ಕನ್ನಡ ಸುದ್ದಿ  /  ಮನರಂಜನೆ  /  Amruthadhaare: ದೀಪಾನ್ಸುವಿಗೆ ಏಟಿನ ಮೇಲೆ ಏಟು, ಜೀವನ್‌ ಪ್ರೀತಿಗೆ ಮಂಕಾದ ಮಹಿಮಾ, ಗಂಡ ಕೊಟ್ಟ ಜ್ಯೂಸ್‌ ಬೇಡ ಅಂದ್ಳು ಮಲ್ಲಿ

Amruthadhaare: ದೀಪಾನ್ಸುವಿಗೆ ಏಟಿನ ಮೇಲೆ ಏಟು, ಜೀವನ್‌ ಪ್ರೀತಿಗೆ ಮಂಕಾದ ಮಹಿಮಾ, ಗಂಡ ಕೊಟ್ಟ ಜ್ಯೂಸ್‌ ಬೇಡ ಅಂದ್ಳು ಮಲ್ಲಿ

Amruthadhare Kannada Serial: ದೀಪಾನ್ಶುವಿಗೆ ಭೂಮಿಕಾ, ಮಹಿಮಾ, ಜೀವನ್‌ ಏಟು ನೀಡಿ ಆತನ ಸೊಕ್ಕು ಇಳಿಸುತ್ತಾರೆ. ಮಹಿಮಾಳಿಗೆ ಜೀವನ್‌ನ ಪ್ರೀತಿಯ ಆಳ ತಿಳಿಯುತ್ತದೆ. ಜೈದೇವ್‌ ಮಲ್ಲಿಗೆ ಜ್ಯೂಸ್‌ ನೀಡಿದರೂ ಆಕೆ ಕುಡಿಯುವುದಿಲ್ಲ.

Amruthadhaare: ದೀಪಾನ್ಸುವಿಗೆ ಏಟಿನ ಮೇಲೆ ಏಟು, ಜೀವನ್‌ ಪ್ರೀತಿಗೆ ಮಂಕಾದ ಮಹಿಮಾ
Amruthadhaare: ದೀಪಾನ್ಸುವಿಗೆ ಏಟಿನ ಮೇಲೆ ಏಟು, ಜೀವನ್‌ ಪ್ರೀತಿಗೆ ಮಂಕಾದ ಮಹಿಮಾ

ದೀಪಾನ್ಸು ಪೀಡನೆ ಕುರಿತು ಮಹಿಮಾ ಭೂಮಿಕಾಳಿಗೆ ಫೋನ್‌ ಮಾಡಿ ಮಾಹಿತಿ ನೀಡಿರುತ್ತಾಳೆ. ಮಹಿ ಕಾಲ್‌ ಮಾಡಿದ್ಲು ಎಂದು ದೀಪಾನ್ಸು ತಕ್ಷಣ ಬಂದಿರುತ್ತಾನೆ. ಐ ಲವ್‌ ಯು ಎಂದು ಪ್ರಪೋಸ್‌ ಮಾಡುತ್ತಾನೆ. ಈ ಸಂದರ್ಭದಲ್ಲಿ "ನಿನಗೆ ನಾಚಿಕೆ ಆಗೋಲ್ವ ಈ ರೀತಿ ವರ್ತಿಸಲು" ಎಂದು ಮಹಿಮಾ ಹೇಳುತ್ತಾಳೆ. "ನೀನು ಇಷ್ಟಪಟ್ಟು ನನ್ನನ್ನು ಕರೆಸಿದಲ್ವ?" ಎಂದು ಕೇಳುತ್ತಾನೆ. "ನಿನ್ನನ್ನು ಯಾರು ಇಷ್ಟಪಡುತ್ತಾರೆ" ಎಂದು ಬ್ಯಾಕ್‌ಗ್ರೌಂಡ್‌ನಲ್ಲಿ ಭೂಮಿಕಾಳ ಮಾತು ಕೇಳಿಸುತ್ತದೆ. ಭೂಮಿಕಾಳನ್ನು ನೋಡಿ ದೀಪಾನ್ಶು ಗಾಬರಿಯಾಗುತ್ತದೆ.

