ಭೂಮಿಕಾಳಿಗೆ ಮಗುವಾಗದಂತೆ ಔಷಧ ನೀಡಲು ಮುಂದಾದ ಪಾಪಿ ಶಕುಂತಲಾ, ಮಕ್ಕಳೊಂದಿಗೆ ಮಕ್ಕಳಾದ ಭೂಮಿ ಗೌತಮ್; ಅಮೃತಧಾರೆ ಸೀರಿಯಲ್
Amruthadhaare Yesterday Episode: ಗೌತಮ್ ಮತ್ತು ಭೂಮಿಕಾ ಆನಂದ್ ಮನೆಯಲ್ಲಿ ಆನಂದ್ ಮಕ್ಕಳ ಜತೆ ಕಾಲ ಕಳೆಯುತ್ತಾರೆ. ರಾತ್ರಿ ಆಕಾಶ ನೋಡುತ್ತ ನಕ್ಷತ್ರ ಎಣಿಸುತ್ತ ಪ್ರೀತಿಯಲ್ಲಿ ಮುಳುಗಿದ್ದಾರೆ. ಇನ್ನೊಂದೆಡೆ ಭೂಮಿಕಾಳಿಗೆ ಮಗುವಾಗದಂತೆ ನೋಡಿಕೊಳ್ಳಲು ಶಕುಂತಲಾದೇವಿ ಕ್ರಿಮಿನಲ್ ಪ್ಲ್ಯಾನ್ ಮಾಡುತ್ತಾರೆ.
Amruthadhaare Serial: ಗೌತಮ್ ಮತ್ತು ಭೂಮಿಕಾ ಆನಂದ್ ಮನೆಯಲ್ಲಿದ್ದಾರೆ. ಆನಂದ್ ಮತ್ತು ಅಪರ್ಣಾ ರಮ್ ಹಾಕಿದ ಕೇಕ್ ತಿಂದು ನಿದ್ದೆಯಲ್ಲಿದ್ದಾರೆ. ಆಗ ಸ್ಕೂಲ್‌ಗೆ ಹೋಗಿದ್ದ ಆನಂದ್ ಮಕ್ಕಳು ವಾಪಸ್ ಬರುತ್ತಾರೆ. ಈ ಮಕ್ಕಳ ಇಂದಿನ ಲಾಲನೆ ಪಾಲನೆ ಗೌತಮ್ ಮತ್ತು ಭೂಮಿಕಾರಿಗೆ ಬಂದಿದೆ. "ಅಪ್ಪ ಅಮ್ಮ ಯಾಕೆ ಇಷ್ಟು ಬೇಗ ಮಲಗಿದ್ದಾರೆ? ಅವರಿಗೆ ಮೈ ಹುಷಾರಿಲ್ವ ಆಂಟಿ" ಎಂದಿ ಮಕ್ಕಳು ಕೇಳುತ್ತಾರೆ. ಹೌದು ಎನ್ನುತ್ತಾರೆ. ಆಗ ಅಲ್ಲಿದ್ದ ಕೇಕ್ ನೋಡಿ ಮಕ್ಕಳು "ಅರೇರೇ ಕೇಕ್" ಎಂದು ಓಡುತ್ತಾರೆ. ರಮ್ ಕೇಕ್ ಆಗಿರುವ ಕಾರಣ ಅದನ್ನು ತಪ್ಪಿಸಲು ಗೌತಮ್ ಮತ್ತು ಭೂಮಿಕಾ ಹರಸಾಹಸ ಮಾಡುತ್ತಾರೆ. ಅದು ಕೇಕ್ ಚೆನ್ನಾಗಿಲ್ಲ. ಅದನ್ನು ತಿಂದು ನಿಮ್ಮ ಅಪ್ಪ ಅಮ್ಮನಿಗೆ ಹುಷಾರಿಲ್ಲದೆ ಮಲಗಿದ್ದಾರೆ ಎಂದು ಸುಳ್ಳು ಹೇಳುತ್ತಾರೆ. ಫ್ರೆಶ್ ಅಪ್ ಆದ ಬಳಿಕ ಗೌತಮ್ ಮಕ್ಕಳಿಗೆ ತುತ್ತು ತಿನ್ನಿಸುತ್ತಾನೆ. ಮಕ್ಕಳ ಕಡೆಗಿರುವ ಗೌತಮ್ ಪ್ರೀತಿ ನೋಡಿ ಭೂಮಿಕಾಳ ಹೃದಯ ತುಂಬಿ ಬರುತ್ತದೆ.
