ಇನ್ನು ನಿಮ್ಮ ಆಟ ನಡೆಯೋಲ್ಲ ರೀ... ಜೈದೇವ್‌ ಕೊರಳಪಟ್ಟಿ ಹಿಡಿದು ಚಂಡಿಯಾದ್ಲು ಮಲ್ಲಿ; ಅಮೃತಧಾರೆ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಇನ್ನು ನಿಮ್ಮ ಆಟ ನಡೆಯೋಲ್ಲ ರೀ... ಜೈದೇವ್‌ ಕೊರಳಪಟ್ಟಿ ಹಿಡಿದು ಚಂಡಿಯಾದ್ಲು ಮಲ್ಲಿ; ಅಮೃತಧಾರೆ ಧಾರಾವಾಹಿ

ಇನ್ನು ನಿಮ್ಮ ಆಟ ನಡೆಯೋಲ್ಲ ರೀ... ಜೈದೇವ್‌ ಕೊರಳಪಟ್ಟಿ ಹಿಡಿದು ಚಂಡಿಯಾದ್ಲು ಮಲ್ಲಿ; ಅಮೃತಧಾರೆ ಧಾರಾವಾಹಿ

ಅಮೃತಧಾರೆ ಸೀರಿಯಲ್‌ ಇಂದಿನ ಸಂಚಿಕೆ (ಅಕ್ಟೋಬರ್‌ 04): ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿ ಚಂಡಿಯಾಗಿದ್ದಾಳೆ. ಜೈದೇವ್‌ ಕೊರಳಪಟ್ಟಿ ಹಿಡಿದು ಪ್ರಶ್ನಿಸುತ್ತಿದ್ದಾಳೆ. ಇನ್ನೊಂದೆಡೆ ಜೈದೇವ್‌ ವಿರುದ್ಧ ಭೂಮಿಕಾ ಆನಂದ್‌ ಮಹತ್ವದ ಸಾಕ್ಷ್ಯ ಸಂಗ್ರಹಿಸುತ್ತಿದ್ದಾರೆ.

ಇನ್ನು ನಿಮ್ಮ ಆಟ ನಡೆಯೋಲ್ಲ ರೀ... ಜೈದೇವ್‌ ಕೊರಳಪಟ್ಟಿ ಹಿಡಿದು ಚಂಡಿಯಾದ್ಲು ಮಲ್ಲಿ (ಅಮೃತಧಾರೆ ಸೀರಿಯಲ್‌)
ಇನ್ನು ನಿಮ್ಮ ಆಟ ನಡೆಯೋಲ್ಲ ರೀ... ಜೈದೇವ್‌ ಕೊರಳಪಟ್ಟಿ ಹಿಡಿದು ಚಂಡಿಯಾದ್ಲು ಮಲ್ಲಿ (ಅಮೃತಧಾರೆ ಸೀರಿಯಲ್‌)

ಅಮೃತಧಾರೆ ಸೀರಿಯಲ್‌ ಇಂದಿನ ಸಂಚಿಕೆ (ಅಕ್ಟೋಬರ್‌ 04): ಗೌತಮ್‌ ಅವರಿಗೆ ಎಲ್ಲವೂ ಗೊತ್ತಾಗಬೇಕು, ಆದರೆ, ಅದು ಸಾಕ್ಷಿ ಸಮೇತ ಎಂದು ಭೂಮಿಕಾ ಹೇಳುತ್ತಾರೆ. ಅಪರ್ಣಾ, ಆನಂದ್‌, ಪಾರ್ಥ ಜತೆ ಸೇರಿ ಸಾಕ್ಷ್ಯ ಕಲೆಹಾಕುವ ಕೆಲಸ ಅವರಿಗೆ. ಮರುದಿನ ಗೌತಮ್‌ ಮಾತನಾಡುತ್ತಾರೆ. "ನಿನ್ನೆ ರಾತ್ರಿ ನೀವು ಎಲ್ಲಿ ಹೋಗಿದ್ದೀರಿ" ಎಂದು ಕೇಳುತ್ತಾರೆ. ಭೂಮಿಕಾ ಏನೋ ಹೇಳಿ ತಪ್ಪಿಸುತ್ತಾರೆ. ಇದಾದ ಬಳಿಕ ಗೌತಮ್‌ ಅವರ ಬಳಿ ಅಮ್ಮನ ಮನೆಗೆ ಹೋಗಲು ಅನುಮತಿ ಪಡೆಯುತ್ತಾರೆ. ಈ ಮೂಲಕ ಸಾಕ್ಷಿ ಕಲೆ ಹಾಕಲು ಸಮಯ ಹೊಂದಿಸಿಕೊಳ್ಳುತ್ತಾರೆ. "ಸತ್ಯ ಏನು ಅಂತ ನಿಮಗೆ ಗೊತ್ತು ಮಾಡಿಸೋದಕ್ಕೆ ಹೋಗ್ತಾ ಇದ್ದೀನಿ" ಎಂದು ಭೂಮಿಕಾರ ಮನಸ್ಸಿನ ಸ್ವಗತ ಇರುತ್ತದೆ.

