Brundavana Serial: ಅಪ್ಪಣ್ಣನಿಂದ ಬಯಲಾಯ್ತು ಗಿರಿಜಾಳ ನಾಟಕ; ಇನ್ನಾದ್ರೂ ಪುಷ್ಪಾಳನ್ನು ಮನಸ್ಫೂರ್ತಿಯಾಗಿ ಒಪ್ಪಿಕೊಳ್ತಾನಾ ಆಕಾಶ್‌?-television news colors kannada brindavana kannada serial today episode 111 mar 6th aakash realizes his mistakes rst ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Brundavana Serial: ಅಪ್ಪಣ್ಣನಿಂದ ಬಯಲಾಯ್ತು ಗಿರಿಜಾಳ ನಾಟಕ; ಇನ್ನಾದ್ರೂ ಪುಷ್ಪಾಳನ್ನು ಮನಸ್ಫೂರ್ತಿಯಾಗಿ ಒಪ್ಪಿಕೊಳ್ತಾನಾ ಆಕಾಶ್‌?

Brundavana Serial: ಅಪ್ಪಣ್ಣನಿಂದ ಬಯಲಾಯ್ತು ಗಿರಿಜಾಳ ನಾಟಕ; ಇನ್ನಾದ್ರೂ ಪುಷ್ಪಾಳನ್ನು ಮನಸ್ಫೂರ್ತಿಯಾಗಿ ಒಪ್ಪಿಕೊಳ್ತಾನಾ ಆಕಾಶ್‌?

Brindavana Kannada Serial Today Episode Mar 6: ʼಬೃಂದಾವನʼ ಧಾರಾವಾಹಿಯ ಬುಧವಾರದ ಎಪಿಸೋಡ್‌ನಲ್ಲಿ ಅಪ್ಪಣ್ಣನಿಗೆ ಕಾಲ್‌ ಮಾಡುವ ಆಕಾಶ್‌ ಗಿರಿಜಾಳ ನಾಟಕವನ್ನು ಅರಿಯುತ್ತಾನೆ, ಇತ್ತ ಪುಷ್ಪಾ ವಿಚಾರದಲ್ಲಿ ಆಕಾಶ್‌ ಮನಸ್ಸು ಮೃದುವಾಗುತ್ತಿದ್ದರೆ, ಅತ್ತ ಆಕಾಶ್‌ ಬರೆದ ಡೈರಿ ಸಹನಾ ಕೈಸೇರಿದೆ.

ಅಪ್ಪಣ್ಣನಿಂದ ಬಯಲಾಯ್ತು ಗಿರಿಜಾಳ ನಾಟಕ; ಪುಷ್ಪಾಳನ್ನು ಮನಸ್ಫೂರ್ತಿಯಾಗಿ ಒಪ್ಪಿಕೊಳ್ತಾನಾ ಆಕಾಶ್‌
ಅಪ್ಪಣ್ಣನಿಂದ ಬಯಲಾಯ್ತು ಗಿರಿಜಾಳ ನಾಟಕ; ಪುಷ್ಪಾಳನ್ನು ಮನಸ್ಫೂರ್ತಿಯಾಗಿ ಒಪ್ಪಿಕೊಳ್ತಾನಾ ಆಕಾಶ್‌

