Bigg Boss Kannada: ಸುದೀಪ್‌ ಹೇಳಿದ ಭಗವಂತ, ತಪ್ಪಿತಸ್ಥ ಮತ್ತು ಸಮಾಜದ ಕಥೆ; ಡ್ರೋನ್‌ ಪ್ರತಾಪ್‌ ವಿಷಯದಲ್ಲಿ ಕಿಚ್ಚನ ಪಂಚ್‌
ಕನ್ನಡ ಸುದ್ದಿ  /  ಮನರಂಜನೆ  /  Bigg Boss Kannada: ಸುದೀಪ್‌ ಹೇಳಿದ ಭಗವಂತ, ತಪ್ಪಿತಸ್ಥ ಮತ್ತು ಸಮಾಜದ ಕಥೆ; ಡ್ರೋನ್‌ ಪ್ರತಾಪ್‌ ವಿಷಯದಲ್ಲಿ ಕಿಚ್ಚನ ಪಂಚ್‌

Bigg Boss Kannada: ಸುದೀಪ್‌ ಹೇಳಿದ ಭಗವಂತ, ತಪ್ಪಿತಸ್ಥ ಮತ್ತು ಸಮಾಜದ ಕಥೆ; ಡ್ರೋನ್‌ ಪ್ರತಾಪ್‌ ವಿಷಯದಲ್ಲಿ ಕಿಚ್ಚನ ಪಂಚ್‌

Bigg Boss Kannada - Drone Prathap: ಬಿಗ್‌ಬಾಸ್‌ ಮನೆಯ ಹೊರಗೆ ಡ್ರೋನ್‌ ಪ್ರತಾಪ್‌ರ ತಪ್ಪುಗಳು ಮತ್ತು ಅದಕ್ಕೆ ಬಿಗ್‌ಬಾಸ್‌ ಮನೆಯೊಳಗಿನವರ ಪ್ರತಿಕ್ರಿಯೆಗಳಿಗೆ ಸಂಬಂಧಪಟ್ಟಂತೆ ವಾರದ ಕಥೆ ಕಿಚ್ಚನ ಜತೆ ಕಾರ್ಯಕ್ರಮದಲ್ಲಿ ಸುದೀಪ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಇದೇ ಸಮಯದಲ್ಲಿ ಸುದೀಪ್‌ ಒಂದು ಆಸಕ್ತಿದಾಯಕ ಕಥೆಯನ್ನೂ ಹೇಳಿದ್ದಾರೆ.

ಸುದೀಪ್‌ ಹೇಳಿದ ಭಗವಂತ, ತಪ್ಪಿತಸ್ಥ ಮತ್ತು ಸಮಾಜದ ಕಥೆ
ಸುದೀಪ್‌ ಹೇಳಿದ ಭಗವಂತ, ತಪ್ಪಿತಸ್ಥ ಮತ್ತು ಸಮಾಜದ ಕಥೆ

ಬೆಂಗಳೂರು: ಬಿಗ್‌ಬಾಸ್‌ ಕನ್ನಡ ಸೀಸನ್‌ 10ರ ಮೊದಲ ಪಂಚಾಯಿತಿ ಶನಿವಾರ ರಾತ್ರಿ ನಡೆದಿದೆ. ವಾರದ ಕಥೆ ಕಿಚ್ಚನ ಜೊತೆ ಮೊದಲ ಸಂಚಿಕೆಯಲ್ಲಿ ಕಿಚ್ಚ ಸುದೀಪ್‌ ಅವರು ಸ್ಪರ್ಧಿಗಳ ಜತೆ ಮಾತುಕತೆ ನಡೆಸಿದರು. ಇದೇ ಸಂಚಿಕೆಯಲ್ಲಿ ಡ್ರೋನ್‌ ಪ್ರತಾಪ್‌ ಅವರನ್ನು ಬುಲ್ಲಿಂಗ್‌ ಮಾಡುವ ವಿಷಯವನ್ನು ಸುದೀಪ್‌ ಪ್ರಸ್ತಾಪಿಸಿದರು. ಡ್ರೋನ್‌ ಪ್ರತಾಪ್‌ ಅವರನ್ನು ತುಕಾಲಿ ಸಂತೋಷ್‌, ಸ್ನೇಹಿತ್‌ ಮತ್ತು ಇತರರು ಆಗಾಗ ವ್ಯಂಗ್ಯ ಮಾಡುತ್ತಿದ್ದರು. "ಮತ್ತೊಬ್ಬ ವ್ಯಕ್ತಿಯನ್ನು ವ್ಯಂಗ್ಯ ಮಾಡುವುದು ಹಾಸ್ಯ ಅಲ್ಲ" ಎಂದು ಸುದೀಪ್‌ ಹೇಳಿದರು. ಇದಕ್ಕೂ ಮೊದಲು ಸುದೀಪ್‌ ಒಂದು ಕಥೆ ಹೇಳಿದ್ದರು. ಅದು ಇಂಟ್ರೆಸ್ಟಿಂಗ್‌ ಆಗಿದೆ.