ಶಕುಂತಲಾದೇವಿ ಗಂಭೀರವಾಗಿ ಆಲೋಚಿಸುತ್ತಿದ್ದಾರೆ. "ನಿನ್ನ ಚಿಂತೆಗೆ ಕಾರಣವೇನು?" ಎಂದು ರಮಕಾಂತ ಕೇಳುತ್ತಾನೆ. "ನಿನ್ನೆ ರಾತ್ರಿ ಭೂಮಿಕಾ ರಾತ್ರಿ ತಡವಾಗಿ ಮನೆಗೆ ಬಂದ್ಲು. ಅಷ್ಟೊತ್ತಿಗೆ ಅವಳು ಹೊರಗೆ ಯಾಕೆ ಹೋದ್ಲು" ಎಂದು ಶಕುಂತಲಾ ಕೇಳುತ್ತಾರೆ. "ಇಲ್ಲದ್ದನ್ನು ಯೋಚಿಸಬೇಡ" ಎಂದು ರಮಾಕಾಂತ್‌ ಹೇಳುತ್ತಾರೆ. "ಏನೋ ಪ್ರಾಬ್ಲಂ ಆಗಿದೆ, ಎಂಬ ಸಂಶಯ ನನ್ನದು" ಎಂದು ಶಕುಂತಲಾದೇವಿ ಹೇಳುತ್ತಾರೆ. "ನನಗೆ ಗೊತ್ತಿಲ್ಲದೆ ಭೂಮಿಕಾ ಏನೋ ನಡೆಸ್ತಾ ಇದ್ದಾಳೆ. ಏನು ಅಂತ ಗೊತ್ತಾಗಬೇಕು" ಎಂದು ಶಕುಂತಲಾ ಮನಸ್ಸಿನಲ್ಲಿ ಆಲೋಚಿಸುತ್ತಾರೆ.

ಆನಂದ್‌ ಮತ್ತು ಭೂಮಿಕಾ ಭೇಟಿಯಾಗುತ್ತಾರೆ. ಕಂಪನಿಯಲ್ಲಿ ಫ್ರಾಡ್‌ ಆಗಿದೆ ಎಂದು ಪಾರ್ಥ ಹೇಳಿದ್ದ. ಅದನ್ನು ಹುಡುಕೋಣ ಎಂದು ಭೂಮಿಕಾ ಹೇಳುತ್ತಾರೆ. ಆನಂದ್‌ ಕಂಪ್ಯೂಟರ್‌ನಲ್ಲಿ ಹುಡುಕಿ "ಸುಮಾರು 40 ಕೋಟಿ ಮಿಸ್‌ ಮ್ಯಾಚ್‌ ಆಗಿದೆ" ಎನ್ನುತ್ತಾರೆ. ಇದಾದ ಬಳಿಕ ಭೂಮಿಕಾ "ಆನಂದ್‌ ಇನ್ನೊಂದು ಕೆಲಸ ಬೇಕಿತ್ತು" ಎಂದು ಟೆಂಡರ್‌ ವಿಷಯವನ್ನು ತಿಳಿಸುತ್ತಾರೆ.

ಮಲ್ಲಿ ಮನೆಯಲ್ಲಿದ್ದಾಳೆ. ಜೈದೇವ್‌ ಬರುತ್ತಾನೆ.

"ಮನೆಯಲ್ಲಿ ಹೆಂಡತಿ ಇದ್ದಾಳೆ. ಮಗು ಕಳೆದುಕೊಂಡಿದ್ದಾಳೆ. ಅವಳಿಗೆ ಸಮಧಾನ ಮಾಡಬೇಕು ಎಂದು ಗೊತ್ತಾಗೋಲ್ವ?" ಎಂದು ಮಲ್ಲಿ ಕೇಳುತ್ತಾಳೆ.

