ಕನ್ನಡ ಸುದ್ದಿ  /  Entertainment  /  Television News Colors Kannada Brindavana Kannada Serial Today Episode 101 Feb 21 Aakash Finally Tricks Girija Rst

ಬೃಂದಾವನ ಸೀರಿಯಲ್‌: ಅಣ್ಣನಿಗಾಗಿ ದೇವರ ಮೊರೆ ಹೋದ ಪುಷ್ಪಾ; ಆಕಾಶ್‌ ಬಳಿ ಸುಳ್ಳಿನ ಮೇಲೆ ಸುಳ್ಳು ಹೇಳ್ತಿದಾಳೆ ಗಿರಿಜಾ

Brindavana Kannada Serial Today Episode Feb 21: ʼಬೃಂದಾವನʼ ಧಾರಾವಾಹಿಯ ಬುಧವಾರದ ಎಪಿಸೋಡ್‌ನಲ್ಲಿ ಇತ್ತ ಅಣ್ಣನಿಗಾಗಿ ಪುಷ್ಪಾ ದೇವರ ಮೊರೆ ಹೋದ್ರೆ, ಅತ್ತ ಆಕಾಶ್‌ ಕೈಯಿಂದ ತಪ್ಪಿಸಿಕೊಳ್ಳಲು ಗಿರಿಜಾ ಸುಳ್ಳಿನ ಕಂತೆ ಸೃಷ್ಟಿಸಿದ್ದಾಳೆ. ಸುಧಾಮೂರ್ತಿಗಳ ಮನೆಯಲ್ಲಿ ಸಂಭ್ರಮದಿಂದ ನಡೆಯುತ್ತಿದೆ ರತ್ನಾಳ ಹುಟ್ಟುಹಬ್ಬ.

ಬೃಂದಾವನ ಸೀರಿಯಲ್‌: ಅಣ್ಣನಿಗಾಗಿ ದೇವರ ಮೊರೆ ಹೋದ ಪುಷ್ಪಾ; ಆಕಾಶ್‌ ಬಳಿ ಸುಳ್ಳಿನ ಮೇಲೆ ಸುಳ್ಳು ಹೇಳ್ತಿದಾಳೆ ಗಿರಿಜಾ
ಬೃಂದಾವನ ಸೀರಿಯಲ್‌: ಅಣ್ಣನಿಗಾಗಿ ದೇವರ ಮೊರೆ ಹೋದ ಪುಷ್ಪಾ; ಆಕಾಶ್‌ ಬಳಿ ಸುಳ್ಳಿನ ಮೇಲೆ ಸುಳ್ಳು ಹೇಳ್ತಿದಾಳೆ ಗಿರಿಜಾ

ಬೃಂದಾವನ ಧಾರಾವಾಹಿಯ ನಿನ್ನೆಯ (ಫೆ.21) ಸಂಚಿಕೆಯಲ್ಲಿ ಕಾಲೇಜಿನಿಂದ ಮರಳುವ ಆಕಾಶ್‌ ದಾರಿಯುದ್ದಕ್ಕೂ ಸಹನಾ ಹೇಳಿದ ಮಾತುಗಳ ಬಗ್ಗೆಯೇ ಆಲೋಚಿಸುತ್ತಾನೆ. ಇತ್ತ ಅಣ್ಣನ ಅನಾರೋಗ್ಯದ ಬಗ್ಗೆ ಕೇಳಿದ ಪುಷ್ಪಾ ತನ್ನ ಅಸಹಾಯಕತೆಯನ್ನ ದೇವರ ಮುಂದೆ ತೋಡಿಕೊಳ್ಳುತ್ತಾಳೆ. ʼನನಗೆ ಅಣ್ಣನೇ ಸರ್ವಸ್ವ, ಅಪ್ಪ-ಅಮ್ಮ ಇಲ್ಲದ ನನಗೆ ಅಣ್ಣನೇ ಎಲ್ಲವೂ ಆಗಿದ್ದ, ಈಗ ನನ್ನ ಅಣ್ಣನನ್ನು ಉಳಿಸಿಕೊಳ್ಳಲು ನನ್ನಿಂದ ಸಹಾಯ ಮಾಡಲು ಆಗುತ್ತಿಲ್ಲ. ನನ್ನ ಆಯಸ್ಸು ಅಣ್ಣನಿಗೆ ನೀಡಿ ಅವನನ್ನು ಉಳಿಸು ಎಂದು ದೇವರಲ್ಲಿ ಬೇಡಿಕೊಳ್ಳುತ್ತಾ ಕಣ್ಣೀರು ಸುರಿಸುತ್ತಾಳೆ ಪುಷ್ಪಾ.

