ಕನ್ನಡ ಸುದ್ದಿ  /  Entertainment  /  Television News Bigg Boss Kannada Season 10 And Gicchi Giligili Fame Tukali Santhosh Car Accident Near Kunigal Mnk

Tukali santhosh car Accident: ಎರಡು ವಾರದ ಹಿಂದಷ್ಟೇ ಖರೀದಿಸಿದ್ದ ತುಕಾಲಿ ಸಂತೋಷ್‌ ಹೊಸ ಕಾರು ಅಪಘಾತ; ಓರ್ವನಿಗೆ ಗಾಯ VIDEO

ಮಾರ್ಚ್‌ 2ರಂದು ತುಕಾಲಿ ಸಂತೋಷ್‌ ಕಿಯಾ ಕಂಪನಿಯ ಕಾರು ಖರೀದಿಸಿದ್ದರು. ಇದೀಗ ಎರಡೇ ವಾರದಲ್ಲಿ ಕಾರು ಅಪಘಾತಕ್ಕೀಡಾಗಿದೆ. ತುಮಕೂರಿನ ಕುಣಿಗಲ್‌ ಬಳಿ ಈ ಈ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ.

Tukali santhosh car Accident: ಎರಡು ವಾರದ ಹಿಂದಷ್ಟೇ ಖರೀದಿಸಿದ್ದ ತುಕಾಲಿ ಸಂತೋಷ್‌ ಹೊಸ ಕಾರು ಅಪಘಾತ; ಓರ್ವನಿಗೆ ಗಾಯ
Tukali santhosh car Accident: ಎರಡು ವಾರದ ಹಿಂದಷ್ಟೇ ಖರೀದಿಸಿದ್ದ ತುಕಾಲಿ ಸಂತೋಷ್‌ ಹೊಸ ಕಾರು ಅಪಘಾತ; ಓರ್ವನಿಗೆ ಗಾಯ

Tukali santhosh car Accident: ಬಿಗ್‌ಬಾಸ್‌ ಕನ್ನಡ ಸೀಸನ್‌ 10ರ ಫಿನಾಲೆ ಸ್ಪರ್ಧಿ ತುಕಾಲಿ ಸಂತೋಷ್‌ ಅವರ ಹೊಸ ಕಾರು ಅಪಘಾತಕ್ಕೀಡಾಗಿದೆ. ಕಳೆದ ಎರಡು ವಾರಗಳ ಹಿಂದಷ್ಟೇ ಕಿಯಾ ಕಂಪನಿಯ ಕಾರನ್ನು ಖರೀದಿಸಿದ್ದರು ಸಂತೋಷ್‌. ಈ ವಿಚಾರವನ್ನು ಸೋಷಿಯಲ್‌ ಮೀಡಿಯಾದಲ್ಲೂ ಶೇರ್‌ ಮಾಡಿದ್ದರು. ಇದೀಗ ಇದೇ ಕಾರ್‌ ಅಪಘಾತಕ್ಕೀಡಾಗಿದ್ದು, ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ತುಮಕೂರಿನಿಂದ ಹೊಳೆನರಸೀಪುರಕ್ಕೆ ಹೊರಟಿದ್ದ ವೇಳೆ ಕುಣಿಗಲ್‌ ಮಾರ್ಗ ಮಧ್ಯೆ ಈ ಅಪಘಾತ ಸಂಭವಿಸಿದೆ. ಕುಣಿಗಲ್‌ನಿಂದ ಕುರುಡಿಹಳ್ಳಿಗೆ ಬರುತ್ತಿದ್ದ ಆಟೋ, ಹೊನ್ನೇನಹಳ್ಳಿ ಬಳಿ ತುಕಾಲಿ ಸಂತೋಷ್‌ ಅವರಿದ್ದ ಕಿಯಾ ಕಾರಿಗೆ ಎದುರಿನಿಂದ ಡಿಕ್ಕಿ ಹೊಡೆದಿದೆ. ಹೀಗೆ ಸಂಭವಿಸಿದ ಅಪಘಾತದ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಇತ್ತೀಚೆಗಷ್ಟೇ ಖರೀದಿಸಿದ್ದ ಹೊಸ ಕಾರು ಅಪಘಾತದಲ್ಲಿ ಕೊಂಚ ಜಖಂ ಆಗಿದ್ದರೆ, ಆಟೋ ನಜ್ಜುಗುಜ್ಜಾಗಿದೆ. ಆಟೋ ಚಾಲಕ ಜಗದೀಶ್‌ ಎಂಬಾತನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ತಕ್ಷಣ ಕುಣಿಗಲ್‌ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ನಡುವೆ ಆಟೋ ಚಾಲಕ ಮಧ್ಯೆ ಸೇವಿಸಿ ಆಟೋ ಚಲಾಯಿಸುತ್ತಿದ್ದರು ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ಇನ್ನಷ್ಟೇ ವರದಿ ಬರಬೇಕಿದೆ. ಈ ಸಂಬಂಧ ಕುಣಿಗಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆಟೋ ಚಾಲಕಿಂದ ಡ್ರಿಂಕ್‌ ಅಂಡ್‌ ಡ್ರೈವ್‌ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಇತ್ತೀಚೆಗಷ್ಟೇ ಖರೀದಿಸಿದ್ದ ಹೊಸ ಕಾರು

