Drone Prathap Health: ಡ್ರೋನ್‌ ಪ್ರತಾಪ್‌ ಆತ್ಮಹತ್ಯೆ ಪ್ರಯತ್ನ ಮಾಡಿಲ್ಲ; ಆರ್‌ಆರ್‌ ನಗರದ ಖಾಸಗಿ ಆಸ್ಪತ್ರೆಗೆ ದಾಖಲು
ಕನ್ನಡ ಸುದ್ದಿ  /  ಮನರಂಜನೆ  /  Drone Prathap Health: ಡ್ರೋನ್‌ ಪ್ರತಾಪ್‌ ಆತ್ಮಹತ್ಯೆ ಪ್ರಯತ್ನ ಮಾಡಿಲ್ಲ; ಆರ್‌ಆರ್‌ ನಗರದ ಖಾಸಗಿ ಆಸ್ಪತ್ರೆಗೆ ದಾಖಲು

Drone Prathap Health: ಡ್ರೋನ್‌ ಪ್ರತಾಪ್‌ ಆತ್ಮಹತ್ಯೆ ಪ್ರಯತ್ನ ಮಾಡಿಲ್ಲ; ಆರ್‌ಆರ್‌ ನಗರದ ಖಾಸಗಿ ಆಸ್ಪತ್ರೆಗೆ ದಾಖಲು

ಬಿಗ್‌ಬಾಸ್‌ ಕನ್ನಡ ಸೀಸನ್‌ 10ರ ಸ್ಪರ್ಧಿ ಡ್ರೋನ್‌ ಪ್ರತಾಪ್‌ ಅವರು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂದು ವದಂತಿಗಳು ಆರಂಭವಾಗಿದ್ದವು. ಆದರೆ, ಅವರಿಗೆ ಫುಡ್‌ ಪಾಯ್ಸನ್‌ ಆಗಿರುವುದರಿಂದ ಆಸ್ಪತ್ರೆ ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಿಗ್‌ಬಾಸ್‌ ಕನ್ನಡ ಸ್ಪರ್ಧಿ ಡ್ರೋನ್‌ ಪ್ರತಾಪ್‌
ಬಿಗ್‌ಬಾಸ್‌ ಕನ್ನಡ ಸ್ಪರ್ಧಿ ಡ್ರೋನ್‌ ಪ್ರತಾಪ್‌

ಬೆಂಗಳೂರು: ಬಿಗ್‌ಬಾಸ್‌ ಕನ್ನಡ ಸ್ಪರ್ಧಿ ಡ್ರೋನ್‌ ಪ್ರತಾಪ್‌ ಆರೋಗ್ಯಕ್ಕೆ ಏನಾಗಿದೆ? ಆತ್ಮಹತ್ಯೆ ಪ್ರಯತ್ನ ಮಾಡಿಕೊಂಡ್ರ? ಯಾಕೆ ಅವರು ಲೈವ್‌ಗೆ ಬರಲಿಲ್ಲ? ಇತ್ಯಾದಿ ಪ್ರಶ್ನೆಗಳಿಗೆ ಇದೀಗ ಉತ್ತರ ದೊರಕಿದೆ. ಡ್ರೋನ್‌ ಪ್ರತಾಪ್‌ ಅವರಿಗೆ ಫುಡ್‌ ಪಾಯ್ಸನ್‌ ಆಗಿರುವುದರಿಂದ ಆರೋಗ್ಯ ಕೆಟ್ಟಿದ್ದು, ಆಸ್ಪತ್ರೆ ಸೇರಿದ್ದಾರೆ ಎಂದು ವರದಿಗಳು ತಿಳಿಸಿವೆ.

