ಬೃಂದಾವನ ಸೀರಿಯಲ್: ಪುಷ್ಪಾಳಿಗೆ ಗಿರಿಜಾಳ ಎಮೋಷನಲ್ ಬ್ಲಾಕ್‌ಮೇಲ್; ಹೆಂಡತಿಯ ಮೇಲೆ ಆಕಾಶ್‌ಗಿಲ್ಲ ನಂಬಿಕೆ
Brindavana Kannada Serial Today Episode Feb 23: ʼಬೃಂದಾವನʼ ಧಾರಾವಾಹಿಯ ಶುಕ್ರವಾರದ ಎಪಿಸೋಡ್‌ನಲ್ಲಿ ಪುಷ್ಪಾಳಿಗೆ ಎಮೋಷನಲ್ ಬ್ಲ್ಯಾಕ್‌ಮೇಲ್ ಮಾಡುವ ಗಿರಿಜಾ ತವರುಮನೆಯ ಒಡವೆಗಳನ್ನು ಬಿಚ್ಚಿ ಕೊಡುವಂತೆ ಮಾಡುತ್ತಾಳೆ. ಇದನ್ನು ಕದ್ದು ನೋಡುವ ಆಕಾಶ್ ಪುಷ್ಪಾಳ ಮೇಲೆ ಇನ್ನಷ್ಟು ನಂಬಿಕೆ ಕಳೆದುಕೊಳ್ಳುತ್ತಾನೆ.
ಬೃಂದಾವನ ಧಾರಾವಾಹಿಯ ನಿನ್ನೆಯ (ಫೆ.23) ಸಂಚಿಕೆಯಲ್ಲಿ ಗಿರಿಜಾ ಪುಷ್ಪಾಳಿಗೆ ಅಣ್ಣ ಹೆಸರು ಹೇಳಿ ಎಮೋಷನಲ್ ಬ್ಲ್ಯಾಕ್‌ಮೇಲ್ ಮಾಡಲು ಪ್ರಯತ್ನಿಸುತ್ತಾಳೆ. ಹೇಗಾದ್ರೂ ಮನೆಯಲ್ಲಿ ಇರುವ ದುಡ್ಡು, ಚಿನ್ನ ಕೊಡಲಿ ಎಂದು ಪದೇ ಪದೇ ʼನಿನ್ನ ಅಣ್ಣ ಜೀವ ನಿನ್ನ ಕೈಯಲ್ಲಿದೆ. ನೀವು ಹೇಗಾದರೂ ಅಣ್ಣ ಹೊಂದಿಸುʼ ಎಂದು ಪೀಡಿಸುತ್ತಾಳೆ. ಅಸಹಾಯಕಳಾದ ಪುಷ್ಪಾಳಿಗೆ ಅಳುವುದು ಬಿಟ್ಟರೆ ಬೇರೆ ದಾರಿ ಇರುವುದಿಲ್ಲ. ಪುಷ್ಪಾ ತನ್ನ ದಾರಿಗೆ ಬರುವುದಿಲ್ಲ ಎಂಬುದನ್ನು ಅರಿತ ಗಿರಿಜಾ ʼಅಣ್ಣ ಜೀವಕ್ಕಿಂತ ನಿಂಗೆ ಈ ಮನೆಯವರು ನಿನ್ನ ಮೇಲೆ ಇಟ್ಟ ನಂಬಿಕೆಯೇ ಹೆಚ್ಚಾಯ್ತಾ?ʼ ಎಂದೆಲ್ಲಾ ಪ್ರಶ್ನಿಸಿ ಇನ್ನಷ್ಟು ಕೆರಳಿಸುತ್ತಾಳೆ. ಆದರೆ ದೃಢನಿರ್ಧಾರ ತಳೆವ ಪುಷ್ಪಾ ʼನನ್ನ ಜೀವ ಬೇಕಾದ್ರೂ ಕೊಡ್ತೀನಿ ಆದ್ರೆ ಈ ಮನೆಯವರು ನನ್ನ ಮೇಲಿಟ್ಟ ನಂಬಿಕೆಗೆ ದ್ರೋಹ ಮಾಡುವುದಿಲ್ಲʼ ಎಂದು ಕಡ್ಡಿ ಮುರಿದಂತೆ ಹೇಳುತ್ತಾಳೆ. ಆಗ ಗಿರಿಜಾ ಪುಷ್ಪಾಳ ಬಳಿ ʼಸರಿ ಈಗ ದುಡ್ಡಿಗೆ ಏನ್ ಮಾಡ್ತೀಯಾʼ ಎಂದು ಪ್ರಶ್ನಿಸುತ್ತಾಳೆ.
