Bigg Boss Kannada: ವಾರದ ಕಥೆ ಕಿಚ್ಚನ ಜೊತೆ - ಬಿಗ್‌ಬಾಸ್ ಮನೆಯಲ್ಲಿ ಊಸರವಳ್ಳಿ ಯಾರು, ಡಿಪ್ಲೊಮ್ಯಾಟಿಕ್, ಜೋಕರ್, ವಿಷಕಾರಿ ಇವರಂತೆ
Bigg Boss Kannada Season 10 Latest Updates: ಬಿಗ್‌ಬಾಸ್ ಕನ್ನಡ ಸೀಸನ್ 10ರ ಮೊದಲ ವಾರದ "ಕಿಚ್ಚನ ಪಂಚಾಯಿತಿ ಕಟ್ಟೆ"ಯಲ್ಲಿ ಬಿಗ್‌ಬಾಸ್ ಮನೆಯ ಊಸರವಳ್ಳಿ, ಡಿಪ್ಲೊಮ್ಯಾಟಿಕ್, ಜೋಕರ್ ಸ್ಪರ್ಧಿಗಳ ಕುರಿತು ಸಹ ಸ್ಪರ್ಧಿಗಳು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಬೆಂಗಳೂರು: ಬಿಗ್‌ಬಾಸ್ ಕನ್ನಡ ಸೀಸನ್ 10ರ ಮೊದಲ ವಾರದ ಬಹುನಿರೀಕ್ಷಿತ ವಾರದ ಕಥೆ ಕಿಚ್ಚನ ಜೊತೆ ಶನಿವಾರ ರಾತ್ರಿ ನಡೆದಿದೆ. ಈ ಸಂಚಿಕೆಯಲ್ಲಿ ಹಲವು ಮನರಂಜನಾ ವಿದ್ಯಮಾನಗಳು, ಸ್ಪರ್ಧಿಗಳಿಗೆ ಕಿಚ್ಚನ ಪಾಠ, ಕಿವಿಮಾತು ಇತ್ಯಾದಿಗಳು ನಡೆದವು. ಒಂದೇ ಮನೆಯೊಳಗೆ ಇರುವ ಸಹ ಸ್ಪರ್ಧಿಗಳ ಕುರಿತು ಇತರೆ ಸ್ಪರ್ಧಿಗಳ ಅಭಿಪ್ರಾಯಗಳೂ ಬಹಿರಂಗಗೊಂಡಿವೆ. ಬಿಗ್‌ಬಾಸ್ ಮನೆಯಲ್ಲಿ ಯಾರ ಪ್ರಕಾರ ಯಾರು ಊಸರವಳ್ಳಿ, ಯಾರು ವಿಷಕಾರಿ, ಯಾರು ಜೋಕರ್ ಮತ್ತು ಯಾರು ಡಿಪ್ಲೊಮ್ಯಾಟಿಕ್ ಎಂಬ ಅಂಶಗಳೂ ಬಹಿರಂಗಗೊಂಡಿವೆ.
ಯಾರು ಊಸರವಳ್ಳಿ? ಯಾರು ವಿಷಕಾರಿ?