ಟ್ರೆಂಡಿಂಗ್​ ಸುದ್ದಿ

"ಅಂದರೆ, ನೀವಿಬ್ಬರು ಸೇರಿ ಈ ರೀತಿ ಮಾಡಿದ್ದ?" ಎಂದು ದೀಪಾನ್ಶು ಪ್ರಶ್ನಿಸುತ್ತಾನೆ. "ಇವಳು ಅಬಾರ್ಷನ್‌ ಮಾಡಿರೋ ವಿಷ್ಯ ನಿನಗೂ ಗೊತ್ತ? ನಿಮ್ಮನಂತೂ ಸುಮ್ಮನೆ ಬಿಡೋಲ್ಲ ನಾನು. ನಿಮ್ಮಿಬ್ಬರ ಬಗ್ಗೆ ಗೌತಮ್‌ ದಿವಾನ್‌ ಹತ್ರ, ನಿಮ್ಮ ಮನೆಯವರತ್ರ ಎಲ್ಲರತ್ರ ಹೇಳ್ತಿನಿ. ನಿಮ್ಮಿಬ್ಬರ ಲೈಫ್‌ ಸ್ಪ್ಯಾಲ್‌ ಮಾಡ್ತಿನಿ. ನೀನು ಏನು ಅಂತ ಗೊತ್ತಾಗುತ್ತದೆ" ಎಂದು ದೀಪಾನ್ಶು ಹೇಳುತ್ತಾನೆ.

ದೀಪಾನ್ಶು ಕೆನ್ನೆಗೆ ಏಟಿನ ಮೇಲೆ ಏಟು

"ನೀವಿಬ್ಬರು ಸೇರಿ ಈ ರೀತಿ ನನ್ನನ್ನು ಬರಲು ಹೇಳಿದ್ದ?" ಎಂದು ದೀಪಾನ್ಶು ಪ್ರಶ್ನಿಸುತ್ತಾನೆ. "ಇವಳು ಅಬಾರ್ಷನ್‌ ಮಾಡಿರೋ ವಿಷ್ಯ ನಿನಗೂ ಗೊತ್ತ? ನಿಮ್ಮನಂತೂ ಸುಮ್ಮನೆ ಬಿಡೋಲ್ಲ ನಾನು. ನಿಮ್ಮಿಬ್ಬರ ಬಗ್ಗೆ ಗೌತಮ್‌ ದಿವಾನ್‌ ಹತ್ರ, ನಿಮ್ಮ ಮನೆಯವರತ್ರ ಎಲ್ಲರತ್ರ ಹೇಳ್ತಿನಿ. ನಿಮ್ಮಿಬ್ಬರ ಲೈಫ್‌ ಸ್ಪ್ಯಾಲ್‌ ಮಾಡ್ತಿನಿ. ನೀನು ಏನು ಅಂತ ಗೊತ್ತಾಗುತ್ತದೆ" ಎಂದು ದೀಪಾನ್ಶು ಹೇಳುತ್ತಾನೆ. ತಕ್ಷಣ ದೀಪಾನ್ಶು ಕೆನ್ನೆಗೆ ಭೂಮಿಕಾಳ ಪೆಟ್ಟು ಬೀಳುತ್ತದೆ. "ಸ್ನೇಹಿತ ಎಂದು ಸಮಸ್ಯೆ ಹೇಳಿಕೊಂಡರೆ ಅದನ್ನು ಮಿಸ್‌ ಮಾಡಿಕೊಳ್ತಿಯಾ? ಮೊದಲನೆಯದಾಗಿ ಮಹಿಮಾ ಮನಸ್ಸನ್ನು ಕದಡಿದ್ದು ನೀನು. ಮಗು ತೆಗೆಸಲು ಪ್ರೇರೇಪಣೆ ನೀಡಿದ್ದು ನೀನು. ಈಗ ನೀನು ಈ ರೀತಿ ಬಳಸಲು ನೋಡ್ತಾ ಇದ್ದೀಯಾ" ಎಂದು ಭೂಮಿಕಾ ಪ್ರಶ್ನಿಸುತ್ತಾಳೆ.

