Annayya Serial: ಮಾಸ್ತಿಕೊಪ್ಪಲ ಉತ್ಸವದಲ್ಲಿ ಶಿವಣ್ಣನ ಕುಟುಂಬ, ಗೌಡರ ಕುಟುಂಬದಲ್ಲಿ ಆಗ್ತಿದೆ ದೊಡ್ಡ ಅನ್ಯಾಯ-television news annayya serial kannada today episode september 5 mastikoppal festival smk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Annayya Serial: ಮಾಸ್ತಿಕೊಪ್ಪಲ ಉತ್ಸವದಲ್ಲಿ ಶಿವಣ್ಣನ ಕುಟುಂಬ, ಗೌಡರ ಕುಟುಂಬದಲ್ಲಿ ಆಗ್ತಿದೆ ದೊಡ್ಡ ಅನ್ಯಾಯ

Annayya Serial: ಮಾಸ್ತಿಕೊಪ್ಪಲ ಉತ್ಸವದಲ್ಲಿ ಶಿವಣ್ಣನ ಕುಟುಂಬ, ಗೌಡರ ಕುಟುಂಬದಲ್ಲಿ ಆಗ್ತಿದೆ ದೊಡ್ಡ ಅನ್ಯಾಯ

Kannada Serial: ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿಯಲ್ಲಿ ಇದೀಗ ಮಾಸ್ತಿಕೊಪ್ಪಲ ಉತ್ಸವ ನಡೆಯುತ್ತಿದೆ. ಎಲ್ಲರೂ ಜಾತ್ರೆಯಲ್ಲಿ ಸಂಭ್ರಮದಲ್ಲಿದ್ದರೆ, ಒಳಗೊಳಗೆ ಹಲವಾರು ಸಂಚುನಡೆಯುತ್ತಿದೆ. ಅಲ್ಲಿ ಏನಾಗಿದೆ ಎಂಬ ಮಾಹಿತಿ ಇಲ್ಲೇ ಇದೆ ಗಮನಿಸಿ.

ಅಣ್ಣಯ್ಯ
ಅಣ್ಣಯ್ಯ

ಮಾಸ್ತಿಕೊಪ್ಪಲ ಉತ್ಸವಕ್ಕೆ ಪಾರು ಮನೆಯವರು ಬಂದಿದ್ದಾರೆ. ಇದರಿಂದಾಗಿ ಸೋಮೆ ಗೌಡನ ಮನೆಯವರು ತುಂಬಾ ಖುಷಿಯಲ್ಲಿದ್ದಾರೆ. ಆದರೆ ಪಾರು ಮಾತ್ರ ಖುಷಿಯಾಗಿಲ್ಲ. ಅವಳಿಗೆ ಎಲ್ಲಿ ಯಾವಾಗ ಏನಾಗುತ್ತೆಯೋ ಏನೋ ಎಂಬ ಆತಂಕ. ಈ ಆತಂಕಕ್ಕೆ ಕಾರಣ ಅವಳನ್ನು ಮದುವೆಯಾಗುತ್ತೇನೆ ಎಂದು ಕೂತ ಸೋಮೆಗೌಡ. ಅವನನ್ನು ಕಂಡರೆ ಇವಳಿಗೆ ಇಷ್ಟವಿಲ್ಲ ಎನ್ನುವ ವಿಷಯ ಈಗಾಗಲೇ ಶಿವಣ್ಣನಿಗೆ ಗೊತ್ತಾಗಿದೆ. ಆದರೂ ಅವಳನ್ನು ಕಾಪಾಡಲು ಬೇರೆ ಬೇರೆ ಉಪಾಯ ಮಾಡದೆ ಸಾಧ್ಯವೇ ಇಲ್ಲ ಎಂಬಂತಾಗಿದೆ. ಯಾಕೆಂದರೆ ಅವಳಿಗೆ ಈಗಾಗಲೇ ಸೋಮೆಗೌಡನ ಜೊತೆ ನಿಶ್ಚಿತಾರ್ಥವಾಗಿದೆ. ಹಾಗಾಗಿ ಇವನು ಹಿಂದಿಂದಲೇ ಕಾವಲು ಕಾಯುತ್ತಾ ಇದ್ದಾನೆ.

ಅವನು ಪಾರುವನ್ನು ತನ್ನ ಜೀಪ್‌ನಲ್ಲಿ ಕೂರಿಸಿಕೊಂಡು ಊರು ಸುತ್ತಿಸಲು ಕರೆದುಕೊಂಡು ಹೋಗುತ್ತಾನೆ. ಆದರೆ ಪಾರುಗೆ ಅವನ ಒಬ್ಬನ ಜೊತೆ ಹೋಗೋಕೆ ಇಷ್ಟ ಇರೋದಿಲ್ಲ. ಆದರೂ ಮನಸಿಲ್ಲದ ಮನಸಿನಿಂದ ಗಾಡಿ ಹತ್ತುತ್ತಾಳೆ. ಆಗ ಶಿವಣ್ಣ ಒಂದು ಉಪಾಯ ಮಾಡುತ್ತಾನೆ. ತನ್ನ ತಂಗಿಯಂದಿರೆಲ್ಲರನ್ನು ಆ ಊರಿಗೆ ಜಾತ್ರೆಗೆ ಕರೆಸುತ್ತಾನೆ. ಆಗ ಅವರು ದಾರಿ ಮಧ್ಯದಲ್ಲಿ ಪಾರುಗೆ ಸಿಗುವಂತೆ ಮಾಡುತ್ತಾನೆ. ಆಗ ಅವರೆಲ್ಲರನ್ನೂ ಕರೆದು ಜೀಪ್ ಹತ್ತುವಂತೆ ಪಾರು ಹೇಳುತ್ತಾಳೆ.