ಸುದೀಪ್‌ ಹೇಳಿದ ಕಥೆ

ಒಂದು ಚಿಕ್ಕ ಕಥೆ ಹೇಳುವೆ ಎಂದು ಸುದೀಪ್‌ "ಡ್ರೋನ್‌ ಪ್ರತಾಪ್‌ ಮತ್ತು ಇತರರನ್ನು" ಗಮನದಲ್ಲಿಟ್ಟುಕೊಂಡು ಮಾತು ಆರಂಭಿಸಿದರು. ಮೂವರು ಪಾತ್ರದಾರಿಗಳು ಇರುತ್ತಾರೆ. ಭಗವಂತ, ತಪ್ಪಿತಸ್ಥ ಮತ್ತು ಸಮಾಜ ಎನ್ನುವ ಮೂರು ಪಾತ್ರದಾರಿಗಳು ಇರುತ್ತಾರೆ. ತಪ್ಪಿತಸ್ಥ ತಪ್ಪು ಮಾಡ್ತಾನೆ. ಅವನು ತಪ್ಪು ಮಾಡಿದಾಗ ಭಗವಂತ ಶಿಕ್ಷೆ ಕೊಡುತ್ತಾನೆ. ಇದು ಭಗವಂತ ಮತ್ತು ತಪ್ಪಿತಸ್ಥನ ನಡುವೆ ಇರುವ ವಿಷಯ. ಆತ, ಹೊರಗೆ ಬಂದ ಬಳಿಕ ಸಮಾಜ ಆತನನ್ನು ಕಳ್ಳ ಸುಳ್ಳ ಎಂದೇ ಗುರುತ್ತಿಸುತ್ತದೆ. ಭಗವಂತ ಮಾಡಿರುವುದು ಏನು, ಅವನು ಮಾಡಿರುವುದು ಏನು, ಸಮಾಜ ಮಾಡಿರುವುದು ಏನು? ಯೋಚಿಸಬೇಕು. ಇಲ್ಲಿ ಸಮಾಜ ಕೊಲೆ ಮಾಡ್ತಾ ಇದೆ. ಅಂದಹಾಗೆ, ಈಗ ನಿಮ್ಮಲ್ಲಿ ಭಗವಂತ ಯಾರು, ಸಮಾಜ ಯಾರು, ತಪ್ಪಿತಸ್ಥ ಯಾರು? ಎಂದು ಸುದೀಪ್‌ ಪ್ರಶ್ನಿಸಿದರು.