ಆಕಾಶ್‌ ಮನೆಯಲ್ಲಿ ರತ್ನಾಳ ಹುಟ್ಟುಹಬ್ಬದ ಸಂಭ್ರಮ

ಕಾಲೇಜಿನಿಂದ ಮನೆಗೆ ಬಂದ ಆಕಾಶ್‌ಗೆ ಹಾಲ್‌ನಲ್ಲಿ ರತ್ನಾ ಒಬ್ಬಳೇ ಅಳುತ್ತಾ ಕೂತಿರುವುದು ಕಾಣುತ್ತದೆ. ಕಾರಣ ಕೇಳಿದಾಗ ಇವತ್ತು ಅವಳ ಬರ್ತ್‌ಡೇ ಎಂಬುದು ಅರಿವಾಗುತ್ತದೆ. ಆದರೆ 36 ಜನರಿರುವ ಮನೆಯಲ್ಲಿ ಯಾರಿಗೂ ಅವಳ ಬರ್ತ್‌ಡೇ ನೆನಪಿರುವುದಿಲ್ಲ. ಆದ್ರೆ ಆಕಾಶ್‌ ರತ್ನಾಳ ಖುಷಿಗಾಗಿ ಸುಳ್ಳು ಹೇಳುತ್ತಾನೆ, ನಿಂಗೆ ಸರ್ಪ್ರೈಸ್‌ ನೀಡಬೇಕು ಅಂತ ಯಾರೂ ವಿಶ್‌ ಮಾಡಿಲ್ಲ, ಸಂಜೆ ನಿನ್ನ ಬರ್ತ್‌ಡೇ ಪಾರ್ಟಿ ಇದೆ ಎಂದು ಹೇಳುತ್ತಾನೆ. ಅಲ್ಲದೇ ಸಂಜೆ ಹೊತ್ತಿಗೆ ಪಾರ್ಟಿಗೆ ಎಲ್ಲ ಆರೆಂಜ್‌ ಮಾಡುತ್ತಾನೆ.

ಮನೆಯಲ್ಲಿ ಹುಟ್ಟುಹಬ್ಬದ ಸಂಭ್ರಮ ಜೋರಾಗಿದ್ದರೂ ಆಕಾಶ್‌ ಮಾತ್ರ ಗಿರಿಜಾ ಮೇಲೆ ಕಣ್ಣಿಟ್ಟಿರುತ್ತಾನೆ. ಅಲ್ಲದೇ ಹೇಗಾದ್ರೂ ಇಂದು ಗಿರಿಜಾಳಿಂದ 2 ಕೋಟಿ ವಿಚಾರ ಬಾಯಿ ಬಿಡಿಸಬೇಕು ಎಂದು ಮನಸ್ಸಿನಲ್ಲೇ ಪಣ ತೊಡುತ್ತಾನೆ. ಇದಕ್ಕಾಗಿ ಗಿರಿಜಾಳನ್ನು ಪ್ರತ್ಯೇಕವಾಗಿ ಕರೆದು ಮಾತನಾಡುತ್ತಾನೆ. ಎರಡೂ ಕೋಟಿ ತಗೊಂಡಿದ್ದು, ನಿಜಾನಾ ಸುಳ್ಳಾ ಎಂದು ದಬಾಯಿಸಿ ಕೇಳುತ್ತಾನೆ. ಆದರೆ ಗಿರಿಜಾ ಯಾವುದೇ ಕಾರಣಕ್ಕೂ ಈ ವಿಚಾರ ನಂಗೆ ಗೊತ್ತಿಲ್ಲ ಅಂತ ವಾದ ಮಾಡ್ತಾಳೆ.

ಪುಷ್ಪಾ ಮೇಲೆ ಅಪವಾದ ಹೊರಿಸುವ ಗಿರಿಜಾ

ಗಿರಿಜಾ ಎಷ್ಟೇ ನಾಟಕ ಮಾಡಿದ್ರೂ ಬಿಡದ ಆಕಾಶ್‌ ಎರಡು ಕೋಟಿ ತಗೊಂಡಿದ್ದು ಸತ್ಯನಾ, ಸುಳ್ಳಾ ಅಂತ ಹೇಳೋವರೆಗೂ ನಾನು ನಿಮ್ಮನ್ನು ಬಿಡುವುದಿಲ್ಲ ಅಂತಾನೇ. ಅಲ್ಲದೇ ನೀವು ಈಗ ಸತ್ಯ ಹೇಳದೇ ಇದ್ದರೆ ಮನೆಯವರ ಮುಂದೆ ನಾನು ಈ ವಿಚಾರ ಕೇಳಬೇಕಾಗುತ್ತೆ ಎಂದು ಹೆದರಿಸ್ತಾನೆ. ಆಗ ಗಾಬರಿಗೊಳ್ಳುವ ಗಿರಿಜಾ 2 ಕೋಟಿ ತಗೊಂಡಿದ್ದು ಸತ್ಯ ಆದ್ರೆ ನಾನಲ್ಲ ಅಂತ ಮತ್ತೊಂದು ಸುಳ್ಳು ಹೇಳ್ತಾಳೆ. ದುಡ್ಡು ತಗೊಂಡಿದ್ದು ಪುಷ್ಪಾ ಹಾಗೂ ಅವರ ಅಣ್ಣ, ಇಬ್ಬರೂ ಸೇರಿ ಒಂದೊಂದು ಕೋಟಿ ಹಂಚಿಕೊಂಡಿದ್ದಾರೆ. ನನಗೂ ಈ ದುಡ್ಡಿಗೂ ಸಂಬಂಧ ಇಲ್ಲ. ಪುಷ್ಪಾ ಮುಗ್ಧೆಯಲ್ಲ, ಅವಳು ಮುಗ್ಧೆಯಂತೆ ಮನೆಯವರ ಮುಂದೆ ನಾಟಕ ಮಾಡ್ತಾ ಇದಾಳೆ ಅಂತ ಆಕಾಶ್‌ ಮನಸ್ಸಿನಲ್ಲಿ ಇನ್ನಷ್ಟು ವಿಷ ಬೀಜ ಬಿತ್ತುತ್ತಾಳೆ. ಗಿರಿಜಾ ಹೇಳಿದ ಮಾತನ್ನ ಆಕಾಶ್‌ ನಂಬ್ತಾನಾ, ಸಹನಾ ಮಾತಿನಂತೆ ಪುಷ್ಪಾಳನ್ನ ಮನೆಯಿಂದ ಹೊರ ಹಾಕ್ತಾನಾ, ಆಕಾಶ್‌ ಮುಂದಿನ ನಡೆಯೇನು? ಕಾದು ನೋಡಬೇಕಿದೆ.

IPL_Entry_Point