‘ನಮ್ಮ ಲೈಫ್‌ಗೆ ಕಲ್ಲು ಹಾಕಬೇಡಿ, ನಾನೊಬ್ಬ ಫ್ಯಾಮಿಲಿ ಬಾಯ್‌, ಆ ರೀತಿ ಹುಡ್ಗ ನಾನಲ್ಲ’; ಬೃಂದಾವನ ಸೀರಿಯಲ್‌ ನಟ ವರುಣ್‌ ಆರಾಧ್ಯ-television news brundavana serial actor varun aradya reacts about police complaint and ex girlfriend varsha kaveri mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ‘ನಮ್ಮ ಲೈಫ್‌ಗೆ ಕಲ್ಲು ಹಾಕಬೇಡಿ, ನಾನೊಬ್ಬ ಫ್ಯಾಮಿಲಿ ಬಾಯ್‌, ಆ ರೀತಿ ಹುಡ್ಗ ನಾನಲ್ಲ’; ಬೃಂದಾವನ ಸೀರಿಯಲ್‌ ನಟ ವರುಣ್‌ ಆರಾಧ್ಯ

‘ನಮ್ಮ ಲೈಫ್‌ಗೆ ಕಲ್ಲು ಹಾಕಬೇಡಿ, ನಾನೊಬ್ಬ ಫ್ಯಾಮಿಲಿ ಬಾಯ್‌, ಆ ರೀತಿ ಹುಡ್ಗ ನಾನಲ್ಲ’; ಬೃಂದಾವನ ಸೀರಿಯಲ್‌ ನಟ ವರುಣ್‌ ಆರಾಧ್ಯ

Varun Aradya: ನಟನಾಗಿ ಗುರುತಿಸಿಕೊಳ್ಳುವುದಕ್ಕೂ ಮೊದಲು ಸೋಷಿಯಲ್‌ ಮೀಡಿಯಾದಲ್ಲಿ ರೀಲ್ಸ್‌ ಮೂಲಕವೇ ಲಕ್ಷಾಂತರ ಫಾಲೋವರ್ಸ್‌ ಹೊಂದಿದ್ದವರು ವರುಣ್‌ ಆರಾಧ್ಯ. ಇದೀಗ ಇದೇ ವರುಣ್‌ ವಿರುದ್ಧ ಕೊಲೆ ಬೆದರಿಕೆ ಮತ್ತು ಬ್ಲಾಕ್‌ಮೇಲ್‌ ಆರೋಪ ಕೇಳಿಬಂದಿದೆ. ಇದೆಲ್ಲದಕ್ಕೂ ವರುಣ್‌ ಸ್ಪಷ್ಟನೆ ನೀಡಿದ್ದಾರೆ.

ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾದ ಬಗ್ಗೆ ಬೃಂದಾವನ ಸೀರಿಯಲ್ ನಟ ವರುಣ್‌ ಆರಾಧ್ಯ ಸ್ಪಷ್ಟನೆ ನೀಡಿದ್ದಾರೆ.
ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾದ ಬಗ್ಗೆ ಬೃಂದಾವನ ಸೀರಿಯಲ್ ನಟ ವರುಣ್‌ ಆರಾಧ್ಯ ಸ್ಪಷ್ಟನೆ ನೀಡಿದ್ದಾರೆ. (instagram\ Varun aradya)

Varun Aradya: ಬೃಂದಾವನ ಸೀರಿಯಲ್‌ ನಟ ವರುಣ್‌ ಆರಾಧ್ಯ ತಮ್ಮದೇ ಯೂಟ್ಯೂಬ್‌ ಮೂಲಕ ಮಾಜಿ ಪ್ರೇಮಿಯ ವಿಚಾರವಾಗಿ ಹರಿದಾಡುತ್ತಿರುವ ಒಂದಷ್ಟು ಸುದ್ದಿಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಸುದೀರ್ಘವಾದ ವಿಡಿಯೋ ಹಂಚಿಕೊಂಡ ವರುಣ್‌, "ಸೋಷಿಯಲ್‌ ಮೀಡಿಯಾದಲ್ಲಿ ನನ್ನ ಮತ್ತು ಅವರ (ಮಾಜಿ ಪ್ರೇಯಸಿ) ಸಾಕಷ್ಟು ರೀಲ್ಸ್‌ಗಳಿವೆ. ಅವುಗಳನ್ನು ತೆಗೆಯುವಂತೆ ಪೊಲೀಸರ ಬಳಿ ಮನವಿ ಮಾಡಿದ್ದರು. ನನಗೆ ಅದು ಸಾಧ್ಯವಾಗಿರಲಿಲ್ಲ. ಇದರಿಂದ ಮುಂದೆ ಅವರು ಮದುವೆ ಆದಮೇಲೆ ಈ ರೀಲ್ಸ್‌ಗಳಿಂದ ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ಈ ರೀತಿ ಮಾಡಿದ್ದಾರೆ. ಇದೀಗ ಈ ಸಮಸ್ಯೆ ಬಗೆಹರಿದಿದೆ. ಡಿಲಿಟ್‌ ಮಾಡುವುದಾಗಿ ನಾನೂ ಒಪ್ಪಿಕೊಂಡಿದ್ದೇನೆ" ಎಂದಿದ್ದಾರೆ ವರುಣ್.‌

