ಕನ್ನಡ ಸುದ್ದಿ  /  Entertainment  /  Television News Colors Kannada Brindavana Kannada Serial Today Episode 114 Mar 11th Aakash And Pushpa Get Together Rst

Brundavana Serial: ಪುಷ್ಪಾ-ಆಕಾಶ್‌ ಒಂದಾಗುವ ಗಳಿಗೆಯಲ್ಲೇ, ಪ್ರೀತಿ ಹೇಳಿಕೊಳ್ಳಲು ತವಕಿಸುತ್ತಿದ್ದಾಳೆ ಸಹನಾ

Brindavana Kannada Serial Today Episode Mar 11th: : ʼಬೃಂದಾವನʼ ಧಾರಾವಾಹಿಯ ಸೋಮವಾರದ ಎಪಿಸೋಡ್‌ನಲ್ಲಿ ಅಣ್ಣನಿಗೆ ಕರೆ ಮಾಡಿ ಯೋಗಕ್ಷೇಮ ವಿಚಾರಿಸುತ್ತಾಳೆ ಪುಷ್ಪಾ. ಅತ್ತ ಸಹನಾಗೆ ಮಿಂಚು ಪ್ರೇಮ ಪಾಠ ಮಾಡ್ತಾ ಇದ್ರೆ, ಇತ್ತ ಆಕಾಶ್‌-ಪುಷ್ಪಾ ಜೊತೆಯಾಗಿ ಹೊರಗಡೆ ಸುತ್ತಾಡಲು ತಯಾರಿ ನಡೆಸುತ್ತಿದ್ದಾರೆ.

ಪುಷ್ಪಾ-ಆಕಾಶ್‌ ಒಂದಾಗುವ ಗಳಿಗೆಯಲ್ಲೇ, ಪ್ರೀತಿ ಹೇಳಿಕೊಳ್ಳಲು ತವಕಿಸುತ್ತಿದ್ದಾಳೆ ಸಹನಾ
ಪುಷ್ಪಾ-ಆಕಾಶ್‌ ಒಂದಾಗುವ ಗಳಿಗೆಯಲ್ಲೇ, ಪ್ರೀತಿ ಹೇಳಿಕೊಳ್ಳಲು ತವಕಿಸುತ್ತಿದ್ದಾಳೆ ಸಹನಾ

ಬೃಂದಾವನ ಧಾರಾವಾಹಿಯ ನಿನ್ನೆಯ (ಮಾ.11) ಸಂಚಿಕೆಯಲ್ಲಿ ಅಣ್ಣನಿಗೆ ಕರೆ ಮಾಡುವ ಪುಷ್ಪಾ ಯೋಗಕ್ಷೇಮ ವಿಚಾರಿಸುತ್ತಾಳೆ. ಆ ಹೊತ್ತಿಗೆ ಎಲ್ಲಿ ತನ್ನ ಬಣ್ಣ ಬಯಲಾಗುವುದೋ ಎಂದು ದಿಗಿಲು ಬೀಳುವ ಗಿರಿಜಾ ಒಂದೆರಡು ಮಾತಿಗೆ ಅಪ್ಪಣ್ಣನಿಂದ ಫೋನ್‌ ಕಿತ್ತುಕೊಂಡು ತಾನು ಮಾತನಾಡುತ್ತಾಳೆ, ಅಲ್ಲದೆ ಅಪ್ಪಣ್ಣನ ಆರೋಗ್ಯದ ವಿಚಾರದಲ್ಲಿ ಆಕಾಶ್‌ ಪುಷ್ಪಾಳಿಗೆ ಏನು ಹೇಳಿದ್ದಾನೆ ಎಂಬುದನ್ನು ಬಾಯಿ ಬಿಡಿಸುತ್ತಾಳೆ. ಒಟ್ಟಾರೆ ಅಪ್ಪಣ್ಣನ ಜೊತೆ ಪುಷ್ಪಾಳಿಗೆ ಮಾತನಾಡಲು ಬಿಡದ ಗಿರಿಜಾ, ಈಗಲೂ ಆಕಾಶ್‌ ಮನೆಯಿಂದ ದುಡ್ಡು ಹೊಡೆಯುವುದು ಹೇಗೆ ಎಂಬುದರ ಬಗ್ಗೆಯೇ ಚಿಂತಿಸುತ್ತಾಳೆ.

