Amruthadhaare: ಸುಪಾರಿ ಕೊಟ್ಟದ್ದು ಜೈದೇವ್ ಎಂಬ ಸತ್ಯ ಆನಂದ್‌ಗೆ ಗೊತ್ತಾಯ್ತು; ಬ್ರೇಕಿಂಗ್ ನ್ಯೂಸ್ ಆಯ್ತು ಅಪೇಕ್ಷಾ-ಪಾರ್ಥನ ಮದುವೆ
Amruthadhaare Serial: ಝೀ ಕನ್ನಡ ವಾಹಿನಿಯ ಅಮೃತಧಾರೆ ಸೀರಿಯಲ್‌ನ ನಿನ್ನೆಯ ಸಂಚಿಕೆಯಲ್ಲಿ ಪಾರ್ಥ ಅಪೇಕ್ಷಾಳಿಗೆ ಬುದ್ಧಿ ಹೇಳಲು ಪ್ರಯತ್ನಿಸುತ್ತಾನೆ. ಆದರೆ, ಇಂದಿನ ಸಂಚಿಕೆಯಲ್ಲಿ ಆನಂದ್‌ಗೆ ಪಾರ್ಥ ಮತ್ತು ಅಪೇಕ್ಷಾರನ್ನು ಮುಗಿಸಲು ಜೈದೇವ್ ಪ್ರಯತ್ನಿಸಿದ ಸತ್ಯವನ್ನು ರೌಡಿ ಹೇಳುತ್ತಾನೆ.
Amruthadhaare Serial: ಝೀ ಕನ್ನಡ ವಾಹಿನಿಯ ಅಮೃತಧಾರೆ ಸೀರಿಯಲ್‌ನಲ್ಲಿ ನಿನ್ನೆಯ ಸಂಚಿಕೆಯಲ್ಲಿ ಪಾರ್ಥ ಅಪೇಕ್ಷಾಗೆ ವಿಷಯ ಮನವರಿಕೆ ಮಾಡಲು ಯತ್ನಿಸುತ್ತಾನೆ. ನಿನ್ನ ತಂದೆಯನ್ನು ಒಪ್ಪಿಸದೆ ಮದುವೆಯಾಗಿ ದೊಡ್ಡ ತಪ್ಪು ಮಾಡಿದೆವು, ಅವರು ಒಪ್ಪಿದ ನಂತರ ಮುಂದುವರೆಯೋಣ ಎಂದು ಪಾರ್ಥ ಹೇಳುತ್ತಾನೆ. ಫಸ್ಟ್ ನೈಟ್‌ಗೆ ಖುಷಿಯಾಗಿ ಬಂದ ಅಪೇಕ್ಷಾಗೆ ಇದರಿಂದ ಆತಂಕವಾಗಿರುತ್ತದೆ. ಅವಳಿಗೆ ಕೆಲವು ದಿನಗಳಿಂದ ಮನಸ್ಸು ಕೆಟ್ಟಿದೆ. ಭೂಮಿಕಾಳ ಬಗ್ಗೆ ತಪ್ಪಾಗಿ ತಿಳಿದುಕೊಂಡಿದ್ದಾಳೆ. ಭೂಮಿಕಾಳಿಗೆ ಎದುರು ಮಾತನಾಡಿದ್ದಾಳೆ. ಶಕುಂತಲಾದೇವಿಯ ಬಣ್ಣದ ಮಾತುಗಳಿಗೆ ಅಪೇಕ್ಷಾ ಕರಗಿದ್ದಾಳೆ. ಇದೇ ಸಮಯದಲ್ಲಿ ಪಾರ್ಥನ ನಡೆ ಈಕೆಗೆ ಅಚ್ಚರಿ ತಂದಿದೆ.
ಇಷ್ಟು ಮಾತ್ರವಲ್ಲ ಪಾರ್ಥ ಹೇಳಿದ ಇನ್ನೊಂದು ಮಾತು ಅಪೇಕ್ಷಾಗೆ ಆಘಾತ ತರುತ್ತದೆ. ಅತ್ತಿಗೆ ಜೊತೆ ನೀವು ಕೆಟ್ಟದಾಗಿ ಮಾತನಾಡಿದ್ದನ್ನು ನಾನು ಕೇಳಿಸಿಕೊಂಡಿದೆ. ಅತ್ತಿಗೆ ಜತೆ ಹೇಗೆ ಮಾತನಾಡಿದ್ದೀರಿ. ಅದು ನನಗೆ ಇಷ್ಟವಾಗಲಿಲ್ಲ ಎಂದು ಪಾರ್ಥ ಹೇಳುತ್ತಾನೆ. "ಅಕ್ಕನ ಜತೆ ನನಗೆ ಮಾತನಾಡಲು ಫಿಲ್ಟರ್ ಇಲ್ಲ" ಎಂದು ಅಪೇಕ್ಷಾ ಹೇಳುತ್ತಾಳೆ. "ಅತ್ತಿಗೆ ಬೇರೆಯವರ ತರಹ ಅಲ್ಲ. ಅವರು ತುಂಬಾ ಡಿಫರೆಂಟ್. ನಾನು ಅವರಿಗೆ ತುಂಬಾ ಬೆಲೆ ನೀಡುತ್ತೇನೆ. ಬಿಗ್ ಬ್ರದರ್ ಚೆನ್ನಾಗಿದ್ದಾನೆ ಎಂದರೆ ಅದಕ್ಕೆ ಅತ್ತಿಗೆಯೇ ಕಾರಣ. ಅವರಿಗೆ ಯಾರಾದರೂ ಕೆಟ್ಟದಾಗಿ ಹೇಳಿದರೆ ನನಗೆ ಇಷ್ಟವಾಗುವುದಿಲ್ಲ. ನಿಮ್ಮಲ್ಲಿ ಸಾಕಷ್ಟು ಬದಲಾವಣೆಯಾಗಿದೆ" ಎಂದಾಗ ಅಪೇಕ್ಷಾ ಯೋಚನೆಗೆ ಬೀಳುತ್ತಾಳೆ.
