ಕನ್ನಡ ಸುದ್ದಿ  /  Entertainment  /  Television News Colors Kannada Brindavana Kannada Serial Today Episode 107 Feb 29 Sudhamurthy Falls Unconscious Rst

Brundavana Serial: ಅಜ್ಜಮ್ಮನ ಉಳಿಸೋ ಪ್ರಯತ್ನ ಮಾಡಿ ಕೆಂಗಣ್ಣಿಗೆ ಗುರಿಯಾದ ಪುಷ್ಪಾ; ಮನೆಯಿಂದ ಎಸ್ಕೇಪ್‌ ಆಗೇ ಬಿಟ್ಲು ಗಿರಿಜಾ

Brindavana Kannada Serial Today Episode Mar 1: ʼಬೃಂದಾವನʼ ಧಾರಾವಾಹಿಯ ಗುರುವಾರದ ಎಪಿಸೋಡ್‌ನಲ್ಲಿ ಪುಷ್ಪಾ ಅಜ್ಜಮ್ಮನ ಪ್ರಾಣ ಉಳಿಸೋಕೆ ಪ್ರಯತ್ನ ಮಾಡಿದ್ರು, ಎಲ್ಲರ ಪಾಲಿಗೆ ಕೆಟ್ಟವಳಾಗುತ್ತಾಳೆ. ಇತ್ತ ಸಹನಾ ಆಕಾಶ್‌ ಪ್ರೀತಿಯಲ್ಲಿ ಮುಳುಗಿರುತ್ತಾಳೆ.

ಅಜ್ಜಮ್ಮನ ಉಳಿಸೋ ಪ್ರಯತ್ನ ಮಾಡಿ ಕೆಂಗಣ್ಣಿಗೆ ಗುರಿಯಾದ ಪುಷ್ಪಾ; ಮನೆಯಿಂದ ಎಸ್ಕೇಪ್‌ ಆಗೇ ಬಿಟ್ಲು ಗಿರಿಜಾ
ಅಜ್ಜಮ್ಮನ ಉಳಿಸೋ ಪ್ರಯತ್ನ ಮಾಡಿ ಕೆಂಗಣ್ಣಿಗೆ ಗುರಿಯಾದ ಪುಷ್ಪಾ; ಮನೆಯಿಂದ ಎಸ್ಕೇಪ್‌ ಆಗೇ ಬಿಟ್ಲು ಗಿರಿಜಾ

ಬೃಂದಾವನ ಧಾರಾವಾಹಿಯ ನಿನ್ನೆಯ (ಮಾ.1) ಸಂಚಿಕೆಯಲ್ಲಿ ಪುಷ್ಪಾ ಅಜ್ಜಮ್ಮನ ಪ್ರಾಣ ಉಳಿಸುವ ಪ್ರಯತ್ನ ಮಾಡುತ್ತಿರುತ್ತಾಳೆ. ಆ ಹೊತ್ತಿಗೆ ಮಳ್ಳಿಯಂತೆ ಪುಷ್ಪಾಳನ್ನು ಅರಸಿ ಬರುವ ಗಿರಿಜಾ ಅಜ್ಜಮ್ಮನ (ಸುಧಾಮೂರ್ತಿ) ಕೋಣೆಯ ಬಾಗಿಲು ತೆರೆಯುತ್ತಾಳೆ. ಆಗ ಪುಷ್ಪಾ ಅಜ್ಜಮ್ಮನ ಎದೆ ಒತ್ತುತ್ತಿರುತ್ತಾಳೆ. ಇದನ್ನು ನೋಡಿ ಗಿರಿಜಾ ಮತ್ತೆ ಪುಷ್ಪಾಳ ಮೇಲೆ ಅಪಾದನೆ ಮಾಡಲು ಅವಕಾಶ ಸಿಕ್ಕಿತು ಎಂದು ಖುಷಿ ಪಡುತ್ತಾಳೆ, ಅಲ್ಲಿಂದ ಓಡಿ ಹೋಗಿ ಹಾಲ್‌ನಲ್ಲಿ ಹಾಡಿ, ಕುಣಿಯುತ್ತಿರುವವ ಮುಂದೆ ಪುಷ್ಪಾ ಅಜ್ಜಮ್ಮನ ಪ್ರಾಣ ತೆಗೆಯಲು ನೋಡುತ್ತಿದ್ದಾಳೆ ಎಂದು ಆರೋಪ ಮಾಡುತ್ತಾಳೆ. ಮನೆಯವರೆಲ್ಲಾ ಗಾಬರಿಯಾಗಿ ಅಜ್ಜಮ್ಮನ ಕೋಣೆಗೆ ಓಡಿ ಹೋಗುತ್ತಾರೆ.

