BBK 11: ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ಗ್ರ್ಯಾಂಡ್‌ ಓಪನಿಂಗ್‌ಗೂ ಮೊದಲೇ ಸ್ಪರ್ಧಿಗಳ ರಿವೀಲ್‌! ಆಡಿಯೆನ್ಸ್‌ ಕೈಗೆ ಸಿಗಲಿದೆ ಅಧಿಕಾರ-television news bigg boss kannada season 11 contestants reveal before the grand opening raja rani finale mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Bbk 11: ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ಗ್ರ್ಯಾಂಡ್‌ ಓಪನಿಂಗ್‌ಗೂ ಮೊದಲೇ ಸ್ಪರ್ಧಿಗಳ ರಿವೀಲ್‌! ಆಡಿಯೆನ್ಸ್‌ ಕೈಗೆ ಸಿಗಲಿದೆ ಅಧಿಕಾರ

BBK 11: ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ಗ್ರ್ಯಾಂಡ್‌ ಓಪನಿಂಗ್‌ಗೂ ಮೊದಲೇ ಸ್ಪರ್ಧಿಗಳ ರಿವೀಲ್‌! ಆಡಿಯೆನ್ಸ್‌ ಕೈಗೆ ಸಿಗಲಿದೆ ಅಧಿಕಾರ

Bigg Boss Kannada season 11 contestants: ಸೆ. 29ರ ಸಂಜೆ 6 ಗಂಟೆಗೆ ಕಲರ್ಸ್‌ ಕನ್ನಡದಲ್ಲಿ ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಶುರುವಾಗಲಿದೆ. ಹೆಲ್‌ ಮತ್ತು ಹೆವೆನ್‌ ಎಂಬ ಪರಿಕಲ್ಪನೆಯಲ್ಲಿ ಈ ಸಲದ ಶೋ ನಡೆಯಲಿದೆ ಎಂಬ ಸುಳಿವು ಪ್ರೋಮೋದಲ್ಲಿ ಸಿಕ್ಕಿದೆ. ಜತೆಗೆ ಒಂದು ದಿನ ಮುನ್ನವೇ ಸ್ಪರ್ಧಿಗಳು ಯಾರೆಂದೂ ಗೊತ್ತಾಗಲಿದೆ.

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಸುದ್ದಿಗೋಷ್ಠಿ
ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಸುದ್ದಿಗೋಷ್ಠಿ

Bigg Boss Kannada Season 11: ಬಿಗ್‌ ಬಾಸ್‌ ಕನ್ನಡ ಸೀಸನ್‌ 10ರ ಯಶಸ್ಸಿನ ಬೆನ್ನಲ್ಲೇ ಹನ್ನೊಂದನೇ ಸೀಸನ್‌ ಆಗಮನಕ್ಕೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಪ್ರೋಮೋಗಳ ಮೂಲಕವೇ ವೀಕ್ಷಕರ ಗಮನ ಸೆಳೆದಿರುವ ಸೀಸನ್‌ 11, ಈ ಸಲ ಹೊಸ ಕಾನ್ಸೆಪ್ಟ್‌ನೊಂದಿಗೆ ಆಗಮಿಸುತ್ತಿದೆ. ಕೆಲ ದಿನಗಳ ಹಿಂದಷ್ಟೇ ಬಿಡುಗಡೆ ಆಗಿರುವ ಸ್ವರ್ಗ ನರಕ ಪರಿಕಲ್ಪನೆ ನೋಡುಗರನ್ನು ಕುತೂಹಲಕ್ಕೆ ದೂಡಿದೆ. ಇದೆಲ್ಲದರ ನಡುವೆ ಈ ಸಲ ಯಾರೆಲ್ಲ ಬಿಗ್‌ ಬಾಸ್ ಮನೆ ಪ್ರವೇಶಿಸಲಿದ್ದಾರೆ ಎಂಬ ಕೌತುಕವೂ ಎಲ್ಲರಲ್ಲಿದೆ.

ಸೆ. 29ರ ಸಂಜೆ 6 ಗಂಟೆಗೆ ಕಲರ್ಸ್‌ ಕನ್ನಡದಲ್ಲಿ ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಶುರುವಾಗಲಿದೆ. ಹೆಲ್‌ ಮತ್ತು ಹೆವೆನ್‌ ಎಂಬ ಪರಿಕಲ್ಪನೆಯಲ್ಲಿ ಈ ಸಲದ ಶೋ ನಡೆಯಲಿದೆ ಎಂಬ ಸುಳಿವು ಪ್ರೋಮೋದಲ್ಲಿ ಸಿಕ್ಕಿದೆ. ಸ್ವರ್ಗದಲ್ಲಿರುವ ಸ್ಪರ್ಧಿಗಳಿಗೆ ಎಲ್ಲ ಸೌಕರ್ಯ ಸಿಕ್ಕರೆ, ನರಕದಲ್ಲಿರುವವರೆಗೆ ಕಷ್ಟದ ಮೇಲೆ ಕಷ್ಟ ದಕ್ಕಲಿದೆ ಎಂಬ ಅರ್ಥದಲ್ಲಿ ಪ್ರೋಮೋ ನೋಡುಗರಿಗೆ ಸಿಕ್ಕಿದೆ. ಅದು ತೆರೆ ಮೇಲೆ ಹೇಗೆ ಮೂಡಿಬರಲಿದೆ ಎಂಬ ಬಗ್ಗೆ ವೀಕ್ಷಕ ವಲಯದಲ್ಲಿ ಕುತೂಹಲ ಮಾತ್ರ ಹೆಚ್ಚಾಗುತ್ತಲೇ ಇದೆ.

