ಮತ್ತೊಂದು ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟ Bigg Boss Kaannada 10 Winner ಕಾರ್ತಿಕ್ ಮಹೇಶ್; ಸ್ಪರ್ಧಿಯಾಗಲ್ಲ, ನಿರೂಪಕನಾಗಿ!
ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿನ ಕೆಲವು ಸ್ಪರ್ಧಿಗಳೀಗ ಹೊಸ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟಿದ್ದಾರೆ. ವಿಶೇಷ ಏನೆಂದರೆ ಆ ಶೋಗೆ ಕಳೆದ ಸೀಸನ್‌ನ ವಿನ್ನರ್ ಕಾರ್ತಿಕ್ ಮಹೇಶ್ ನಿರೂಪಕರಾಗಿದ್ದಾರೆ. ಇಲ್ಲಿದೆ ನೋಡಿ ಆ ಶೋನ ಕುರಿತ ಮಾಹಿತಿ.
Suvarna Celebrity League: ಕಲರ್ಸ್ ಕನ್ನಡದಲ್ಲಿ ಕಳೆದ ವರ್ಷ ಆರಂಭವಾಗಿ ಈ ವರ್ಷದ ಫೆಬ್ರವರಿಯಲ್ಲಿ ಮುಕ್ತಾಯವಾಗಿತ್ತು Bigg Boss Kaannada Season 10. ಸೀಸನ್ 10ರಲ್ಲಿ ಕಾರ್ತಿಕ್ ಮಹೇಶ್ ವಿಜೇತರಾಗಿ ಹೊರಹೊಮ್ಮಿದರೆ, ಡ್ರೋಣ್ ಪ್ರತಾಪ್ ರನ್ನರ್ ಅಪ್ ಸ್ಥಾನ ಪಡೆದಿದ್ದರು. ಶೋ ಮುಗಿದ ಬಳಿಕ ಇತ್ತೀಚೆಗಷ್ಟೇ ಅಂದರೆ, ಕೆಲ ವಾರಗಳ ಹಿಂದಷ್ಟೇ ಬಿಗ್‌ಬಾಸ್ ವಿಜೇತರಿಗೆ ಸಿಗಬೇಕಿದ್ದ ಕಾರ್‌ಅನ್ನೂ ಪಡೆದುಕೊಂಡಿದ್ದರು ಕಾರ್ತಿಕ್. ಈ ನಡುವೆ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಈಗ ಗ್ಯಾಪ್‌ನಲ್ಲಿ ಮತ್ತೆ ಕಿರುತೆರೆಗೆ ಎಂಟ್ರಿಕೊಟ್ಟಿದ್ದಾರೆ.
ಬಿಗ್‌ಬಾಸ್ ಮುಗಿಯುತ್ತಿದ್ದಂತೆ ಒಂದಷ್ಟು ಮಂದಿ ಅದೇ ಫೇಮ್ ಅನ್ನು ಬಳಸಿಕೊಂಡು ಉದ್ಯಮ ಆರಂಭಿಸಿದರೆ, ಇನ್ನು ಕೆಲವರು ನಟನೆಯಲ್ಲಿ ಸಕ್ರಿಯರಾದರು. ಇನ್ನು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಸಾಲು ಸಾಲು ಫೋಟೋಗಳನ್ನು ಹಂಚಿಕೊಂಡು, ದೇಶ ವಿದೇಶ ಸುತ್ತುವುದರಲ್ಲಿ ಕಾಲ ಕಳೆದರು. ಇದೀಗ ಇದೇ ಬಿಗ್‌ಬಾಸ್‌ನ ಕೆಲ ಸ್ಪರ್ಧಿಗಳು ಮತ್ತೆ ಒಂದೆಡೆ ಸೇರಿದ್ದಾರೆ. ಅವರೆಲ್ಲರನ್ನು ಕಾರ್ತಿಕ್ ಮಹೇಶ್ ಲೀಡ್ ಮಾಡುತ್ತಿದ್ದಾರೆ. ಹಾಗಾದರೆ ಏನದು ಶೋ? ಇಲ್ಲಿದೆ ವಿವರ.
ಸ್ಟಾರ್ ಸುವರ್ಣದಲ್ಲಿ ಬಿಗ್ ಬಾಸ್ ಬಳಗ
ಸ್ಟಾರ್ ಸುವರ್ಣದಲ್ಲಿ ಸುವರ್ಣ ಸೆಲೆಬ್ರಿಟಿ ಲೀಗ್ ಶೋ ಶುರುವಾಗಲಿದೆ. ಇತ್ತೀಚೆಗಷ್ಟೇ ಈ ಶೋನ ಪ್ರೋಮೋ ಬಿಡುಗಡೆ ಆಗಿತ್ತು. ಆ ಪ್ರೋಮೋದಲ್ಲಿ ಬಿಗ್‌ಬಾಸ್‌ನ ಕಳೆದ ಸೀಸನ್ ಒಂದಷ್ಟು ಮಂದಿ ಕಾಣಿಸಿದ್ದಾರೆ. ಇನ್ನೇನು ಇದೇ ಸೆಪ್ಟೆಂಬರ್ 15ರಿಂದ ಸುವರ್ಣ ಸೆಲೆಬ್ರಿಟಿ ಲೀಗ್ ಪ್ರಸಾರ ಶುರುವಾಗಲಿದೆ. ಹಾಗಾದರೆ ಈ ಶೋನಲ್ಲಿ ಯಾರೆಲ್ಲ ಇರಲಿದ್ದಾರೆ? ಏನಿದು ಶೋ, ಇದನ್ನು ಮುನ್ನಡೆಸುವವರು ಯಾರು? ಎಂಬಿತ್ಯಾದಿ ವಿವರ ಇಲ್ಲಿದೆ.
