Brundavana Serial: ಎದೆನೋವಿನಿಂದ ನರಳುತ್ತಿರುವ ಸುಧಾಮೂರ್ತಿ, ಅಸಹಾಯಕ ಸ್ಥಿತಿಯಲ್ಲಿರುವ ಪುಷ್ಪಾ ಅಜ್ಜಮ್ಮನ ಪ್ರಾಣ ಉಳಿಸ್ತಾಳಾ?-television news colors kannada brindavana kannada serial today episode 106 feb 28 sudhamurthy falls unconscious rst ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Brundavana Serial: ಎದೆನೋವಿನಿಂದ ನರಳುತ್ತಿರುವ ಸುಧಾಮೂರ್ತಿ, ಅಸಹಾಯಕ ಸ್ಥಿತಿಯಲ್ಲಿರುವ ಪುಷ್ಪಾ ಅಜ್ಜಮ್ಮನ ಪ್ರಾಣ ಉಳಿಸ್ತಾಳಾ?

Brundavana Serial: ಎದೆನೋವಿನಿಂದ ನರಳುತ್ತಿರುವ ಸುಧಾಮೂರ್ತಿ, ಅಸಹಾಯಕ ಸ್ಥಿತಿಯಲ್ಲಿರುವ ಪುಷ್ಪಾ ಅಜ್ಜಮ್ಮನ ಪ್ರಾಣ ಉಳಿಸ್ತಾಳಾ?

Brindavana Kannada Serial Today Episode Feb 28: ʼಬೃಂದಾವನʼ ಧಾರಾವಾಹಿಯ ಬುಧವಾರದ ಎಪಿಸೋಡ್‌ನಲ್ಲಿ ಸುಧಾಮೂರ್ತಿ ಎದೆನೋವಿನಿಂದ ನರಳ್ತಾ ಇದ್ರೆ, ಆಕಾಶ್‌ ಚಿನ್ನ ಮರಳಿ ಕೊಡುವಂತೆ ಗಿರಿಜಾ ಹಿಂದೆ ಬಿದ್ದಿದ್ದಾನೆ. ಇತ್ತ ಸಹನಾಗೆ ಆಕಾಶ್‌ ಮೇಲೆ ಪ್ರೀತಿ ಹುಟ್ಟುತ್ತಿದೆ.

ಎದೆನೋವಿನಿಂದ ನರಳುತ್ತಿರುವ ಸುಧಾಮೂರ್ತಿ, ಅಸಹಾಯಕ ಸ್ಥಿತಿಯಲ್ಲಿರುವ ಪುಷ್ಪಾ ಅಜ್ಜಮ್ಮನ ಪ್ರಾಣ ಉಳಿಸ್ತಾಳಾ?
ಎದೆನೋವಿನಿಂದ ನರಳುತ್ತಿರುವ ಸುಧಾಮೂರ್ತಿ, ಅಸಹಾಯಕ ಸ್ಥಿತಿಯಲ್ಲಿರುವ ಪುಷ್ಪಾ ಅಜ್ಜಮ್ಮನ ಪ್ರಾಣ ಉಳಿಸ್ತಾಳಾ?

ಬೃಂದಾವನ ಧಾರಾವಾಹಿಯ ನಿನ್ನೆಯ (ಫೆ.28) ಸಂಚಿಕೆಯಲ್ಲಿ ಪುಷ್ಪಾ ಹಾಗೂ ಮನೆಯವರು, ಮಕ್ಕಳು ಸೇರಿ ಚಿನ್ನಿದಾಂಡು ಆಡುತ್ತಿರುತ್ತಾರೆ. ಎಲ್ಲರೂ ಸಂತೋಷದಿಂದ ಆಡುತ್ತಿರುವಾಗ ಪುಷ್ಪಾ ಹೊಡೆದ ಚಿನ್ನಿ ನೇರವಾಗಿ ಆಕಾಶ್‌ ಕಾರಿನ ಗ್ಲಾಸ್‌ಗೆ ತಗುಲಿ ಗ್ಲಾಸ್‌ ಒಡೆದು ಹೋಗುತ್ತದೆ. ಕಾರಿನಿಂದ ಇಳಿದು ಕೋಪಗೊಂಡವನಂತೆ ನಾಟಕ ಮಾಡುವ ಆಕಾಶ್‌ ಒಂದು ಕ್ಷಣಕ್ಕೆ ಎಲ್ಲರನ್ನೂ ಹೆದರಿಸುತ್ತಾನೆ. ನಂತರ ನಾನು ತಮಾಷೆ ಮಾಡಿದ್ದು, ನೀವು ಇಷ್ಟೊಂದು ಸಂತೋಷದಿಂದ ಆಡುವಾಗ ನಾನ್ಯಾಕೆ ನಿಮ್ಮ ಸಂತೋಷಕ್ಕೆ ಅಡ್ಡಿ ಬರಲಿ, ನಾನು ಕಾರಿಗೆ ಬೇರೆ ಗ್ಲಾಸ್‌ ಹಾಕಿಸಿಕೊಳ್ಳುತ್ತೇನೆ ಎಂದು ಅಲ್ಲಿಂದ ಹೊರಡುತ್ತಾನೆ.

