ಮಂದಾಕಿನಿ ಬೆಂಬಲಕ್ಕೆ ನಿಂತ ಗೌತಮ್‌, ಮಿಡ್‌ಕ್ಲಾಸ್‌ ಸೊಸೆ ಎಂದು ಭೂಮಿಕಾಳನ್ನು ಹಂಗಿಸಿದ ಶಕುಂತಲಾ ಸ್ನೇಹಿತೆಯರು; ಅಮೃತಧಾರೆ ಧಾರಾವಾಹಿ ಕಥೆ-television news amruthadhaare serial yesterday episode goutham support mandakini shakuntala frinds bad behaviors pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಮಂದಾಕಿನಿ ಬೆಂಬಲಕ್ಕೆ ನಿಂತ ಗೌತಮ್‌, ಮಿಡ್‌ಕ್ಲಾಸ್‌ ಸೊಸೆ ಎಂದು ಭೂಮಿಕಾಳನ್ನು ಹಂಗಿಸಿದ ಶಕುಂತಲಾ ಸ್ನೇಹಿತೆಯರು; ಅಮೃತಧಾರೆ ಧಾರಾವಾಹಿ ಕಥೆ

ಮಂದಾಕಿನಿ ಬೆಂಬಲಕ್ಕೆ ನಿಂತ ಗೌತಮ್‌, ಮಿಡ್‌ಕ್ಲಾಸ್‌ ಸೊಸೆ ಎಂದು ಭೂಮಿಕಾಳನ್ನು ಹಂಗಿಸಿದ ಶಕುಂತಲಾ ಸ್ನೇಹಿತೆಯರು; ಅಮೃತಧಾರೆ ಧಾರಾವಾಹಿ ಕಥೆ

Amruthadhaare: ಝೀ ಕನ್ನಡ ವಾಹಿನಿಯ ಅಮೃತಧಾರೆ ಸೀರಿಯಲ್‌ನ ಸೋಮವಾರದ ಸಂಚಿಕೆಯಲ್ಲಿ ಹಲವು ಘಟನೆಗಳು ನಡೆದಿವೆ. ರೋಲ್ಡ್‌ಗೋಲ್ಡ್‌ ಕೊಟ್ಟ ಮಂದಾಕಿನಿಗೆ ಗೌತಮ್‌ ಬೆಂಬಲ ನೀಡಿದ್ದಾನೆ. ಮಹಿಮಾಳೂ ಅತ್ತೆ ಪರವಾಗಿ ನಿಂತಿದ್ದಾಳೆ. ಇನ್ನೊಂದೆಡೆ ಪಾರ್ಥ ಮತ್ತು ಅಪೇಕ್ಷಾ ರೋಮ್ಯಾಂಟಿಕ್‌ ಮೂಡ್‌ನಲ್ಲಿದ್ದಾಗ ಗೌತಮ್‌ ಅಲ್ಲಿಗೆ ಬರುತ್ತಾನೆ.

ಮಂದಾಕಿನಿ ಬೆಂಬಲಕ್ಕೆ ನಿಂತ ಗೌತಮ್‌, ಮಿಡ್‌ಕ್ಲಾಸ್‌ ಸೊಸೆ ಎಂದು ಭೂಮಿಕಾಳನ್ನು ಹಂಗಿಸಿದ ಶಕುಂತಲಾ ಸ್ನೇಹಿತೆಯರು
ಮಂದಾಕಿನಿ ಬೆಂಬಲಕ್ಕೆ ನಿಂತ ಗೌತಮ್‌, ಮಿಡ್‌ಕ್ಲಾಸ್‌ ಸೊಸೆ ಎಂದು ಭೂಮಿಕಾಳನ್ನು ಹಂಗಿಸಿದ ಶಕುಂತಲಾ ಸ್ನೇಹಿತೆಯರು

