ಕನ್ನಡ ಸುದ್ದಿ  /  Entertainment  /  Television News Colors Kannada Brindavana Kannada Serial Today Episode 105 Feb 27 Aakash Takes Girija To Police Station

Brundavana Serial: ಪೊಲೀಸ್‌ ಸ್ಟೇಷನ್‌ನಲ್ಲಿ ಹೊಸ ನಾಟಕ ಶುರುವಿಟ್ಟುಕೊಂಡ ಗಿರಿಜಾ, ಅಪಾಯದಲ್ಲಿ ಸುಧಾಮೂರ್ತಿ ಪ್ರಾಣ

Brindavana Kannada Serial Today Episode Feb 27: ʼಬೃಂದಾವನʼ ಧಾರಾವಾಹಿಯ ಮಂಗಳವಾರದ ಎಪಿಸೋಡ್‌ನಲ್ಲಿ ಮಕ್ಕಳು, ಮನೆ ಮಂದಿಯೊಂದಿಗೆ ಚಿನ್ನಿದಾಂಡು ಆಡಲು ಮೈದಾನಕ್ಕೆ ಹೋದ ಪುಷ್ಪಾ, ಇತ್ತ ಮನೆಯಲ್ಲಿ ಸುಧಾಮೂರ್ತಿ ಇದ್ದಕ್ಕಿದ್ದಂತೆ ಎದೆನೋವು ಕಾಣಿಸುತ್ತದೆ.

ಪೊಲೀಸ್‌ ಸ್ಟೇಷನ್‌ನಲ್ಲಿ ಹೊಸ ನಾಟಕ ಶುರುವಿಟ್ಟುಕೊಂಡ ಗಿರಿಜಾ, ಅಪಾಯದಲ್ಲಿ ಸುಧಾಮೂರ್ತಿ ಪ್ರಾಣ
ಪೊಲೀಸ್‌ ಸ್ಟೇಷನ್‌ನಲ್ಲಿ ಹೊಸ ನಾಟಕ ಶುರುವಿಟ್ಟುಕೊಂಡ ಗಿರಿಜಾ, ಅಪಾಯದಲ್ಲಿ ಸುಧಾಮೂರ್ತಿ ಪ್ರಾಣ

ಬೃಂದಾವನ ಧಾರಾವಾಹಿಯ ನಿನ್ನೆಯ (ಫೆ.27) ಸಂಚಿಕೆಯಲ್ಲಿ ಮಕ್ಕಳಿಗೆ ಹೊಸ ಆಟ ಕಲಿಸುವ ಸಲುವಾಗಿ ಪುಷ್ಪಾ ಮಕ್ಕಳು ಹಾಗೂ ಮನೆಯವರೆನ್ನೆಲ್ಲಾ ಸೇರಿಸಿಕೊಂಡು ಸಮೀಪದ ಮೈದಾನಕ್ಕೆ ಹೋಗುತ್ತಾಳೆ. ಅಲ್ಲಿ ಅವರೆಲ್ಲ ಸೇರಿ ಚಿನ್ನಿದಾಂಡು ಆಡಲು ಆರಂಭಿಸುತ್ತಾರೆ. ಚಿನ್ನಿದಾಂಡು ಆಟ ಆರಂಭಿಸುತ್ತಲೇ ಬಾಲ್ಯಕ್ಕೆ ಜಾರುವ ಪುಷ್ಪಾ ತನ್ನ ಅಣ್ಣನೊಂದಿಗೆ ಕಳೆದ ಕ್ಷಣಗಳನ್ನು ಮೆಲುಕು ಹಾಕುತ್ತಾಳೆ. ಗಂಡಸರು ಒಂದು ತಂಡವಾದ್ರೆ, ಹೆಂಗಸರು ಒಂದು ತಂಡ ಮಾಡಿಕೊಂಡು ಚಿನ್ನಿದಾಂಡು ಆಡಲು ಆರಂಭಿಸುತ್ತಾರೆ.

