ಕನ್ನಡ ಸುದ್ದಿ  /  ಮನರಂಜನೆ  /  ಅಜ್ಜಮ್ಮನಿಂದ ಅಧಿಕಾರ ಹಸ್ತಾಂತರ ಪ್ರಸ್ತಾಪ; ದಿವಾನ್‌ ಮನೆಯ ಯಜಮಾನಿಕೆ ಶಕುಂತಲಾದೇವಿಗೋ, ಭೂಮಿಕಾಳಿಗೋ? ಅಮೃತಧಾರೆ ಸೀರಿಯಲ್‌ ಕಥೆ

ಅಜ್ಜಮ್ಮನಿಂದ ಅಧಿಕಾರ ಹಸ್ತಾಂತರ ಪ್ರಸ್ತಾಪ; ದಿವಾನ್‌ ಮನೆಯ ಯಜಮಾನಿಕೆ ಶಕುಂತಲಾದೇವಿಗೋ, ಭೂಮಿಕಾಳಿಗೋ? ಅಮೃತಧಾರೆ ಸೀರಿಯಲ್‌ ಕಥೆ

Amruthadhaare Yesterday Episode: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ಒಂದಿಷ್ಟು ಹೊಸ ವಿದ್ಯಮಾನಗಳು ನಡೆದಿವೆ. ಅಜ್ಜಮ್ಮ ಮನೆಯ ಅಧಿಕಾರದ ಹಸ್ತಾಂತರದ ಕುರಿತು ಮಾತನಾಡುತ್ತಾರೆ. ಅಜ್ಜಮ್ಮ ಸಾವಿನ ಮಾತುಗಳನ್ನು ಆಡುವಾಗ ಗೌತಮ್‌ ದಿವಾನ್‌ಗೆ ತನ್ನ ಪ್ರೀತಿಪಾತ್ರರ ಅಗಲಿಕೆಯ ನೋವು ನೆನಪಾಗಿದೆ.

ಅಜ್ಜಮ್ಮನಿಂದ ಅಧಿಕಾರ ಹಸ್ತಾಂತರ ಪ್ರಸ್ತಾಪ
ಅಜ್ಜಮ್ಮನಿಂದ ಅಧಿಕಾರ ಹಸ್ತಾಂತರ ಪ್ರಸ್ತಾಪ

Amruthadhaare Yesterday Episode: ಝೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ಒಂದಿಷ್ಟು ಹೊಸ ವಿದ್ಯಮಾನಗಳು ನಡೆದಿವೆ. ಆನಂದ್‌ ಮನೆಯಲ್ಲಿ ಟೇರಸ್‌ ಮೇಲೆ ಗೌತಮ್‌ ಮತ್ತು ಭೂಮಿಕಾ ನಕ್ಷತ್ರ ನೋಡುತ್ತ ಮಲಗಿದ್ದರು. ಒಂದಿಷ್ಟು ಪ್ರೀತಿಯ ಮಾತುಗಳು ನಡೆದಿದ್ದವು. ಇನ್ನೊಂದೆಡೆ ಶಕುಂತಲಾದೇವಿ ಭೂಮಿಕಾಳಿಗೆ ಔಷಧ ನೀಡಿ ಮಗುವಾಗದಂತೆ ನೋಡಿಕೊಳ್ಳಲು ಯೋಜಿಸುತ್ತಾಳೆ. ಭೂಮಿಕಾಳಿಗೆ ಔಷಧ ಕೊಡುವುದು ಯಾರೆಂದು ಪ್ಲ್ಯಾನ್‌ ಮಾಡುತ್ತಾರೆ. ಇಲ್ಲಿಯವರು ಯಾರನ್ನೂ ನಂಬದೆ ಇದ್ದರೂ ಆಕೆಯ ಅಪ್ಪ ಅಮ್ಮ ಹೇಳಿದರೆ ವಿಷ ಬೇಕಾದ್ರೂ ಕುಡಿತಾಳೆ. ಅದಕ್ಕೆ ಅವಳ ಅಮ್ಮ ಮಿಸ್‌ ಮಂದಾಕಿನಿ ಮೂಲಕವೇ ಔಷಧ ನೀಡಿಸ್ತಿನಿ ಎಂದು ಶಕುಂತಲಾದೇವಿ ತನ್ನ ಖತರ್ನಾಕ್‌ ಯೋಜನೆಯನ್ನು ತನ್ನ ಅಣ್ಣನಿಗೆ ತಿಳಿಸುತ್ತಾಳೆ. "ಮುಂದೆ ಏನಾದರೂ ಹೆಚ್ಚು ಕಮ್ಮಿಯಾದರೂ ಅವರ ತಲೆಗೆ ಬರುತ್ತದೆ" ಎನ್ನುತ್ತಾರೆ. ಒಟ್ಟಾರೆ ಗೌತಮ್‌ ಮತ್ತು ಭೂಮಿಕಾರಿಗೆ ಮಕ್ಕಳಾಗಬಾರದು ಎಂದು ಪ್ಲ್ಯಾನ್‌ ಮಾಡುತ್ತಾರೆ.

