ಕೋಮದಿಂದ ಎಚ್ಚರಗೊಂಡ ಆನಂದ, ಜೈದೇವ್‌ ಬಗ್ಗೆ ಗೌತಮ್‌ಗೆ ಸತ್ಯ ಹೇಳಲು ಮುಂದಾದ ಆಪ್ತಮಿತ್ರ- ಅಮೃತಧಾರೆ ಧಾರಾವಾಹಿ ಇಂದಿನ ಸಂಚಿಕೆ-television news amruthadhare kannada serial yesteday and today story anand wakeup from koma goutham diwan pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಕೋಮದಿಂದ ಎಚ್ಚರಗೊಂಡ ಆನಂದ, ಜೈದೇವ್‌ ಬಗ್ಗೆ ಗೌತಮ್‌ಗೆ ಸತ್ಯ ಹೇಳಲು ಮುಂದಾದ ಆಪ್ತಮಿತ್ರ- ಅಮೃತಧಾರೆ ಧಾರಾವಾಹಿ ಇಂದಿನ ಸಂಚಿಕೆ

ಕೋಮದಿಂದ ಎಚ್ಚರಗೊಂಡ ಆನಂದ, ಜೈದೇವ್‌ ಬಗ್ಗೆ ಗೌತಮ್‌ಗೆ ಸತ್ಯ ಹೇಳಲು ಮುಂದಾದ ಆಪ್ತಮಿತ್ರ- ಅಮೃತಧಾರೆ ಧಾರಾವಾಹಿ ಇಂದಿನ ಸಂಚಿಕೆ

Amruthadhare Kannada Serial: ಅಮೃತಧಾರೆ ಸೀರಿಯಲ್‌ನಲ್ಲಿ ಅಪಘಾತದಿಂದ ಕೋಮಕ್ಕೆ ಹೋಗಿದ್ದ ಆನಂದ್‌ಗೆ ಎಚ್ಚರವಾಗಿದೆ. ಜೈದೇವ್‌ನಿಂದ ನನಗೆ ಅಪಾಯ ತಪ್ಪಿದ್ದಲ್ಲ ಎಂದರಿತ ಆನಂದ್‌ ಕೆಡಿ ಜೈದೇವ್‌ ಕುರಿತು ಗೌತಮ್‌ಗೆ ಹೇಳುವ ಕುರಿತು ಯೋಚಿಸುತ್ತಾ ಇದ್ದಾನೆ.

ಅಮೃತಧಾರೆ ಧಾರಾವಾಹಿ ಕಥೆ
ಅಮೃತಧಾರೆ ಧಾರಾವಾಹಿ ಕಥೆ

Amruthadhare Kannada Serial: ಝೀ ಕನ್ನಡ ವಾಹಿನಿಯ ಅಮೃತಧಾರೆ ಸೀರಿಯಲ್‌ನ ನಿನ್ನೆಯ ಸಂಚಿಕೆಯಲ್ಲಿ ಕೋಮದಲ್ಲಿದ್ದ ಆನಂದ್‌ ತುಸು ಎಚ್ಚರಗೊಂಡಿದ್ದಾನೆ. ಇಂದಿನ ಸಂಚಿಕೆಯಲ್ಲಿ ಆನಂದ್‌ಗೆ ಹಲವು ವಿಚಾರಗಳು ನೆನಪಾಗಿವೆ. ಅಮೃತಧಾರೆ ಸೀರಿಯಲ್‌ನ ಕಳೆದ ಕೆಲವು ಸಂಚಿಕೆಗಳಲ್ಲಿ ಸಾಕಷ್ಟು ಘಟನೆಗಳು ನಡೆದಿದ್ದವು. ಅಪೇಕ್ಷಾ ಮತ್ತು ಪಾರ್ಥರ ಮದುವೆ ವಿಚಾರದಿಂದಾಗಿ ಅಮೃತಧಾರೆ ಕಥೆ ಎಲ್ಲೆಲ್ಲೂ ಹೋಗಿತ್ತು.

ಅಪೇಕ್ಷಾ ಮತ್ತು ಪಾರ್ಥ ಮದುವೆ

ಅಪೇಕ್ಷಾ ಮತ್ತು ಪಾರ್ಥ ತನ್ನ ಮನೆಯವರ ಮನಸ್ಸಿಗೆ ವಿರುದ್ಧವಾಗಿ ಮದುವೆಯಾಗಿದ್ದಾರೆ. ವಿಶೇಷವಾಗಿ ಸದಾಶಿವನ ಒಪ್ಪಿಗೆ ಪಡೆಯದೆ ಮದುವೆಯಾಗಿದ್ದಾರೆ. ಈ ಮದುವೆ ಸಂದರ್ಭದಲ್ಲಿ ಅಪೇಕ್ಷಾ ಮತ್ತು ಪಾರ್ಥನ ಕೊಲ್ಲಲು ಜೈದೇವ್‌ ಸಂಚು ರೂಪಿಸಿದ್ದ. ತಾನೇ ಹೊಡೆದಾಟ ಮಾಡಿದ್ದ. ಈ ಸಮಯದಲ್ಲಿ ರೌಡಿ ಕಡೆಯವನೊಬ್ಬ ಸಿಕ್ಕಿಬಿದ್ದಿದ್ದ. ಆತ ಆನಂದ್‌ಗೆ "ಇದಕ್ಕೆಲ್ಲ ಜೈದೇವ್‌ ಅವರೇ ಕಾರಣ" ಎಂಬ ವಿವರ ನೀಡಿದ್ದ. ಈ ಸತ್ಯವನ್ನು ಆನಂದ್‌ ಗೌತಮ್‌ಗೆ ಹೇಳದೆ ತಪ್ಪು ಮಾಡಿದ್ದ. ತಾನೇ ನೇರವಾಗಿ ಜೈದೇವ್‌ಗೆ ಹೇಳಿ ಕೆನ್ನೆಗೆ ಒಂದೇಟು ಹಾಕಿದ್ದ.