ಬೃಂದಾವನ ಧಾರಾವಾಹಿಯ ನಿನ್ನೆಯ (ಮಾ.6) ಸಂಚಿಕೆಯಲ್ಲಿ ಸಹನಾ ಬಳಿ ಫ್ರೆಂಡ್‌ ಹೆಸರಿನಲ್ಲಿ ತನ್ನ ಸಮಸ್ಯೆಯನ್ನು ಚರ್ಚಿಸುತ್ತಿರುವ ಆಕಾಶ್‌ ಪುಷ್ಪಾ ಅತ್ತಿಗೆ ಹೇಳಿದ್ದು ಸುಳ್ಳೋ ಸತ್ಯವೋ ಎಂಬುದನ್ನು ಹೇಗೆ ತಿಳಿಯಬೇಕು ಎಂಬುದು ಅರ್ಥವಾಗುತ್ತಿಲ್ಲ ಎನ್ನುತ್ತಾನೆ. ಅವನ ಸಮಸ್ಯೆಗೆ ಉತ್ತರ ನೀಡುವ ಸಹನಾ ʼಅವರ ಅಣ್ಣನಿಗೆ ಕಾಲ್‌ ಮಾಡಿ ವಿಷ್ಯಾ ಕೇಳಿದ್ರೆ ಮುಗಿತು ಅಲ್ವಾ, ಅವರು ಎಲ್ಲಾ ಹೇಳುತ್ತಾರೆʼ ಎಂದು ಸಲಹೆ ನೀಡುತ್ತಾಳೆ. ಆಕಾಶ್‌ಗೂ ಅವಳ ಸಲಹೆ ಇಷ್ಟವಾಗಿ ಅಪ್ಪಣ್ಣನಿಗೆ ಕರೆ ಮಾಡುತ್ತಾನೆ.

ಗಿರಿಜಾಳ ಬಣ್ಣ ಬಯಲು

ಅಪ್ಪಣ್ಣನಿಗೆ ಕರೆ ಮಾಡುವ ಆಕಾಶ್‌ ಅವರ ಆರೋಗ್ಯದ ಬಗ್ಗೆ ವಿಚಾರಿಸುತ್ತಾನೆ, ಆಗ ಅಪ್ಪಣ್ಣ ನನ್ನ ಆರೋಗ್ಯಕ್ಕೆ ಏನಾಗಿದೆ ಆಕಾಶಪ್ಪ, ನಾನು ಗುಂಡುಕಲ್ಲಿನ ಹಾಗೆ ಇದೀನಿ ಅಂತಾನೆ. ಆಗ ಆಕಾಶ್‌ ʼಮತ್ತೆ ನೀವು ಆಸ್ಪತ್ರೆಗೆ ಹೋಗಿದ್ದು?ʼ ಎಂದು ಪ್ರಶ್ನಿಸುತ್ತಾನೆ, ಅದಕ್ಕೆ ಉತ್ತರಿಸುವ ಅಪ್ಪಣ್ಣ ʼನಾನು ಆಸ್ಪತ್ರೆ ಮುಖ ನೋಡದೇ 10-12 ವರ್ಷಗಳಾಯ್ತು. ಮಾತ್ರೆ ತಿನ್ನದೇ ಐದಾರು ವರ್ಷ ಆಯ್ತು, ದೇವರು ನನಗೆ ಆರೋಗ್ಯ ಚೆನ್ನಾಗಿ ಕೊಟ್ಟಿದ್ದಾನೆʼ ಎಂದು ಖುಷಿಯಿಂದ ಹೇಳುತ್ತಾನೆ. ಮನೆಯವರ ಬಗ್ಗೆ ಅಪ್ಪಣ್ಣನ ಬಳಿ ಆಕಾಶ್‌ ವಿಚಾರಿಸಿದಾಗ ʼನಮ್ಮ ಮನೆಯಲ್ಲಿ ಎಲ್ಲರೂ ಆರಾಮ್‌ ಇದೇವೆ, ನನ್ನ ಹೆಂಡತಿ ಗಿರಿಜಾ ಮೊನ್ನೆ ತವರು ಮನೆಗೆ ಹೋಗ್ತೀನಿ ಅಂತ ಹೋಗಿ 4 ದಿನ ಇದ್ದು, ನಿನ್ನೆ ರಾತ್ರಿ ಮನೆಗೆ ಬಂದ್ಲುʼ ಎಂದು ಹೇಳುತ್ತಾನೆ. ಇದನ್ನು ಕೇಳಿದ ಆಕಾಶ್‌ಗೆ ಶಾಕ್‌ ಹೊಡೆದಂತಾಗುತ್ತದೆ. ಅಲ್ಲದೇ ಗಿರಿಜಾ ನಾಟಕವೆಲ್ಲಾ ಅವನ ಕಣ್ಣ ಮುಂದೆ ಬರುತ್ತದೆ. ಜೊತೆಗೆ ಪುಷ್ಪಾ ವಿಚಾರದಲ್ಲಿ ಗಿರಿಜಾ ಹೇಳಿದ್ದೆಲ್ಲವೂ ಸುಳ್ಳು, ತನ್ನ ಬೇಳೆ ಬೇಯಿಸಿಕೊಳ್ಳಲು ಗಿರಿಜಾ ಹೀಗೆಲ್ಲಾ ಮಾಡಿದ್ದು ಎಂಬುದು ಆಕಾಶ್‌ಗೆ ಸ್ಪಷ್ಟವಾಗುತ್ತದೆ.