"2018ರಿಂದಲೇ ನಾವು ಇನ್‌ಸ್ಟಾಗ್ರಾಂನಲ್ಲಿ ಸಾಕಷ್ಟು ರೀಲ್ಸ್‌ ಮಾಡಿದ್ದೇವೆ. ಅವುಗಳನ್ನು ಡಿಲೀಟ್ ಮಾಡುವುದಕ್ಕೆ ನನಗೆ ಟೈಮ್ ಸಿಕ್ಕಿರಲಿಲ್ಲ. ತುಂಬ ವಿಡಿಯೋಗಳು ಇರೋದ್ರಿಂದ ತಡವಾಗಿದೆ. ನಮ್ಮ ಫ್ಯಾನ್ಸ್‌ ಪೇಜ್‌ಗಳಲ್ಲಿಯೂ ಆ ವಿಡಿಯೋಗಳು ಮತ್ತೆ ಮತ್ತೆ ಅಪ್ಲೋಡ್ ಆಗಿವೆ. ಇದೀಗ ಬಸವೇಶ್ವರನಗರ ಪೊಲೀಸ್ ಠಾಣೆಯ ಎಸಿಪಿ ಉಮಾರಾಣಿ ಅವರ ಎದುರು ಕುಳಿತು, ಈ ಸಮಸ್ಯೆಯನ್ನು ಬಗೆಹರಿಸಿಕೊಂಡಿದ್ದೇವೆ. ನಮ್ಮ ಜೀವನವನ್ನು ನಾವು ನೋಡಿಕೊಳ್ಳುತ್ತಿದ್ದೇವೆ. ಇಷ್ಟೇ ವಿಷಯ, ಇದು ಬಿಟ್ಟು ಬೇರೆ ಏನೂ ಇಲ್ಲ.

ನಮ್ಮ ಬದುಕಿಗೆ ಕಲ್ಲು ಹಾಕಬೇಡಿ

"ಸೋಷಿಯಲ್‌ ಮೀಡಿಯಾ ಮತ್ತು ಮಾಧ್ಯಮಗಳಲ್ಲಿ ಏನೂ ತಪ್ಪು ಮಾಡದೇ ಇದ್ದರೂ, ನನ್ನ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ನಾನು ಬೆಳೆಯಬೇಕು ಎಂದು ತುಂಬ ಪ್ರಯತ್ನ ಪಡುತ್ತಿದ್ದೇನೆ. ಯಾರೂ ನಮ್ಮನ್ನು ಬೆಳೆಯುವುದಕ್ಕೆ ಬಿಡುತ್ತಿಲ್ಲ. ನಮ್ಮನೆಯಲ್ಲೂ ಹೆಣ್ಣು ಮಕ್ಕಳಿದ್ದಾರೆ. ನಾನ್ಯಾಕೆ ಬೇರೆ ಮನೆಯವರ ಹೆಣ್ಣಿಗೆ ಬ್ಲಾಕ್‌ಮೇಲ್ ಮಾಡಲಿ. ಆದರೆ ಮನೆಯವರಿಗೆಲ್ಲಾ ಇದು ಸಮಸ್ಯೆ ಆದಾಗ ಕೈಕಾಲು ನಡುಗಿ ಹೋಗುತ್ತದೆ. ನಮ್ಮ ಲೈಫ್ ಮುಂದೆ ಹೋಗಬೇಕು, ಅವರ ಲೈಫೂ ಮುಂದೆ ಹೋಗಬೇಕು. ಆದರೆ ಅದಕ್ಕೆ ಬಂದು ನೀವು ಕಲ್ಲನ್ನು ಹಾಕುತ್ತಲೇ ಇದ್ದೀರಾ. ನಮ್ಮ ಮನೆಯಲ್ಲಿ ಈ ವಿಚಾರವಾಗಿ ಎಲ್ಲರೂ ನೊಂದುಕೊಂಡಿದ್ದಾರೆ" ಎಂದಿದ್ದಾರೆ ವರುಣ್.‌

