ಹೊಸ ದಶಕ, ಹೊಸ ಆಟ, ಹೊಸ ಅಧ್ಯಾಯ.. ಹಾಗಾದ್ರೆ ನಿರೂಪಕರೂ ಹೊಸಬ್ರಾ? ಅಚ್ಚರಿಗೆ ದೂಡಿದೆ Bigg Boss Kannada Season 11 ಪ್ರೋಮೋ-television news bigg boss kannada season 11 first promo released will kichcha sudeep host bbk11 this time mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಹೊಸ ದಶಕ, ಹೊಸ ಆಟ, ಹೊಸ ಅಧ್ಯಾಯ.. ಹಾಗಾದ್ರೆ ನಿರೂಪಕರೂ ಹೊಸಬ್ರಾ? ಅಚ್ಚರಿಗೆ ದೂಡಿದೆ Bigg Boss Kannada Season 11 ಪ್ರೋಮೋ

ಹೊಸ ದಶಕ, ಹೊಸ ಆಟ, ಹೊಸ ಅಧ್ಯಾಯ.. ಹಾಗಾದ್ರೆ ನಿರೂಪಕರೂ ಹೊಸಬ್ರಾ? ಅಚ್ಚರಿಗೆ ದೂಡಿದೆ Bigg Boss Kannada Season 11 ಪ್ರೋಮೋ

Bigg Boss Kannada Season 11 Promo: ಬಿಗ್‌ಬಾಸ್‌ ಕನ್ನಡ ಸೀಸನ್‌ 11ರ ಮೊದಲ ಪ್ರೋಮೋ ಬಿಡುಗಡೆ ಆಗಿದೆ. ಹಲವು ಕುತೂಹಲಗಳಿಗೆ ಈ ಪ್ರೋಮೋ ಸಾಕ್ಷಿಯಾಗಿದೆ. ಅದರಲ್ಲೂ ಕಿಚ್ಚ ಸುದೀಪ್‌ ಈ ಹೊಸ ದಶಕದ ಹೊಸ ಅಧ್ಯಾಯವನ್ನು ಹೋಸ್ಟ್‌ ಮಾಡ್ತಾರಾ ಅನ್ನೋ ಪ್ರಶ್ನೆಯೂ ಹೊರಬಂದ ಪ್ರೋಮೋದಲ್ಲಿ ಕಂಡಿದೆ.

ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ಮೊದಲ ಪ್ರೋಮೋ ಬಿಡುಗಡೆ ಆಗಿದೆ.
ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ಮೊದಲ ಪ್ರೋಮೋ ಬಿಡುಗಡೆ ಆಗಿದೆ. (Image\ JioCinema\ Colors Kannada)

Bigg Boss Kannada Season 11: ಕನ್ನಡ ಕಿರುತೆರೆಯ ದೊಡ್ಡ ರಿಯಾಲಿಟಿ ಶೋಗಳಲ್ಲಿ ಒಂದೆನಿಸಿರುವ ಬಿಗ್‌ ಬಾಸ್‌ ಕನ್ನಡ ಸೀಸನ್‌ 11ರ ಶುರುವಿಗೆ ಹೆಚ್ಚು ದಿನ ಉಳಿದಿಲ್ಲ. ಈಗಾಗಲೇ ಸೀಸನ್‌ 11ರ ಬಿಗ್‌ ಬಾಸ್‌ ಲೋಗೋ ಹೇಗಿರಲಿದೆ ಎಂಬುದನ್ನು ರಿವೀಲ್‌ ಮಾಡಿರುವ ಕಲರ್ಸ್‌ ಕನ್ನಡ, ಇದೀಗ ಮೊದಲ ಪ್ರೋಮೋ ಹೊರತಂದಿದೆ. ಈ ಪ್ರೋಮೋ ಮೂಲಕ ನೋಡುಗರನ್ನು ಅಚ್ಚರಿಗೆ ದೂಡಿದೆ. ಅದರಲ್ಲೂ ಕಿಚ್ಚ ಸುದೀಪ್‌ ಈ ಸಲದ ಶೋ ಹೋಸ್ಟ್‌ ಮಾಡ್ತಾರಾ ಇಲ್ಲ ಅನ್ನೋ ಪ್ರಶ್ನೆಗಳ ನಡುವೆಯೇ, ಕುತೂಹಲ ಮೂಡಿಸಿದೆ.