ಅಪೇಕ್ಷಾ ಮನೆಗೆ ಬಂದಾಗ ಯಾಕೆ ಲೇಟ್‌ ಎಂದು ಕೇಳುತ್ತಾನೆ ಜೀವನ್‌. ಆನಂದ್‌ ಮನೆಗೆ ಹೋಗಿರುವುದನ್ನು ಹೇಳುತ್ತಾಳೆ. "ಅಪ್ಪನ ಜತೆ ಸೇರಿ ಅಂಕಲ್‌ ತರಹ ಎನ್‌ಕ್ವಯರಿ ಮಾಡುತ್ತಾನೆ" ಎಂದು ಮಂದಾಕಿನಿ ಹೇಳುತ್ತಾಳೆ. ಮಂದಾಕಿನಿ ಮತ್ತು ಅಪೇಕ್ಷಾ ಆಮೇಲೆ ಮಾತನಾಡುತ್ತಾರೆ. "ಭೂಮಿಕಾ ಮತ್ತು ಗೌತಮ್‌ ತುಂಬಾ ಕ್ಲೋಸ್‌ ಆಗಿದ್ದಾರೆ" ಎಂದು ಕೇಳಿ ಮಂದಾಕಿನಿಗೆ ಖುಷಿಯಾಗುತ್ತದೆ.

ಗೌತಮ್‌ ಮತ್ತು ಭೂಮಿಕಾ ತಮ್ಮ ಮನೆಗೆ ವಾಪಸ್‌ ಬಂದಿದ್ದಾರೆ. ಬೆಳಗ್ಗೆ ಭೂಮಿ ಕಾಫಿ ತಂದುಕೊಡುತ್ತಾಳೆ. ವಾಹ್‌ ಬಹಳ ಚೆನ್ನಾಗಿದೆ, ಅಡುಗೆಯವರು ಮಾಡಿದ್ದ ಎಂದು ಹೇಳಿದಾಗ ಭೂಮಿಕಾಗೆ ಬೇಸರವಾಗುತ್ತದೆ. ಆನಂದ್‌ ಮನೆಯಲ್ಲಿ ನಾನ್‌ ವೆಜ್‌ ಅಡುಗೆ ಮಾಡಿದ್ರೂ ಅದರ ಕ್ರೆಡಿಟ್‌ ಅಪರ್ಣಾಗೆ ಹೋಗಿದೆ ಅನ್ನೋ ಬೇಸರವೂ ಮನದಲ್ಲಿ ಇದೆ. ಬೆಳ್ಳಂಬೆಳ್ಳಗೆ ಮಂದಾಕಿನಿ ಭೂಮಿಕಾಗೆ ಫೋನ್‌ ಮಾಡಿ ಪ್ರಪೋಸ್‌ ವಿಷಯ ಎಲ್ಲಾ ಕೇಳಿ ಖುಷಿಯಾಗುತ್ತಾರೆ.

ಟ್ರೆಂಡಿಂಗ್​ ಸುದ್ದಿ

ಬೆಳಗ್ಗೆ ಬ್ರೇಕ್‌ಫಾಸ್ಟ್‌ಗೆ ಇಡ್ಲಿ ಚಿಕನ್‌ ಕರಿ, ಚಿಕನ್‌ ಫ್ರೈ, ಚಿಕನ್‌ ಸಾಂಬಾರ್‌ ಎಲ್ಲಾ ಇರುತ್ತದೆ. ಬೆಳಗ್ಗೆ ಇಷ್ಟೊಂದು ಚಿಕನ್‌ ಐಟಂ ನೋಡಿ ಖುಷಿಯಾಗುತ್ತದೆ ಗೌತಮ್‌. ಇಡ್ಲಿ ಕಡಿಮೆ ತಿಂದು, ಚಿಕನ್‌ ಜಾಸ್ತಿ ತಿನ್ತಾರೆ ಡುಮ್ಮ ಸಾರ್‌. ಅಡುಗೆಯನ್ನು ಹೊಗಳುತ್ತ ತಿನ್ನುತ್ತಾರೆ. ಎಷ್ಟು ಚೆನ್ನಾಗಿ ಅಡುಗೆ ಮಾಡಿದ್ದಾರೆ. ಅಡುಗೆ ರಾಮಣ್ಣನ ಮಾಡಿದ್ದ? ಎನ್ನುತ್ತಾನೆ. "ರಾಮಣ್ಣ ಮಾಡಿದ್ದ, ಭೂಮಿಕಾ ಮಾಡಿದ್ದ? ವ್ಯತ್ಯಾಸ ಗೊತ್ತಾಗ್ತ ಇಲ್ವಾ" ಎಂದುಕೊಳ್ಳುತ್ತಾಳೆ ಭೂಮಿಕಾ. ಮಧ್ಯಾಹ್ನ ಟಿಫಿನ್‌ ಬಾಕ್ಸ್‌ ಕಳಿಸ್ತಿನಿ ಅಂತಾಳೆ ಭೂಮಿ. ನಾನು ಇಷ್ಟು ಮಾಡಿದ್ರೂ ಗೊತ್ತಾಗ್ತ ಇಲ್ವ. ಮಾಡ್ತಿನಿ ಇರಿ ಎಂದುಕೊಳ್ಳುತ್ತಾಳೆ.