ಇನ್ನೊಂದೆಡೆ ಟೀವಿಯಲ್ಲಿ ಪಾರ್ಥನ ಮದುವೆ ಕುರಿತು ಬ್ರೇಕಿಂಗ್ ನ್ಯೂಸ್ ಬರುತ್ತಾ ಇದೆ. ಇದನ್ನು ನೋಡಿ ಗೌತಮ್‌ಗೆ ಅಚ್ಚರಿಯಾಗುತ್ತದೆ. "ಇದೊಂದು ಸುದ್ದಿಯಾ? ಬೆಳಗ್ಗೆ ಬೆಳಗ್ಗೆ ನನ್ನ ಮೂಡ್ ಹಾಳಾಯ್ತು" ಎಂದು ಗೌತಮ್ ಹೇಳುತ್ತಾಳೆ. ಇದೇ ಸಮಯದಲ್ಲಿ "ಅಪ್ಪ ಈ ಸುದ್ದಿ ನೋಡಿದ್ರೆ ಎಷ್ಟು ಬೇಸರವಾಗುತ್ತಾರೋ" ಎಂದು ಭೂಮಿಕಾ ಯೋಚಿಸಿದಾಗ ಸೀನ್ ಸದಾಶಿವನ ಮನೆಗೆ ಹೋಗುತ್ತದೆ. ಅಲ್ಲೂ ಅದೇ ಬ್ರೇಕಿಂಗ್ ನ್ಯೂಸ್ ಬರುತ್ತದೆ. ಸದಾಶಿವ ಮತ್ತು ಇತರರು ಈ ಸುದ್ದಿಯನ್ನು ನೋಡುತ್ತಾರೆ. ಸದಾಶಿವ ತಲೆ ತಗ್ಗಿಸುತ್ತಾರೆ.
ಅಮೃತಧಾರೆ ಸೀರಿಯಲ್‌ನ ಇಂದಿನ ಸಂಚಿಕೆ
ಅಮೃತಧಾರೆಯ ಇಂದಿನ ಸಂಚಿಕೆಯಲ್ಲಿ ಏನಾಗಲಿದೆ ಎಂಬ ಸುಳಿವು ಝೀ ಕನ್ನಡ ವಾಹಿನಿಯ ಪ್ರಮೋದಿಂದ ತಿಳಿದುಬಂದಿದೆ. ಆನಂದ್ ರೌಡಿಯ ಬಾಯಿ ಬಿಡಲು ಪ್ರಯತ್ನಿಸುತ್ತಾನೆ. ಕೊನೆಗೆ ಆನಂದ್ ಮಾತಿಗೆ ಒಪ್ಪಿದ ರೌಡಿ ಸತ್ಯ ಬಾಯಿಬಿಡುತ್ತಾನೆ. ಅಪೇಕ್ಷಾ ಮತ್ತು ಪಾರ್ಥನ ಕೊಲ್ಲಲು ಪ್ರಯತ್ನಿಸಿದ್ದು ಜೈದೇವ್ ಎಂಬ ಸತ್ಯವನ್ನು ಹೇಳುತ್ತಾನೆ. ಈ ಸತ್ಯವನ್ನು ಗೌತಮ್‌ಗೆ ತಲುಪಿಸಿದ ಬಳಿಕ ಸೀರಿಯಲ್ ಇನ್ನೊಂದು ತಿರುವು ಪಡೆಯುವ ಸೂಚನೆಯಿದೆ.
ಅಮೃತಧಾರೆ ಸೀರಿಯಲ್ ಪಾತ್ರವರ್ಗ
ಛಾಯಾ ಸಿಂಗ್: ಭೂಮಿಕಾ (ನಾಯಕಿ)
ರಾಜೇಶ್ ನಟರಂಗ್: ಗೌತಮ್ ದಿವಾನ್ (ನಾಯಕ)
ವನಿತಾ ವಾಸು: ಶಕುಂತಳಾ (ಗೌತಮ್ ಮಲತಾಯಿ)
ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್ ತಂದೆ)
ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)
ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)
ಸಾರಾ ಅಣ್ಣಯ್ಯ : ಮಹಿಮಾ (ಗೌತಮ್ ತಂಗಿ, ಶಂಕುತಳಾ ಮಗಳು, ಜೀವನ್ ಹೆಂಡತಿ)
ಶಶಿ ಹೆಗ್ಗಡೆ: ಜೀವನ್ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)
ವಿಭಾಗ