ಅದಾದ ನಂತರದಲ್ಲಿ ಅವರೆಲ್ಲರೂ ಜೀಪ್‌ನಲ್ಲಿ ಕೂತು ಊರು ಸುತ್ತುತ್ತಾರೆ. ಸಧ್ಯದ ಮಟ್ಟಿಗೆ ತಾನು ಬಚಾವ್ ಆದೆ ಎಂದು ಪಾರು ಅಂದುಕೊಳ್ಳುತ್ತಾಳೆ. ಇನ್ನು ಅವರ ಮನೆಯಲ್ಲಿ ಅವರ ತಮ್ಮನನ್ನು ಎಲ್ಲರೂ ತುಂಬಾ ಕೀಳಾಗಿ ಕಾಣುತ್ತಾ ಇರುತ್ತಾರೆ. ಅವರ ಆಸ್ತಿ ಎಲ್ಲವೂ ತಮ್ಮನ ಹೆಸರಿಗೇ ಇರುತ್ತದೆ. ಆದರೂ ಅವರು ಅವನನ್ನು ಕೆಲಸದ ಆಳಿನಂತೆ ದುಡಿಸಿಕೊಳ್ಳುತ್ತಾ ಇರುತ್ತಾರೆ. ಆದರೆ ಈ ವಿಚಾರ ಊರಿನಲ್ಲಿ ಹೊರಗಡೆ ಯಾರಿಗೂ ಗೊತ್ತಿರೋದಿಲ್ಲ.

ಇನ್ನು ಈ ಜಾತ್ರೆಯಲ್ಲಿ ಪೂಜೆ ಮಾಡಿ ದೇವರಿಗೆ ಆರತಿ ಬೆಳಗುವ ಹಕ್ಕು ಸೋಮೇಗೌಡನ ತಮ್ಮನಿಗೆ ಮಾತ್ರ ಇರುತ್ತದೆ. ಆದರೆ ಅವನನ್ನು ಕಂಡರೆ ಆಗದವರೇ ಕುಟುಂಬದಲ್ಲಿ ತುಂಬಿರುತ್ತಾರೆ. ಅತ್ತಿಗೆ ಕಾಲಿಗೆ ಬಿದ್ದು ನಮಸ್ಕಾರ ಮಾಡಲು ಹೇಳಿದಾಗ ಯಾರೂ ಸಹ ಮನಸಿಟ್ಟು ಮಾಡೋದಿಲ್ಲ. ಎಲ್ಲರಿಗೂ ಅಹಂಕಾರ ಇರುತ್ತದೆ. ಆದರೆ ಅವರ ತಂದೆ ಮಾಡಿಟ್ಟ ಪುಣ್ಯದಿಂದಾಗಿ ಅವರಿಬ್ಬರು ಇಂದು ಬದುಕಿಯಾದರೂ ಉಳಿದಿದ್ದಾರೆ ಎಂಬಂತೆ ತೋರುತ್ತದೆ. ಯಾಕೆಂದರೆ ವಕೀಲನೊಬ್ಬ ಬಂದು ಅವರ ಜೀವಾಂಶ ಸರಿ ಇದೆಯಾ? ಅಥವಾ ಏನಾದರೂ ಸಮಸ್ಯೆ ಇದೆಯಾ? ಎಂದು ಪ್ರತಿ ವರ್ಷ ಕೇಳಿ ಸಹಿ ಹಾಕಿಸಿಕೋಳ್ಳುತ್ತಾನೆ.

ಈ ವರ್ಷವೂ ಅದೇ ಕೆಲಸಕ್ಕೆ ಅವನು ಬಂದಿದ್ದಾನೆ. ಆಗ ಕಣ್ಣಲ್ಲೇ ಬೈದು ಅವರ ಹತ್ತಿರ ಸಹಿ ಮಾಡಿಸುತ್ತಾರೆ. ಇನ್ನು ಶಿವಣ್ಣ ತಂಗಿಯೊಬ್ಬಳು ಆ ಮನೆಯ ಕಿರಿಮಗನಿಗೆ ಪರಿಚಯ ಆಗಿದ್ದಾಳೆ.

ಇಲ್ಲಿದೆ ಪ್ರೋಮೋ

ಝೀ ಕನ್ನಡ ವಾಹಿನಿಯಲ್ಲಿ ಅಣ್ಣಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್‌ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್‌ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ.

ಅಣ್ಣಯ್ಯ ಸೀರಿಯಲ್‌ ಪಾತ್ರವರ್ಗ

ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್‌ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್‌ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.

ವಿಕಾಸ್‌ ಉತ್ತಯ್ಯ - ಶಿವು

ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್‌ ನಾಯಕಿಯಾಗಿದ್ದಾರೆ.

ನಿಶಾ ರವಿಕೃಷ್ಣನ್‌ - ಪಾರು

ಅಂಕಿತಾ ಗೌಡ, ನಾಗಶ್ರೀ ಬೇಗಾರ್‌, ಪ್ರತೀಕ್ಷಾ ಶರೀನಾಥ್‌ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.