ಅಪ್ಪ ಅಮ್ಮ ಅಣ್ಣನ ಬಳಿ ಹೇಳಿಕೊಳ್ಳಲಾಗದ ವಿಷಯವನ್ನು ಸ್ನೇಹಿತನಲ್ಲಿ ಹೇಳಿದ್ರೆ ಹೀಗೆ ಮಾಡ್ತಿಯಾ? ಹೆಣ್ಣು ಮಕ್ಕಳು ಸ್ವಲ್ಪ ಸಲಿಗೆ ಕೊಟ್ಟರೆ ಏನು ಬೇಕಾದ್ರೂ ಮಾಡಬಹುದು ಅಂದುಕೊಳ್ತಿಯಾ ಎಂದೆಲ್ಲ ಹೇಳುತ್ತಾಳೆ. "ನಾನು ನಿಮ್ಮ ಸ್ಪೀಚ್‌ ಕೇಳಲು ಬಂದಿಲ್ಲ. ನನಗೆ ಮಹಿಮಾ ಬೇಕು" ಎಂದು ಹೇಳುತ್ತಾನೆ. "ನಿನಗೆ ನಾನು ಬೇಕಾ?" ಎಂದು ಮಹಿಮಾ ಕೂಡ ಒಂದೇಟು ಹೊಡೆಯುತ್ತಾಳೆ. ಹೆಣ್ಣು ಮಕ್ಕಳು ಅಂದ್ರೆ ಏನು ಅಂದುಕೊಂಡಿದ್ದೀಯಾ ಎಂದು ಭೂಮಿಕಾ ಮತ್ತೊಂದು ಏಟು ನೀಡುತ್ತಾಳೆ. ಮತ್ತೆ ಒಂದೊಂದು ಪೆಟ್ಟು ಕೊಡುತ್ತಾರೆ. "ಏನು ನನಗೆ ಹೊಡೆಸಲು ಇಲ್ಲಿಗೆ ಕರೆಸಿಕೊಂಡ್ಯ. ನನಗೆ ಅವಮಾನ ಮಾಡೋಕ್ಕೆ ಇಲ್ಲಿ ಕರೆಸಿಕೊಂಡ್ಯ. ನಿನ್ನ ಗಂಡನಿಗೆ ಹೇಳಿ ಎಲ್ಲಾ ವಿಷಯ ತಿಳಿಸುವೆ" ಎಂದು ಹೇಳುತ್ತಾನೆ. "ತಾಕತ್ತಿದ್ದರೆ ಕಾಲ್‌ ಮಾಡೋ" ಎಂದು ಭೂಮಿಕಾ ಹೇಳುತ್ತಾಳೆ. "ಇವಾಗ್ಲೆ ಮಾಡ್ತಿನಿ" ಎಂದು ಕಾಲ್‌ ಮಾಡುತ್ತಾನೆ. ಪಕ್ಕದದಲ್ಲಿಯೇ ಫೋನ್‌ ರಿಂಗ್‌ ಆಗುತ್ತದೆ. ಜೀವನ್‌ ಅಲ್ಲಿಂದಲೇ ಬರುತ್ತಾನೆ. ತೆರೆಮರೆಯಲ್ಲಿ ಜೀವನ್‌ ಕೂಡ ಇದ್ದ ಸಂಗತಿ ದೀಪಾನ್ಶುಗೆ ತಿಳಿಸುತ್ತದೆ.

