ಕನ್ನಡ ಸುದ್ದಿ  /  Entertainment  /  Television News Colors Kannada Brindavana Kannada Serial Today Episode 100 Feb 20 Shana Influence Akash Rst

ಬೃಂದಾವನ ಸೀರಿಯಲ್‌: ಹೆಂಡತಿಯನ್ನು ದೂರ ಮಾಡುವಂತೆ ಆಕಾಶ್‌ಗೆ ಸಹನಾ ಸಲಹೆ; ಅತ್ತಿಗೆಗೆ ಚಿನ್ನ ಕೊಡ್ತಾಳ ಪುಷ್ಪಾ?

Brindavana Kannada Serial Today Episode Feb 20: ʼಬೃಂದಾವನʼ ಧಾರಾವಾಹಿಯ ಮಂಗಳವಾರದ ಎಪಿಸೋಡ್‌ನಲ್ಲಿ ಕಾಲೇಜಿನಲ್ಲಿ ಆಕಾಶ್‌ ಸಹನಾ ಬಳಿ ತನ್ನ ಕಥೆಯನ್ನೇ ಸ್ನೇಹಿತನ ಕಥೆಯಂತೆ ಹೇಳಿಕೊಳ್ಳುತ್ತಾನೆ. ಇತ್ತ ಅಡುಗೆ ಮಾಡಿ ಅವಾಂತರ ಮಾಡುವ ಗಿರಿಜಾ, ಪುಷ್ಪಾಳಿಂದ ಹೇಗಾದ್ರೂ ಹಣ ಪಡೆದೇ ತೀರ್ಬೇಕು ಅಂತ ಪಣ ತೊಡ್ತಾಳೆ.

ಬೃಂದಾವನ ಸೀರಿಯಲ್‌: ಹೆಂಡತಿಯನ್ನು ದೂರ ಮಾಡುವಂತೆ ಆಕಾಶ್‌ಗೆ ಸಹನಾ ಸಲಹೆ; ಅತ್ತಿಗೆಗೆ ಚಿನ್ನ ಕೊಡ್ತಾಳ ಪುಷ್ಪಾ?
ಬೃಂದಾವನ ಸೀರಿಯಲ್‌: ಹೆಂಡತಿಯನ್ನು ದೂರ ಮಾಡುವಂತೆ ಆಕಾಶ್‌ಗೆ ಸಹನಾ ಸಲಹೆ; ಅತ್ತಿಗೆಗೆ ಚಿನ್ನ ಕೊಡ್ತಾಳ ಪುಷ್ಪಾ?

ಬೃಂದಾವನ ಧಾರಾವಾಹಿಯ ನಿನ್ನೆಯ (ಫೆ.20) ಸಂಚಿಕೆಯಲ್ಲಿ ಆಕಾಶ್‌ ಕಾಲೇಜ್‌ ಕ್ಯಾಂಪಸ್‌ನಲ್ಲಿ ಸಹನಾ ಬಳಿ ಮಾತನಾಡುತ್ತಾ ನನ್ನ ಪರಿಸ್ಥಿತಿಯ ಬಗ್ಗೆ ಹೇಳಿಕೊಳ್ಳುತ್ತಾನೆ. ಪೆದ್ದು ಹೆಂಡತಿಯನ್ನು ಕಟ್ಟಿಕೊಂಡ ಗಂಡನ ಪರಿಸ್ಥಿತಿಯ ಬಗ್ಗೆ ಹೇಳುವ ಆಕಾಶ್‌ ಸಹನಾ ಬಳಿ ಸಲಹೆ ಕೇಳುತ್ತಾನೆ. ಅಲ್ಲದೇ ನಾನು ಹೇಳಿರುವ ಸ್ಟೋರಿ ತನ್ನ ಗೆಳೆಯನ ಬದುಕಿನದ್ದು ಎಂದು ಹೇಳಿ ಅವಳನ್ನು ನಂಬಿಸುತ್ತಾನೆ.