ಸೇಡು ತೀರಿಸಿಕೊಂಡ ಜೈದೇವ್‌

ಆನಂದ್‌ಗೆ ಸತ್ಯ ಏನೆಂದು ತಿಳಿದಿದೆ ಎಂದು ತಿಳಿದ ಬಳಿಕ ಜೈದೇವ್‌ ಕ್ರಿಮಿನಲ್‌ ಪ್ಲಾನ್‌ ಮಾಡಿದ್ದ. ಅಪರ್ಣಾ ಜತೆ ಆನಂದವಾಗಿದ್ದ ಆನಂದ್‌ಗೆ ಅಪಘಾತ ಮಾಡಿದ್ದ. ಎಲ್ಲಾ ಸೀರಿಯಲ್‌ಗಳಂತೆ ಆನಂದ್‌ ಗಾಯಗೊಂಡು ಆಸ್ಪತ್ರೆ ಸೇರಿ ಕೋಮಕ್ಕೆ ಹೋಗಿದ್ದರು. ಕೋಮದಿಂದ ಎಚ್ಚರಗೊಳಿಸಲು ಗೌತಮ್‌ ಸಾಕಷ್ಟು ಪ್ರಯತ್ನಿಸಿದ್ದರು. ತನ್ನ ಬಾಲ್ಯ, ಸ್ನೇಹದ ಕಥೆಗಳೆನ್ನೆಲ್ಲ ಹೇಳಿದ್ದರು. ಆದರೆ, ಗೌತಮ್‌ ಎಷ್ಟೇ ಪ್ರಯತ್ನ ಪಟ್ಟರೂ ಆನಂದ್‌ ಕೋಮದಿಂದ ಹೊರಬಂದಿರಲಿಲ್ಲ.

ಜೈದೇವ್‌ ಹತ್ತಿರಬಂದಾಗ ಮಿಸುಕಾಡಿದ ಆನಂದ್‌

ಕೋಮದಲ್ಲಿದ್ದ ಆನಂದ್‌ ಬಳಿ ಜೈದೇವ್‌ ಬರುತ್ತಾನೆ. ಇವನು ನಾವು ಹೇಳಿದ್ದನ್ನೆಲ್ಲ ಕೇಳಿಸಿಕೊಳ್ಳುತ್ತಾನೆ ಎಂದು ಗೌತಮ್‌ ಹೇಳಿದಾಗ ಅಚ್ಚರಿಯಿಂದ ಜೈದೇವ್‌ ಮಾತನಾಡಲು ಪ್ರಯತ್ನಿಸಿದ್ದಾನೆ. ತನ್ನ ಈ ಸ್ಥಿತಿಗೆ ಕಾರಣನಾದ ಜೈದೇವ್‌ ಧ್ವನಿ ಕೇಳಿದಾಗ ಆನಂದ್‌ ಕಿವಿ, ಕಣ್ಣಿನಲ್ಲಿ ಚಲನೆ ಕಾಣಿಸಿಕೊಂಡಿದೆ. ನಿನ್ನೆಯ ಸಂಚಿಕೆಯಲ್ಲಿ ಈ ಬೆಳವಣಿಗೆಯಾಗಿತ್ತು. ಇದನ್ನು ನೋಡಿ ಗೌತಮ್‌ ಖುಷಿಗೊಂಡಿದ್ದ. ಜೈದೇವ್‌ಗೆ ಆತಂಕವಾಯಿತು.

ಅಮೃತಧಾರೆ ಸೀರಿಯಲ್‌ನ ಇಂದಿನ ಪ್ರಮೋದಲ್ಲಿ ಆನಂದ್‌ ಮಲಗಿರುವಾಗ ಜೈದೇವ್‌ನ ಕೆಲವು ಸ್ವಗತ ಇರುತ್ತದೆ. "ನಿನ್ನ ಹೆಂಡತಿಯ ತಾಳಿ ಕಟ್ಟಿ ಇತ್ತು. ಹಾಗಾಗಿ ಬದುಕಿಕೊಂಡೆ" ಎಂದು ಹೇಳುತ್ತಾನೆ. ಜೈದೇವ್‌ ಹೋದ ಬಳಿಕ ಆನಂದ್‌ ಮೆಲ್ಲನೆ ಕಣ್ಣು ತೆರೆಯುತ್ತಾನೆ. ಅವನಿಗೆ ಒಂದೊಂದು ವಿಚಾರಗಳು ನೆನಪಿಗೆ ಬರುತ್ತವೆ. "ಇನ್ನು ತಡಮಾಡಬಾರದು. ಎಲ್ಲಾ ವಿಚಾರವನ್ನು ಗೌತಮ್‌ಗೆ ಹೇಳಬೇಕು" ಎಂದುಕೊಳ್ಳುತ್ತಾನೆ. ಸತ್ಯವನ್ನು ಗೌತಮ್‌ಗೆ ಹೇಳಲು ಸಾಧ್ಯವಾಗುತ್ತದೆಯೋ ಅಥವಾ ಜೈದೇವ್‌ ಬೆದರಿಕೆಗೆ ಹೆದರಿ ಸೈಲೆಂಟ್‌ ಆಗುತ್ತಾನೋ ಕಾದು ನೋಡಬೇಕಿದೆ.

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)

ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)

ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)

ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)

ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)

ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)

ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)

ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)

ರಣವ್‌: ಜೈದೇವ್‌

ಚಂದನ್‌: ಅಶ್ವಿನಿ

ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)

ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)