ಪಾರ್ಥ ಮತ್ತು ಅಪೇಕ್ಷಾ ಚಿಂತೆಯಲ್ಲಿದ್ದಾರೆ. ಪಾರ್ಥನಿಗೆ ಭೂಮಿಕಾ ಹೇಳಿದ ಮಾತುಗಳು ನೆನಪಿಗೆ ಬರುತ್ತವೆ. ಆದಷ್ಟು ಬೇಗ ನಮ್ಮ ವಿಷ್ಯ ಮನೆಯವರಿಗೆ ಹೇಳೋಣ ಎಂದು ಅಪೇಕ್ಷಾ ಹೇಳೋಣ. ಅಷ್ಟು ಸುಲಭವಾಗಿ ಹೇಳಲು ಆಗದು, ನಿಮ್ಮ ತಂದೆಯ ಬಳಿ ಮಾತನಾಡಬೇಕು. ಒಂದು ಸರಿಯಾದ ಟೈಮ್ ನೋಡಿ ಹೇಳುವೆ ಎಂದು ಪಾರ್ಥ ಹೇಳುತ್ತಾನೆ. ಅಪ್ಪನ ಒಪ್ಪಿಸೋದು ಸ್ವಲ್ಪ ಕಷ್ಟ ಇದೆ ಎಂದು ಅಪೇಕ್ಷಾ ಹೇಳುತ್ತಾಳೆ.
ಇದನ್ನು ಓದಿ: ಅಮೃತಧಾರೆ ಧಾರಾವಾಹಿಯ ಎಲ್ಲಾ ಸಂಚಿಕೆಗಳು
ಭೂಮಿಕಾ ಹೇಳಿದ್ರು ಆನೆ-ಮೊಲದ ಕಥೆ
ಆನಂದ್ ಮಕ್ಕಳು ಮಲಗಲು ಒಪ್ಪುವುದಿಲ್ಲ. ಕಥೆ ಹೇಳಿ ಎನ್ನುತ್ತಾರೆ. ಭೂಮಿಕಾ ಆನೆ ಮತ್ತು ಮೊಲದ ಕಥೆ ಹೇಳುತ್ತಾರೆ. ಒಂದೂರಲ್ಲಿ ಒಂದು ಆನೆ ಮತ್ತು ಮೊಲ ಇತ್ತು. ಆನೆ ದಪ್ಪದಪ್ಪಗೆ ಡುಮ್ಮಗೆ ಇತ್ತು ಎಂದು ಭೂಮಿಕಾ ಪರೋಕ್ಷವಾಗಿ ಡುಮ್ಮ ಸರ್‌ಗೆ ಟಾಂಗ್ ನೀಡಿದ್ದಾರೆ.ಮೊಲ ನನ್ನ ತರಹ ಮುದ್ದುಮುದ್ದಾಗಿ ಇತ್ತು ಎಂದು ಭೂಮಿಕಾ ಮಕ್ಕಳಿಗೆ ಕಥೆ ಹೇಳಿದಾಗ ಗೌತಮ್ ದಿವಾನ್ "ಮೊಲ ಏನೂ ಕಡಿಮೆ ಇರಲಿಲ್ಲ. ನೋಡಲಷ್ಟೇ ಮುದ್ದು ಮುದ್ದಾಗಿತ್ತು, ಭಾಳ ಡೇಂಜರಸ್" ಎಂದು ಹೇಳುತ್ತಾರೆ. ಆ ಆನೆ ಇದೆಯಲ್ವ ಅದಕ್ಕೆ ಇಷ್ಟು ದೊಡ್ಡ ಹೊಟ್ಟೆ ಇತ್ತು ಎನ್ನುತ್ತಾರೆ ಭೂಮಿಕಾ. ತುಂಬಾ ಕೊಬ್ಬು ತುಂಬಿತ್ತು. ಆಮೇಲೆ ಆನೆಗೂ ಮೊಲಕ್ಕೂ ಮದುವೆ ಆಗೋಯ್ತು ಎಂದು ಭೂಮಿಕಾ ಕಥೆ ಹೇಳಿದ್ದಾರೆ. ಆಮೇಲೆ ಏನಾಯ್ತು ಎಂದು ಆನಂದ್ ಮಗ ಕುತೂಹಲದಿಂದ ಕೇಳುತ್ತಾನೆ. "ಆಮೇಲೆ ದಿನಾ ಜಗಳ, ಜಗಳ ಅಷ್ಟೇ ಆಗಿತ್ತು" ಆಮೇಲೆ, ಮೊಲಕ್ಕೆ ಆನೆ ಮೇಲೆ ಪ್ರೀತಿ ಶುರುವಾಯ್ತು" ಅಂತಾರೆ ಭೂಮಿಕಾ. ಮಕ್ಕಳು ನಿದ್ದೆ ಮಾಡುತ್ತಾರೆ. ಮಕ್ಕಳಿಗೆ ಕಥೆ ಅರ್ಥ ಆಯ್ತು ಎಂದು ಭೂಮಿ ಹೇಳಿದಾಗ ಗೌತಮ್ "ಅದು ಹೇಗೆ ಸಾಧ್ಯ, ಮಕ್ಕಳಿಗೆ ಅರ್ಥ ಆಗೋಲ್ಲ" ಎಂದಾಗ ನಿದ್ದೆ ಮಾಡದ ಆನಂದ್ ಮಗ "ನನಗೂ ಅರ್ಥ ಆಯ್ತು, ನೀವು ಆನೆ, ನೀವು ಮೊಲ" ಎಂದು ಹೇಳುತ್ತಾನೆ. ಎಲ್ಲರೂ ನಗುತ್ತಾರೆ.
ಇದಾದ ಬಳಿಕ ಮಕ್ಕಳ ಬಗ್ಗೆ ಗೌತಮ್ ಭಾವನಾತ್ಮಕವಾಗಿ ಮಾತನಾಡುತ್ತಾರೆ. ಈ ಮಕ್ಕಳನ್ನು ಇಷ್ಟ ಪಡುವ ನೀವು, ನಮಗೆ ಮಕ್ಕಳಾದರೆ ಎಷ್ಟು ಪ್ರೀತಿ ಮಾಡೋಲ್ಲ ಎಂದುಕೊಳ್ಳುತ್ತಾರೆ ಭೂಮಿಕಾ.