"ಅದೇ ಆಫೀಸ್‌... ಮೀಟಿಂಗ್.."‌ ಎನ್ನುತ್ತಾನೆ.

"ಗಂಡ ಹೊರಗೆ ಹೋದ ಬಳಿಕ ಹೆಂಡತಿಗೆ ಟೆನ್ಷನ್‌ ಆಗುತ್ತದೆ. ಎಲ್ಲಾದರೂ ಅಡ್ಡದಾರಿ ಹಿಡಿಯುತ್ತಾರೋ... ಅಂತ. ಭಾವನೂ ಆಫೀಸ್‌ಗೆ ಹೋಗ್ತಾರೆ. ಗೌತಮ್‌ ಅವರೂ ಹೋಗ್ತಾರೆ, ಅವರೆಲ್ಲ ಹೊತ್ತಲ್ಲದ ಹೊತ್ತಲ್ಲಿ ಹೋಗ್ತಾರ?" ಎಂದು ಮಲ್ಲಿ ಕೇಳುತ್ತಾಳೆ.

"ಬ್ರೋ, ಪಾರ್ಥ ಆಫೀಸ್‌ ಒಳಗೆ ಕೆಲಸ ಮಾಡುತ್ತಾರೆ ಮಲ್ಲಿ... " ಎಂದೆಲ್ಲ ಹೇಳುತ್ತಾನೆ. ಮಲ್ಲಿ ಅನುಮಾನದಿಂದ ನೋಡುತ್ತಾಳೆ.

"ನಂಗೆ ಹೀಗೆ ಆಯ್ತಲ್ಲ. ಮಗು ಸತ್ತು ಹೋಯ್ತಲ್ವ. ನಿಮಗೆ ಶಾನೇ ಬೇಜಾರ್‌ ಆಗ್ತಾ ಇರಬಹುದಲ್ವ?" ಎಂದು ಕೇಳುತ್ತಾಳೆ ಮಲ್ಲಿ. "ಏನು ಅಂತ ಮಾತನಾಡ್ತಾ ಇದ್ದೀಯ ಮಲ್ಲಿ..." ಎಂದೆಲ್ಲ ಮತ್ತೆ ಮೊಸಳೆ ಕಣ್ಣೀರು ಸುರಿಸುತ್ತಾನೆ.

"ಮಲ್ಲಿ ನನಗೆ ನೀನೇ ಎಲ್ಲಾ ಮಲ್ಲಿ..." ಎಂದು ಆಕೆಯ ಕೆನ್ನೆ ಸವರುವಾಗ ಆಕೆಗೆ ಚೇಳು ಮುಟ್ಟಿದಂತೆ ಆಗುತ್ತದೆ.

"ಮತ್ತೆ ದಿಯಾ?" ಎಂದು ಪ್ರಶ್ನಿಸುತ್ತಾಳೆ. ಜೈದೇವ್‌ಗೆ ಆಘಾತವಾಗುತ್ತದೆ. "ಮಲ್ಲಿ ಏನು ಹೇಳ್ತಾ ಇದ್ದೀಯ" ಎಂದು ಕೇಳುತ್ತಾನೆ.

ಎದ್ದು ನಿಂತ ಮಲ್ಲಿ "ಸಾಕು ನಿಲ್ಸಿ ನಿಮ್ಮ ನಾಟಕನ? ನಿಮ್ಮ ಕಥೆ ಎಲ್ಲಾ ಕೇಳೋಕ್ಕೆ ನಾನು ಹಳೆ ಮಲ್ಲಿ ಅಲ್ಲ" ಎಂದು ಹೇಳುತ್ತಾಳೆ.

"ಮಲ್ಲಿ ನಾನು ಏನು ಮಾಡಿದೆ?" ಎಂದು ಕೇಳುತ್ತಾನೆ.

"ಬುದ್ದಿಬಂದಿದೆ. ಜ್ಞಾನೋದಯವಾಗಿದೆ. ನಿಮ್ಮ ನಾಟಕ, ನಿಮ್ಮ ಬಣ್ಣಬಣ್ಣದ ಮಾತುಗಳು, ಇದ್ಯಾವುದು ನನ್ನ ಜತೆ ನಡೆಯೋದಿಲ್ಲ" ಎಂದು ಹೇಳುತ್ತಾಳೆ.