Amruthadhaare Serial Yesterday Episode: ಗೌತಮ್‌ ಉಡುಗೊರೆಯ ಕುರಿತು ಭೂಮಿಕಾಳಿಗೆ ಖುಷಿಯಿಂದ ಮಾತನಾಡುತ್ತಾನೆ. ಚಿಕ್ಕ ಚಿಕ್ಕ ಉಡುಗೊರೆಗಳು ದೊಡ್ಡ ಖುಷಿ ನೀಡುತ್ತವೆ. ಜೀವನದಲ್ಲಿ ಚಿಕ್ಕಚಿಕ್ಕ ವಿಷಯಗಳನ್ನು ಮರೆಯಬಾರದು ಎಂದೆಲ್ಲ ಮಾತನಾಡುತ್ತಾರೆ. "ನೀವು ಶ್ರೀಮಂತರಾಗಿದ್ದರೂ ನಿಮಗೆ ದುಡ್ಡು ತಲೆಗೆ ಏರಿಲ್ಲ" ಎಂದು ಭೂಮಿಕಾ ಹೇಳುತ್ತಾಳೆ. ನನ್ನ ಜೀವನದಲ್ಲಿ ಇದು ಬೆಸ್ಟ್‌ ಬರ್ತ್‌ಡೇ ಎಂದು ಗೌತಮ್‌ ಹೇಳುತ್ತಾನೆ.

ಮಹಿಮಾ ಮತ್ತು ಅಶ್ವಿನಿ ಮಾತನಾಡುತ್ತಾರೆ. ನಿನ್ನ ಗಂಡ, ನನ್ನ ಭಾವ ಹೇಗಿದ್ದಾರೆ ಎಂದು ಅಶ್ವಿನಿಯಲ್ಲಿ ಕೇಳುತ್ತಾಳೆ. ಅರುಣ್‌ಗೆ ಏನೂ ಪ್ರಾಬ್ಲಂ ಇಲ್ಲ. ಜೀವನ್‌ಗೆ ಏನೂ ತೊಂದರೆ ಇಲ್ಲ ಅಲ್ವ ಎಂದು ಅಶ್ವಿನಿ ಕೇಳುತ್ತಾಳೆ. "ಕಷ್ಟಪಟ್ಟು ದುಡಿದರೆ ರಿಸೆಷನ್‌ ಸಮಯದಲ್ಲೂ ಒಳ್ಳೆಯದಾಗುತ್ತದೆ" ಎಂದು ಅಶ್ವಿನಿಗೆ ಉರಿಸುತ್ತಾಳೆ.

ರೋಲ್ಡ್‌ಗೋಲ್ಡ್‌ ಚೈನ್‌ ವಿಷಯದ ಚರ್ಚೆ

ಶಕುಂತಲಾದೇವಿಯ ಗೆಳತಿ ಜುವೆಲ್ಲರಿ ಶಾಪ್‌ನವರಿಗೆ ಕಾಲ್‌ ಮಾಡಿ ನೀವು ಡಿಸೈನ್‌ ಮಾಡಿದ್ದ ಎಂದು ಕೇಳುತ್ತಾಳೆ. ಅದು ರೋಲ್ಡ್‌ ಗೋಲ್ಡ್‌ ಚೈನ್‌ ಎಂದು ಕನ್‌ಫರ್ಮ್‌ ಮಾಡಿಕೊಳ್ಳುತ್ತಾಳೆ. ಬಳಿಕ ಎಲ್ಲರ ಮುಂದೆ ಏನು ಶಕುಂತಲಾ, ನಿಮ್ಮ ಬೀಗತಿ ದೊಡ್ಡ ಸ್ಕ್ಯಾಮ್‌ ಮಾಡಿದ್ದಾರೆ. ನಿಮ್ಮ ಮಗನಿಗೆ ಬರ್ತ್‌ಡೇ ಅಂತ ಚೈನ್‌ ಹಾಕಿದ್ರಲ್ವ. ಅದು ರೋಲ್ಡ್‌ ಗೋಲ್ಡ್‌ ಅಂತೆ. ಅಂತಹ ಯಾವುದೇ ಡಿಸೈನ್‌ ಆ ಶಾಪ್‌ನಲ್ಲಿ ಇಲ್ವಂತೆ. ನಾನು ಆ ಶಾಪ್‌ನವರಲ್ಲಿ ವಿಚಾರಿಸಿದೆ ಎಂದು ಶಕುಂತಲಾದೇವಿಯ ಸ್ನೇಹಿತೆ ಎಲ್ಲರ ಮುಂದೆ ಮಂದಾಕಿನಿಯ ಸುದ್ದಿ ಮಾತನಾಡುತ್ತಾಳೆ.