ಚಿನ್ನ ಕೊಡದೇ ಬಿಡುವವನಲ್ಲ ಆಕಾಶ್‌

ಗಿರಿಜಾಳನ್ನು ಮನೆಗೆ ಕರೆದುಕೊಂಡು ಬರುವ ಆಕಾಶ್‌ ಪುಷ್ಪಾ ನೀಡಿದ ಚಿನ್ನವನ್ನು ಮರಳಿ ಕೊಡುವಂತೆ ತಾಕೀತು ಮಾಡುತ್ತಾನೆ. ಮೊದಲು ನನ್ನ ಬಳಿ ಚಿನ್ನ ಇಲ್ಲ ಎಂದು ನಾಟಕ ಮಾಡುವ ಆಕೆಗೆ ಆಕಾಶ್‌ ಬೆದರಿಸುತ್ತಾನೆ. ನೀವು ಈಗ ಚಿನ್ನ ಕೊಡದೇ ಹೋದ್ರೆ ಮನೆಯವರೆಲ್ಲರನ್ನೂ ಕರೆಸಿ, ಎಲ್ಲರ ಎದುರು ನಿಮ್ಮ ಬಂಡವಾಳ ಬಯಲು ಮಾಡಿ, ಅವರೆಲ್ಲರಿಂದ ನಿಮಗೆ ಛೀಮಾರಿ ಹಾಕಿಸುತ್ತೇನೆ ಎಂದು ಹೆದರಿಸುತ್ತಾನೆ. ಅಲ್ಲದೇ ಇನ್ನು 10 ನಿಮಿಷದಲ್ಲಿ ಚಿನ್ನ ನನ್ನ ಕೈಗೆ ತಂದು ಕೊಡಬೇಕು ಎಂದು ಖಡಾಖಂಡಿತವಾಗಿ ಹೇಳುತ್ತಾನೆ. ಇತ್ತ ಚಿನ್ನ ಕೊಡಲು ಮನಸ್ಸಿಲ್ಲದ ಗಿರಿಜಾ ಬೇರೇನು ನಾಟಕ ಮಾಡಲಿ ಎಂದು ಯೋಚಿಸುತ್ತಿರುತ್ತಾಳೆ.

ಸುಧಾಮೂರ್ತಿಗಳ ಪ್ರಾಣ ಪುಷ್ಪಾ ಕೈಯಲ್ಲಿ

ಎದೆನೋವಿನಿಂದ ನರಳುವ ಸುಧಾಮೂರ್ತಿಯನ್ನ ಮನೆಯಲ್ಲಿ ಯಾರೂ ಗಮನಿಸುವುದಿಲ್ಲ. ತೀವ್ರ ನೋವಿನಲ್ಲೂ ಮಾತ್ರೆಗಾಗಿ ಹುಡುಕಾಡುವ ಅವರಿಗೆ ಮಾತ್ರೆಯೂ ಸಿಗುವುದಿಲ್ಲ. ರೂಮಿಗೆ ಮರಳುವ ಆಕೆ ಕುಸಿದು ಬೀಳುತ್ತಾರೆ. ಇತ್ತ ಆಟವಾಡಿ ಮನೆಗೆ ಬರುವ ಪುಷ್ಪಾಳಿಗೆ ಸುಧಾಮೂರ್ತಿಗಳ ನೆನಪಾಗಿ ಅವರ ರೂಮಿಗೆ ತೆರಳುತ್ತಾಳೆ. ಅಲ್ಲಿ ನೋಡಿದ್ರೆ ಪುಷ್ಪಾಳ ಪ್ರೀತಿಯ ಅಜ್ಜಮ್ಮ ಎದೆನೋವಿನಿಂದ ಬಿದ್ದು ನರಳುತ್ತಿರುತ್ತಾಳೆ. ಜೊತೆಗೆ ಇದ್ದಕ್ಕಿದ್ದಂತೆ ಕೋಣೆಯ ಬಾಗಿಲು ಕೂಡ ಹೊರಗಿನಿಂದ ಲಾಕ್‌ ಆಗುತ್ತದೆ.