ಮಲ್ಲಿ ಜತೆ ಜೈದೇವ್‌ ನಾಟಕ

ಇನ್ನೊಂದೆಡೆ ಮಲ್ಲಿ ಮತ್ತು ಜೈದೇವ್‌ ಕುಳಿತಿರುತ್ತಾರೆ. ಮಗುವಿನ ಸ್ಕ್ಯಾನ್‌ ರಿಪೋರ್ಟ್‌ ತೋರಿಸಿ ಖುಷಿ ಪಡುತ್ತಾಳೆ. ಎದುರಲ್ಲಿ ಮಲ್ಲಿ ಕುರಿತು ಪ್ರೀತಿಯ ಮಾತನಾಡುತ್ತಾನೆ. ಮನಸ್ಸಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಾನೆ. ನಿಮಗೆ ಯಾವ ಮಗು ಇಷ್ಟ? ಎಂದು ಕೇಳುತ್ತಾಳೆ. ನನಗೆ ಯಾವ ಮಗುವಾದರೂ ಇಷ್ಟ ಎಂದು ಹೇಳುತ್ತಾನೆ. ಮಗುವಿನ ಜತೆಗೆ ನಿನ್ನ ಸಾಧನೆ ಕುರಿತೂ ಗಮನ ನೀಡಬೇಕು ಎಂದು ಹೇಳುತ್ತಾನೆ. ಭೂಮಿಕಾ ಅಕ್ಕನೋರು ಹೀಗೆ ಹೇಳ್ತಾ ಇರ್ತಾಳೆ ಅಂದಾಗ ಎಂದಿನಂತೆ ಮನಸ್ಸಿನೊಳಗೆ ಕೋಪ ವ್ಯಕ್ತಪಡಿಸುತ್ತಾನೆ. "ಅಕ್ಕ ಅಕ್ಕ ಅಂತ ಇವಳು ಅವಳ ಜಪ ಮಾಡ್ತಾಳೆ. ಬೇಡದ ಪಿಂಡನ ಆಚೆಗೆ ಹಾಕಬೇಕು" ಎಂದು ಮನಸ್ಸಲ್ಲಿ ಅಂದುಕೊಳ್ಳುತ್ತಾನೆ.

ಜೀವನ್‌ ಅಲ್ಲಿಗೆ ಬರುತ್ತಾನೆ. ಎಲ್ಲಾ ಪ್ಲ್ಯಾನ್‌ ಮಾಡಿಕೊಂಡು ಬಂದಿದ್ದೀರಾ? ಎಲ್ಲಾ ಆಚೆ ಹೇಳ್ತಿನಿ. ರಿವೇಂಜ್‌ ತೀರಿಸ್ಕೋತೀನಿ ಅನ್ನುತ್ತಾನೆ. ತಕ್ಷಣ ಜೀವನ್‌ ಕೈ ಪೆಟ್ಟು ಬೀಳುತ್ತದೆ. "ನನ್ನ ಹೆಂಡತಿ ಏನು ಅಂತ ನನಗೆ ಗೊತ್ತು. ನಿನ್ನಂಥವನ್ನು ಬಂದು ಹೇಳಿದ್ರೆ ನಾನು ಅನುಮಾನ ಪಡ್ತಿನಿ ಅಂದ್ಕೋತೀಯಾ" ಎಂದು ಹೇಳಿ ಸಪ್ತಪದಿಯ ಮಹತ್ವ ಹೇಳುತ್ತಾನೆ. ನನ್ನ ಹೆಂಡ್ತಿಯ ಮೇಲೆ ಕಣ್ಣು ಹಾಕ್ತೀಯಾ ಎಂದು ಹೊಡೆಯುತ್ತಾನೆ. ಜೀವನ್‌ ಹೇಳಿದ ಪ್ರೀತಿಯ ಮಾತುಗಳನ್ನು ಕೇಳಿ ಮಹಿಮಾ ಅಳುತ್ತಾ ಅಪ್ಪಿಕೊಳ್ಳುತ್ತಾಳೆ.