ಇದೇ ತಿಂಗಳ ಮೊದಲ ವಾರದಲ್ಲಿ ತಾವು ಹೊಸ ಕಾರು ಖರೀದಿಸಿದ್ದ ವಿಚಾರವನ್ನು ಸೋಷಿಯಲ್‌ ಮೀಡಿಯಾ ಮೂಲಕ ಶೇರ್‌ ಮಾಡಿದ್ದರು ತುಕಾಲಿ ಸಂತೋಷ್.‌ ಬಿಗ್‌ಬಾಸ್‌ನಲ್ಲಿ ಸುದೀರ್ಘ 100ಕ್ಕೂ ಹೆಚ್ಚು ದಿನಗಳ ಕಾಲ ಇದ್ದು, ಅಲ್ಲಿ ಸಿಕ್ಕ ಸಂಭಾವನೆಯಿಂದ ಕಿಯಾ ಕಾರು ಖರೀದಿಸಿದ್ದರು. ಬಹುದಿನಗಳ ಕನಸೊಂದು ನನಸಾಯಿತು ಎಂದೂ ಬರೆದುಕೊಂಡು, ಹೊಸ ಕಾರಿನ ವಿಡಿಯೋ ಹಂಚಿಕೊಂಡಿದ್ದರು. ಇದೀಗ ಅದ್ಯಾವ ಕೆಟ್ಟು ಕಣ್ಣು ಬಿತ್ತೋ ಏನೋ, ಕಾರ್‌ ಅಪಘಾತಕ್ಕೀಡಾಗಿದೆ.

ಗಿಚ್ಚಿ ಗಿಲಿಗಿಲಿಯಲ್ಲಿ ನಗು ಉಕ್ಕಿಸುವ ಕೆಲಸ

ಬಿಗ್‌ ಬಾಸ್‌ ಮುಗಿದ ಬಳಿಕ ಕಲರ್ಸ್‌ ಕನ್ನಡದಲ್ಲಿ ಶುರುವಾದ ಗಿಚ್ಚಿ ಗಿಲಿಗಿಲಿ ಕಾಮಿಡಿ ಶೋನಲ್ಲಿ ತುಕಾಲಿ ಸಂತೋಷ್‌ ಜತೆಗೆ ಪತ್ನಿ ಮಾನಸಾ ಸಹ ಸ್ಪರ್ಧಿಗಳಾಗಿ ಭಾಗವಹಿಸಿ, ನಗು ಉಕ್ಕಿಸುವ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಈ ಜೋಡಿಯ ನಗುವಿಗೆ ಕರ್ನಾಟಕದ ಕಿರುತೆರೆ ವೀಕ್ಷಕ ನಗೆಗಡಲಲ್ಲಿ ತೇಲುತ್ತಿದ್ದಾನೆ.

IPL_Entry_Point