ʼನನ್ನ ಸ್ನೇಹಿತ ಮದುವೆಯಾಗಿದ್ದು ಪೆದ್ದು ಹುಡುಗಿಯನ್ನು, ಅವಳಿಗೂ ಅವನಿಗೂ ಹೊಂದಾಣಿಕೆಯೇ ಇಲ್ಲ. ಆದರೂ ಅವನು ಅವಳ ಜೊತೆ ಯಾಕೆ ಹೊಂದಿಕೊಂಡು ಬಾಳುತ್ತಿದ್ದಾನೆ ಅಂದ್ರೆ ಅವಳಿಂದ ದೂರ ಆದ್ರೆ ಅವಳಿಗೆ ಹರ್ಟ್‌ ಆಗುತ್ತೆ ಅನ್ನೋ ಕಾರಣಕ್ಕೆ, ಅಲ್ಲದೇ ಮನೆಯವರಿಗೆ ಅವಳು ಅಂದ್ರೆ ಇಷ್ಟ, ಅವರದ್ದು ಹಾಲಿನಂತಹ ಸಂಸಾರ, ಆ ಮನೆಯಲ್ಲಿ ಎಲ್ಲರಿಗೂ ಅವಳು ಅಂದ್ರೆ ಇಷ್ಟ. ಆದ್ರೆ ಗಂಡಂಗೆ ಮಾತ್ರ ಇಷ್ಟ ಇಲ್ಲʼ ಅಂತೆಲ್ಲಾ ಹೇಳುತ್ತಾನೆ. ಅಲ್ದೆ, ನನ್‌ ಫ್ರೆಂಡ್‌ ಬಗ್ಗೆ ನಿಮಗೆ ಏನ್ನಿಸುತ್ತೆ ಅಂತ ಸಹನಾಳನ್ನು ಪ್ರಶ್ನಿಸುತ್ತಾನೆ. ಆಗ ಸಹನಾ ʼನಿಮ್ಮ ಫ್ರೆಂಡ್‌ ವೈಫ್‌ ನಿಜಕ್ಕೂ ಮುಗ್ಧೆ ಆಗಿದ್ದು, ಒಳ್ಳೆಯವಳಾಗಿದ್ರೆ ಅವಳ ಜೊತೆ ಹೊಂದಿಕೊಂಡು ಬಾಳೋದು ಬೆಸ್ಟ್‌ ಅನ್ಸುತ್ತೆʼ ಅಂತ ಸಲಹೆ ಕೊಡ್ತಾಳೆ.

ಆಗ ಆಕಾಶ್‌ ಹೆಂಡತಿಯಾದವಳು ತನ್ನ ಗಂಡನ ಬಳಿ ಸುಳ್ಳು ಹೇಳಿದ್ರೆ, ಏನ್‌ ಮಾಡ್ಬೇಕು ಅಂತ ಪ್ರಶ್ನೆ ಮಾಡ್ತಾನೆ. ಅದಕ್ಕೆ ಸಹನಾ ʼಅಯ್ಯೋ ಆಕಾಶ್‌ ಅವ್ರೆ, ನಾನು ನೀವು ಮೊದಲು ಹೇಳಿದ್ದು ಕೇಳಿ ನಿಮ್‌ ಫ್ರೆಂಡ್‌ ವೈಫ್‌ ತುಂಬಾ ಮುಗ್ಧೆ ಅಂತ ಅಂದ್ಕೊಂಡೆ. ಆದ್ರೆ ಗಂಡಂಗೆ ಸುಳ್ಳು ಹೇಳಿ ಮೋಸ ಮಾಡ್ತಾಳೆ ಅಂದ್ರೆ ಅವಳಿಗೆ ಡಿವೋರ್ಸ್‌ ಕೊಡಬೇಕುʼ ಅಂತಾಳೆ. ಅಲ್ದೆ ಗಂಡಂಗೆ ಮೋಸ ಹೆಂಡ್ತಿನಾ ಮನೇಲಿ ಇಟ್ಕೊಳೋದೇ ತಪ್ಪು, ಅವಳನ್ನ ಮುಲಾಜಿಲ್ದೆ ಮನೆಯಿಂದ ಹೊರ ಹಾಕಬೇಕು. ಅಂತಹವರನ್ನ ಕ್ಷಮಿಸಲೇಬಾರದು ಅಂತಾಳೆ. ಇದರ ಬಗ್ಗೆ ದುಸ್ರಾ ಯೋಚಿಸದ ಆಕಾಶ್‌ ಸಹನಾ ಮಾತನ್ನ ಗಂಭೀರವಾಗಿ ತೆಗೆದುಕೊಳ್ಳುತ್ತಾನೆ. ಅಲ್ಲದೇ ʼಥ್ಯಾಂಕ್‌ ಸಹನಾ ಅವ್ರೆ, ನಿಮ್ಮ ಸಲಹೆಯಿಂದ ನನ್ನ ಫ್ರೆಂಡ್‌ನ ಲೈಫ್‌ ಉಳಿತು, ನಿಮ್ಮ ಸಲಹೆ ನನ್ನ ಫ್ರೆಂಡ್‌ಗೆ ತುಂಬಾ ಇಷ್ಟ ಆಗುತ್ತೆʼ ಅಂತೆಲ್ಲಾ ಹೇಳಿ ದೃಢನಿರ್ಧಾರಕ್ಕೆ ಬಂದಂತೆ ಅಲ್ಲಿಂದ ಹೊರಡುತ್ತಾನೆ.

