ಕನ್ನಡ ಸುದ್ದಿ  /  Entertainment  /  Television News Colors Kannada Brindavana Kannada Serial Today Episode 104 Feb 26 Aakash Takes Girija To Police Station

Brundavana Serial: ಗಿರಿಜಾಳನ್ನು ಪೊಲೀಸ್‌ ಸ್ಟೇಷನ್‌ ಮುಂದೆ ತಂದು ನಿಲ್ಲಿಸಿದ ಆಕಾಶ್‌; ಇನ್ನಾದ್ರೂ ಸತ್ಯ ಹೊರ ಬರುತ್ತಾ?

Brindavana Kannada Serial Today Episode Feb 26: ʼಬೃಂದಾವನʼ ಧಾರಾವಾಹಿಯ ಸೋಮವಾರದ ಎಪಿಸೋಡ್‌ನಲ್ಲಿ ತಂಗಿಯೇ ಸರ್ವಸ್ವ ಎನ್ನುವ ಅಪ್ಪಣ್ಣ ಒಂದು ಕಡೆಯಾದ್ರೆ, ಪುಷ್ಪಾಳಿಂದ ಹಣ ಕೀಳಲು ಲಲಿತಾ ಜೊತೆ ಸೇರಿ ಮಸಲತ್ತು ಮಾಡುತ್ತಿದ್ದಾಳೆ ಗಿರಿಜಾ. ಆಕೆಯ ನಾಟಕ ಬಯಲಿಗೆಳೆಯಲು ಪೊಲೀಸ್‌ ಸ್ಟೇಷನ್‌ಗೆ ಕರೆ ತಂದ ಆಕಾಶ್‌.

ಗಿರಿಜಾಳನ್ನು ಪೊಲೀಸ್‌ ಸ್ಟೇಷನ್‌ ಮುಂದೆ ತಂದು ನಿಲ್ಲಿಸಿದ ಆಕಾಶ್‌; ಇನ್ನಾದ್ರೂ ಸತ್ಯ ಹೊರ ಬರುತ್ತಾ?
ಗಿರಿಜಾಳನ್ನು ಪೊಲೀಸ್‌ ಸ್ಟೇಷನ್‌ ಮುಂದೆ ತಂದು ನಿಲ್ಲಿಸಿದ ಆಕಾಶ್‌; ಇನ್ನಾದ್ರೂ ಸತ್ಯ ಹೊರ ಬರುತ್ತಾ?

ಬೃಂದಾವನ ಧಾರಾವಾಹಿಯ ನಿನ್ನೆಯ (ಫೆ.26) ಸಂಚಿಕೆಯಲ್ಲಿ ಕಾಲಿಗೆ ಏಟಾಗಿರುವ ಅಕ್ಕನನ್ನು ನೋಡಿಕೊಳ್ಳಲು ನರ್ಸ್‌ಗಳನ್ನು ನೇಮಿಸುವುದಲ್ಲದೇ, ಪುಷ್ಪಾಳಿಗೆ ಪರೋಕ್ಷವಾಗಿ ನಿನ್ನ ಅವಶ್ಯಕತೆ ಇಲ್ಲ ಎಂಬಂತೆ ಮಾತನಾಡುತ್ತಾನೆ. ನಿನ್ನ ಪುಷ್ಪಾ ಅಣ್ಣನ ಧ್ವನಿ ಕೇಳಲು ಮಲ್ಲಿಯ ಸಹಾಯ ಪಡೆದರೆ, ಅತ್ತ ಗಿರಿಜಾ ಲಲಿತಾ ಜೊತೆ ಸೇರಿ ಹಣ ಸುಧಾಮೂರ್ತಿ (ಆಕಾಶ್‌ ಅಜ್ಜಿ) ಅವರ ಮನೆಯಲ್ಲಿರುವ ಹಣ ಚಿನ್ನ ತನ್ನದಾಗಿಸಲು ಕೊಳ್ಳಲು ಪ್ಲಾನ್‌ ಕೇಳುತ್ತಿರುತ್ತಾಳೆ. ಆಗ ಲಲಿತಾ ಗಿರಿಜಾಗೆ ಪುಷ್ಪಾಳಿಗೆ ವಶೀಕರಣ ಮಾಡು, ಆಗ ಅವಳು ನೀನು ಹೇಳಿದ ಹಾಗೆ ಕೇಳಿಕೊಂಡು ಇರುತ್ತಾಳೆ ಎಂದು ಐಡಿಯಾ ನೀಡುತ್ತಿರುತ್ತಾಳೆ. ಆ ಹೊತ್ತಿಗೆ ಅಲ್ಲಿಗೆ ಬರುವ ಆಕಾಶ್‌ ಅವಳನ್ನು ತನ್ನ ಜೊತೆ ಬರುವಂತೆ ಹೇಳುತ್ತಾನೆ. ಎಲ್ಲಿಗೆ ಎನು ಎಂದು ಕೇಳಿದೆ ಹೇಳುವುದಿಲ್ಲ. ಗಿರಿಜಾ ಬರಲು ಒಪ್ಪದೇ ಇದ್ದಾಗ ಬಲವಂತವಾಗಿ ಅವಳನ್ನು ಎಳೆದುಕೊಂಡು ಹೋಗಿ ಕಾರಿನಲ್ಲಿ ಕೂರಿಸುತ್ತಾನೆ. ಕಾರಿನಲ್ಲಿ ಕೂತಾಗಲೂ ಎಲ್ಲಿಗೆ ಎಂದು ಒಂದೇ ಸಮ ಪ್ರಶ್ನಿಸುವ ಗಿರಿಜಾ ಪ್ರಶ್ನೆಗೆ ಆಕಾಶ್‌ ಏನೂ ಉತ್ತರಿಸದೇ ನೇರವಾಗಿ ಪೊಲೀಸ್‌ ಸ್ಟೇಷನ್‌ ಮುಂದೆ ಹೋಗಿ ಕಾರು ನಿಲ್ಲಿಸುತ್ತಾನೆ.