ಪುಷ್ಪಾಳನ್ನ ಮನಸಾರೆ ಹೊಗಳುವ ಆಕಾಶ್‌

ಆಕಾಶ್‌ ಕಾಲೇಜಿನಿಂದ ಮನೆಗೆ ಬಂದ ಕೂಡಲೇ ಮನೆಯವರೆಲ್ಲರೂ ಮಹಿಳಾ ದಿನಾಚರಣೆಯ ದಿನ ಪುಷ್ಪಾ ಪೌರಕಾರ್ಮಿಕರಿಗೆ ಊಟ ಬಡಿಸಿ, ಉಡಿ ತುಂಬಿದ ವಿಚಾರವನ್ನು ಖುಷಿಯಿಂದ ಹೇಳಿಕೊಳ್ಳುತ್ತಾರೆ. ಆದರೆ ಆಗ ಮೂಗು ತೂರಿಸುವ ಸತ್ಯಮೂರ್ತಿ ನಿನ್ನ ಹೆಂಡತಿಗೆ ಬುದ್ಧಿ ಇಲ್ಲ, ಚಿಕ್ಕ ವಯಸ್ಸಿನಲ್ಲೇ ಅಧಿಕಾರ ಕೊಟ್ಟೆ ಹೇಗೆಲ್ಲಾ ಆಡ್ತಾಳೆ, ಅದಕ್ಕೆಲ್ಲಾ ಎಷ್ಟು ದುಡ್ಡು ಖರ್ಚಾಯ್ತು ಗೊತ್ತಾ ಅಂತೆಲ್ಲʼ ಚಾಡಿ ಮಾತಿನಿಂದ ಆಕಾಶ್‌ ತಲೆ ಕೆಡಿಸಲು ನೋಡುತ್ತಾರೆ. ಇದರಿಂದ ಕೋಪಗೊಳ್ಳುವ ಆಕಾಶ್‌ ಸತ್ಯಮೂರ್ತಿ ಅವರಿಗೆ ಸರಿಯಾಗಿ ಬೈದು ಪುಷ್ಪಾ ಮಾಡಿದ್ದು ಸರಿಯಾಗಿ, ಇದರಿಂದ ನಮ್ಮ ಮನೆಯ ಗೌರವ ಇನ್ನಷ್ಟು ಹೆಚ್ಚಾಗಿದೆ, ಹೊರತು ನಷ್ಟವಲ್ಲ ಎಂದು ರೇಗುತ್ತಾನೆ. ಅಲ್ಲದೆ ಪುಷ್ಪಾಳನ್ನು ಮನಸಾರೆ ಹೊಗಳುತ್ತಾನೆ ಆಕಾಶ್‌.

ಪ್ರೀತಿ ಹೇಳಿಕೊಳ್ಳಲು ಸಹನಾ ತವಕ

ಇತ್ತ ಹಾಸ್ಟೆಲ್‌ನಲ್ಲಿ ಸಹನಾ ನಿದ್ದೆ ಮಾಡದೇ ಆಕಾಶ್‌ ಬಗ್ಗೆ ಯೋಚಿಸುತ್ತಿರುತ್ತಾಳೆ. ಅದನ್ನು ನೋಡಿದ ಅವಳ ಸ್ನೇಹಿತೆ ಮಿಂಚು ʼಆಕಾಶ್‌ ತಮ್ಮ ಮನದ ಭಾವನೆಗಳನ್ನು ಪುಸ್ತಕದಲ್ಲಿ ಬರೆದಿದ್ದಾರೆ. ನೀವು ನಿನ್ನ ಮನದ ಭಾವನೆಗಳನ್ನು, ಆಕಾಶ್‌ ಮೇಲಿರುವ ಪ್ರೀತಿಯನ್ನು ನೇರವಾಗಿ ಅವರ ಬಳಿ ಹೇಳಿಕೋ. ಪ್ರೀತಿ ಹೇಳಿಕೊಳ್ಳುವ ವಿಚಾರದಲ್ಲಿ ಇಗೋ ಇರಬಾರದು, ನಾಳೆಯೇ ಆಕಾಶ್‌ ಬಳಿ ಪ್ರೀತಿ ಹೇಳಿಕೊಂಡು ಬಿಡು ಎಂದು ಸಲಹೆ ನೀಡುತ್ತಾಳೆ.