ಆಕಾಶ್‌ ಡೈರಿ ಸಹನಾ ಕೈಯಲ್ಲಿ

ಇತ್ತ ಪುಷ್ಪಾಳ ವಿಚಾರದಲ್ಲಿ ಸ್ಪಷ್ಟನೆ ಸಿಕ್ಕ ಆಕಾಶ್‌ ಅದೇ ಖುಷಿಯಲ್ಲಿ ಮನೆಗೆ ಹೋದ್ರೆ ಇತ್ತ ಆಕಾಶ್‌ ಸ್ನೇಹಿತ ಸಹನಾಗೆ ಆಕಾಶ್‌ ಬರೆದ ಡೈರಿ ನೀಡುತ್ತಾನೆ, ಅಲ್ಲದೇ ಇದನ್ನು ಓದಿದ್ರೆ ನಿಂಗೆ ಆಕಾಶ್‌ ಭಾವನೆಗಳೆಲ್ಲವೂ ಅರ್ಥವಾಗುತ್ತದೆ ಎಂದು ಒಗಟಾಗಿ ಮಾತನಾಡುತ್ತಾನೆ.

ಪುಷ್ಪಾಳ ವಿಚಾರದಲ್ಲಿ ಬದಲಾದ ಆಕಾಶ್‌

ಕಾಲೇಜಿನಿಂದ ಮನೆಗೆ ಬರುವ ಆಕಾಶ್‌ ಪುಷ್ಪಾಳನ್ನು ಆತ್ಮೀಯತೆಯಿಂದ ಮಾತನಾಡಿಸುತ್ತಾನೆ, ಮಾತ್ರವಲ್ಲ ಅವಳ ಯೋಗಕ್ಷೇಮದ ಬಗ್ಗೆಯೂ ವಿಚಾರಿಸುತ್ತಾನೆ. ಜೊತೆಗೆ ಪುಷ್ಪಾ ಕಾಫಿ ತುಂಬಾ ಚೆನ್ನಾಗಿ ಮಾಡ್ತಾಳೆ ಎಂದು ಅವಳ ಬಳಿ ಕಾಫಿ ಮಾಡಿಕೊಡಲು ಕೇಳುತ್ತಾನೆ.

ಇತ್ತ ಆಕಾಶ್‌ ಪುಷ್ಪಾ ಜೊತೆ ಜೀವನ ಸಾಗಿಸಲು ರೆಡಿಯಾಗ್ತಿದ್ರೆ, ಅತ್ತ ಆಕಾಶ್‌ ಬರೆದ ಡೈರಿ ಸಹನಾ ಓದಿ ಆಕಾಶ್‌ ಜೀವನವೇ ಬದಲಾಗುತ್ತಾ? ಗಿರಿಜಾಳ ನಾಟಕ ಅಪ್ಪಣ್ಣನ ಮುಂದೆ ಬಯಲಾಗುತ್ತಾ? ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

(This copy first appeared in Hindustan Times Kannada website. To read more like this please logon to kannada.hindustantimes.com)