ಅಜ್ಜಮ್ಮನಿಂದ ಅಧಿಕಾರ ಹಸ್ತಾಂತರದ ಪ್ರಸ್ತಾಪ

ಅಜ್ಜಮ್ಮ ಎಲ್ಲರನ್ನೂ ಕರೆದಿದ್ದಾರೆ. "ಎಲ್ಲರಲ್ಲೂ ಒಂದು ವಿಷಯ ಮಾತನಾಡಲು ಇದೆ. ಇಷ್ಟು ದಿನ ಈ ಮನೆಯ ಯುಜಮಾನಿಯಾಗಿ, ಹಿರಿಯಳಾಗಿ ಈ ಮನೆ ನಿಭಾಯಿಸ್ತಾ ಇದ್ದೆ. ಇನ್ನು ಮುಂದೆ ಈ ಮನೆಯ ಯುಜಮಾನಿಕೆಯನ್ನು ಬೇರೆಯವರಿಗೆ ವರ್ಗಾವಣೆ ಮಾಡಬೇಕೆಂದಿದ್ದೇನೆ" ಎನ್ನುತ್ತಾರೆ ಅಜ್ಜಮ್ಮ. "ಸಿಸ್ಟರ್‌ ಹೊಡೆದಿಯಲ್ವ ಲಾಟರಿ" ಎಂದು ಮನೆಹಾಳ ಮಾವ ಹೇಳಿದಾಗ ಶಕುಂತಲಾದೇವಿಗೆ ಖುಷಿಯಾಗುತ್ತದೆ. "ಯಾಕೆ ಇಂತಹ ಮಾತು ಹೇಳುತ್ತೀರಿ. ನೀವು ಇನ್ನಷ್ಟು ವರ್ಷ ಯುಜಮಾನಿಯಾಗಿ ಇರಬೇಕು" ಎಂದು ಗೌತಮ್‌ ಭಾವುಕರಾಗಿ ಹೇಳುತ್ತಾರೆ. "ವಯಸ್ಸು ಆಯ್ತು. ಸಾವು ಯಾವಾಗ ಬೇಕಾದರೂ ಬರಬಹುದು" ಎಂದು ಹೇಳುತ್ತಾರೆ. "ಸಮಯ ಮತ್ತು ಸಾವು ಸದ್ದಿಲ್ಲದೆ ಬರುತ್ತದೆ. ಸ್ವಲ್ಪ ತಡವಾಗಿ ಬರಬಹುದು. ಒಂದಲ್ಲ ಒಂದು ದಿನ ನಾನು ನಿಮಗೆಲ್ಲರಿಗೂ ವಿದಾಯ ಹೇಳಲೇಬೇಕು" ಎಂದಾಗ ಗೌತಮ್‌ ಭಾವುಕರಾಗುತ್ತಾರೆ.