ಶಕುಂತಲಾದೇವಿಯ ಸ್ನೇಹಿತೆ ಹಾಗೆ ಹೇಳಿದಾಗ ಎಲ್ಲರಿಗೂ ಆಶ್ಚರ್ಯವಾಗುತ್ತದೆ. ಈಗಾಗಲೇ ಈ ವಿಷಯ ತಿಳಿದಿರುವ ಭೂಮಿಕಾಳಿಗೂ ಏನು ಮಾಡಬೇಕೆಂದು ತಿಳಿಯುವುದಿಲ್ಲ. ನಾನು ಆಗ್ಲೇ ಅಂದುಕೊಂಡೆ. ಇದು ಗೋಲ್ಡೇ ಅಲ್ಲ, ರೋಲ್ಡ್‌ ಗೋಲ್ಡ್‌ ಅಂತ ಎಂದು ಮತ್ತೊಬ್ಬಳು ಸ್ನೇಹಿತೆಯೂ ಕೊಂಕಾಗಿ ಮಾತಾಡನಾಡುತ್ತಾಳೆ. ನೋಡಿ ಇಲ್ಲಿ ಜುವೆಲ್ಲರಿ ಶಾಪ್‌ನವರೇ ಮಾಡಿರುವ ಮೆಸೆಜ್‌. ನಿಮ್ಮ ಬೀಗತಿ ಹೇಳಿದ್ದೆಲ್ಲ ಸುಳ್ಳು. ಬಿಲ್ಡಪ್‌ಗೋಸ್ಕರ ಹೀಗೆಲ್ಲ ಮಾಡ್ತಾರೆ ಎಂದು ಶಕುಂತಲಾದೇವಿಯ ಸ್ನೇಹಿತೆ ಚುಚ್ಚು ಮಾತುಗಳನ್ನಾಡುತ್ತಾರೆ.

ಅತ್ತೆ ಪರವಾಗಿ ಧ್ವನಿ ಎತ್ತಿದ ಮಹಿಮಾ

ಈ ಸಂದರ್ಭದಲ್ಲಿ ಶಕುಂತಲಾ "ನಮ್ಮ ಬೀಗರು ಹೀಗ್ಯಾಕೆ ಮಾಡ್ತಾರೆ" ಎನ್ನುತ್ತಾರೆ. "ಯಾಕೆ ಎಂದು ಅವರನ್ನೇ ಕೇಳಬೇಕು" ಎಂದಾಗ ಎಕ್ಸ್‌ಕ್ಯೂಸ್‌ಮೀ ಎಂಬ ಧ್ವನಿ ಕೇಳುತ್ತದೆ. ಎಕ್ಸ್‌ಕ್ಯೂಮಿ ಎಂದು ಜೋರಾದ ಧ್ವನಿಯಲ್ಲಿ ಮಹಿಮಾ ಹೇಳುತ್ತಾಳೆ. ತನ್ನ ಅತ್ತೆಯ ಮರ್ಯಾದೆ ಎಲ್ಲರ ಮುಂದೆ ಹೋಗುವುದನ್ನು ಆಕೆ ಇಷ್ಟಪಡುವುದಿಲ್ಲ. ಯಾರ ಬಗ್ಗೆ ಹೀಗೆಲ್ಲ ಮಾತನಾಡ್ತಾ ಇದ್ದೀರ? ಇನ್ನೊಬ್ಬರ ಬಗ್ಗೆ ಹೀಗೆಲ್ಲ ಚೀಪ್‌ ಆಗಿ ಮಾತನಾಡಲು ನಾಚಿಕೆಯಾಗೋಲ್ವ ಎಂದು ಮಹಿಮಾ ಪ್ರಶ್ನಿಸುತ್ತಾಳೆ.