ಇತ್ತ ಬೆಳಗಾದ ಮೇಲೂ ಸಹನಾ ಬಳಿ ಆಕಾಶ್‌ ಬಳಿ ಪ್ರೀತಿಯನ್ನು ಇಂದೇ ಹೇಳಿಕೊಂಡು ಬಿಡು ತಡ ಮಾಡಬೇಡ ಎಂದು ಹೇಳುವ ಮಿಂಚು, ಸಹನಾ ರಾಶಿ ಭವಿಷ್ಯದ ಪ್ರಕಾರ ಅವಳಿಗೆ ಇಂದು ಪ್ರೀತಿ ಹೇಳಿಕೊಳ್ಳುವ ಯೋಗವಿದ್ದು, ಇದನ್ನು ಅವಳು ಪ್ರೀತಿಸಿದವರು ಒಪ್ಪಿಕೊಳ್ಳುತ್ತಾರೆ ಎಂದಿದೆ ಎನ್ನುತ್ತಾರೆ.

ಮಿಂಚು ಮಾತಿನಿಂದ ಸ್ಫೂರ್ತಿ ಪಡೆಯುವ ಸಹನಾ ಇಂದು ಹೇಗಾದರೂ ಆಕಾಶ್‌ನನ್ನು ಎಲ್ಲಾದ್ರೂ ಭೇಟಿ ಮಾಡಿ ಪ್ರೀತಿ ಹೇಳಿಕೊಂಡು ಬಿಡಬೇಕು ಎಂದು ನಿರ್ಧಾರ ಮಾಡುತ್ತಾಳೆ.

ಇತ್ತ ಭಾನುವಾರದ ಕಾರಣ ಮನೆಯಲ್ಲಿರುವ ಆಕಾಶ್‌ ಬಳಿ ಅತ್ತೆ ಹಾಗೂ ಅಕ್ಕಂದಿರು ಪುಷ್ಪಾಳನ್ನು ಹೊರಗಡೆ ಕರೆದುಕೊಂಡು ಹೋಗುವಂತೆ ಹೇಳುತ್ತಾರೆ. ಅಲ್ಲದೇ ಆಕೆ ಮದುವೆಯಾಗಿ ಬಂದ ಮೇಲೆ ಈ ಮನೆಯಿಂದ ಹೊರಗಡೆ ಹೋಗೇ ಇಲ್ಲ ಎಂಬುದನ್ನು ಆಕಾಶ್‌ಗೆ ಅರ್ಥ ಮಾಡಿಸುತ್ತಾರೆ. ಕೊನೆಗೆ ಆಕಾಶ್‌ ಪುಷ್ಪಾ ಜೊತೆ ಹೊರಗಡೆ ಹೋಗಲು ಸಿದ್ಧನಾಗುತ್ತಾನೆ.

ಇತ್ತ ಆಕಾಶ್‌-ಪುಷ್ಪಾ ಹೊರಗಡೆ ಹೋಗಲು ಸಿದ್ಧವಾಗುತ್ತಿದ್ದರೆ, ಇತ್ತ ಸಹನಾ ಆಕಾಶ್‌ನನ್ನು ಭೇಟಿ ಮಾಡಿ ಪ್ರೀತಿ ಹೇಳಿಕೊಳ್ಳಲು ಸಿದ್ಧವಾಗುತ್ತಾಳೆ. ಆಕಾಶ್‌-ಪುಷ್ಪಾ ಮಧ್ಯೆ ಸಹನಾ ಬರ್ತಾಳಾ? ಸಹನಾ ಪ್ರೀತಿಗೆ ಆಕಾಶ್‌ ಉತ್ತರವೇನು? ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನೋಡಬಹುದು.

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point