ಅಲ್ಲಿ ಅಜ್ಜಮ್ಮನ ಸ್ಥಿತಿ ನೋಡಿ ಎಲ್ಲರೂ ಗಾಬರಿಯಾಗುತ್ತಾರೆ. ಮೊದಲೇ ಪುಷ್ಪಾಳನ್ನು ಕಂಡರೆ ಆಗದ ಆಕಾಶ್‌ ಮಾವ ಇದೇ ಸರಿಯಾದ ಸಮಯ ಎಂದುಕೊಂಡು ʼಅತ್ತೆಯನ್ನು ಕೊಲ್ಲಬೇಕು ಅಂದ್ಕೊಂಡ್‌ ಇದೀಯಾ, ನಿಂಗೆ ಯಾರು ಹೀಗೆಲ್ಲಾ ಮಾಡೋಕೆ ಹೇಳಿದ್ದುʼ ಎಂದು ರೇಗುತ್ತಾರೆ. ಅದಕ್ಕೆ ಗಿರಿಜಾ ಕೂಡ ಒಗ್ಗರಣೆ ಹಾಕುತ್ತಾಳೆ. ಇದರಿಂದ ಆಕಾಶ್‌ ಮನಸಲ್ಲಿ ಪುಷ್ಪಾಳ ಬಗ್ಗೆ ಇನ್ನಷ್ಟು ದ್ವೇಷ ಮೂಡುತ್ತದೆ.

ಪುಷ್ಪಾಳ ಮೇಲೆ ರೇಗುವ ಆಕಾಶ್‌

ಸುಧಾಮೂರ್ತಿಗಳ ಪ್ರಾಣ ಉಳಿಸಲು ಪುಷ್ಪಾ ಒದ್ದಾಡಿದ್ರೂ ಆಕಾಶ್‌ ಪುಷ್ಪಾಳ ಮೇಲೆ ರೇಗುವುದು ಬಿಡುವುದಿಲ್ಲ. ನಿಂಗೆ ಯಾರು ಅಜ್ಜಿಯ ಎದೆನೋವಿಗೆ ಟ್ರೀಟ್‌ ಮಾಡೋಕೆ ಹೇಳಿದ್ದು, ನೀನು ಡಾಕ್ಟರ್‌ ಆ, ನಿಂಗೇನು ಗೊತ್ತು ಅಂತ ಹಾಗೆಲ್ಲಾ ಮಾಡೋಕೆ ಹೋಗಿ, ಅಜ್ಜಿಗೆ ಏನಾದ್ರೂ ಆದ್ರೆ ನಾನಂತು ಮನುಷ್ಯ ಆಗಿ ಇರೋಲ್ಲ ಅಂತ ಪುಷ್ಪಾಳಿಗೆ ಹಿಗ್ಗಾಮುಗ್ಗಾ ಬೈಯುತ್ತಾನೆ ಆಕಾಶ್‌. ಅಜ್ಜಮ್ಮನ ಪ್ರಾಣ ಉಳಿಸಲು ಪುಷ್ಪಾ ಒದ್ದಾಡಿದ್ದು ಯಾರ ಕಣ್ಣಿಗೂ ಕಾಣುವುದಿಲ್ಲ.

ಮನೆಯವರ ಮುಂದೆ ಕೆಟ್ಟವಳಾದ ಪುಷ್ಪಾ

ʼನಾವು ನೋಡೋದು 5 ನಿಮಿಷ ತಡ ಆಗಿದ್ರೂ ಅಮ್ಮನ ಪ್ರಾಣಕ್ಕೆ ಅಪಾಯ ಆಗ್ತಾ ಇತ್ತುʼ ಎಂದು ಡಾಕ್ಟರ್‌ ಆಗಿರುವ ಸುಧಾಮೂರ್ತಿಗಳ ಹಿರಿಮಗ ಹೇಳುತ್ತಾರೆ. ಇದನ್ನು ಕೇಳಿದ ಮನೆಮಂದಿಯೆಲ್ಲಾ ಗಾಬರಿಯಾಗುತ್ತಾರೆ. ಆ ಹೊತ್ತಿಗೆ ಪುಷ್ಪಾಳ ಮೇಲೆ ಇನ್ನಷ್ಟು ಆರೋಪ ಮಾಡುತ್ತಾರೆ ಆಕಾಶ್‌ ಮಾವ.

