BBK 10: ನಿಷ್ಕಳಂಕ ದೋಸ್ತಿಗಳ ಮೇಲೆ ಬಿತ್ತು ಎಲಿಮಿನೇಷನ್ ಕಣ್ಣು! ಸಂತು- ಪಂತು ಪೈಕಿ ಒಬ್ಬರ ಆಟ ಇಂದಿಗೆ ಮುಕ್ತಾಯ
ಬಿಗ್ ಬಾಸ್ನ ಚಿಗರಿ ದೋಸ್ತಿಗಳಾದ ವರ್ತೂರು ಸಂತೋಷ್ ಮತ್ತು ತುಕಾಲಿ ಸಂತೋಷ್ ಇಬ್ಬರ ಪೈಕಿ ಒಬ್ಬರ ಆಟ ಇಂದು (ಜ. 14) ಮುಕ್ತಾಯಗೊಳ್ಳಲಿದೆ. ಸುದೀಪ್ ಇವರ ಹೆಸರು ಪ್ರಸ್ತಾಪಿಸುತ್ತಿದ್ದಂತೆ, ಇಬ್ಬರೂ ಕಣ್ಣೀರಾದರು.
BBK 10: ಬಿಗ್ಬಾಸ್ನ ಜಿಗರಿ ದೋಸ್ತಿಗಳು ಯಾರೆಂದು ಕೇಳಿದರೆ, ಬಹುತೇಕರ ಬಾಯಲ್ಲಿ ನಲಿಯುವುದು ತುಕಾಲಿ ಸಂತೋಷ್ ಮತ್ತು ವರ್ತೂರು ಸಂತೋಷ್. ಈ ಇಬ್ಬರೂ ತಮ್ಮಿಬ್ಬರಿಗೆ ಹೆಚ್ಚಿನ ಸಮಯ ನೀಡಿಕೊಂಡಿದ್ದಾರೆ. ಯಾರ ಜತೆ ಇವರಿಬ್ಬರ ಮಾತುಕತೆ ಇರುತ್ತೋ ಇಲ್ಲವೋ ಗೊತ್ತಿಲ್ಲ, ಆದರೆ, ಬಿಗ್ ಬಾಸ್ ಮನೆಯಲ್ಲಿ ಪರಸ್ಪರ ಇವರ ಚರ್ಚೆಗಳು ಸುದೀರ್ಘವಾಗಿಯೇ ನಡೆದಿವೆ. ಇದೀಗ ಫಿನಾಲೆ ಸನಿಹಕೂ ಈ ಜೋಡಿ ಆಗಮಿಸಿದೆ. ಆದರೆ, ಈ ಗಳಸ್ಯ ಕಂಠಸ್ಯ ಜೋಡಿಯಲ್ಲಿ ಒಬ್ಬರ ಆಟ ಈ ವಾರ ಕೊನೆಗೊಳ್ಳಲಿದೆ.
ಶುಕ್ರವಾರ ರಾತ್ರಿ ಬಿಗ್ಬಾಸ್ ಬಾಲ್ಕನಿಯಲ್ಲಿ ಬಿನ್ಬ್ಯಾಗ್ ಮೇಲೆ ಕೂತಿದ್ದ ತುಕಾಲಿ ಸಂತೋಷ್ ಮತ್ತು ವರ್ತೂರು ಸಂತೋಷ್ ಇಬ್ಬರೂ ತಮ್ಮ ಜರ್ನಿಯನ್ನು ನೆನೆದು ಭಾವುಕರಾಗಿ ಕಣ್ಣೀರಿಟ್ಟಿದ್ದರು. ಇಬ್ಬರಲ್ಲಿ ಯಾರಾದರೂ ಹೊರಗೆ ಹೋದರೆ ಎಂದು ಅಂದುಕೊಂಡು ಪರಸ್ಪರ ಸಂತೈಸಿಕೊಂಡಿದ್ದರು. ಅವರ ಮಾತು ನಿಜವಾಗುವ ಗಳಿಗೆ ಸಮೀಪ ಬಂದಂತಿದೆ. ಈ ಬಗ್ಗೆ ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಸುಳಿವು ದೊರಕಿದೆ.
