BBK 10: ನಾನು ಹೊರಹೋಗಬೇಕು, ನನಗದು ಅನಿವಾರ್ಯ! ವರ್ತೂರು ಸಂತೋಷ್ ನಡೆಗೆ ಬೇಸರದಲ್ಲಿಯೇ ಬಿಗ್ ಬಾಸ್ ಶೋ ತ್ಯಜಿಸಿದ ಕಿಚ್ಚ
ನಾನು ಆದಷ್ಟು ಬೇಗ ಬಿಗ್ ಬಾಸ್ ಮನೆಯಿಂದ ಹೊರಹೋಗಬೇಕು ಎಂದು ಈ ಹಿಂದೆಯೇ ಹಲವು ಬಾರಿ ತಮ್ಮ ಆಪ್ತ ವಲಯದ ಬಳಿ ವರ್ತೂರು ಸಂತೋಷ್ ಹೇಳಿಕೊಂಡಿದ್ದರು. ಅದರಂತೆ, ಈ ವಾರ ನಾನೇ ಹೋಗುವುದೆಂದೂ ಊಹಿಸಿದ್ದರು. ಆದರೆ, ಕಿಚ್ಚನ ಪಂಚಾಯ್ತಿಯಲ್ಲಿ, ಅದೇ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.
Bigg boss Kannada Season 10: ಈ ಸಲದ ಬಿಗ್ಬಾಸ್ ಸೀಸನ್ 10 ಈ ಹಿಂದೆಂದೂ ನಡೆಯದ ಬೆಳವಣಿಗೆಗೆ ಸಾಕ್ಷಿಯಾಗಿದೆ. ಐದನೇ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಈ ವಾರ ನೀತು ವನಜಾಕ್ಷಿ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದಾರೆ. ಆದರೆ, ಅಚ್ಚರಿಯ ಬೆಳವಣಿಗೆಯಲ್ಲಿ ನನಗೆ ಈ ಮನೆಯಲ್ಲಿ ಇರಲು ಆಗುತ್ತಿಲ್ಲ, ನನ್ನನ್ನು ಮನೆಯಿಂದ ಹೊರ ಕಳಿಸುವಂತೆ ಸುದೀಪ್ ಮುಂದೆ ಬೇಡಿಕೆ ಇಟ್ಟಿದ್ದಾರೆ ವರ್ತೂರು ಸಂತೋಷ್!
ಈ ಸಲದ ಬಿಗ್ಬಾಸ್ ಹಲವು ಹೊಸತನ್ನು ಕಂಡಿದೆ. ಬಿಗ್ ಬಾಸ್ ಮನೆಯಿಂದ ಒಮ್ಮೆ ಹೊರಹೋದ ಸ್ಪರ್ಧಿ, ಮತ್ತೆ ಅದೇ ಮನೆಗೆ ಆಗಮಿಸಿದ ಉದಾಹರಣೆ ಇಲ್ಲ. ಆದರೆ, ವರ್ತೂರು ಸಂತೋಷ್, ಹುಲಿ ಉಗುರು ಧರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಜೈಲು ಸೇರಿ ಅದಾದ ಬಳಿಕ ಮತ್ತೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಈ ರೀತಿಯ ಪ್ರಕರಣ ಬಿಗ್ಬಾಸ್ ಇತಿಹಾಸದಲ್ಲೇ ಮೊದಲು. ಇದೀಗ ಇದೇ ವರ್ತೂರು ಮನೆಯಿಂದ ಆಚೆ ಬರಲು ಹಟ ಹಿಡಿದಿದ್ದಾರೆ.