ಅಡುಗೆ ಮನೆಯಲ್ಲಿ ಗಿರಿಜಾ ಅವಾಂತರ

ಇತ್ತ ಪುಷ್ಪಾ ಮನೆಯಲ್ಲಿ ಅಡುಗೆ ಮಾಡುವ ಗಿರಿಜಾ ತನ್ನ ನಳಪಾಕದ ಮೂಲಕ ಮನೆಯವರೆಲ್ಲರ ಮನ ಗೆಲ್ಲಬೇಕು ಎಂದುಕೊಳ್ಳುತ್ತಾಳೆ. ಆದರೆ ಅವಳು ಮಾಡುವ ಅಡುಗೆ ಬಾಯಿಗೆ ಹಾಕುವಂತಿರುವುದಿಲ್ಲ. ಮನೆಯವರೆಲ್ಲರ ಒಂದು ತುತ್ತು ತಿನ್ನದೇ ಹಾಗೆ ಕೈ ತೊಳೆದು ಹೋದ್ರು ಕೂಡ ಅದನ್ನ ಲೆಕ್ಕಕ್ಕೆ ತೆಗೆದುಕೊಳ್ಳದ ಗಿರಿಜಾ ತನ್ನ ಅಡುಗೆ ಸೂಪರ್‌ ಆಗಿದೆ ಎಂದು ನನಗೆ ತಾನೇ ಅಂದುಕೊಂಡು ಸಂತಸಪಡುತ್ತಾಳೆ.

ಪುಷ್ಪಾಗೆ ಧಮಕಿ ಹಾಕುವ ಗಿರಿಜಾ

ಮಾವನ ಮಾತು ಕೇಳಿ ಗಿರಿಜಾಳ ಬಳಿ ಅಡುಗೆ ಮನೆಗೆ ಯಾಕೆ ಹೋದ್ರಿ ಅತ್ತಿಗೆ ಎಂದು ಕೇಳಲು ಬರುವ ಪುಷ್ಪಾಳನ್ನು ಮತ್ತೆ ಅಣ್ಣನ ಕಾಯಿಲೆ ಬಗ್ಗೆ ಹೇಳಿ ಮಾತು ಮರೆಸುತ್ತಾಳೆ ಗಿರಿಜಾ. ಅಲ್ಲದೇ ನೀನೇ ಸಹಾಯ ಮಾಡ್ಬೇಕು ನಮಗೆ ಅಂತೆಲ್ಲಾ ಗೋಗರಿತಾಳೆ. ನನ್ನ ಬಳಿ ಅಷ್ಟೊಂದು ಹಣವಿಲ್ಲ, ಎಲ್ಲಿಂದ ತರ್ಲಿ ಅಷ್ಟೊಂದು ಹಣ ಎಂದು ಪುಷ್ಪಾ ಕಣ್ಣೀರು ಹಾಕಿದ್ರೆ, ಅದಕ್ಕೆ ಗಿರಿಜಾ ತಿಜೋರಿಯಲ್ಲಿ ಅಷ್ಟೆಲ್ಲಾ ಚಿನ್ನವಿದೆ, ಅದರಲ್ಲಿ ಒಂದು ಐದಾರು ಸರ ಎತ್ತಿಕೊಡು ಯಾರಿಗೂ ತಿಳಿಯೊಲ್ಲ ಅಂತಾಳೆ. ಅದಕ್ಕೆ ಪುಷ್ಪಾ ಅದೆಲ್ಲಾ ನಂದಲ್ಲ, ಈ ಮನೆದು. ನಂಗೆ ಹಾಗೆಲ್ಲಾ ಮಾಡೋಕೆ ಆಗೊಲ್ಲ ಅಂತಾಳೆ. ಅದಕ್ಕೆ ಪುಷ್ಪಾಳ ಮೇಲೆ ರೇಗುವ ಅತ್ತಿಗೆ ʼನಿನ್ನಿಂದಾನೆ ನಿನ್ನ ಅಣ್ಣನಿಗೆ ಹೀಗೆಲ್ಲಾ ಆಗಿದ್ದು, ಈಗ ನೀನು ಹಣ ಕೊಡೊಲ್ಲ ಅಂತ ಹೇಳ್ತೀಯಾ, ನಿಂಗೆ ಅಣ್ಣನ ಪ್ರಾಣಕ್ಕಿಂತ ಈ ಮನೆಯವರ ನಂಬಿಕೆ ಮುಖ್ಯನಾ?ʼ ಅಂತೆಲ್ಲಾ ದಬಾಯಿಸಿ ಕೇಳಿ ಪುಷ್ಪಾ ಕಣ್ಣೀರು ಸುರಿಯುವಂತೆ ಮಾಡುತ್ತಾಳೆ.

ಇತ್ತ ಆಕಾಶ್‌ ಪುಷ್ಪಾಳನ್ನು ಮನೆಯಿಂದ ಹೊರ ಹಾಕುವ ಯೋಚನೆ ಮಾಡ್ತಿದ್ರೆ, ಇತ್ತ ಗಿರಿಜಾ ಪುಷ್ಪಾಳಿಂದ ಹಣ ಪಡದೇ ತೀರುತ್ತೇನೆ ಎಂಬ ಹಣಕ್ಕೆ ಬಿದ್ದಿದ್ದಾಳೆ. ಮುಂದೇನು ಪುಷ್ಪಾಳ ಗತಿ?