ಇತ್ತೀಚೆಗಷ್ಟೇ ಕಲರ್ಸ್‌ ಕನ್ನಡ ತನ್ನ ಅಧಿಕೃತ ಸೋಷಿಯಲ್‌ ಮೀಡಿಯಾ ಪೇಜ್‌ಗಳಲ್ಲಿ ಬಿಗ್‌ಬಾಸ್‌ ಲೋಗೀ ಅನಾವರಣ ಮಾಡಿತ್ತು. ನೀರು ಮತ್ತು ಬೆಂಕಿಯ ಕಾಂಬಿನೇಷನ್‌ನ ಬಿಗ್‌ ಬಾಸ್‌ ಕಣ್ಣು ಎಲ್ಲರ ಗಮನ ಸೆಳೆದಿತ್ತು. ಈ ನಡುವೆಯೇ ಹಾಗೆ ಶೇರ್‌ ಮಾಡಿದ ಪೋಸ್ಟ್‌ನಲ್ಲಿ #KichchaSudeep ಎಂಬ ಹ್ಯಾಶ್‌ಟ್ಯಾಗ್‌ ಕಾಣಿಸಿರಲಿಲ್ಲ. ಇದನ್ನು ಗಮನಿಸಿದ ಕೆಲವರು, ಈ ಸಲದ ಶೋನಲ್ಲಿ ಸುದೀಪ್‌ ನಿರೂಪಣೆ ಮಾಡಲ್ವಾ? ಎಂದೇ ಕಾಮೆಂಟ್‌ ಹಾಕಿದ್ದರು. ಇದೀಗ ಹೊಸ ಪ್ರೋಮೋದಲ್ಲಿ ಅದಕ್ಕೆ ಮತ್ತಷ್ಟು ಒಗ್ಗರಣೆ ಹಾಕಿದ್ದಾರೆ.

ಹೊಸ ಅಧ್ಯಾಯಕ್ಕೆ ನಿರೂಪಕರು ಯಾರು?

ಸದ್ಯ ಬಿಡುಗಡೆ ಆಗಿರುವ ಪ್ರೋಮೋದಲ್ಲಿ ಒಂದಷ್ಟು ವಿಶೇಷತೆಗಳಿವೆ. ಜನತೆ ಮನೆಗಳಲ್ಲಿ, ಮೊಬೈಲ್‌ಗಳಲ್ಲಿ, ಎಲ್ಲೆಂದರಲ್ಲಿ ಬಿಗ್‌ಬಾಸ್‌ ನೋಡುವ ದೃಶ್ಯವನ್ನು ಚಿತ್ರಿಸಲಾಗಿದೆ. ಟಿವಿ ಪರದೆ ಮೇಲೆ "ಇದು ಬಿಗ್‌ ಬಾಸ್‌.. ನಮಸ್ಕಾರ ಕರ್ನಾಟಕ. ಹೇಗಿದ್ದೀರಾ? 10 ವರ್ಷಗಳಿಂದ ನೋಡ್ತಾನೇ ಇದ್ದೀರಾ. ಇದು ದೊಡ್ಡದಾಗ್ತಾನೇ ಇದೆ. ಈ ಬಾರಿ ಇನ್ನೂ ದೊಡ್ಡದು ಕಾದಿದೆ. ಯಾಕಂದ್ರೆ, ಇದು ಹೊಸ ದಶಕ, ಹೊಸ ಆಟ, ಹೊಸ ಅಧ್ಯಾಯ" ಎಂದು ಬಿಗ್‌ ಬಾಸ್‌ ಹೇಳಿದೆ, ಪುಟಾಣಿಯೊಬ್ಬ, "ಹಾಗಾದ್ರೆ ಆಂಕರ್ರೂ ಹೊಸಬ್ರಾ?" ಎನ್ನುವ ಮೂಲಕ ವೀಕ್ಷಕರಿಗೆ ಒಂದಷ್ಟು ಸರ್ಪ್ರೈಸ್‌ ನೀಡಿದೆ ಮೊದಲ ಪ್ರೋಮೋ.

