‘ಅವಳ ಸುದ್ದಿಗೆ ಬರಬೇಡಿ, ಅಮ್ಮ, ಅಕ್ಕ ಅನ್ನೋಕೆ ನಮಗೆ ಬರಲ್ಲ ಅಂತಲ್ಲ!’ ತಂಗಿಯನ್ನು ಟೀಕಿಸಿದವರ ಚಳಿ ಬಿಡಿಸಿದ ಬಿಗ್‌ ಬಾಸ್‌ ವಿನಯ್‌ ಗೌಡ-television news bigg boss fame vinay gowda warned those who made bad comments about social worker akka anu mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ‘ಅವಳ ಸುದ್ದಿಗೆ ಬರಬೇಡಿ, ಅಮ್ಮ, ಅಕ್ಕ ಅನ್ನೋಕೆ ನಮಗೆ ಬರಲ್ಲ ಅಂತಲ್ಲ!’ ತಂಗಿಯನ್ನು ಟೀಕಿಸಿದವರ ಚಳಿ ಬಿಡಿಸಿದ ಬಿಗ್‌ ಬಾಸ್‌ ವಿನಯ್‌ ಗೌಡ

‘ಅವಳ ಸುದ್ದಿಗೆ ಬರಬೇಡಿ, ಅಮ್ಮ, ಅಕ್ಕ ಅನ್ನೋಕೆ ನಮಗೆ ಬರಲ್ಲ ಅಂತಲ್ಲ!’ ತಂಗಿಯನ್ನು ಟೀಕಿಸಿದವರ ಚಳಿ ಬಿಡಿಸಿದ ಬಿಗ್‌ ಬಾಸ್‌ ವಿನಯ್‌ ಗೌಡ

ಬಿಗ್‌ ಬಾಸ್‌ ಖ್ಯಾತಿಯ ವಿನಯ್‌ ಗೌಡ ಇದೀಗ ಮೌನ ಮುರಿದಿದ್ದಾರೆ. ತನ್ನ ತಂಗಿಯ ಬಗ್ಗೆ ಮಾತನಾಡಿದವರ ವಿರುದ್ಧ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಅಷ್ಟೇ ಅಲ್ಲ ಅಮ್ಮ ಅಕ್ಕ ಅನ್ನೋದಕ್ಕೆ ನಮಗೆ ಬರಲ್ಲ ಅಂತಲ್ಲ. ಅನ್ನಬಾರ್ದು ಅಂತ, ಅದೊಂದು ಗೌರವ ಎಂದು ಕೆಟ್ಟದಾಗಿ ಕಾಮೆಂಟ್‌ ಮಾಡುವವರಿಗೆ ವಾರ್ನಿಂಗ್‌ ಕೊಟ್ಟಿದ್ದಾರೆ.

‘ಅವಳ ಸುದ್ದಿಗೆ ಬರಬೇಡಿ, ಅಮ್ಮ, ಅಕ್ಕ ಅನ್ನೋಕೆ ನಮಗೆ ಬರಲ್ಲ ಅಂತಲ್ಲ!’ ತಂಗಿಯನ್ನು ಟೀಕಿಸಿದವರ ಚಳಿ ಬಿಡಿಸಿದ ಬಿಗ್‌ ಬಾಸ್‌ ವಿನಯ್‌ ಗೌಡ
‘ಅವಳ ಸುದ್ದಿಗೆ ಬರಬೇಡಿ, ಅಮ್ಮ, ಅಕ್ಕ ಅನ್ನೋಕೆ ನಮಗೆ ಬರಲ್ಲ ಅಂತಲ್ಲ!’ ತಂಗಿಯನ್ನು ಟೀಕಿಸಿದವರ ಚಳಿ ಬಿಡಿಸಿದ ಬಿಗ್‌ ಬಾಸ್‌ ವಿನಯ್‌ ಗೌಡ

Vinay Gowda on Akka Anu: ಸೋಷಿಯಲ್‌ ಮೀಡಿಯಾದ ಬೆಳೆದಂತೆ, ಧನಾತ್ಮಕ ಪರಿಣಾಮ ಬೀರಿದಷ್ಟೇ ನೆಗೆಟಿವಿಟಿಯ ಪ್ರಭಾವವೂ ಹೆಚ್ಚಾಗಿದೆ. ಹೊಗಳುವವರು ಒಂದೆಡೆಯಾದರೆ, ಟೀಕಿಸುವವರೂ ಇಲ್ಲಿದ್ದಾರೆ. ಅದರಲ್ಲೂ ಇಲ್ಲ ಸಲ್ಲದ ಪದ ಬಳಕೆಯೂ ಇಲ್ಲಿ ಎಲ್ಲವೂ ನೇರಾನೇರ! ನಕಲಿ ಖಾತೆಗಳ ಮೂಲಕ ಅಥವಾ ಫೇಕ್‌ ಹೆಸರಿನ ಮೂಲಕ ಜಾಲತಾಣಗಳಲ್ಲಿ ನಿಂದಿಸುವವರ ಸಂಖ್ಯೆಗೇನು ಕಡಿಮೆಯಿಲ್ಲ. ಇದೀಗ ತನ್ನ ಸಹೋದರಿಗೆ ನಿಂದಿಸಿದವರಿಗೆ ಸರಿಯಾಗಿಯೇ ವಾರ್ನಿಂಗ್‌ ಮಾಡಿದ್ದಾರೆ ಬಿಗ್‌ ಬಾಸ್‌ ಖ್ಯಾತಿಯ ವಿನಯ್‌ ಗೌಡ.