ನಾಚಿಕೆಯಾಗಬೇಕಾದ್ದು ನಮಗಲ್ಲ. ರಾಜಾರೋಷವಾಗಿ ರೋಲ್ಡ್‌ ಗೋಲ್ಡ್‌ ಹಾಕಿದ್ದಾರಲ್ವ ಅವರಿಗೆ ನಾಚಿಕೆಯಾಗಬೇಕು ಎಂದು ಶಕುಂತಲಾ ಸ್ನೇಹಿತೆ ಹೇಳುತ್ತಾರೆ. ಅದು ರೋಲ್ಡ್‌ಗೋಲ್ಡ್‌ ಅಲ್ಲ. ಒರಿಜಿನಲ್‌ ಅಂತ ಆಣೆ ಮಾಡಿ ಹೇಳೋಕ್ಕೆ ಹೇಳಿ ಎಂದಾಗ ಭೂಮಿಕಾ, ಮಂದಾಕಿನಿ ಸೇರಿದಂತೆ ಎಲ್ಲರ ಕಣ್ಣಲ್ಲೂ ದುಃಖದ ಛಾಯೆ ಮೂಡುತ್ತದೆ. "ಹಲೋ, ಮಾತನಾಡುವುದಕ್ಕೂ ಮೊದಲು ಸರಿಯಾಗಿ ತಿಳಿದುಕೊಂಡು ಮಾತನಾಡಿ. ಆ ಚೈನ್‌ ತಂದದ್ದು ನಾನೇ" ಎಂದು ಮಹಿಮಾ ಹೇಳಿದಾಗ ಎಲ್ಲರಿಗೂ ಆಶ್ಚರ್ಯವಾಗುತ್ತದೆ.

"ಅದು ರೋಲ್ಡ್‌ಗೋಲ್ಡೇ, ತಂದದ್ದು ನಾನೇ. ಕೊಟ್ಟದ್ದು ನಮ್ಮ ಅತ್ತೆ. ಹಾಕಿಕೊಂಡದ್ದು ನಮ್ಮಣ್ಣ. ಇದರ ನಡುವೆ ನಿಮ್ದೇನ್ರಿ ಪ್ರಾಬ್ಲಂ" ಎಂದು ಮಹಿಮಾ ಪ್ರಶ್ನಿಸುತ್ತಾಳೆ. ಅದು ರಿಯಲಾ, ಡುಪ್ಲಿಕೇಟಾ ಎಂದು ಇನ್ವೆಸ್ಟಿಗೇಷನ್‌ ಮಾಡೋಕ್ಕೆ ಹೋಗ್ತಿರಲ್ವ ನಿಮಗೆ ಬೇರೆ ಕೆಲಸ ಇಲ್ವ? ಎಂದಾಗ ಶಕುಂತಲಾ "ಮಹಿ" ಎನ್ನುತ್ತಾರೆ. ಇವರು ನನ್ನ ಫ್ಯಾಮಿಲಿ ಬಗ್ಗೆ, ನನ್ನ ಅತ್ತೆ ಬಗ್ಗೆ ಮಾತನಾಡ್ತಾ ಇದ್ದಾರೆ. ಹೀಗಾಗಿ ನಾನು ಮಾತನಾಡಲೇಬೇಕು ಎಂದು ಮಹಿಮಾ ಹೇಳುತ್ತಾಳೆ. ನಮ್ಮ ಅಣ್ಣನಿಗೆ ನಿಮ್ಮ ಥರ ಚೀಪ್‌ ಮೆಂಟಾಲಿಟಿ ಇಲ್ಲ. ಏನು ಕೊಟ್ಟಿದ್ದಾರೆ ಎಂದು ನೋಡುವುದಿಲ್ಲ. ಸಂಬಂಧಗಳಿಗೆ ಬೆಲೆ ಕೊಡ್ತಾರೆ ಎಂದು ಹೇಳಿ ಮಹಿಮಾ ಎಲ್ಲರಿಗೂ ಮಂಗಳಾರತಿ ಮಾಡುತ್ತಾಳೆ. ಈ ಮೂಲಕ ಅತ್ತೆ ಮಂದಾಕಿನಿಯ ನೆರವಿಗೆ ನಿಲ್ತಾಳೆ. ನನ್ನ ಮನೆಯವರ ತಂಟೆಗೆ ಬಂದರೆ ಸುಮ್ಮನಿರುವುದಿಲ್ಲ ಎಂದು ಹೇಳುತ್ತಾಳೆ.