ಈ ಕಥೆ ಮುಗಿಸಿದ ಬಳಿಕ ಸುದೀಪ್‌ ನೇರವಾಗಿ ಸಂತು ಅವರನ್ನು ಪ್ರಶ್ನಿಸಿದರು. "ತುಕಾಳಿ ಸಂತೋಷ್‌ ಅವರೇ ಈ ಕಥೆಯಲ್ಲಿ ನೀವು ಭಗವಂತನೋ, ತಪ್ಪಿತಸ್ಥನೋ, ಸಮಾಜನೋ?" ಇದಕ್ಕೆ "ನನಗೆ ಏನು ಹೇಳಬೇಕು ಗೊತ್ತಾಗ್ತ ಇಲ್ಲ" ಎಂದು ತುಕಾಲಿ ಸಂತೋಷ್‌ ಹೇಳಿದರು. ಬಳಿಕ ಸ್ನೇಹಿತ್‌ನಲ್ಲಿ ಇದೇ ಪ್ರಶ್ನೆ ಕೇಳಿದಾಗ "ಡ್ರೋನ್‌ ಪ್ರತಾಪ್‌ ತಪ್ಪಿತಸ್ಥ, ಸಮಾಜ ನಾವು, ಬಿಗ್‌ಬಾಸ್‌ ಭಗವಂತ" ಎಂದು ಸ್ನೇಹಿತ್‌ ಅಭಿಪ್ರಾಯಪಟ್ಟರು. "ನಿಮಗೆ ನೀವು ನೀಡಿದ ರೇಟಿಂಗ್‌ 2. ನಿಮ್ಮಲ್ಲಿ 8 ಮೈನಸ್‌ ಇದೆ. ಒಬ್ಬ ವ್ಯಕ್ತಿಯನ್ನು ಕೊಲೆ ಮಾಡುವ ಅಧಿಕಾರ ಯಾವಾಗ ನಿಮಗೆ ದೊರಕಿತು?ʼ ಎಂದು ಸುದೀಪ್‌ ಪ್ರಶ್ನಿಸಿದಾಗ "ಕಾಮಿಡಿ ಮಾಡಲು ಹೋದೆ" ಎಂದು ತುಕಾಲಿ ಸಂತೋಷ್‌ ಹೇಳಿದರು. "ಇನ್ನೊಬ್ಬ ವ್ಯಕ್ತಿಯ ಮೇಲೆ ತಮಾಷೆ ಮಾಡಿ ನಗಿಸುವ ಮನುಷ್ಯ ನನ್ನ ಪ್ರಕಾರ ತಮಾಷೆ ಮಾಡುವ ಜೋಕರ್‌ ಅಲ್ಲ, ಆತ ಬ್ಯಾಟ್ಸ್‌ಮ್ಯಾನ್‌ ಸೀರಿಸ್‌ನ ಜೋಕರ್‌" ಎಂದು ಸುದೀಪ್‌ ಅಭಿಪ್ರಾಯಪಟ್ಟರು. ಕೊನೆಗೆ ತುಕಾಲಿ ಸಂತೋಷ್‌ ಅವರು ಡ್ರೋನ್‌ ಪ್ರತಾಪ್‌ ಕ್ಷಮೆ ಕೇಳುವ ಮೂಲಕ ಈ ವಿಷಯಕ್ಕೆ ತೆರೆ ಹಾಕಲಾಯಿತು. "ಡ್ರೋನ್‌ ಪ್ರತಾಪ್‌ ಅವರೇ ನನ್ನನ್ನು ಕ್ಷಮಿಸಿ. ನಗಿಸುವಾಗ ಏನು ಅನಿಸಲಿಲ್ಲ. ಈಗ ಗೊತ್ತಾಯಿತು. ನನ್ನಿಂದ ತಪ್ಪಾಗಿದೆ ಕ್ಷಮಿಸಿ" ಎಂದರು. ಇದಕ್ಕೆ ಡ್ರೋನ್‌ ಪ್ರತಾಪ್‌ "ಇಟ್ಸ್‌ ಓಕೆ" ಎಂದರು.

ಡ್ರೋನ್‌ ಪ್ರತಾಪ್‌ ಮುಂದೆ ಎರಡು ಆಯ್ಕೆ

ಈ ರೀತಿ ಡ್ರೋನ್‌ ಪ್ರತಾಪ್‌ ಪರವಾಗಿ ಬಿಗ್‌ಬಾಸ್‌ ಮನೆಯಲ್ಲಿ ಪಂಚಾಯಿತಿ ನಡೆದರೂ ಅಂತಿಮವಾಗಿ ಡ್ರೋನ್‌ ಪ್ರತಾಪ್‌ಗೆ ಎರಡು ಕಿವಿಮಾತು ಹೇಳಲು ಸುದೀಪ್‌ ಮರೆಯಲಿಲ್ಲ. “ಮಾಡಿದ ತಪ್ಪಿನ ಕುರಿತು ನಿಮಗೆ ಮಾತ್ರ ಗೊತ್ತಿರುತ್ತದೆ. ಈ ತಪ್ಪನ್ನು ಒಪ್ಪಿಕೊಂಡು ಹೊರಕ್ಕೆ ಹಾಕಿದರೆ ಹೊಸ ವ್ಯಕ್ತಿಯಾಗುವ ಒಳ್ಳೆಯ ಅವಕಾಶ ನಿಮಗೆ ದೊರಕುತ್ತದೆ. ಇದೇ ರೀತಿ ಡಿಫೆನ್ಸ್‌ ಮಾಡುತ್ತ ಎಚ್ಚರಿಕೆಯಿಂದ ಆಡಬಹುದು” ಎಂದು ಸುದೀಪ್‌ ಕಿವಿಮಾತು ಹೇಳಿದರು. 

ಬಿಗ್‌ಬಾಸ್‌ ಕನ್ನಡ ತಾಜಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

 

Whats_app_banner