"ನನ್ನಿಂದ ಬಳಿಕ ಈ ಮನೆಯ ಯುಜಮಾನಿ ಯಾರು ಎಂದು ಚುನಾಯಿಸಬೇಕು. ಈ ಆಲೋಚನೆ ಬಂದ ತಕ್ಷಣ ನಿಮಗೆ ಹೇಳಿದೆ. ಒಂದು ಒಳ್ಳೆಯ ದಿನ ನೋಡಿ ಯುಜಮಾನಿಕೆ ವರ್ಗಾಯಿಸುವೆ" ಎಂದು ಹೇಳುತ್ತಾರೆ. ಶಕುಂತಲಾದೇವಿಗೆ ಯುಜಮಾನಿಯಾಗುವ ಕನಸು ಟಿಸಿಲೋಡೆಯುತ್ತದೆ. "ಇಡೀ ಮನೆ ನಿನ್ನ ಆಳ್ವಿಕೆಗೆ ಬರುತ್ತದೆ. ನೀನೇ ರಾಣಿ" ಎಂದೆಲ್ಲ ಮನೆಹಾಳ ಮಾವನ ಹೊಗಳಿಕೆಯಿಂದ ಶಕುಂತಲಾದೇವಿ ಉಬ್ಬುತ್ತಾಳೆ. "ಒಮ್ಮೆ ಈ ಮನೆಯ ಕೀ ನನಗೆ ದೊರಕಲಿ. ಈ ಅಧಿಕಾರಕ್ಕಾಗಿ ನಾನು ಎಷ್ಟು ವರ್ಷದಿಂದ ಕಾಯುತ್ತಿದ್ದೆ. ಎಲ್ಲರನ್ನೂ ನನ್ನ ಬೆರಳಲ್ಲಿ ಕುಣಿಸುವೆ" ಎಂದು ಶಕುಂತಲಾದೇವಿ ಹೇಳುತ್ತಾಳೆ. ಮೊದಲಿಗೆ ಭೂಮಿಕಾಳಿಗೆ ನಿನ್ನ ಮೇಲೆ ಇರುವ ಅನುಮಾನ ಹೋಗಬೇಕು. ಅವಳನ್ನು ಸ್ವಲ್ಪ ದಿನ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಸಹೋದರ ನೀಡುತ್ತಾನೆ. ಒಟ್ಟಾರೆ, ಶಕುಂತಲಾದೇವಿ ಅಧಿಕಾರದ ಕನಸಲ್ಲಿ ಇರುತ್ತಾಳೆ. ಆದರೆ, ಅಜ್ಜಿಯ ಮನಸ್ಸಲ್ಲಿ ಏನಿದೆಯೋ ಯಾರಿಗೆ ಗೊತ್ತು?

ಇನ್ನೊಂದೆಡೆ ಮಹಿಮಾಗೆ ತುಂಬಾ ಜನ ಕಾಲ್‌ ಮಾಡ್ತಾ ಇದ್ದಾರೆ. ಎಲ್ಲರೂ ವಿಶ್‌ ಮಾಡ್ತಾ ಇದ್ದಾರೆ. ಇದನ್ನು ನೋಡಿ ಜೀವನ್‌ಗೆ ಅಚ್ಚರಿಯಾಗುತ್ತದೆ. "ಏನಿದು ಇಷ್ಟೊಂದು ಕಾಲ್‌, ಏನಾದ್ರೂ ಅವಾರ್ಡ್‌ ವಿನ್‌ ಆದ್ಯಾ? ಎಂದು ಕೇಳುತ್ತಾನೆ. ಏನೆಂದು ಗೆಸ್‌ ಮಾಡು ಎಂದು ಮಹಿಮಾ ಹೇಳುತ್ತಾರೆ. ಜೀವನ್‌ ತುಂಬಾ ತಲೆ ಕೆಡಿಸಿಕೊಳ್ಳುತ್ತಾನೆ. ಮಹಿಮಾಳಿಗೆ ಕಾಲ್‌ ಬರುವುದು ಮುಂದುವರೆಯುತ್ತದೆ.

ಅಜ್ಜಮ್ಮನಿಗೆ ನೀವೇ ಅಧಿಕಾರದಲ್ಲಿ ಮುಂದುವರೆಯಿರಿ ಎಂದು ಭೂಮಿಕಾ ಹೇಳುತ್ತಾಳೆ. ಹಣ್ಣೆಲ್ಲೆ ಯಾವಾಗ ಬೀಳುತ್ತೋ ಎಂದು ಅಜ್ಜಿ ಹೇಳುತ್ತಾರೆ. ಇದನ್ನು ಕೇಳಿ ಗೌತಮ್‌ಗೆ ಬೇಸರವಾಗುತ್ತದೆ. ತಮಾಷೆಗೂ ಬಿಟ್ಟು ಹೋಗುವ ಮಾತನಾಡಬೇಡಿ. ನೀವು ನಮಗೆ ಬೇಕು, ಇನ್ನೂ ತುಂಬಾ ಕಾಲ ನಮ್ಮ ಜತೆ ಇರಬೇಕು, ನಮ್ಮ ಮಕ್ಕಳನ್ನು ಆಡಿಸಬೇಕು ಎಂದು ಗೌತಮ್‌ ಮತ್ತು ಭೂಮಿಕಾ ಹೇಳುತ್ತಾರೆ. "ಅಜ್ಜಿ ಪದೇ ಪದೇ ಅದನ್ನೇ ಹೇಳಬೇಡಿ. ನೀವು ಅದನ್ನೇ ಹೇಳಿದರೆ ನನ್ನ ಜೀವನದಲ್ಲಿ ನಾನು ಅತಿಯಾಗಿ ಪ್ರೀತಿಸಿದವರು ಬಿಟ್ಟು ಹೋದದ್ದ ನೆನಪಾಗುತ್ತದೆ" ಎಂದು ಗೌತಮ್‌ ಭಾವುಕನಾಗುತ್ತಾನೆ.