ಮನೆಯ ಗಂಡಸರು ಆಟದಲ್ಲಿ ಸೋತಿದ್ದಕ್ಕೆ ಡಾನ್ಸ್‌ ಮಾಡಬೇಕು ಎಂದು ಹೆಂಗಸರು ಷರುತ್ತು ಹಾಕಿರುತ್ತಾರೆ. ಅದಕ್ಕೆ ಹಾಲ್‌ನಲ್ಲಿ ಜೋರಾಗಿ ಡಿಜೆ ಹಾಕಿಕೊಂಡು ಡಾನ್ಸ್‌ ಮಾಡುತ್ತಿರುತ್ತಾರೆ. ಇತ್ತ ಪುಷ್ಪಾ ಕೂಗಿದ್ದು ಯಾರಿಗೂ ಕೇಳಿಸುವುದಿಲ್ಲ, ಸುಧಾಮೂರ್ತಿ ಅವರಿಗೆ ಎದೆನೋವು ಜೋರಾಗುತ್ತದೆ.

ಸಹನಾಗೆ ಆಕಾಶ್‌ ಮೇಲೆ ಪ್ರೀತಿ ಚಿಗುರೊಡೆಯುತ್ತಿದೆ

ಇತ್ತ ಕಾಲೇಜಿನಲ್ಲಿ ಸಹನಾ ಆಕಾಶ್‌ ಬಗ್ಗೆಯೇ ಯೋಚನೆ ಮಾಡುತ್ತಿರುತ್ತಾಳೆ. ಆ ಹೊತ್ತಿಗೆ ಅಲ್ಲಿಗೆ ಬರುವ ಗೆಳತಿ ಮಿಂಚು ಬಳಿ ಸಹನಾ ತನ್ನ ಮನದ ಮಾತುಗಳನ್ನು ಹೇಳಿಕೊಳ್ಳುತ್ತಾರೆ, ಅಲ್ಲದೇ ಆಕಾಶ್‌ ಒಳ್ಳೆಯ ಗುಣ ನನಗೆ ಇಷ್ಟ, ಅವರು ಬೇರೆಯವರ ಕಷ್ಟಕ್ಕೆ ಎಷ್ಟೊಂದು ಸ್ಪಂದಿಸುತ್ತಾರೆ ಅಂತೆಲ್ಲಾ ಗುಣಗಾನ ಮಾಡುತ್ತಾಳೆ. ಆಗ ಮಿಂಚು ನಿನಗೆ ಆಕಾಶ್‌ ಮೇಲೆ ಪ್ರೀತಿ ಆಗಿದೆ ಎಂದು ಛೇಡಿಸುತ್ತಾಳೆ.

ಕೋಣೆಯ ಒಳಗೆ ಲಾಕ್‌ ಆಗಿ ಅಸಹಾಯಕ ಪರಿಸ್ಥಿತಿಯಲ್ಲಿ ಇರುವ ಪುಷ್ಪಾ ಸುಧಾಮೂರ್ತಿಗಳ ಪ್ರಾಣ ಕಾಪಾಡ್ತಾಳ, ಗಿರಿಜಾ ಪುಷ್ಪಾಳ ಚಿನ್ನವನ್ನು ಆಕಾಶ್‌ ಕೈಗೆ ನೀಡ್ತಾಳಾ, ಸಹನಾಗೆ ಆಕಾಶ್‌ ಮೇಲೆ ಪ್ರೀತಿ ಆದ್ರೆ ಪುಷ್ಪಾಳ ಕಥೆಯೇನು, ಈ ಎಲ್ಲವನ್ನೂ ಮಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

(This copy first appeared in Hindustan Times Kannada website. To read more like this please logon to kannada.hindustantimes.com)

mysore-dasara_Entry_Point