ಕೊಲೆ ಬೆದರಿಕೆ ಹಾಕೋವಷ್ಟು ಮೀಟರ್‌ ನಂಗಿಲ್ಲ..

ನಾನು ಕೊಲೆ ಬೆದರಿಕೆ ಹಾಕಿದೆ, ಬ್ಲಾಕ್ ಮೇಲ್ ಮಾಡಿದೆ ಎಂದೆಲ್ಲಾ ಹೇಳಲಾಗಿದೆ. ಅಂಥದ್ದೆಲ್ಲಾ ಮಾಡಿ ಜೈಲಿಗೆ ಹೋಗುವಷ್ಟು ಮೀಟರ್ ನಂಗಿಲ್ಲ. ನಾನೊಬ್ಬ ಫ್ಯಾಮಿಲಿ ಬಾಯ್ ಅಷ್ಟೇ. ಕೊಲೆ ಬೆದರಿಕೆ ಅಂತೆಲ್ಲಾ ಹೇಳಿರೋದು ಸರಿ ಅಲ್ಲ. ಅವರೇ ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೋರಿ ಹಾಕಿದ್ದಾರೆ. ಇದೆಲ್ಲ ಸುಳ್ಳು ಅಂತ, ಇನ್‌ಸ್ಟಾಗ್ರಾಮ್‌ ಪ್ರೊಫೈಲ್ ಮತ್ತು ಸಾಮಾಜಿಕ ಜಾಲತಾಣದ ಫ್ಲಾಟ್‌ಫಾರ್ಮ್‌ನಿಂದ ರೀಲ್‌ಗಳನ್ನು ತೆಗೆದು ಹಾಕಬೇಕಿತ್ತು ಅಷ್ಟೇ. ಹಾಗಾಗಿ ಸುಳ್ಳು ಸುದ್ದಿಗಳನ್ನು ಹರಡಬೇಡಿ" ಎಂದಿದ್ದಾರೆ ವರುಣ್.‌

ನಮ್ಮ ಪಾಡಿಗೆ ನಮ್ಮನ್ನು ಬಿಟ್ಟುಬಿಡಿ..

“ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದ ಹಳೆಯ ಪೋಸ್ಟ್‌ಗಳನ್ನು ಡಿಲೀಟ್ ಮಾಡಿಸಿಕೊಂಡು ಬಂದಿದ್ದೇವೆ. ಅದಕ್ಕೆ ಏನೇನೋ ಕಥೆ ಕಟ್ಟಿದ್ದಾರೆ. ಈ ವಿಷಯವನ್ನು ಇಲ್ಲಿಗೆ ನಿಲ್ಲಿಸಿಬಿಡಿ. ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದುಕೊಂಡಿದ್ದೇನೆ. ಬ್ಲಾಕ್‌ಮೇಲ್ ಮಾಡುವುದು ನನ್ನ ಕೆಲಸವಲ್ಲ. ಒಂದೊಳ್ಳೆಯ ಫ್ಯಾಮಿಲಿಯಿಂದ ಬಂದಿದ್ದೇನೆ. ಏನೋ ಒಂದು ತಪ್ಪು ತಿಳಿವಳಿಕೆಯಿಂದ ನಮ್ಮ ನಡುವೆ ಬ್ರೇಕಪ್‌ ಆಗಿದೆ. ಅವರ ಜೀವನದಲ್ಲಿ ಅವರು ಚೆನ್ನಾಗಿದ್ದಾರೆ. ನನ್ನ ಬದುಕಿನಲ್ಲಿ ನಾನು ಚೆನ್ನಾಗಿದ್ದೇನೆ” ಎಂದು ವರುಣ್ ಆರಾಧ್ಯ ಹೇಳಿದ್ದಾರೆ.

mysore-dasara_Entry_Point