ಕನ್ನಡ ಸುದ್ದಿ  /  Entertainment  /  Television News Colors Kannada Brindavana Kannada Serial Today Episode 102 Feb 22 Pushpa Caught Offguard Rst

ಬೃಂದಾವನ ಸೀರಿಯಲ್‌: ಗಿರಿಜಾ ಮೋಸದಾಟಕ್ಕೆ ಪುಷ್ಪಾ ಬಲಿ; ಆಕಾಶ್‌ ಮುಂದಿನ ನಡೆಯೇನು?

Brindavana Kannada Serial Today Episode Feb 22: ʼಬೃಂದಾವನʼ ಧಾರಾವಾಹಿಯ ಗುರುವಾರದ ಎಪಿಸೋಡ್‌ನಲ್ಲಿ ಗಿರಿಜಾಳ ಸುಳ್ಳನ್ನೇ ಸತ್ಯವೆಂದು ನಂಬಿದ ಆಕಾಶ್‌ ಪುಷ್ಪಾಳೊಂದಿಗೆ ಜೀವನವನ್ನು ಅಂತ್ಯಗೊಳಿಸುವ ನಿರ್ಧಾರಕ್ಕೆ ಬರುತ್ತಾನೆ. ಇತ್ತ ಗಿರಿಜಾ ಪುಷ್ಪಾಳ ಮುಂದೆ ನಾಟಕ ಮಾಡುವುದು ನಿಲ್ಲಿಸುತ್ತಿಲ್ಲ.

ಬೃಂದಾವನ ಸೀರಿಯಲ್‌: ಗಿರಿಜಾ ಮೋಸದಾಟಕ್ಕೆ ಪುಷ್ಪಾ ಬಲಿ; ಆಕಾಶ್‌ ಮುಂದಿನ ನಡೆಯೇನು?
ಬೃಂದಾವನ ಸೀರಿಯಲ್‌: ಗಿರಿಜಾ ಮೋಸದಾಟಕ್ಕೆ ಪುಷ್ಪಾ ಬಲಿ; ಆಕಾಶ್‌ ಮುಂದಿನ ನಡೆಯೇನು?

ಬೃಂದಾವನ ಧಾರಾವಾಹಿಯ ನಿನ್ನೆಯ (ಫೆ.22) ಸಂಚಿಕೆಯಲ್ಲಿ ಮದುವೆ ಸಮಯದಲ್ಲಿ ಪುಷ್ಪಾ ಹಾಗೂ ಅವರ ಅಣ್ಣ 2 ಕೋಟಿ ಪಡೆದಿದ್ದಾರೆ ಎಂಬ ಗಿರಿಜಾ ಹೇಳಿದ ಸುಳ್ಳನ್ನೇ ಆಕಾಶ್‌ ಬಲವಾಗಿ ನಂಬುತ್ತಾನೆ. ಅಲ್ಲದೇ ಡಾನ್ಸ್‌ ಮಾಡುವ ನೆಪದಲ್ಲಿ ಪುಷ್ಪಾಳ ಬಳಿ ಬರುವ ಆಕಾಶ್‌ ಅವಳಿಗೆ ಇಲ್ಲ ಸಲ್ಲದ ಪ್ರಶ್ನೆಗಳನ್ನು ಕೇಳುತ್ತಾನೆ. ಆ ಹೊತ್ತಿಗೆ ಇನ್ನೇನು ತನ್ನ ಬಂಡವಾಳ ಬಯಲಾಗಬಹುದು ಎಂಬ ಭಯದಲ್ಲಿ ಗಿರಿಜಾ ಕೇಬಲ್‌ ವೈರ್‌ ಎಳೆದು ರತ್ನಾಳನ್ನು ಬೀಳಿಸುತ್ತಾಳೆ. ಇದರಿಂದ ಆಕಾಶ್‌ ಸೇರಿದಂತೆ ಮನೆಯವರ ಗಮನವೆಲ್ಲಾ ರತ್ನಾಳ ಕಡೆಗೆ ತಿರುಗುತ್ತದೆ.

ನಿಲ್ಲುತ್ತಿಲ್ಲ ಗಿರಿಜಾಳ ನಾಟಕ, ಕರಗೇಬಿಟ್ಲಾ ಪುಷ್ಪಾ

ಪುಷ್ಪಾಳಿಂದ ಹೇಗಾದ್ರೂ ಹಣ ತೆಗೆದುಕೊಂಡೇ ಹೋಗಬೇಕು ಎಂದು ಕಾಯುತ್ತಿರುವ ಗಿರಿಜಾ ಪುಷ್ಪಾ ಅಡುಗೆ ಮನೆಯಲ್ಲಿ ಇರುವಾಗ ಅಲ್ಲಿಗೆ ಬಂದು ಕಣ್ಣೀರು ಹಾಕುತ್ತಾಳೆ. ಅಲ್ಲದೇ ಡಾಕ್ಟರ್‌ ಫೋನ್‌ ಮಾಡಿದ್ರು ನಿಮ್ಮ ಅಣ್ಣನಿಗೆ ಅರ್ಜೆಂಟ್‌ ಆಗಿ ಆಪರೇಷನ್‌ ಮಾಡಲೇಬೇಕು ಅಂದಿದಾರೆ, ನೀನೇ ಏನಾದ್ರೂ ಮಾಡ್ಬೇಕು, ಇಲ್ಲದಿದ್ದರೆ ನಿನ್ನ ಅಣ್ಣನ ಜೀವ ಉಳಿಯುವುದಿಲ್ಲ ಎಂದು ಮೊಸಳೆ ಕಣ್ಣೀರು ಸುರಿಸುತ್ತಾಳೆ.