ಆನಂದ್‌ ಮತ್ತು ಗೌತಮ್‌ ದೇವಸ್ಥಾನಕ್ಕೆ ಬಂದಿರುತ್ತಾರೆ. ಅಲ್ಲಿ ಹೆಂಡತಿಗಾಗಿ ಹರಕೆ ಹೊತ್ತಿರ್ತಾನೆ. ಒಂದಿಷ್ಟು ಸ್ನೇಹದ ಮಾತುಗಳು ನಡೆಯುತ್ತವೆ. ಮನೆಗೆ ಬಂದ ಗೌತಮ್‌ ಭೂಮಿಕಾಳನ್ನು ಹುಡುಕುತ್ತಾನೆ. ಭೂಮಿಕಾಳಿಗೆ ಗೌತಮ್‌ ಕಾಲ್‌ ಮಾಡುತ್ತಾನೆ. ಜೀವನ್‌ ಜತೆ ಇರುವುದಾಗಿ ಹೇಳುತ್ತಾಳೆ. ಇನ್ನೊಂದೆಡೆ ಮಲ್ಲಿಗೆ ಜೈದೇವ್‌ಗೆ ಜ್ಯೂಸ್‌ ಕೊಡುತ್ತಾನೆ. ಇವಳು ಬೇಡ ಅನ್ನುತ್ತಾಳೆ. ಅಕ್ಕ ಹೇಳಿದ್ದಾಳೆ ಎಂದು ಜ್ಯೂಸ್‌ ಕುಡಿಯುವುದಿಲ್ಲ. "ಮಲ್ಲಿ ನಾನು ನಿನ್ನ ಗಂಡ ಅಲ್ವ" ಎಂದಾಗ "ನಾನು ಅಕ್ಕನೂ ಹೇಳಿದ ಗೆರೆ ದಾಟೋದಿಲ್ಲ" ಎಂದು ಹೇಳುತ್ತಾಳೆ. "ನಾನು ಪ್ರೀತಿಯಿಂದ ನಿನಗೆ ಜ್ಯೂಸ್‌ ತಂದೆ. ನಾನೇ ಕುಡಿತೀನಿ" ಎಂದು ಕೋಪದಿಂದ ಕುಡಿಯುತ್ತಾನೆ.

ಇನ್ನೊಂದೆಡೆ ಜೀವನ್‌ ಮತ್ತು ಮಹಿಮಾ ಮಾತನಾಡುತ್ತಾರೆ. ಇಬ್ಬರ ನಡುವೆ ಪ್ರೀತಿ ಮಾತು ನಡೆಯುತ್ತದೆ. ನನ್ನಲ್ಲಿ ಯಾಕೆ ಹೇಳಿಲ್ಲ, ನನಗೆ ನೀನು ಮುಖ್ಯ ಎಂದೆಲ್ಲ ಹೇಳುತ್ತಾನೆ. ನೀನು ನನ್ನ ಮಗು ಥರನೇ ಎನ್ನುತ್ತಾನೆ. "ತಿಳಿವಳಿಕೆ ಇಲ್ಲದೆ ನೀನು ತಪ್ಪು ಮಾಡಿರಬಹುದು. ಆದರೆ, ಅದರಿಂದ ನಿನ್ನ ಕ್ಯಾರೆಕ್ಟರ್‌ ಬಗ್ಗೆ ಕೆಟ್ಟದ್ದಾಗಿ ತಿಳಿಯೋದಿಲ್ಲ. ನಿನ್ನತ್ರ ಒಂದು ರಿಕ್ವೆಸ್ಟ್‌. ನನ್ನಲ್ಲಿ ಯಾವ ವಿಚಾರ ಮುಚ್ಚಿಡಬೇಡ. ನಾನು ನಿನ್ನ ಬಿಟ್ಟುಕೊಡೋಲ್ಲ. ಈ ವಿಷಯ ಮನೆಯವರಿಗೆ ಹೇಳೋದೇ ಬೇಡ" ಎಂದು ಹೇಳುತ್ತಾನೆ.

IPL_Entry_Point