ವಿನಯ್‌ ಗೌಡ ಎಷ್ಟು ಅಗ್ರೆಸ್ಸಿವ್‌ ಎಂಬುದು ಅವರನ್ನು ಬಿಗ್‌ಬಾಸ್‌ನಲ್ಲಿ ನೋಡಿದವರಿಗೆ ಗೊತ್ತಿರುತ್ತದೆ. ಒಳ್ಳೆಯ ವಿಚಾರಕ್ಕೆ ಪ್ರೀತಿಯಿಂದಲೇ ಪ್ರತಿಕ್ರಿಯಿಸುವ ಅವರು, ತಮ್ಮ ವಿರುದ್ಧ ಬಂದವರಿಗೆ ಮಾತಲ್ಲೇ ತಿವಿದ ಸಾಕಷ್ಟು ಉದಾಹರಣೆಗಳಿವೆ. ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಫೇಮಸ್‌ ಆಗಿರುವ, ಸಾಮಾಜಿಕ ಕಳಕಳಿಯ ಕೆಲಸಗಳತ್ತ ತೊಡಗಿಸಿಕೊಂಡಿರುವ ಅಕ್ಕ ಅನು ಬಗ್ಗೆಯೂ ಕೆಲವರು ನೆಗೆಟಿವ್‌ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಈ ವಿಚಾರ ವಿನಯ್‌ ಗೌಡ ಅವರ ಗಮನಕ್ಕೆ ಬರುತ್ತಿದ್ದಂತೆ, ಅಕ್ಕ ಅನು ಬೆನ್ನಿಗೆ ನಿಂತಿದ್ದಾರೆ.

ಗಳಗಳನೇ ಕಣ್ಣೀರಿಟ್ಟ ಅಕ್ಕ ಅನು

ಕರ್ನಾಟದಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳ ಕುರಿತು ನಡೆಯುವ ಕೆಟ್ಟ ಟ್ರೋಲ್‌ಗಳು ಹಾಗೂ ಪೇಡ್ ಪ್ರಚಾರಗಳು ನಿಷೇಧವಾಗಬೇಕು. ಸೋಷಿಯಲ್‌ ಮೀಡಿಯಾ ಎಂಬ ಕಾರಣಕ್ಕೆ ಯಾರ್ಯಾರನ್ನೋ ಕೆಟ್ಟದಾಗಿ ಬಿಂಬಿಸಲಾಗುತ್ತಿದೆ. ಮರ್ಯಾದೆ ಹತ್ಯೆಯಾಗುವಂತ ಪ್ರಕರಣಗಳು ನಿಲ್ಲಬೇಕು. ಈ ರೀತಿಯ ಕೆಟ್ಟತನವೇ ಹೆಚ್ಚಾಗುತ್ತ ಹೋದರೆ, ಸ್ವಹತ್ಯೆಗಳು ಆಗುವುದು ಖಂಡಿತ. ಇನ್ನೊಬ್ಬರ ಬಗ್ಗೆ ಗೊತ್ತಿಲ್ಲದಿದ್ದರೂ, ಅವರ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡುವ ಮನಸ್ಥಿತಿ ನಾಶವಾಗಬೇಕು" ಎಂದು ಕೆಚ್ಚೆದೆಯ ಕನ್ನಡತಿ ಅಕ್ಕ ಅನು ವಿಡಿಯೋ ಶೇರ್‌ ಮಾಡಿ ಕಣ್ಣೀರಿಟ್ಟಿದ್ದರು.