ಆಗ ಪುಷ್ಪಾ ತನ್ನ ಮೈಮೇಲಿರುವ ಒಡವೆಯನ್ನು ಬಿಚ್ಚಿ ನೀಡುತ್ತಾಳೆ ಮಾತ್ರವಲ್ಲ, ಅತ್ತಿಗೆ ಇದು ನಮ್ಮ ಅಮ್ಮನ ಒಡವೆ, ಅಣ್ಣ ಮದುವೆ ಸಮಯದಲ್ಲಿ ಉಡುಗೊರೆ ರೂಪದಲ್ಲಿ ಇದನ್ನ ನನಗೆ ನೀಡಿದ್ದಾ, ಇದು ನನ್ ಜೊತೆ ಇದ್ರೆ ಅಮ್ಮನೇ ಜೊತೆ ಇದ್ದಾಳೆ ಅನ್ಸುತ್ತೆ. ಅದಕ್ಕೆ ನಾನು ಸಾಯೋವೆರೆಗೂ ಇದನ್ನು ಜೋಪಾನ ಮಾಡಿ ಇಟ್ಕೋಬೇಕು ಅಂತಿದ್ದೆ, ಆದ್ರೆ ಈಗ ಅಣ್ಣನ ಜೀವ ನಂಗೆ ಮುಖ್ಯ ಆಗಿದೆʼ ಇದನ್ನು ತಗೊಂಡ್ ಹೋಗಿ ಅಣ್ಣನ ಜೀವ ಉಳಿಸಿ ಅಂತಾಳೆ. ಆದರೆ ದುರಾಸೆಯ ಗಿರಿಜಾ ಅದು ಸಾಲುವುದಿಲ್ಲ ಎನ್ನುತ್ತಾಳೆ. ಆದರೆ ಪುಷ್ಪಾ ತನ್ನ ಬಳಿ ಇರುವುದೇ ಇಷ್ಟ, ಇದು ಬಿಟ್ಟು ಬೇರೆ ಇಲ್ಲ ಎಂದು ಕಡ್ಡಿ ಮುರಿದಂತೆ ಹೇಳುತ್ತಾಳೆ. ಚಿನ್ನವನ್ನೆಲ್ಲಾ ಅತ್ತಿಗೆಯ ಕೈಗಿಟ್ಟು ಇದನ್ನು ನಾನ್ ಕೊಟ್ಟೆ ಯಾರಿಗೂ ಹೇಳ್ಬೇಡಿ ಎಂದು ಹೇಳುವ ಹೊತ್ತಿಗೆ ಆಕಾಶ್ ಅದನ್ನ ನೋಡ್ತಾನೆ. ಇದರಿಂದ ಅವನಿಗೆ ಪುಷ್ಪಾಳ ಮೇಲೆ ಇನ್ನಷ್ಟು ನಂಬಿಕೆ ಹೋಗುತ್ತದೆ. ಕಣ್ಣಾರೆ ಕಂಡರೂ ಪರಾಂಬರಿಸಿ ನೋಡದ ಆಕಾಶ್ ಪುಷ್ಪಾಳನ್ನು ಮೇಲೆ ಇನ್ನಷ್ಟು ಅನುಮಾನ ಪಡುತ್ತಾನೆ.
ಸಹನಾ ಬುದ್ಧಿವಾದ
ಮೊದಲು ಹೆಂಡತಿ ಮೋಸ ಮಾಡಿದ್ರೆ ಶಿಕ್ಷೆ ಕೊಡಬೇಕು ಎನ್ನುವ ಸಹನಾ ಬಳಿ ಆಕಾಶ್ ಏನು ಶಿಕ್ಷೆ ಕೊಡಬೇಕು ಹೇಳಿ ಎನ್ನುತ್ತಾನೆ. ಆಗ ಯೋಚಿಸುವ ಸಹನಾ ಶಿಕ್ಷೆ ಕೊಡಬೇಕು ಅಂದ್ರೆ ಮೊದಲು ಅವಳು ಮೋಸಗಾತಿ ಹೌದೋ ಅಲ್ವೋ ಅನ್ನೋದು ಸಾಬೀತಾಗಬೇಕು. ಕೆಲವೊಮ್ಮೆ ಕಣ್ಣಾರೆ ಕಂಡಿದ್ದೂ ಸತ್ಯ ಇರೋದಿಲ್ಲ, ಇನ್ನು ಯಾರದ್ದೋ ಮಾತು ಕೇಳಿ ಆಕೆಗೆ ಶಿಕ್ಷೆ ನೀಡಿದ್ರೆ ತಪ್ಪಾಗುತ್ತೆ, ಒಂದು ವೇಳೆ ಆಕೆ ಮುಗ್ಧೆ ಆಗಿದ್ರೆ ಅವರ ಮೇಲೆ ಅಪಾದನೆ ಹೊರಿಸೋದು ಸರಿಯಲ್ಲ ಎಂದು ಪುಷ್ಪಾಳ ಪರವಾಗಿ ಮಾತನಾಡುತ್ತಾಳೆ. ಇದರಿಂದ ಆಕಾಶ್ ಇನ್ನಷ್ಟು ಗೊಂದಲಕ್ಕೆ ಒಳಗಾಗುತ್ತಾನೆ.
ಇದೇ ಗೊಂದಲದಲ್ಲಿ ಮನೆಗೆ ಬರುವ ಆಕಾಶ್ ಪುಷ್ಪಾ ತನ್ನ ಅತ್ತಿಗೆಗೆ ಚಿನ್ನ ಕೊಡುವುದನ್ನು ನೋಡುತ್ತಾನೆ, ಅಲ್ಲದೇ ಆಕೆ ಮೇಲೆ ಇನ್ನಷ್ಟು ನಂಬಿಕೆ ಕಳೆದುಕೊಳ್ಳುತ್ತಾನೆ. ಕೊನೆಗೆ ಪುಷ್ಪಾಳ ನಾಟಕವನ್ನು ಮನೆಯವರ ಮುಂದೆ ಬಯಲು ಮಾಡಬೇಕು ಎಂದು ಪಣ ತೊಡುತ್ತಾನೆ. ಹಾಗಾದ್ರೆ ಪುಷ್ಪಾ ನಿರಾಪರಾಧಿ ಎಂದು ಸಾಬೀತಾಗುವುದು ಯಾವಾಗ, ಗಿರಿಜಾಳ ಮೋಸ ಬಯಲಾಗುವ ದಾರಿಯ ಯಾವುದು ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ವೀಕ್ಷಿಸಿ.
ವಿಭಾಗ