ಇನ್ನು ಈ ಶೋ ಆರಂಭದ ಬಗ್ಗೆಯೂ ಕೆಲ ಮೂಲಗಳ ಮಾಹಿತಿ ಆಧರಿಸಿದರೆ, ಇದೇ ಸೆಪ್ಟೆಂಬರ್‌ 28ರಿಂದ ಬಿಗ್‌ಬಾಸ್‌ ಸೀಸನ್‌ 11 ಶುರುವಾಗಲಿದೆ ಎನ್ನಲಾಗುತ್ತಿದೆ. ಕಿಚ್ಚ ಸುದೀಪ್‌ ನೇತೃತ್ವದಲ್ಲಿ ಕಲರ್ಸ್‌ ಕನ್ನಡದಲ್ಲಿ ಈ ಬಾರಿಯ ಬಿಗ್‌ಬಾಸ್‌ ಆರಂಭವಾಗಲಿದ್ದು, ಸ್ಪರ್ಧಿಗಳ ಲಿಸ್ಟ್‌ನಲ್ಲಿ ಕಿರುತೆರೆ ಸ್ಟಾರ್‌ಗಳ ಜತೆಗೆ ಸೋಷಿಯಲ್‌ ಮೀಡಿಯಾ ಇನ್‌ಫ್ಲೂಯೆನ್ಸರ್‌ಗಳ ದಂಡೇ ಇರಲಿದೆ. ಜತೆಗೆ ಈಗಾಗಲೇ ಎರಡನೇ ಪ್ರೋಮೋ ಶೂಟಿಂಗ್‌ ಸಹ ಕೊನೇ ಹಂತದಲ್ಲಿದ್ದು, ಇನ್ನೊಂದು ವಾರದಲ್ಲಿ ಆ ಪ್ರೋಮೋ ಹೊರಬರುವ ಸಾಧ್ಯತೆಗಳಿವೆ.

ಸಂಭಾವ್ಯ ಸ್ಪರ್ಧಿಗಳು

ಬಿಗ್‌ಬಾಸ್‌ ಕನ್ನಡ ಸೀಸನ್‌ 11ರಲ್ಲಿ ಸ್ಪರ್ಧಿಸುವ ಸ್ಪರ್ಧಿಗಳು ಯಾರು ಎಂಬ ವಿವರ ಸೆಪ್ಟೆಂಬರ್‌ 28ರಂದು ಗೊತ್ತಾಗಲಿದೆ. ಹೀಗಿದ್ದರೂ ಹಲವು ಸಂಭಾವ್ಯ ಹೆಸರುಗಳು ಸೋಷಿಯಲ್‌ ಮೀಡಿಯಾ ಅಂಗಳದಲ್ಲಿ ಹರಿದಾಡುತ್ತಿವೆ. ಹಾಸ್ಯ ನಟ ರಾಘವೇಂದ್ರ, ನಟ ತ್ರಿವಿಕ್ರಮ್‌, ತುಕಾಲಿ ಸಂತು ಹೆಂಡತಿ ಮಾನಸ, ಇವರ ಜತೆ ಹಲವು ಸೋಷಿಯಲ್‌ ಮೀಡಿಯಾ ಇನ್‌ಫ್ಲೂಯನ್ಸರ್‌ಗಳು ಈ ಬಾರಿ ದೊಡ್ಮನೆ ಪ್ರವೇಶಿಸಲಿದ್ದಾರೆ.

ದಾಖಲೆ ಬರೆದಿತ್ತು ಕಳೆದ ಸೀಸನ್‌

ಕಳೆದ ಸೀಸನ್‌ 10 ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಕಾರ್ತಿಕ್‌ ಮಹೇಶ್‌ ವಿಜೇತರಾಗಿ ಹೊರಹೊಮ್ಮಿದರೆ, ಡ್ರೋಣ್‌ ಪ್ರತಾಪ್‌ ರನ್ನರ್‌ಅಪ್‌ ಆಗಿದ್ದರು. ಸಂಗೀತಾ ಶೃಂಗೇರಿ ಮತ್ತು ವಿನಯ್‌ ಗೌಡ ಅವರ ನಡುವಿನ ಕಿತ್ತಾಟ, ರಂಪಾಟ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇದೆಲ್ಲದರ ಫಲವಾಗಿ ಒಟ್ಟಾರೆ ಈ ಹಿಂದಿನ ಎಲ್ಲ ಸೀಸನ್‌ಗಳಿಗೆ ಹೋಲಿಕೆ ಮಾಡಿದರೆ, ಅತಿ ಹೆಚ್ಚು ಟಿಆರ್‌ಪಿ ಗಿಟ್ಟಿಸಿಕೊಂಡಿತ್ತು ಹತ್ತನೇ ಸೀಸನ್‌. ಇದೀಗ ಅದೇ ಉತ್ಸಾಹದಲ್ಲಿ ಸೀಸನ್‌ 11 ಶುರುವಾಗಲಿದೆ. ಈ ಸಲ ಏನೆಲ್ಲ ವಿಶೇಷಗಳಿರಲಿವೆ ಎಂಬುದು ಇನ್ನಷ್ಟೇ ಗೊತ್ತಾಗಲಿದೆ.

mysore-dasara_Entry_Point