ಬಿಗ್‌ಬಾಸ್ ಮನೆಯಲ್ಲಿ ಊಸರವಳ್ಳಿ ಯಾರೆಂಬ ಪ್ರಶ್ನೆಗೆ ಹಲವು ಅಭಿಪ್ರಾಯಗಳು ವ್ಯಕ್ತವಾಗಿವೆ. ಗೌರೀಶ್ ಅಕ್ಕಿ ಪ್ರಕಾರ ಪ್ರತಾಪ್ ಊಸರವಳ್ಳಿ. ಯಾಕೆಂದರೆ, ಇವರು ಬದಲಾಗ್ತಾ ಇರ್ತಾರೆ. ಕೆಲವೊಮ್ಮೆ ವಿಕ್ಟಿಮ್ ರೀತಿ ಇರ್ತಾರೆ. ಇನ್ನೊಮ್ಮೆ ಸವಾಲು ಒಡ್ಡುತ್ತಾರೆ. ಇನ್ನೊಮ್ಮೆ ತಪ್ಪು ಮಾಡಿದ್ದೇನೆ ಅನ್ತಾರೆ. ಹೀಗಾಗಿ ಪ್ರತಾಪ್ ಅವರು ಊಸರವಳ್ಳಿ ಎಂದು ಗೌರೀಶ್ ಅಕ್ಕಿ ಹೇಳಿದ್ದಾರೆ. ಇದೇ ರೀತಿ ಯಾರು ಜೋಕರ್ ಎಂಬ ಪ್ರಶ್ನೆಗೆ ತುಕಾಲಿ ಸಂತು ಎಂದು ಗೌರೀಶ್ ಅಕ್ಕಿ ಉತ್ತರಿಸಿದ್ದಾರೆ. ಇದೇ ಅಭಿಪ್ರಾಯವನ್ನು ತನಿಷಾ ಕೂಡ ವ್ಯಕ್ತಪಡಿಸಿದ್ದಾರೆ. ತುಕಾಲಿ ಸಂತು ಜೋಕರ್ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಜೋಕ್ ಮಾಡುವ ಜೋಕರ್ ಮತ್ತು ಬ್ಯಾಟ್‌ಮ್ಯಾನ್ ಸೀರಿಸ್‌ನಲ್ಲಿ ಬರುವ ಜೋಕರ್ ಎಂಬ ಎರಡು ವಿಧದ ಜೋಕರ್‌ಗಳು ಇರುತ್ತಾರೆ ಎಂದು ಕಿಚ್ಚ ಕರೆಕ್ಷನ್ ಮಾಡಿದ್ದಾರೆ.
ಹೆಚ್ಚು ಸ್ಪರ್ಧಿಗಳು ಭಾಗ್ಯಶ್ರೀ ಅವರನ್ನು ಊಸರವಳ್ಳಿ ಎಂದು ಕರೆದರು. ತನಿಷಾ ಪ್ರಕಾರ ಭಾಗ್ಯಶ್ರೀ ಊಸರವಳ್ಳಿ. ಅವರ ಮುಗ್ಧ ಮುಖಕ್ಕೂ ಮಾತಿಗೂ ಸಂಬಂಧವಿಲ್ಲ.ತಾವು ಒಳ್ಳೆಯವರು ಎಂದು ಸಾಧಿಸೋ ಪ್ರಯತ್ನನೇ ಹೆಚ್ಚಿರುತ್ತದೆ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇದೇ ರೀತಿ, ಸಂಗೀತ ಶೃಂಗೇರಿ ಕೂಡ ಭಾಗ್ಯಶ್ರೀ ಅವರನ್ನು ಊಸರವಳ್ಳಿ ಎಂದಿದ್ದಾರೆ. ಭಾಗ್ಯಶ್ರೀ ಅವರೇ ವಿಷಯಕಾರಿ ಎಂದು ಇವರು ಅಭಿಪ್ರಾಯಪಟ್ಟಿದ್ದಾರೆ. ಡ್ರೋನ್ ಪ್ರತಾಪ್ ಅವರು ಭಾಗ್ಯಶ್ರೀ ಅವರಿಗೆ ರೊಟ್ಟಿ ಮಾಡಿಕೊಟ್ಟರು. ಅವರು ಎಚ್ಚರ ಇರುವಾಗ ನಾವು ಮಲಗುವ ಹಾಗಿಲ್ಲ. ಈ ವಿಷಯದಲ್ಲೂ ನಿಯಮ ಉಲ್ಲಂಘಿಸಿದರು ಎಂದು ಸಂಗೀತ ಅಭಿಪ್ರಾಯಪಟ್ಟರು. ಕಾರ್ತಿಕ್ ನಿರ್ದಯಿ ಮತ್ತು ಇಶಾನಿ ಇನ್ನೋಸೆಂಟ್ ಎಂದು ತನಿಷಾ ಅಭಿಪ್ರಾಯಪಟ್ಟಿದ್ದಾರೆ.
