ಕನ್ನಡ ಸುದ್ದಿ  /  Entertainment  /  Television News Colors Kannada Brindavana Kannada Serial Today Episode 112 Mar 7th Aakash And Pushpa Get Together Rst

Brundavana Serial: ಅತ್ತ ಸಹನಾ ಡೈರಿ ತೆರೆದು ಓದ್ತಾ ಇದ್ರೆ, ಇತ್ತ ಆಕಾಶ್‌ ಎದುರು ಫೋಟೊ ಬದಲಾದ ಸತ್ಯ ತೆರೆದುಕೊಂಡಿದೆ

Brindavana Kannada Serial Today Episode Mar 6: ʼಬೃಂದಾವನʼ ಧಾರಾವಾಹಿಯ ಬುಧವಾರದ ಎಪಿಸೋಡ್‌ನಲ್ಲಿ ಇಮೇಲ್‌ ತೆರೆಯವ ಆಕಾಶ್‌ಗೆ ಫೋಟೊ ಬದಲಾಗಿರುವ ವಿಚಾರ ತಿಳಿಯುತ್ತದೆ. ಇತ್ತ ಪುಷ್ಪಾ-ಆಕಾಶ್‌ ನಡುವೆ ಆತ್ಮೀಯತೆ ಬೆಳೆಯತ್ತಿದ್ದರೆ ಅತ್ತ, ಸಹನಾ ಆಕಾಶ್ ಬರೆದ ಡೈರಿ ಓದುತ್ತಿದ್ದಾಳೆ.

ಅತ್ತ ಸಹನಾ ಡೈರಿ ತೆರೆದು ಓದ್ತಾ ಇದ್ರೆ, ಇತ್ತ ಆಕಾಶ್‌ ಎದುರು ಫೋಟೊ ಬದಲಾದ ಸತ್ಯ ತೆರೆದುಕೊಂಡಿದೆ
ಅತ್ತ ಸಹನಾ ಡೈರಿ ತೆರೆದು ಓದ್ತಾ ಇದ್ರೆ, ಇತ್ತ ಆಕಾಶ್‌ ಎದುರು ಫೋಟೊ ಬದಲಾದ ಸತ್ಯ ತೆರೆದುಕೊಂಡಿದೆ

ಬೃಂದಾವನ ಧಾರಾವಾಹಿಯ ನಿನ್ನೆಯ (ಮಾ.7) ಸಂಚಿಕೆಯಲ್ಲಿ ಆಕಾಶ್‌ಗೆ ಪುಷ್ಪಾಳ ಮೇಲೆ ನಿಧಾನಕ್ಕೆ ಒಲವು ಮೂಡುತ್ತದೆ. ಕಾಲೇಜು ಮುಗಿಸಿ ಮನೆಗೆ ಬರುವ ಆಕಾಶ್‌ಗೆ ಬಿಸಿಬಿಸಿ ಕಾಫಿ ಮಾಡಿಕೊಡುವ ಪುಷ್ಪಾಳ ಬೆನ್ನು ಆಕಾಶ್‌ಗೆ ಬರೆಯಲು ಗೋಡೆಯೂ ಆಗುತ್ತದೆ. ಈ ನಡುವೆ ಯಾವುದೋ ಕಾರಣಕ್ಕೆ ಇಮೇಲ್‌ ತೆರೆಯುವ ಆಕಾಶ್‌ಗೆ ತಾನು ವಿದೇಶದಲ್ಲಿದ್ದಾಗ ಇಮೇಲ್‌ ಮೂಲಕ ಫೋಟೊ ಕಳುಹಿಸಿರುವ ಸೈಬರ್‌ ಅವರ ಮೇಲ್‌ ಕಾಣಿಸುತ್ತದೆ. ಅದರಲ್ಲಿ ನಿಮಗೆ ಕಳುಹಿಸಬೇಕಾಗಿರುವವರ ಫೋಟೊ ಬದಲು-ಅದಲಾಗಿದೆ, ನಿಮಗೆ ಕಳುಹಿಸಬೇಕಾಗಿರುವವರ ಫೋಟೊ ಇದು ಎಂದು ಬರೆದಿರುತ್ತದೆ. ಅಟ್ಯಾಚ್‌ಮೆಂಟ್‌ ತೆರೆದು ನೋಡಿದಾಗ ಅಲ್ಲಿ ಪುಷ್ಪಾಳ ಫೋಟೊ ಇರುತ್ತದೆ. ಇದನ್ನು ನೋಡಿದ ಆಕಾಶ್‌ಗೆ ಶಾಕ್‌ ಆಗುತ್ತದೆ. ಅಲ್ಲದೇ ಪುಷ್ಪಾ ಹಾಗೂ ಅವಳ ಅಣ್ಣ ಅಪ್ಪಣ್ಣಗೆ ಈ ವಿಚಾರ ಯಾವುದೂ ತಿಳಿದಿಲ್ಲ, ಇದರ ಹಿಂದೆಲ್ಲಾ ಇರುವುದು ಗಿರಿಜಾಳ ಕೈವಾಡ ಎಂಬುದು ಆಕಾಶ್‌ಗೆ ಸ್ಪಷ್ಟವಾಗುತ್ತದೆ.