ಅಣ್ಣನ ಧ್ವನಿ ಕೇಳಿ ಕಣ್ಣೀರಾಗುವ ಪುಷ್ಪಾ

ಮಲ್ಲಿಗೆ ಕಾಲ್‌ ಮಾಡುವ ಪುಷ್ಪಾ ಅಣ್ಣನ ಧ್ವನಿ ಕೇಳಬೇಕು, ನೀನು ನಾನು ಕರೆ ಮಾಡಿರುವ ವಿಚಾರ ಅವರಿಗೆ ಹೇಳಬೇಡ, ಸುಮ್ಮನೆ ಮನೆ ಬಳಿ ಹೋಗಿ ಅವರನ್ನು ಮಾತನಾಡಿಸು, ನಾನು ಲೈನ್‌ನಲ್ಲಿ ಇರ್ತೀನಿ ಅಂತ ವಿನಂತಿ ಮಾಡ್ತಾಳೆ. ಪುಷ್ಪಾ ಹೇಳಿದಂತೆ ಅಪ್ಪಣ್ಣನ ಮನೆಗೆ ಹೋಗುವ ಮಲ್ಲಿ ಅಪ್ಪಣ್ಣನ ಬಳಿ ಮಾತನಾಡುತ್ತಾ, ಪುಷ್ಪಾಳ ಬಗ್ಗೆ ಕೇಳುತ್ತಾಳೆ. ನನ್ನ ತಂಗಿ ನನ್ನ ಸರ್ವಸ್ವ, ಅವಳು ಚೆನ್ನಾಗಿದ್ರೆ ನಂಗೆ ಅಷ್ಟೇ ಸಾಕು. ಅಂತಹ ತಂಗಿ ಎಲ್ಲರಿಗೂ ಸಿಗುವುದಿಲ್ಲ. ನನ್ನ ಅದೃಷ್ಟ ನನಗೆ ಅಂತಹ ತಂಗಿ ಸಿಕ್ಕಿದ್ದಾಳೆ ಎಂದು ತಂಗಿಯನ್ನು ಮನಸಾರೆ ಹೊಗಳುತ್ತಾನೆ. ಅಣ್ಣನ ಧ್ವನಿ ಕೇಳಿದ ಪುಷ್ಪಾ ಕಣ್ಣೀರಾಗುತ್ತಾಳೆ. ಸತ್ಯ ಅರಿಯದ ಆಕೆ ನಿಜಕ್ಕೂ ಅಣ್ಣನಿಗೆ ಆರೋಗ್ಯ ಸರಿಯಿಲ್ಲ ಎಂದು ಕೊರಗುತ್ತಾಳೆ.

ಪೊಲೀಸ್‌ ಸ್ಟೇಷನ್‌ ಮುಂದೆ ಸತ್ಯ ಬಾಯಿ ಬಿಡ್ತಾಳಾ ಗಿರಿಜಾ?

ಗಿರಿಜಾಳನ್ನು ನೇರವಾಗಿ ಪೊಲೀಸ್‌ ಸ್ಟೇಷನ್‌ ಮುಂದೆ ತಂದು ನಿಲ್ಲಿಸುವ ಆಕಾಶ್‌ ಸತ್ಯ ಏನು ಹೇಳಿ ಅಂತಾನೆ, ಅದ್ರೆ ಆಗಲೂ ಮುಗ್ಧಳಂತೆ ವರ್ತಿಸುವ ಆಕೆ ನನಗೆ ಏನೂ ಗೊತ್ತಿಲ್ಲ ಎಂಬಂತೆ ನಾಟಕ ಆಡುತ್ತಾಳೆ. ಆಗ ಆಕಾಶ್‌ ಸರಿ ಹಾಗಿದ್ರೆ ಇದನ್ನೇ ಪೊಲೀಸ್‌ ಮುಂದೆ ಹೇಳಿ ಬನ್ನಿ ಸ್ಟೇಷನ್‌ಗೆ ಹೋಗೋಣ ಎಂದು ಹೊರಡಲು ಸಿದ್ಧನಾಗುತ್ತಾನೆ. ಇದರಿಂದ ಗಾಬರಿಗೊಳಗಾಗುತ್ತಾಳೆ ಗಿರಿಜಾ.

ಪೊಲೀಸ್‌ ಸ್ಟೇಷನ್‌ ಮುಂದೆ ಪೊಲೀಸರ ಭಯಕ್ಕಾದ್ರೂ ಸತ್ಯ ಹೇಳ್ತಾಳ ಗಿರಿಜಾ, ಆಕೆ ಸತ್ಯ ಹೇಳಿದ್ರೆ ಪುಷ್ಪಾ ಮೇಲೆ ಆಕಾಶ್‌ಗೆ ನಂಬಿಕೆ ಹುಟ್ಟುತ್ತಾ, ಪುಷ್ಪಾಳಿಗೆ ಅತ್ತಿಗೆ ಮಾಡಿದ್ದು ನಾಟಕ ಅನ್ನೋದು ಅರಿವಾಗುತ್ತಾ ಈ ಎಲ್ಲವನ್ನೂ ತಿಳಿಯಲು ಮುಂದಿನ ಸಂಚಿಕೆಗಳಲ್ಲಿ ವೀಕ್ಷಿಸಿ.

IPL_Entry_Point