ವಿನಯ್‌ ಗೌಡ ಕಡೆಯಿಂದ ಖಡಕ್‌ ವಾರ್ನಿಂಗ್‌

"ಅಕ್ಕ ಅನು ಅಪ್‌ಲೋಡ್‌ ಮಾಡಿರೋ ವಿಡಿಯೋ ನೋಡಿ ಸಿಕ್ಕಾಪಟ್ಟೆ ಬೇಜಾರಾಯ್ತು. ಅಕ್ಕ ಅನು ಒಳ್ಳೊಳ್ಳೆ ಕೆಲಸ ಮಾಡ್ತಿದ್ದಾರೆ. ಸರ್ಕಾರಿ ಶಾಲೆಗಳನ್ನು ಬೆಳೆಸಲು ತಾವೇ ಹಣ ಹಾಕಿ ಸೇವೆ ಮಾಡ್ತಿದ್ದಾರೆ. ಅವರ ಆರೋಗ್ಯ ಸರಿಯಿಲ್ಲದಿದ್ದರೂ ನಮ್ಮ ಮಕ್ಕಳ ಭವಿಷ್ಯಕ್ಕೋಸ್ಕರ ಈ ಕೆಲಸ ಮಾಡುತ್ತಿದ್ದಾರೆ. ಹೀಗಿರುವಾಗ ಈ ಕಾಮೆಂಟ್‌ ಮಾಡೋದು, ಕೆಟ್ಟದಾಗಿ ಬೈಯೋದು. ಅಸಭ್ಯವಾಗಿರೋ ಪದಗಳನ್ನು ಬಳಕೆ ಮಾಡೋದು. ಇದರಿಂದ ಏನು ಸಿಗುತ್ತೆ ನಿಮಗೆ? ನಾನು ಹೇಳ್ತಿರೋದು ಈ ಫೇಕ್‌ ಪ್ರೋಫೈಲ್‌ ಇಟ್ಟುಕೊಂಡು ಕಾಮೆಂಟ್‌ ಮಾಡ್ತಾರಲ್ಲ ಅವರ ಬಗ್ಗೆ"

ಟ್ರೋಲ್‌, ಮೀಮ್‌ ಪೇಜ್‌ ನೋಡಿ ಕಲೀರಿ..

"ನೀವು ಮಾಡೋ ಈ ಕೆಲಸ ನಿಮಗೆ ನಿಜವಾಗ್ಲೂ ಇಷ್ಟ ಆಗ್ತಿದ್ರೆ, ಮನಸ್ಸು ಅನ್ನೋದಿದ್ದರೆ, ಮನುಷ್ಯತ್ವ ಅನ್ನೋದಿದ್ದರೆ, ಒಂದು ಸಲ ಕನ್ನಡಿಯಲ್ಲಿ ನೋಡಿಕೊಳ್ಳಿ. ನಿಮ್ಮ ಅಕ್ಕತಂಗಿಯರಿಗೆ, ಫ್ಯಾಮಿಲಿಗೆ, ತಾಯಿಗೆ ಅದೇ ಪದಗಳನ್ನು ಬಳಸಿ ನೋಡಿ ಅವರಿಂದ ಏನು ರಿಯಾಕ್ಷನ್‌ ಬರುತ್ತೆ ಅಂತ. ತಪ್ಪು ಅನ್ಸೋದಿಲ್ವಾ? ನಮ್‌ ಟ್ರೋಲ್‌ ಪೇಜ್‌ಗಳು ಮತ್ತು ಮೀಮ್‌ ಪೇಜ್‌ಗಳನ್ನು ನೋಡಿ ಕಲೀರಿ. ಹೀಗೆ ಮುಂದುವರಿದರೆ, ಸೈಬರ್‌ ಕ್ರೈಂಗೆ ಕಂಪ್ಲೇಟ್ ಹೋಗುತ್ತೆ"

ಅವಳಿಗೆ ತೊಂದರೆ ಕೊಡಬೇಡಿ..

"ಯಾರ್ಯಾರು ನೆಗೆಟಿವ್‌ ಕಾಮೆಂಟ್‌ ಮಾಡಿದ್ದೀರಾ, ಅವರ ಅಡ್ರೆಸ್‌ ಸಿಗುತ್ತೆ. ಅಲ್ಲಿಯವರೆಗೂ ಹೋಗುವುದು ಬೇಡ. ಹಾಗಾಗಿ ನಿಮ್ಮ ಬಳಿ ಮನವಿ ಮಾಡ್ತಿದ್ದೇನೆ. ಈ ಅಮ್ಮ, ಅಕ್ಕ ಅನ್ನೋದಕ್ಕೆ ನಮಗೆ ಬರಲ್ಲ ಅಂತಲ್ಲ. ಅನ್ನಬಾರ್ದು ಅಂತ, ಅದೊಂದು ಗೌರವ. ಅನು ನನ್ನ ತಂಗಿ. ನಾನು ಆಕೆಯನ್ನು ತಂಗಿಯಂತೆಯೇ ಮನಸಿಂದ ನೋಡ್ತಿದ್ದೇನೆ. ಅವಳಿಗೆ ಏನೇ ಆದ್ರೂ ಅದು ನನ್ನ ಮೇಲಿಂದ ಹೋಗಬೇಕು. ದಯವಿಟ್ಟು ಅವಳಿಗೆ ತೊಂದರೆ ಕೊಡಬೇಡಿ" ಎಂದು ವಿನಯ್‌ ಗೌಡ ಸುದೀರ್ಘ ವಿಡಿಯೋ ಹಂಚಿಕೊಂಡಿದ್ದಾರೆ.

mysore-dasara_Entry_Point