ಅದಕ್ಕೆ ಅಸಹಾಯಕಳಾಗುವ ಪುಷ್ಪಾ ʼಅತ್ತಿಗೆ ನನ್ನ ಪರಿಸ್ಥಿತಿಯನ್ನೂ ಅರ್ಥ ಮಾಡಿಕೊಳ್ಳಿ, ಈ ಮನೆಯಲ್ಲಿ ಇರುವುದು ಯಾವುದೂ ನನ್ನದಲ್ಲ. ಯಾಕೆ ಯಾರೂ ನನ್ನ ಪರಿಸ್ಥಿತಿ ಅರ್ಥ ಮಾಡಿಕೊಳ್ತಾ ಇಲ್ಲ, ನನ್ನ ಹಣೆಬರಹವೇ ಸರಿಯಿಲ್ಲʼ ಎಂದು ಬೇಸರದಲ್ಲಿ ಕಣ್ಣೀರು ಹಾಕುತ್ತಾಳೆ. ಆಗ ಮತ್ತಷ್ಟು ನಾಟಕ ಮಾಡುವ ಗಿರಿಜಾ ʼಪುಷ್ಪಾ ನಿನ್ನ ಅಣ್ಣಾ ಸತ್‌ ಹೋದ್ರೆ ನಾನಂತೂ ಇರೋದಿಲ್ಲ. ನಾನು ನೇಣು ಹಾಕಿಕೊಂಡು ಸತ್‌ ಹೋಗ್ತೀನಿʼ ಎಂದು ಹೆದರಿಸುತ್ತಾಳೆ. ಅದಕ್ಕೆ ಹೆದರುವ ಪುಷ್ಪಾ ಅತ್ತಿಗೆ ನೀವು ರೂಮಿಗೆ ಹೋಗಿರಿ, ನಾನು ಬರ್ತಿನಿ, ಏನಾದ್ರೂ ಯೋಚ್ನೆ ಮಾಡೋಣʼ ಅಂತಾಳೆ.

ಸಹನಾ ಬಳಿ ಮತ್ತೆ ಸಲಹೆ ಕೇಳುವ ಆಕಾಶ್‌

ಕಾಲೇಜಿನಲ್ಲಿ ಸಹನಾ ಜೊತೆ ಮಾತನಾಡುತ್ತಾ ಆಕಾಶ್‌ ನನ್ನ ಫ್ರೆಂಡ್‌ಗೆ ಅವಳ ಹೆಂಡತಿ ಮಾಡಿದ್ದು ಮೋಸ ಅಂತ ಗೊತ್ತಾಯ್ತು ಅಂತಾನೆ. ಅಲ್ಲದೆ ಗಂಡನಿಗೆ ಮೋಸ ಮಾಡುವ ಹೆಂಡತಿ ತಕ್ಕ ಪಾಠ ಕಲಿಸಬೇಕು ಅಲ್ವಾ? ಅದಕ್ಕೆ ನನ್‌ ಫ್ರೆಂಡ್‌ ಏನ್‌ ಮಾಡ್ಬೇಕು, ಹೆಂಡತಿಗೆ ಏನು ಶಿಕ್ಷೆ ಕೊಡಬೇಕು ನೀವೇ ಹೇಳಿ ಎಂದು ಸಲಹೆ ಕೇಳ್ತಾನೆ.

ಸಹನಾ ಆಕಾಶ್‌ಗೆ ಏನ್‌ ಸಲಹೆ ಕೊಡಬಹುದು, ಪುಷ್ಪಾ ಅತ್ತಿಗೆಗೆ ಚಿನ್ನ ಕದ್ದು ಕೊಡ್ತಾಳಾ, ಆಕಾಶ್‌ ಮುಂದಿನ ನಡೆಯೇನು, ಪುಷ್ಪಾಳಿಗೆ ಆಕಾಶ್‌ ಏನು ಶಿಕ್ಷೆ ಕೊಡಬಹುದು, ಆಕಾಶ್‌ಗೆ ಸತ್ಯ ತಿಳಿಯೋದು ಯಾವಾಗ.. ಮುಂದಿನ ಸಂಚಿಕೆಯಲ್ಲಿ ನಿರೀಕ್ಷಿಸಿ.

IPL_Entry_Point