ಇನ್ನೊಂದೆಡೆ ಎಂದಿನಂತೆ ಶಕುಂತಲಾದೇವಿ ಮತ್ತು ಮನೆಹಾಳ ಮಾವ ಅದೇ ಕ್ರಿಮಿನಲ್ ಪ್ಲ್ಯಾನಿಂಗ್ ಮಾಡುತ್ತಿದ್ದಾರೆ. "ಅವರಿಬ್ಬರೂ ಒಬ್ಬರನೊಬ್ಬರು ಪ್ರೀತಿಸ್ತಾ ಇರಲಿ. ಅವರಿಗೆ ಮಗು ಮಾತ್ರ ಆಗಬಾರದು" ಎಂದು ಶಕುಂತಲಾ ಹೇಳುತ್ತಾರೆ. "ಮಗು ಆದ್ರೆ, ಗೌತಮ್ ಗಮನ ಮಗು ಬಗ್ಗೆಯೇ ಇರುತ್ತದೆ" ಎನ್ನುತ್ತಾಳೆ. "ಇನ್ನು ಮುಂದೆ ಇವರಿಬ್ಬರನ್ನೂ ಸೀರಿಯಸ್ ಆಗಿ ತೆಗೆದುಕೊಳ್ಳುತ್ತೇನೆ. ಯಾವುದೇ ಕಾರಣಕ್ಕೂ ಭೂಮಿಕಾಗೆ ಮಗು ಆಗಬಾರದು" ಎಂದು ಹೇಳುತ್ತಾರೆ. "ಮಗು ಆಗದಂತೆ ನೋಡಿಕೊಳ್ಳಲು ಒಂದು ಔಷಧಿ ಇದೆ. ಅದನ್ನು ಕೊಟ್ಟರೆ ಮಗು ಆಗುವುದೇ ಇಲ್ಲ" ಎಂದು ಕ್ರಿಮಿನಲ್ ಪ್ಲ್ಯಾನ್ ಹೇಳುತ್ತಾರೆ.
ಭೂಮಿಕಾ ಅಜ್ಜಿಗೆ ಕಾಲ್ ಮಾಡಿ ಕಾಳಜಿಯ ಮಾತುಗಳನ್ನಾಡುತ್ತಾರೆ. ಆನಂದ್ ಮನೆಯಿಂದ ಹೋಗಲು ಗೌತಮ್ ಮತ್ತು ಭೂಮಿಕಾಳಿಗೆ ಆಗುವುದಿಲ್ಲ. ಏಕೆಂದರೆ, ಅಪರ್ಣಾ ಮತ್ತು ಆನಂದ್ ಮತ್ತಲ್ಲಿ ಮಲಗಿದ್ದಾರೆ. ಗೌತಮ್ ಮತ್ತು ಭೂಮಿಕಾ ಟೇರಸ್‌ಗೆ ಹೋಗಿ ಆಕಾಶದಲ್ಲಿ ನಕ್ಷತ್ರಗಳನ್ನು ನೋಡುವ ಯೋಜನೆ ಹಾಕುತ್ತಾರೆ. ಆಕಾಶ ನೋಡುತ್ತ ಒಂದಿಷ್ಟು ಪ್ರೀತಿಯ ಮಾತುಗಳನ್ನೂ ಆಡುತ್ತಾರೆ. ಇವರ ಪ್ರೀತಿಯ ಒಲವಧಾರೆ ಇನ್ನಷ್ಟು ಮಧುರವಾಗಿದೆ.
ಅಮೃತಧಾರೆ ಸೀರಿಯಲ್ ಪಾತ್ರವರ್ಗ
ಛಾಯಾ ಸಿಂಗ್: ಭೂಮಿಕಾ (ನಾಯಕಿ)
ರಾಜೇಶ್ ನಟರಂಗ್: ಗೌತಮ್ ದಿವಾನ್ (ನಾಯಕ)
ವನಿತಾ ವಾಸು: ಶಕುಂತಳಾ (ಗೌತಮ್ ಮಲತಾಯಿ)
ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್ ತಂದೆ)
ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)
ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)
ಸಾರಾ ಅಣ್ಣಯ್ಯ : ಮಹಿಮಾ (ಗೌತಮ್ ತಂಗಿ, ಶಂಕುತಳಾ ಮಗಳು, ಜೀವನ್ ಹೆಂಡತಿ)
ಶಶಿ ಹೆಗ್ಗಡೆ: ಜೀವನ್ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)
ರಣವ್: ಜೈದೇವ್
ಚಂದನ್: ಅಶ್ವಿನಿ
ಸ್ವಾತಿ: ಅಪರ್ಣಾ (ಆನಂದ್ ಹೆಂಡತಿ)
ಆನಂದ್: ಆನಂದ್ (ಗೌತಮ್ ಸ್ನೇಹಿತ, ಅಪರ್ಣಾ ಗಂಡ)
ವಿಭಾಗ