ಶೋನಲ್ಲಿ ಯಾರೆಲ್ಲ ಇದ್ದಾರೆ?
ಸುವರ್ಣ ಸೆಲೆಬ್ರಿಟಿ ಲೀಗ್‌ನ ಪ್ರೋಮೋದಲ್ಲಿ ಕಳೆದ ಸೀಸನ್‌ನ ವಿಜೇತ ಕಾರ್ತಿಕ್ ಮಹೇಶ್ ಈ ಶೋ ಮುನ್ನಡೆಸಲಿದ್ದಾರೆ. ಇನ್ನುಳಿದಂತೆ ಸ್ಪರ್ಧಿಗಳಾದ ವಿನಯ್ ಗೌಡ, ತನಿಷಾ ಕುಪ್ಪಂಡ, ನಮ್ರತಾ ಗೌಡ, ರಕ್ಷಕ್ ಬುಲೆಟ್ ಕಾಣಿಸಿಕೊಳ್ಳಲಿದ್ದಾರೆ. ಇವರ ಜತೆಗೆ ಆಸೆ ಸೀರಿಯಲ್‌ನ ನಾಯಕ ನಿನಾದ್ ಹರಿತ್ಸ ಮತ್ತು ಪ್ರಿಯಾಂಕಾ ಡಿ.ಎಸ್, ಕಿರುತೆರೆ ನಟರಾದ ಚಂದು ಗೌಡ, ಅಭಿಜ್ಞಾ ಭಟ್, ಸತ್ಯ ಸೀರಿಯಲ್ ಖ್ಯಾತಿಯ ಪ್ರಿಯಾಂಕಾ ಶಿವಣ್ಣ, ಕಾಮಿಡಿ ಕಿಲಾಡಿ ಪ್ಯಾಕು ಪ್ಯಾಕು ಹಿತೇಶ್ ಈ ಶೋನಲ್ಲಿರಲಿದ್ದಾರೆ.
ಪಂಚಿಂಗ್ ಡೈಲಾಗ್ ಅಬ್ಬರ..
ಸುವರ್ಣ ಸೆಲೆಬ್ರಿಟಿ ಲೀಗ್‌ನಲ್ಲಿ ಎರಡು ತಂಡಗಳಿವೆ. ಸಮಬಲವಾಗಿ ಆ ಎರಡು ತಂಡಗಳನ್ನು ಕಟ್ಟಲಾಗಿದೆ. ಇಲ್ಲಿ ಕಾರ್ತಿಕ್ ಮಹೇಶ್ ಈ ಶೋನ ನಿರೂಪಕರಾಗಿದ್ದಾರೆ. ಪ್ರೋಮೋದಲ್ಲಿ ರಗಡ್ ಆಗಿಯೇ ಕಾರ್ತಿಕ್‌ಎಂಟ್ರಿಕೊಟ್ಟಿದ್ದಾರೆ. ಎದುರಾಳಿಗಳ ಹುಟ್ಟಡಗಿಸೋಕೆ ಆನೆ ಬರ್ತಿದೆ, ತನ್ನ ದಂಡಿನ ಜತೆಗೆ ಹುಷಾರು ಎಂದು ವಿನಯ್ ಗೌಡ ಹೇಳಿದರೆ, ಆಟ ಯಾವುದೇ ಇರಲಿ, ಎದುರಾಳಿ ಯಾರೇ ಬರಲಿ ಅಖಾಡಕ್ಕೆ ನಮ್ಮ ಟೀಮ್ ಇಳಿದ ಮೇಲೆ ಗೆಲುವು ನಮ್ ಟೀಮ್‌ನದ್ದೆ ಎಂದು ಚಂದು ಗೌಡ ಬಾಯಲ್ಲಿ ಖಡಕ್ ಡೈಲಾಗ್ ಬಂದರೆ, ಈ ದುನಿಯಾದಲ್ಲಿ ಒಟ್ಟು ಮೂರು ತರ ಜನ ಇರ್ತಾರೆ, ಒಬ್ರು ರೂಲ್ಸ್‌ನ ಫಾಲೋ ಮಾಡೋರು, ಇನ್ನೊಬ್ಬರು ರೂಲ್ಸ್‌ನ ಬ್ರೇಕ್ ಮಾಡೋರು. ಮೂರನೆಯವನು ನಾನು ರೂಲ್ಸ್‌ನ ಸೆಟ್ ಮಾಡೋನು ಎಂದಿದ್ದಾರೆ ಕಾರ್ತಿಕ್ ಮಹೇಶ್.
ವಿಭಾಗ