ಮಕ್ಕಳಿಗೆ ಮಾಡಿದ್ದ ತಿಂಡಿಯನ್ನು ಆಕಾಶ್‌ಗೆ ತಂದು ಕೊಡುವ ಪುಷ್ಪಾಳ ಬಳಿ ಆಕಾಶ್‌ ಮನೆಯವರ ಸೇವೆ ಮಾಡಲು ನಿನಗೆ ಯಾವುದೇ ಬೇಸರ ಇಲ್ವಾ ಎಂದು ಕೇಳಿದ್ದಕ್ಕೆ ಈ ಮನೆ ಸೇರಿರುವುದೇ ನನ್ನ ಪುಣ್ಯ ಎಂದು ಪುಷ್ಪಾ ಹೇಳುತ್ತಾಳೆ. ಅಲ್ಲದೇ ಅಜ್ಜಿಗೆ ಹುಷಾರಿಲ್ಲದ ದಿನ ಏನೇನಾಯ್ತು ಎಂಬುದನ್ನೆಲ್ಲಾ ಆಕಾಶ್‌ ಮುಂದೆ ವಿವರಿಸಿ ಹೇಳುತ್ತಾಳೆ ಪುಷ್ಪಾ. ಯಾವುದೇ ತಪ್ಪಿಲ್ಲದೇ ಮನೆಯವರಿಂದ ಬೈಸಿಕೊಂಡ ಪುಷ್ಪಾ ಯಾರ ಬಗ್ಗೆಯೂ ಒಂದೂ ಮಾತನಾಡದೇ ಇದ್ದಿದ್ದನ್ನು ಕಂಡ ಆಕಾಶ್‌ಗೆ ಅವಳ ಬಗ್ಗೆ ಹೆಮ್ಮೆ, ಖುಷಿ ಎರಡೂ ಆಗುತ್ತದೆ. ಆಕಾಶ್‌ ಪುಷ್ಪಾಳ ವಿಚಾರದಲ್ಲಿ ಸಂಪೂರ್ಣವಾಗಿ ಬದಲಾಗುತ್ತಿದ್ದರೆ, ಇತ್ತ ಆಕಾಶ್‌ ಬರೆದ ಡೈರಿ ಸಹನಾ ಓದಲು ಆರಂಭಿಸುತ್ತಾಳೆ.

ಆಕಾಶ್‌ ಪ್ರೀತಿ ಸಹನಾ ಮುಂದೆ ಬಯಲು

ಕಾಕ್ರೋಚ್‌ ಕಾಲೇಜಿನಲ್ಲಿ ನೀಡಿದ ಡೈರಿಯನ್ನು ಓದಲು ಆರಂಭಿಸುವ ಸಹನಾಗೆ ಅದು ಆಕಾಶ್‌ ತನಗೆ ಬರೆದ ಡೈರಿ ಎಂಬುದು ಅರ್ಥವಾಗುತ್ತದೆ. ಅಲ್ಲದೇ ಆಕಾಶ್‌ ಅದರಲ್ಲಿ ಬರೆದ ಪ್ರತಿಯೊಂದು ಅಕ್ಷರಗಳು ಸಹನಾಗೆ ಆಕಾಶ್‌ ತನ್ನ ಮೇಲೆ ಇಟ್ಟಿರುವ ಪ್ರೀತಿಯನ್ನು ಹೇಳುತ್ತದೆ. ಇದನ್ನು ಓದಿದ ಸಹನಾಗೆ ಆಕಾಶ್‌ ಮೇಲಿನ ಅಭಿಮಾನ ಪ್ರೀತಿ ಇನ್ನಷ್ಟು ಹೆಚ್ಚುತ್ತದೆ.

ಅಣ್ಣನ ಆರೋಗ್ಯದ ಬಗ್ಗೆ ಪುಷ್ಪಾಳಿಗೆ ಹೇಳುವ ಆಕಾಶ್‌ 

ಇತ್ತ ಅಣ್ಣನ ಅನಾರೋಗ್ಯದ ವಿಚಾರವಾಗಿ ಪುಷ್ಪಾ ಕೊರಗುತ್ತಾ ಕೂತಿದ್ದರೆ, ಅದನ್ನ ನೋಡಿದ ಆಕಾಶ್‌ ಪುಷ್ಪಾಳ ಬಳಿ ಸತ್ಯ ಹೇಳಲು ನಿರ್ಧಾರ ಮಾಡುತ್ತಾನೆ. ಅದಕ್ಕಾಗಿ ಆಕೆಯ ಬಳಿ ಅತ್ತಿಗೆ ಗಿರಿಜಾಳ ಬಗ್ಗೆ ಅಭಿಪ್ರಾಯ ಹೇಳಲು ತಿಳಿಸುತ್ತಾನೆ. ಆದರೆ ಪುಷ್ಪಾ ತಪ್ಪಿಯೂ ಅತ್ತಿಗೆಯನ್ನು ದೂರಿ ಮಾತನಾಡುವುದಿಲ್ಲ. ಆಗ ಆಕಾಶ್‌ ಅವಳಿಗೆ ʼನಿಮ್ಮ ಅಣ್ಣನಿಗೆ ಗ್ಯಾಸ್ಟ್ರಿಕ್‌ ಆಗಿದ್ದು, ಅವರಿಗೆ ಏನೂ ಆರೋಗ್ಯ ಸಮಸ್ಯೆ ಇಲ್ಲ. ನೀವು ನೆಮ್ಮದಿ ಆಗಿರಿ ಎಂದು ಭರವಸೆ ನೀಡುತ್ತಾನೆ. 

ಇತ್ತ ಆಕಾಶ್‌-ಪುಷ್ಪಾ ಒಂದಾಗುತ್ತಿದ್ರೆ, ಅತ್ತ ಸಹನಾಗೆ ಆಕಾಶ್‌ ಮೇಲೆ ಪ್ರೀತಿ ಹೆಚ್ಚುತ್ತಿದೆ. ಇದು ಮತ್ತೆ ಆಕಾಶ್‌ ಪುಷ್ಪಾ ಬದುಕಿಗೆ ತಿರುವು ನೀಡುತ್ತಾ?

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point