‘ಸೂಪರ್ ಸಂಡೆ ವಿತ್ ಸುದೀಪ್’ ಎಪಿಸೋಡ್ನಲ್ಲಿ ಸುದೀಪ್ ಸೇಫ್ ಆದ ಎಲ್ಲರನ್ನೂ ಹೇಳುತ್ತ ಕೊನೆಯಲ್ಲಿ, ವರ್ತೂರು ಸಂತೋಷ್ ಹಾಗು ತುಕಾಲಿ ಸಂತೋಷ್ ಅವರೇ ನಿಮ್ಮಿಬ್ಬರಲ್ಲಿ ಒಬ್ಬರನ್ನು ಈವತ್ತು ಹೊರಗಡೆ ಕಳಿಸಬೇಕಾಗಿದೆ ಎಂದು ಹೇಳಿದ್ದಾರೆ. ಅವರ ಮಾತು ಕೇಳಿ ಇಬ್ಬರ ಕಣ್ಣಲ್ಲಿ ನೀರು ತುಂಬಿಕೊಂಡಿದೆ. ಅಳುತ್ತಲೇ, ತುಕಾಲಿ ಸಂತೋಷ್, ‘ನಾನು ಹೊರಡಬೇಕಿದ್ದರೆ, ಚೆನ್ನಾಗಿ ಆಡಿ ಗೆದ್ಕೊಂಡು ಬಾ ಎಂದು ಹೇಳೋಕೆ ಇಷ್ಟಪಡ್ತೀನಿ’ ಎಂದು ಹೇಳಿದ್ರೆ, ವರ್ತೂರು ಸಂತೋಷ್ ಅವರು, ‘ಅವರು ಗೆಲ್ಲುವುದನ್ನು ನಾನು ನೋಡಬೇಕು’ ಎಂದು ಹೇಳಿದ್ದಾರೆ.
ಯಾವಾಗಲೂ ತುಕಾಲಿ ಅವರನ್ನು ವಿರೋಧಿಸುವ ನಮ್ರತಾ ಕೂಡ, ‘ಜಾಸ್ತಿ ನನಗೆ ಅನಿಸುತ್ತಿತ್ತು. ಇವರಿಬ್ಬರೂ ದೂರ ಆಗಬೇಕು ಎಂದು. ಆದರೆ ಈವತ್ತು…’ ಎಂದು ಹೇಳಿ ಹಾಗಾಗಬಾರದು ಎಂದು ತಲೆಯಾಡಿಸಿದ್ದಾರೆ.
ಅವರ ಬಗ್ಗೆ ಕಿಚ್ಚ ಸುದೀಪ್ ಅವರೇ ಮನಃಪೂರ್ವಕವಾಗಿ ಹೊಗಳಿದ್ದಾರೆ. ‘ಯಾರಲ್ಲಿಯೂ ನೋಡದ ಒಂದು ಭಾಂದವ್ಯವನ್ನು ನಿಮ್ಮಿಬ್ಬರಲ್ಲಿ, ಈ ಸೀಸನ್ನಲ್ಲಿ ನಾನು ನೋಡಿದ್ದೀನಿ. ನಿಷ್ಕಳಂಕವಾದ ಫ್ರೆಂಡ್ಷಿಪ್ ಅದು’ ಎಂದಿದ್ದಾರೆ. ಹಾಗಾದರೆ ಸಂತು- ಪಂತು ಈ ಇಬ್ಬರಲ್ಲಿ ಯಾರಿಗೆ ಈ ವಾರ ಮನೆಯಿಂದ ಗೇಟ್ಪಾಸ್ ಸಿಗುತ್ತದೆ? ಯಾರು ಬಿಗ್ಬಾಸ್ ಮನೆಯಲ್ಲಿ ಉಳಿದುಕೊಳ್ಳುತ್ತಾರೆ? ಆಪ್ತಸ್ನೇಹಿತ ಇಲ್ಲದೆ ಮನೆಯೊಳಗೆ ಹೇಗಿರುತ್ತಾರೆ?
ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಂದಿನ ‘ಸೂಪರ್ ಸಂಡೆ ವಿತ್ ಸುದೀಪ್’ ಎಪಿಸೋಡ್ನಲ್ಲಿ ಸಿಗಲಿದೆ. ಬಿಗ್ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು ಮತ್ತು ಎಪಿಸೋಡ್ಗಳನ್ನು ಜಿಯೋಸಿನಿಮಾದಲ್ಲಿ ಉಚಿತವಾಗಿ ನೋಡಬಹುದು.