ಈ ಹಿಂದೆಯೇ, ನಾನು ಆದಷ್ಟು ಬೇಗ ಬಿಗ್ ಬಾಸ್ ಮನೆಯಿಂದ ಹೊರಹೋಗಬೇಕು ಎಂದು ಈ ಹಿಂದೆಯೇ ಹಲವು ಬಾರಿ ತಮ್ಮ ಆಪ್ತ ವಲಯದ ಬಳಿ ಹೇಳಿಕೊಂಡಿದ್ದರು ವರ್ತೂರು ಸಂತೋಷ್. ಅದರಂತೆ, ಈ ವಾರ ನಾನೇ ಹೋಗುವುದೆಂದೂ ಹೇಳಿಕೊಂಡಿದ್ದರು. ಆದರೆ, ಕಿಚ್ಚನ ಪಂಚಾಯ್ತಿಯಲ್ಲಿ, ಅದೇ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಕಲರ್ಸ್ ಕನ್ನಡದಿಂದ ಹೊಸ ಪ್ರೋಮೋ ಬಿಡುಗಡೆಯಾಗಿದ್ದು, ಅದರಲ್ಲಿ ವರ್ತೂರು ಕಣ್ಣೀರು ಹಾಕಿದ್ದಾರೆ.
ಪ್ರೋಮೋದಲ್ಲೇನಿದೆ?
ವಾರದ ಎಲಿಮಿನೇಷನ್ ಯಾರು ಎಂದು ಬಂದಾಗ, ಅದೇ ನಾಮಿನೇಷನ್ ಪಟ್ಟಿಯಲ್ಲಿ ವರ್ತೂರು ಸಂತೋಷ್ ಅವರ ಹೆಸರಿತ್ತು. ಸುದೀಪ್ ಸಹ, ವರ್ತೂರು ನೀವು ಸೇಫ್ ಆಗಿದ್ದೀರಾ ಎಂದು ಘೋಷಿಸಿದ್ದಾರೆ. ಇದಕ್ಕೆ ಉತ್ತರಿಸಿದ ವರ್ತೂರು, "ಹೊರಗಡೆ ಒಂದು ಘಟನೆ ನಡೀತು. ನಾನು ಅದರಿಂದ ಹೊರಗಡೆ ಬಂದು ಇಲ್ಲಿ ಆಡಬೇಕು ಅಂದ್ರೂ ನನ್ನಿಂದ ಆಗುತ್ತಿಲ್ಲ. ನಾನು ಹೊರಗಡೆ ಇರಬೇಕು ಅಂತ ಇಷ್ಟಪಡ್ತೀನಿ ಅಣ್ಣ ಎಂದಿದ್ದಾರೆ.
ಇದಕ್ಕೆ ಪ್ರತಿಯಾಗಿ ವರ್ತೂರು ಅವರಿಗೆ ಬಂದ ವೋಟ್ಗಳನ್ನೂ ಸುದೀಪ್ ರಿವೀಲ್ ಮಾಡಿದ್ದಾರೆ. 34 ಲಕ್ಷ15 ಸಾವಿರದ 472 ಮತಗಳು ನಿಮಗೆ ಬಂದಿವೆ ಎಂದಿದ್ದಾರೆ. ಮತಗಳನ್ನು ಹಾಕಿದ ಜನಗಳ ವಿರುದ್ಧ ನಾನು ಹೋಗಲು ಆಗಲ್ಲ. ನಾನು ಹೋಗುವುದೂ ಇಲ್ಲ ಎಂದು ಹೇಳಿ, ನನಗೆ ತುಂಬ ಬೇಸರವಾಯಿತೆಂದು ಶೋ ತ್ಯಜಿಸಿದ್ದಾರೆ. ಇತ್ತ ಮನೆಮಂದಿಯೆಲ್ಲ ವರ್ತೂರು ಅವರನ್ನು ಸಂಭಾಳಿಸಲು ಪ್ರಯತ್ನಿಸಿದ್ದಾರೆ. ಈ ಅವಕಾಶ ಮತ್ತೆ ಸಿಗುವುದಿಲ್ಲ ಎಂದಿದ್ದಾರೆ. ವರ್ತೂರು ಮನೆಯಿಂದ ಹೊರಡುತ್ತಾರಾ? ಇಲ್ಲವಾ? ಎಂಬ ಕುತೂಹಲಕ್ಕೆ ಇಂದು ತೆರೆ ಬೀಳಲಿದೆ.