ಸಂಗೀತ ಅವರು ಕ್ಯಾಮೆರಾ ಮುಂದೆ ಮಿಸ್‌ ಯೂ ಪ್ರತು ಎಂದು ಹೇಳಿದ್ದಾರೆ. ಇದಾದ ಬಳಿಕ ಪ್ರತಾಪ್‌ ಎಲ್ಲಿ ಹೋಗಿದ್ದಾರೆ ಎಂಬ ಪ್ರಶ್ನೆಗಳು ಎದುರಾಗಿದ್ದವು. ಆದರೆ, ಡ್ರೋನ್‌ ಪ್ರತಾಪ್‌ ಅವರು ಫುಡ್‌ ಪಾಯ್ಸನ್‌ ಕಾರಣದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಮನೆಗೆ ಮರಳಲಾಗಿದೆ ಎಂದು ಹೇಳಲಾಗಿದೆ.

ಡ್ರೋನ್‌ ಪ್ರತಾಪ್‌ಗೆ ಅನಾರೋಗ್ಯ ಉಂಟಾಗಿದ್ದು, ಬೆಂಗಳೂರಿನ ಆರ್‌ಆರ್‌ ನಗರದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರ್‌ಆರ್‌ ನಗರದ ಎಸ್‌ಎಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಈಗ ಆರೋಗ್ಯವಾಗಿದ್ದು, ರಿಯಾಲಿಟಿ ಶೋಗೆ ಮರಳಿದ್ದಾರೆ ಎಂದು ಕಲರ್ಸ್‌ ಕನ್ನಡದ ಮೂಲಗಳು ತಿಳಿಸಿವೆ.

ಎರಡು ದಿನದಿಂದ ಊಟ ಮಾಡಿರಲಿಲ್ಲ. ಖಾಲಿ ಹೊಟ್ಟೆಗೆ ವಿಟಮಿನ್‌ ಟ್ಯಾಬ್ಲೆಟ್‌ ತೆಗೆದುಕೊಂಡಿದ್ದಾರೆ. ಇದರಿಂದ ಫುಡ್‌ ಪಾಯ್ಸನ್‌ ಆಗಿದೆ. ಹೀಗಾಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅವರೀಗ ಆರೋಗ್ಯವಾಗಿದ್ದಾರೆ. ಇದು ಆತ್ಮಹತ್ಯೆ ಪ್ರಯತ್ನವಲ್ಲ ಎಂದು ಕಲರ್ಸ್‌ ಕನ್ನಡದ ಪಿಆರ್‌ಒ ತಿಳಿಸಿದ್ದಾರೆ.

ಮಾನಸಿಕ ವ್ಯಥೆ ಇರುವವರಿಗೆ ಹೀಗೆ ಸಹಾಯ ಮಾಡಬಹುದು ನೋಡಿ

ಮಾನಸಿಕ ವೇದನೆ ಪ್ರತಿಯೊಬ್ಬರಲ್ಲೂ ಇರುತ್ತದೆ. ಆದರೆ ಪ್ರತಿಯೊಬ್ಬರ ಮಾನಸಿಕ ಅನುಭವವೂ ಭಿನ್ನವಾಗಿದೆ. ಯಾರನ್ನಾದರೂ ಮಾನಸಿಕವಾಗಿ ಬೆಂಬಲಿಸಬೇಕು ಎಂದರೆ ಅವರ ಅಗತ್ಯತೆಗಳನ್ನು ಅರಿಯಿರಿ. ತಜ್ಞರ ಬೆಂಬಲ ಪಡೆಯಲು ಅವರನ್ನು ಪ್ರೋತ್ಸಾಹಿಸಿ. ನಿಮ್ಮ ಸಹಕಾರ ಅವರಿಗಿದೆ ಎಂಬುದನ್ನು ಮನವರಿಕೆ ಮಾಡಿಸಿ. ಈ ಕುರಿತಾದ ಸಲಹೆಗಳು ಇಲ್ಲಿವೆ.

ಆತ್ಮಹತ್ಯೆ ತಪ್ಪಿಸಿ- ಐಕಾಲ್‌ ಹೆಲ್ಪ್‌ ಲೈನ್‌ಗೆ ಕರೆ ಮಾಡಿ: 9152987821

Whats_app_banner