ನಿನ್ನಿಂದಲೇ ಧಾರಾವಾಹಿಯನ್ನೂ ನಿರ್ಮಾಣ ಮಾಡಿದ್ದರು ರಾಜೇಶ್.‌

ಚೈತ್ರಾ ಜತೆ ಕಲ್ಯಾಣ

ಮದುವೆನೇ ಆಗಬಾರದು ಅನ್ನೋ ಟೈಮ್‌ನಲ್ಲಿ ಸಂಬಂಧಿಕರ ಕಡೆಯಿಂದ ರಾಜೇಶ್‌ ಅವರಿಗೆ ಒಂದು ಫೋಟೋ ಬರುತ್ತೆ. ಮನೆಗೆ ಹೋಗಿ ಹುಡುಗಿ ನೋಡುವ ಶಾಸ್ತ್ರವನ್ನೂ ಮುಗಿಸುತ್ತಾರೆ. ಹುಡುಗಿ ಇಷ್ಟಾನೂ ಆಗ್ತಾರೆ. ಅಷ್ಟೊತ್ತಿಗೆ ನನ್ನ ಶೂಟಿಂಗ್‌ ಇದೆ ಎಂದು ಹೊರಟು ಬಿಡ್ತಾರೆ. ಇತ್ತ ಹುಡುಗಿ ಮನೆಯಲ್ಲಿ ಹುಡುಗ ಇಷ್ಟವಾಗಿದ್ದ. ಕಲಾವಿದ ಅನ್ನೋ ಕಾರಣಕ್ಕೆ ಮದುವೆಗೆ ಒಪ್ಪಿದ್ದರು. ಇತ್ತ ಯಾವ ಕಾರಣಕ್ಕೆ ಹುಡುಗಿಯರು ರಾಜೇಶ್‌ ಅವರನ್ನು ರಿಜೆಕ್ಟ್‌ ಮಾಡಿದ್ದರೋ, ಅದೇ ಕಾರಣ ಇಷ್ಟವಾಗಿ ಚೈತ್ರಾ ಜತೆಯಾದ್ರು.

ಅಪ್ಪನಂತೆ ಮಗಳೂ ನಟಿಯೇ..

ರಾಜೇಶ್‌ ನಟರಂಗ ಅವರದ್ದು ಚಿಕ್ಕ ಕುಟುಂಬ. ಪತ್ನಿ ಚೈತ್ರಾ ಮತ್ತು ಮಗಳು ಧ್ವನಿ. ಧ್ವನಿ, ಪಿಇಎಸ್‌ ಕಾಲೇಜಿನಲ್ಲಿ ಡಿಸೈನಿಂಗ್‌ನಲ್ಲಿ ಫಸ್ಟ್‌ ಇಯರ್‌ ಡಿಗ್ರಿ ಓದುತ್ತಿದ್ದಾರೆ. ಪತ್ನಿ ಚೈತ್ರಾ ಸ್ನೇಹಿತರ ಜತೆ ಇಂಟಿರಿಯರ್‌ ಡಿಸೈನಿಂಗ್‌ ಕಂಪನಿಯಲ್ಲಿ ನಡೆಸುತ್ತಿದ್ದಾರೆ. ಮಗಳು ಧ್ವನಿ ಚಿಕ್ಕಂದಿನಲ್ಲಿಯೇ ಹಲವು ಜಾಹೀರಾತುಗಳಲ್ಲಿ ನಟಿಸಿದ್ದಾರೆ. ಇರಾನಿ ನಿರ್ದೇಶಕ ಮಜಿದ್‌ ಮಜಿದಿ ನಿರ್ದೇಶನದ ಬಿಯಾಂಡ್‌ ದಿ ಕ್ಲೌಡ್ಸ್‌ ಸಿನಿಮಾದಲ್ಲಿಯೂ ಬಾಲ ಕಲಾವಿದೆಯಾಗಿ ಧ್ವನಿ ನಟಿಸಿದ್ದಾರೆ. ಮಲಯಾಳಂನ ಫಹಾದ್‌ ಫಾಸಿಲ್‌ ನಟನೆಯ ಪಚುವುಂ ಅತ್ಬುತ ವಿಳಕ್ಕುಂ ಸಿನಿಮಾದಲ್ಲಿಯೂ ಧ್ವನಿ ನಟಿಸಿದ್ದಾರೆ.

ರಾಜೇಶ್‌ ನಟರಂಗ ಮಗಳು ಧ್ವನಿ ನಟಿಸಿದ ಜಾಹೀರಾತು

Whats_app_banner