 

ಈ ಮಾತನ್ನು ಮೇಲಿನ ಮಟ್ಟಿಲಲ್ಲಿ ನಿಂತಿರುವ ಗೌತಮ್‌ ಕೇಳಿಸುತ್ತಾನೆ. "ಸ್ಟಾಪ್‌ ಇಟ್‌, ನನಗೆ ದೇವರು ಎಲ್ಲವನ್ನೂ ನೀಡಿದ್ದಾನೆ. ಉಡುಗೊರೆ ಬಗ್ಗೆ ಯಾರೂ ಮಾತನಾಡಬೇಡಿ. ನನಗೆ ಯಾರೂ ಗಿಫ್ಟ್‌ ನೀಡಿದರೆ ಗಿಫ್ಟ್‌ ನೀಡಿದವರ ಪ್ರೀತಿ ನನಗೆ ಮುಖ್ಯವಾಗುತ್ತದೆ" ಎಂದು ಹೇಳುತ್ತಾನೆ. ನನ್ನ ಗಾರ್ಡನ್‌ನಿಂದ ನನಗೆ ಹೂವು ತಂದುಕೊಟ್ಟರೆ ಖುಷಿಪಡುತ್ತೇನೆ. ನನ್ನ ಪ್ರಕಾರ ಪ್ರೀತಿಗಿಂತ, ನಮ್ಮವರು ಅನ್ನೋ ಕಾಳಜಿಗಿಂತ ದೊಡ್ಡ ಗಿಫ್ಟ್‌ ಯಾವುದೂ ಇಲ್ಲ" ಎಂದು ಗೌತಮ್‌ ಹೇಳುತ್ತಾನೆ. "ಒಂದು ಗಿಫ್ಟ್‌ ಇಷ್ಟೆಲ್ಲ ಮಾತಿಗೆ ಕಾರಣವಾಗುತ್ತದೆ ಎಂದಾದರೆ ಇನ್ನು ಮುಂದೆ ನಿಮ್ಮ ಯಾರ ಗಿಫ್ಟು ಬೇಡ. ಇಲ್ಲಿ ತನಕ ಬಂದಿದ್ದೀರಿ, ಏನೂ ತೊಂದರೆ ಮಾಡಬೇಡಿ. ಈ ಪಾರ್ಟಿಯನ್ನ ಎಂಜಾಯ್‌ ಮಾಡಿ" ಎಂದು ಹೇಳುತ್ತಾನೆ.

ಪಾರ್ಥ ಮತ್ತು ಅಪೇಕ್ಷಾ ಕೊಠಡಿಯಲ್ಲಿದ್ದಾರೆ. ಇಬ್ಬರೂ ರೊಮ್ಯಾಂಟಿಕ್‌ ಆಗಿ ಮಾತನಾಡುತ್ತ ಇರುತ್ತಾರೆ. ಭಾವನ ತಮ್ಮ ಅತ್ತಿಗೆ ತಂಗಿ ನಡುವೆ ಒಂದಿಷ್ಟು ಅಪ್ಪುಗೆ, ಪ್ರೀತಿ ನಡೆಯುತ್ತದೆ.

ಇನ್ನೊಂದೆಡೆ ಮಂದಾಕಿನಿ ಗೌತಮ್‌ನಲ್ಲಿ ಕ್ಷಮೆ ಕೇಳುತ್ತಾಳೆ. "ನೀವು ದೊಡ್ಡ ತಪ್ಪು ಮಾಡಿದ್ದೀರಿ. ಶಿಕ್ಷೆಯಾಗಲೇಬೇಕು" ಎನ್ನುತ್ತಾನೆ. ಭಯಪಟ್ಟು ಏನೂ ಹೇಳಿದ್ರು ಮಾಡ್ತಿನಿ ಎನ್ನುತ್ತಾಳೆ. "ಹಾಗಾದರೆ ಅವರೆಕಾಳು ಉಪ್ಪಿಟ್ಟು ಮಾಡಿಕೊಡಿ" ಅನ್ನುತ್ತಾನೆ. ಈ ಮೂಲಕ ಇವರ ಬಗ್ಗೆ ಕೋಪ ಇಲ್ಲ ಎನ್ನುತ್ತಾನೆ.