ಶೋ ಆರಂಭಕ್ಕೂ ಮುನ್ನ ಸ್ಪರ್ಧಿಗಳು ರಿವೀಲ್..‌

ಸಹಜವಾಗಿ ಪ್ರತಿ ವರ್ಷ ಶುರುವಾಗುವ ಬಿಗ್‌ ಬಾಸ್‌ ಶೋನಲ್ಲಿ ಸ್ಪರ್ಧಿಗಳು ಯಾರು ಎಂಬ ಟಾಕ್‌ ಶೋ ಆರಂಭಕ್ಕೂ ಮುನ್ನವೇ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿರುತ್ತದೆ. ಅವರು ಬರ್ತಾರೆ, ಇವರು ಬರ್ತಾರೆ ಎಂದು ಕೆಲ ಹೆಸರುಗಳು ಓಡಾಡುತ್ತಲೇ ಇರುತ್ತವೆ. ಇದೀಗ ಇನ್ನೇನು ಕೆಲವೇ ದಿನಗಳಲ್ಲಿ ಆ ಕಾಯುವಿಕೆಗೆ ಬ್ರೇಕ್‌ ಬೀಳಲಿದೆ. ಈ ಸಲದ ಶೋನಲ್ಲಿ ಯಾರೆಲ್ಲ ಇರಲಿದ್ದಾರೆ ಎಂಬ ಕೌತುಕ ತಣಿಯಲಿದೆ. ಸಹಜವಾಗಿ ಗ್ರ್ಯಾಂಡ್‌ ಓಪನಿಂಗ್‌ ದಿನ ಸ್ಪರ್ಧಿಗಳು ಯಾರು ಎಂಬ ವಿಚಾರ ಗೊತ್ತಾಗುತ್ತಿತ್ತು. ಈ ಸಲ ಒಂದು ದಿನ ಮುಂಚಿತವಾಗಿಯೇ ರಿವೀಲ್‌ ಮಾಡಲಿದೆ ಕಲರ್ಸ್‌ ಕನ್ನಡ.

ವೀಕ್ಷಕರ ಕೈಗೆ ಅಧಿಕಾರ

ಸೆಪ್ಟೆಂಬರ್‌ 28ರಂದು ಕಲರ್ಸ್‌ ಕನ್ನಡದ ರಾಜಾ ರಾಣಿ ಶೋನ ಗ್ರ್ಯಾಂಡ್‌ ಫಿನಾಲೆ ನಡೆಯಲಿದೆ. ಈ ಶೋನಲ್ಲಿ ಆಯ್ದ ಒಂದಷ್ಟು ಸ್ಪರ್ಧಿಗಳನ್ನು ರಿವೀಲ್‌ ಮಾಡಲಿದೆ. ಅಷ್ಟೇ ಅಲ್ಲ ಅವರು ಬಿಗ್‌ ಬಾಸ್‌ ಮನೆ ಪ್ರವೇಶಿಸಬೇಕೋ ಬೇಡವೋ ಎಂಬ ಆಯ್ಕೆಯನ್ನೂ ಇಡಲಿದೆ. ಅಲ್ಲಿ ಆಡಿಯೆನ್ಸ್‌ ಮೂಲಕ ಯಾರಿಗೆ ಹೆಚ್ಚು ವೋಟ್‌ಗಳು ಬೀಳುತ್ತವೋ ಅವರು ಬಿಗ್‌ ಬಾಸ್‌ ಮನೆ ಪ್ರವೇಶಿಸಲಿದ್ದಾರೆ. ಇನ್ನುಳಿದಂತೆ ಮುಖ್ಯ ಸ್ಪರ್ಧಿಗಳನ್ನು ಮರು ದಿನದ ಗ್ರ್ಯಾಂಡ್‌ ಫಿನಾಲೆಯಲ್ಲಿಯೇ ರಿವೀಲ್‌ ಮಾಡಲಾಗುವುದು ಎಂದು ಕಲರ್ಸ್‌ ಕನ್ನಡದ ಬಿಜಿನೆಸ್‌ ಹೆಡ್‌ ಪ್ರಶಾಂತ್‌ ತಿಳಿಸಿದ್ದಾರೆ.

mysore-dasara_Entry_Point