"ನಾನು ಹಳ್ಳಿ ಹುಡುಗಿ. ನನ್ನ ಬಿಡಿಸಿಕೊಂಡು ಅವಳ ಜತೆ ಹೋಗ್ತೀರ." ಹೀಗೆ ಮಲ್ಲಿ ಸಾಕಷ್ಟು ವಿಚಾರ ಹೇಳುತ್ತಾನೆ. ಶಾಕ್‌ ಆಗುವ ಸರದಿ ಜೈದೇವ್‌ನದು.

"ನೀವು ಈಗ ಅವಳನ್ನೇ ಮೀಟ್‌ ಆಗಿ ಬಂದ್ರಲ್ವ? ಅವತ್ತು ಅಕ್ಕ ಬಾವ ಹೇಳಿದಾಗ ನನಗೂ ದಿಯಾಳಿಗೂ ಏನೂ ಸಂಬಂಧ ಇಲ್ಲ ಅಂದ್ರಲ್ವ. ಅದೆಲ್ಲ ಸುಳ್ಳು ತಾನೇ?" ಎಂದು ಪ್ರಶ್ನಿಸುತ್ತಾಳೆ. "ಮಲ್ಲಿ ಮಾತು ಅತಿಯಾಗ್ತಿದೆ" ಎಂದು ಜೈದೇವ್‌ ಅಬ್ಬರಿಸುತ್ತಾನೆ. "ಆಟ ನಂದಲ್ಲ. ನಾನು ದಡ್ಡಿ ಎಂದು ಮಿತಿಮೀರಿ ಆಟ ಆಡ್ತಾ ಇದ್ದೀರ. ಇನ್ನು ನಿಮ್ಮ ಆಟ ನಡೆಯೋಲ್ಲ ರೀ" ಎಂದು ಮಲ್ಲಿ ಆತನಿಗಿಂತ ಜೋರು ಅಬ್ಬರಿಸುತ್ತಾಳೆ ಮಲ್ಲಿ. ಆತನ ಕೊರಳಪಟ್ಟಿ ಹಿಡಿದು ಪ್ರಶ್ನಿಸುತ್ತಾಳೆ.

ಇನ್ನೊಂದೆಡೆ ಆನಂದ್‌ ಮತ್ತು ಭೂಮಿಕಾ ಮಾತನಾಡುತ್ತಿದ್ದಾರೆ. "ನಿನ್ನ ತಮ್ಮ ಹೀಗೆಲ್ಲ ಮಾಡಿದ್ದಾನೆ. ಸಮಸ್ಯೆ ಸರಿಯಾಯ್ತು ಎಂದು ಗೌತಮ್‌ಗೆ ಹೇಳುವೆ" ಎಂದು ಆನಂದ್‌ ಹೇಳಿದಾಗ "ಅದಕ್ಕೂ ಇನ್ನೂ ಟೈಮ್‌ ಇದೆ" ಎಂದು ಭೂಮಿಕಾ ಹೇಳುತ್ತಾಳೆ. "ಎಲ್ಲವನ್ನೂ ಸಾಕ್ಷಿ ಸಮೇತ ನೀಡೋಣ" ಎಂದು ಭೂಮಿಕಾ ಹೇಳುತ್ತಾರೆ. "ನಾವು ಕೆಂಚನ ಭೇಟಿಯಾಗಬೇಕು" ಎಂದು ಭೂಮಿಕಾ ಹೇಳುತ್ತಾಳೆ. "ಅವ ಯಾಕೆ" ಎಂದು ಆನಂದ್‌ ಕೇಳುತ್ತಾರೆ. "ಚಿಕ್ಕಮಂಗಳೂರಲ್ಲಿ ನನ್ನ ಕಿಡ್ನ್ಯಾಪ್‌ ಮಾಡಿದ್ರಲ್ವ. ಅದು ಜೈದೇವ್‌ ಹೇಳಿ ಕೆಂಚ ಮಾಡಿದ್ದು" ಎನ್ನುತ್ತಾಳೆ. ಈ ಹಿಂದಿನ ಘಟನೆಗಳನ್ನು ತಿಳಿಸುತ್ತಾರೆ. ಇದಾದ ಬಳಿಕ ಕೆಂಚನ ಲೊಕೆಷನ್‌ ಹುಡುಕುತ್ತಾ ಹೋಗುತ್ತಾರೆ.

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)

ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)

ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)

ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)

ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)

ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)

ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)

ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)

ರಣವ್‌: ಜೈದೇವ್‌

ಚಂದನ್‌: ಅಶ್ವಿನಿ

ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)

ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)