ಆಕಾಶ್‌ ಹಾಗೂ ಅವನ ಮಾವ ಇಬ್ಬರು ಸೇರಿ ಪುಷ್ಪಾಳದ್ದೇ ತಪ್ಪು, ಅವಳಿಂದಲೇ ಅಜ್ಜಿಗೆ ಹೀಗಾಗಿದೆ ಎಂಬಂತೆ ಮಾತನಾಡುತ್ತಾರೆ. ಮನೆಯವರಿಗೂ ಪುಷ್ಪಾಳ ಮೇಲೆ ಅಸಮಾಧಾನ ಭಾವ ಮೂಡುತ್ತದೆ. ಪುಷ್ಪಾ ಮಾತ್ರ ಕಣ್ಣೀರು ಸುರಿಸುತ್ತಾ ನಿಲ್ಲುತ್ತಾಳೆ.

ಮನೆಯಿಂದ ಎಸ್ಕೇಪ್‌ ಆಗುವ ಗಿರಿಜಾ

ಮನೆಯಲ್ಲಿ ಎಲ್ಲರೂ ಅಜ್ಜಮ್ಮ ಆರೋಗ್ಯದ ಚಿಂತೆ ಮಾಡ್ತಾ ಇರುವಾಗ್ಲೇ ಪುಷ್ಪಾ ಕೊಟ್ಟ ಚಿನ್ನ, ಬ್ಯಾಗ್‌ ಹಿಡಿದು ಮನೆಯಿಂದ ಎಸ್ಕೇಪ್‌ ಆಗೋಕೆ ತಯಾರಾಗ್ತಾಳೆ ಗಿರಿಜಾ. ಬ್ಯಾಗ್‌ ಹಿಡಿದು ನಿಧಾನಕ್ಕೆ ಕೋಣೆಯಿಂದ ಹೊರ ಬರುವ ಗಿರಿಜಾ ಪುಷ್ಪಾಳ ಕೈಗೆ ಸಿಕ್ಕಿ ಬೀಳುತ್ತಾರೆ, ಆದ್ರೂ ಅವಳಿಗೆ ಅಣ್ಣನ ನೆಪ ಹೇಳಿ ತಾನು ಈಗಲೇ ಹೊರಡುತ್ತೇನೆ ಎಂದು ಮನೆಯಿಂದ ಹೊರಟು ಬಿಡುತ್ತಾಳೆ.

ಸಹನಾಗೆ ಆಕಾಶ್‌ ಮೇಲೆ ಪ್ರೀತಿ ಅರಳಿದೆ

ಇತ್ತ ಸಹನಾ ಆಕಾಶ್‌ ಪ್ರೀತಿಯಲ್ಲಿ ಮುಳುಗಿರುತ್ತಾಳೆ. ಆಕಾಶ್‌ ಫೋನ್‌ ಕಾಲ್‌ಗಾಗಿ ಹಂಬಲಿಸುತಿರುತ್ತಾಳೆ. ಅದಕ್ಕೆ ಅವಳ ಸ್ನೇಹಿತೆ ಮಿಂಚು ನೀನೇ ಆಕಾಶ್‌ ಕಾಲ್‌ ಮಾಡಿ ಮಾತಾಡು ಎಂದು ಸಲಹೆ ನೀಡುತ್ತಾಳೆ. ಅಲ್ಲದೆ ನಿಂಗೆ ಆಕಾಶ್‌ ಮೇಲೆ ಕ್ರಷ್‌ ಆಗಿದೆ, ಅದಕ್ಕೆ ನಾನು ಆಕಾಶ್‌ಗಾಗಿ ಇಷ್ಟೆಲ್ಲಾ ಹಂಬಲಿಸ್ತಾ ಇರೋದು ಅಂತೆಲ್ಲಾ ಹೇಳಿ ಇನ್ನಷ್ಟು ತಲೆ ಕೆಡಿಸುತ್ತಾಳೆ.

ಮನೆಯವರ ಮುಂದೆ ಪುಷ್ಪಾ ಒಳ್ಳೆಯವಳು ಎಂದು ಹೇಳೋರ್ಯಾರು, ಸುಧಾಮೂರ್ತಿ ಆರಾಮಾದ ಮೇಲೆ ಪುಷ್ಪಾಳದ್ದು ತಪ್ಪಿಲ್ಲ ಅನ್ನೋದು ಅರಿವಾಗುತ್ತಾ, ಗಿರಿಜಾ ಆಕಾಶ್‌ ಕೈಯಿಂದ ತಪ್ಪಿಸಿಕೊಂಡೇ ಬಿಟ್ಲಾ, ಸಹನಾ ಪ್ರೀತಿ ಪುಷ್ಪಾಳ ಬಾಳಿಗೆ ಮುಳ್ಳಾಗುತ್ತಾ ಎಂಬುದನ್ನು ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point