ಶಕುಂತಲಾದೇವಿಯ ಸ್ನೇಹಿತೆಯರು "ನಾನು ಅದು ಗಿಫ್ಟ್‌ ಕೊಟ್ಟೆ ಇದು ಕೊಟ್ಟೆ" ಅನ್ನುತ್ತಾರೆ. ಭೂಮಿಕಾ ಗೌತಮ್‌ಗೆ ಏನು ಗಿಫ್ಟ್‌ ಕೊಟ್ಟಿದ್ದಾಳೆ ಎಂದು ಅಶ್ವಿನಿಯ ಬಳಿ ಕೇಳುತ್ತಾರೆ ಶಕುಂತಲಾದೇವಿ. "ಗೊಂಬೆ ಗಿಫ್ಟ್‌ ಕೊಟ್ಟೆ" ಎನ್ನುತ್ತಾಳೆ. ಮರೆಯಲ್ಲಿ ನಿಂತ ಭೂಮಿಕಾ ಕೇಳಿಸಿಕೊಳ್ಳುತ್ತಾಳೆ. "ಅವಳು ಕಂಜೂಸ್‌, ಮಿಡಲ್‌ ಕ್ಲಾಸ್‌ ಮೆಂಟಾಲಿಟಿ" ಎಂದು ಶಕುಂತಲಾದೇವಿ ಹೇಳಿದ್ದು ಕೇಳಿ ಭೂಮಿಕಾಳಿಗೆ ದುಃಖವಾಗುತ್ತದೆ. "ಹೋಗಿ ಹೋಗಿ ಎಂತಹ ಸಂಬಂಧ ಮಾಡಿದ್ದೀಯಾ?" ಎಂದೆಲ್ಲ ಹೇಳುತ್ತಾಳೆ. "ನಿನ್ನ ಮನೆಗೆ ತಕ್ಕ ಸೊಸೆ ಅಲ್ಲ" ಎಂದೆಲ್ಲ ಮಾತನಾಡುತ್ತಾರೆ. ಇದನ್ನು ಕೇಳಿ ಭೂಮಿಕಾಳ ಕಣ್ಣಲ್ಲಿ ನೀರು ಬರುತ್ತದೆ.

ಇನ್ನೊಂದೆಡೆ ಮನೆಹಾಳ ಮಾವ ಪಾರ್ಥ ಮತ್ತು ಅಪೇಕ್ಷಾ ಕೊಠಡಿಯನ್ನು ಇಣುಕುತ್ತಾನೆ. ಇವರಿಬ್ಬರ ಸರಸ ಸಲ್ಲಾಪ ಖಚಿತಪಡಿಸಿಕೊಂಡು ಹೋಗುತ್ತಾನೆ. ಈ ವಿಷಯ ಗೌತಮ್‌ ಕಿವಿಗೆ ಹಾಕಿಬಿಟ್ಟರೆ ನನ್ನ ಕೆಲಸ ಸುಸೂತ್ರವಾಗಿ ನಡೆದರೆ ನನ್ನ ಕೆಲಸ ಸುಸೂತ್ರ ಎನ್ನುತ್ತಾನೆ. "ಆ ರೂಂ ಹತ್ರ ಪಾರ್ಥ ನಿನ್ನ ಹುಡುಕುತ್ತಾ ಇದ್ದಾನೆ" ಎಂದು ಗೌತಮ್‌ನಲ್ಲಿ ಹೇಳುತ್ತಾನೆ. ಇನ್ನೊಂದೆಡೆ ಭೂಮಿಕಾಳಿಗೆ ಪಾರ್ಥ ಮತ್ತು ಅಪೇಕ್ಷರ ಪ್ರೀತಿ ಕಾಣಿಸುತ್ತದೆ. ಇದನ್ನು ಗೌತಮ್‌ ನೋಡಬಾರದು ಎಂದುಕೊಳ್ಳುತ್ತಾಳೆ. ಗೌತಮ್‌ ಮೇಲೆ ಬಂದಾಗಿದೆ, ಪಾರ್ಥ ಮತ್ತು ಅಪೇಕ್ಷಾರನ್ನು ನೋಡುತ್ತಾರ ಎನ್ನುವಲ್ಲಿಗೆ ಸೀರಿಯಲ್‌ ಮುಂದುವರೆಯುತ್ತದೆ.

mysore-dasara_Entry_Point