ಇದ್ದಕ್ಕಿದ್ದಂತೆ ಸುಧಾಮೂರ್ತಿಗೆ ಎದೆನೋವು

ಇತ್ತ ಮನೆಯಲ್ಲಿ ಪುಸ್ತಕ ಓದುತ್ತಾ ಕುಳಿತಿರುವ ಸುಧಾಮೂರ್ತಿ ಅವರಿಗೆ ಇದ್ದಕ್ಕಿದಂತೆ ಎದೆನೋವು ಕಾಣಿಸುತ್ತದೆ. ಆರಂಭದಲ್ಲಿ ಸ್ವಲ್ಪ ನೋವು ಕಾಣಿಸಿಕೊಂಡರೂ, ನಂತರ ನೋವು ಜೋರಾಗುತ್ತದೆ. ಪುಷ್ಪಾಳನ್ನು ಆಸರೆಗಾಗಿ ಕರೆಯುವ ಸುಧಾಮೂರ್ತಿ ಅವಳು ಬಾರದೇ ಇದ್ದಾಗ ನೋವಿನಲ್ಲೇ ಮಾತ್ರೆಗಾಗಿ ತಡಕಾಡುತ್ತಾರೆ. ಆದರೆ ಅವರಿಗೆ ಮಾತ್ರೆಯೂ ಸಿಗುವುದಿಲ್ಲ, ಇತ್ತ ಯಾರನ್ನೇ ಕರೆದರು ಯಾರೂ ಅವರ ಕೋಣೆಯ ಕಡೆಗೆ ಬರುವುದಿಲ್ಲ. ಎದೆನೋವಿನಲ್ಲೇ ಕೋಣೆಯಿಂದ ಹೊರಗೆ ಹೋಗುವ ಸುಧಾಮೂರ್ತಿ ಎಲ್ಲರ ಹೆಸರು ಹಿಡಿದು ಕರೆದರೂ ಯಾರೂ ಬರುವುದಿಲ್ಲ. ಅಷ್ಟೊತ್ತಿಗಾಗಲೇ ಸುಧಾಮೂರ್ತಿ ಅವರಿಗೆ ಎದೆನೋವು ಜೋರಾಗಿರುತ್ತದೆ.

ಪೊಲೀಸ್‌ ಸ್ಟೇಷನ್‌ನಲ್ಲೂ ಸುಳ್ಳು ಹೇಳುವ ಗಿರಿಜಾ

ಇತ್ತ ಗಿರಿಜಾಳಿಂದ ಹೇಗಾದರೂ ಸತ್ಯ ಬಾಯಿ ಬಿಡಿಸಬೇಕು ಎಂದು ನಿರ್ಧಾರ ಮಾಡುವ ಆಕಾಶ್‌ ಆಕೆಯನ್ನು ಪೊಲೀಸ್‌ ಸ್ಟೇಷನ್‌ ಬಳಿಗೆ ಕರೆದ್ಯೊಯ್ದರು ಆಕೆ ಸತ್ಯ ಬಾಯಿ ಬಿಡುವುದಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದೇ ವಾದ ಮಾಡುತ್ತಾಳೆ. ಇದರಿಂದ ಸಿಟ್ಟಿಗೇಳುವ ಆಕಾಶ್‌ ಅವಳನ್ನು ಪೊಲೀಸ್‌ ಸ್ಟೇಷನ್‌ ಒಳಗೆ ಎಳೆದುಕೊಂಡು ಹೋಗುತ್ತಾನೆ. ಆಗ ಸತ್ಯ ಹೇಳುತ್ತೇನೆ ಎನ್ನುವ ಗಿರಿಜಾ ಮತ್ತೆ ಪುಷ್ಪಾಳ ಮೇಲೆ ಆರೋಪ ಮಾಡುತ್ತಾಳೆ. ಒಂದು ಕೋಟಿ ನೀಡಿದ್ದು ಹೇಳಬಾರದು ಎಂದು ನನ್ನ ಬಾಯಿ ಮುಚ್ಚಿಸುವ ಸಲುವಾಗಿ ಚಿನ್ನ ಕೊಟ್ಟಿದ್ದಾಳೆ ಎಂದು ಆಕಾಶ್‌ ಮನಸ್ಸಿನಲ್ಲಿ ಮತ್ತೆ ಪುಷ್ಪಾಳ ಬಗ್ಗೆ ಕೋಪ ಮೂಡುವಂತೆ ಮಾಡುತ್ತಾಳೆ. ಅಲ್ಲದೇ ಚಿನ್ನ ಎಲ್ಲಿದೆ ಎಂದು ತೋರಿಸುತ್ತೇನೆ ಎಂದು ಹೇಳುತ್ತಾಳೆ.

ಗಿರಿಜಾ ಹೇಳಿದ ಮಾತನ್ನೇ ಸತ್ಯ ಎಂದು ಆಕಾಶ್‌ ನಂಬುತ್ತಾನಾ, ಗಿರಿಜಾ ಹೇಳಿದ ಸುಳ್ಳು, ಇತ್ತ ಸುಧಾಮೂರ್ತಿಯ ಪ್ರಾಣಾಪಾಯ ಈ ಎಲ್ಲವೂ ಸೇರಿ ಪುಷ್ಪಾಳ ಬಾಳನ್ನ ನರಕ ಮಾಡುತ್ತಾ? ಸುಧಾಮೂರ್ತಿ ಜೀವಕ್ಕೆ ನಿಜಕ್ಕೂ ಅಪಾಯ ಆಗುತ್ತಾ ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

IPL_Entry_Point