ಸಂಗೀತ ಶೃಂಗೇರಿ ಪ್ರಕಾರ ಊಸರವಳ್ಳಿ ಭಾಗ್ಯಶ್ರೀ "ನನ್ನ ಜತೆ ಬಂದು ಚೆನ್ನಾಗಿ ಮಾಡ್ತಾರೆ, ಬೇರೆ ಕಡೆ ಮತ್ತೊಂದು ರೀತಿ ಇರ್ತಾರೆ" ಎಂದರು. "ನನಗೆ ಅವತ್ತು ನನಗೆ ತುಂಬಾ ಹಸಿವಾಗಿತ್ತು. ಸಕ್ಕರೆ ತಿಂದು ನೀರು ಕುಡಿಯೋಣ ಎಂದು ಬಂದಿದ್ದೆ. ರೊಟ್ಟಿ ಬಳಿದು ಕೊಡ್ಲಾ ಎಂದು ಸಂಗೀತ ಹೇಳಿದ್ರು. ತನಿಷಾ ಮತ್ತು ಸಂಗೀತ ಮಾತನಾಡಿದ್ದು ನನಗೆ ಇಷ್ಟವಾಗಲಿಲ್ಲ. ಯಾಕೆ ರೊಟ್ಟಿ ಮಾಡಿಕೊಟ್ಟೆ ಎಂಬ ಮಾತುಕತೆ ಕೇಳುತ್ತಿದ್ದವು ಎಂದು ಭಾಗ್ಯಶ್ರೀ ಅಭಿಪ್ರಾಯಪಟ್ಟರು. "ಅವರು ನನ್ನನ್ನು ವಿಷಕಾರಿ, ಊಸರವಳ್ಳಿ ಎಂದು ಹೇಳಿದ್ರು. ನನ್ನ ಪ್ರಕಾರ ಇವೆರಡೂ ಅವರೇ" ಎಂದು ಭಾಗ್ಯಶ್ರೀ ಅಭಿಪ್ರಾಯಪಟ್ಟಿದ್ದರು. ಹೀಗೆ ವಿವಿಧ ಸ್ಪರ್ಧಿಗಳು ತಮ್ಮ ಪ್ರಕಾರ ಯಾರು ಇನ್ನೋಸೆಂಟ್, ಯಾರು ಊಸರವಳ್ಳಿ. ಯಾರು ವಿಷಕಾರಿ ಇತ್ಯಾದಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ತನಗೆ ಹಸಿವಾದಗ ರೊಟ್ಟಿ ಮಾಡಿಕೊಟ್ಟಿರೋದು ಮಾನವೀಯತೆ ಎಂದು ಕಿಚ್ಚನ ಶೋನಲ್ಲಿ ಭಾಗ್ಯಶ್ರೀ ಒಪ್ಪಿಕೊಂಡಿದ್ದಾರೆ. ನೀವೇನು ಮಾಡೋಕ್ಕೆ ಬಂದ್ರಿ ಎಂದು ನಿಮಗೆ ಗೊತ್ತು. ನೀವು ಹಸಿವು ಅಂದಾಗ ಒಬ್ಬ ವ್ಯಕ್ತಿ ಅಡುಗೆ ಮಾಡಿಕೊಟ್ಟಾಗ ಅದರ ಉದ್ದೇಶ ಏನಿರಬಹುದು ಎಂದು ಕಿಚ್ಚ ಸುದೀಪ್ ಕೇಳಿದಾಗ "ಮಾನವೀಯತೆಯಿಂದ ಮಾಡಿಕೊಟ್ಟಿದ್ದಾರೆ ಎಂದುಕೊಳ್ಳುವೆ" ಎಂದು ಭಾಗ್ಯಶ್ರೀ ಒಪ್ಪಿಕೊಂಡಿದ್ದಾರೆ. ಈ ಮಾತುಕತೆ ಸಾಕಷ್ಟು ಮುಂದುವರೆದಿದ್ದು, "ಸಿಂಪಲ್ ಆಗಿ ಹೊಟ್ಟೆ ತುಂಬ್ತು ಥ್ಯಾಂಕ್ಸ್" ಎಂದಿದ್ದರೆ ಸಾಕಿತ್ತು ಎಂದು ಸುದೀಪ್ ಅಭಿಪ್ರಾಯಪಟ್ಟರು. ವೇದಿಕೆಯ ಮೇಲೆಯೇ ಭಾಗ್ಯಶ್ರೀ ಥ್ಯಾಂಕ್ಯು ಸೋ ಮಚ್ ಎಂದು ಹೇಳಿದರು.
ಬಿಗ್‌ಬಾಸ್ ಕನ್ನಡದ ಎಲ್ಲಾ ಅಪ್‌ಡೇಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.