ಕನ್ನಡ ಸುದ್ದಿ  /  Entertainment  /  Television News Colors Kannada Brindavana Kannada Serial Today Episode 115 Mar 12th Aakash And Pushpa Get Together Rst

Brundavana Serial: ಬೈಕ್‌ ಏರಿ ಜಾಲಿರೈಡ್‌ ಹೊರಟ ಪುಷ್ಪಾ-ಆಕಾಶ್‌ಗೆ ಪಾರ್ಕ್‌ನಲ್ಲಿ ಎದುರಾದ್ರು ವಿಶೇಷ ಅತಿಥಿ

Brindavana Kannada Serial Today Episode Mar 12th: : ʼಬೃಂದಾವನʼ ಧಾರಾವಾಹಿಯ ಮಂಗಳವಾರದ ಎಪಿಸೋಡ್‌ನಲ್ಲಿ ಪುಷ್ಪಾ-ಆಕಾಶ್‌ ಬೈಕ್‌ನಲ್ಲಿ ಜಾಲಿರೈಡ್‌ ಹೊರಟ್ರೆ, ಮನೆಯಲ್ಲಿ ಸತ್ಯಮೂರ್ತಿಗೆ ಉರಿಸುತ್ತಿದ್ದಾರೆ ಮಹಿಳಾಮಣಿಗಳು. ಇತ್ತ ಸಹನಾ ಕರೆಯನ್ನ ಅವಾಯ್ಡ್‌ ಮಾಡ್ತಿದ್ದಾನೆ ಆಕಾಶ್‌.

ಬೈಕ್‌ ಏರಿ ಜಾಲಿರೈಡ್‌ ಹೊರಟ ಪುಷ್ಪಾ-ಆಕಾಶ್‌ಗೆ ಪಾರ್ಕ್‌ನಲ್ಲಿ ಎದುರಾದ್ರು ವಿಶೇಷ ಅತಿಥಿ
ಬೈಕ್‌ ಏರಿ ಜಾಲಿರೈಡ್‌ ಹೊರಟ ಪುಷ್ಪಾ-ಆಕಾಶ್‌ಗೆ ಪಾರ್ಕ್‌ನಲ್ಲಿ ಎದುರಾದ್ರು ವಿಶೇಷ ಅತಿಥಿ

ಬೃಂದಾವನ ಧಾರಾವಾಹಿಯ ನಿನ್ನೆಯ (ಮಾ.12) ಸಂಚಿಕೆಯಲ್ಲಿ ಆಕಾಶ್‌ ಪುಷ್ಪಾಳ ಜೊತೆ ಬೈಕ್‌ ರೈಡ್‌ ಹೋಗಲು ಸಿದ್ಧನಾಗ್ತಿದ್ರೆ, ಎಂದೂ ಬೈಕ್‌ನಲ್ಲಿ ಕುಳಿತುಕೊಳ್ಳದ ಪುಷ್ಪಾ ಬೈಕ್‌ ಹತ್ತಲು ಪರದಾಡುತ್ತಿದ್ದಾಳೆ. ಕೊನೆಗೆ ಆಕೆಗೆ ಬೈಕ್‌ ಹತ್ತಲು ಹೇಳಿಕೊಡುವ ಆಕಾಶ್‌ ಹೆಂಡತಿ ಜೊತೆ ಬೈಕ್‌ ಸವಾರಿ ಹೊರಡುತ್ತಾನೆ.

ಯುವದಂಪತಿಗಳು ಬೈಕ್‌ನಲ್ಲಿ ಖುಷಿಯಾಗಿ ತಿರುಗಾಡ್ತಾ ಇದ್ರೆ, ಅತ್ತ ಸತ್ಯಮೂರ್ತಿ ಮನೆಯಲ್ಲೇ ಇರುವ ಕಾರ್‌ ನೋಡಿ ಪುಷ್ಪಾ ಆಕಾಶ್‌ ಎಲ್ಲೂ ಹೋಗಿಲ್ಲ ಎಂದು ತಿಳಿದು ಮನೆಯವರ ಬಳಿ ʼನಾನು ಹೇಳಿದ್ದೇ ನಡೆಯೋದು ಆಕಾಶ್‌ ಪುಷ್ಪಾಳನ್ನು ಕರೆದುಕೊಂಡು ಎಲ್ಲಿಗೂ ಹೋಗಿಲ್ಲʼ ಎಂದು ಜಂಭ ಕೊಚ್ಚಿಕೊಳ್ಳುತ್ತಾನೆ. ಆಗ ಅವನಿಗೆ ಕಿಚಾಯಿಸುವ ಸುಧಾಮೂರ್ತಿ ಮನೆಯ ಮಹಿಳಾಮಣಿಗಳು ಅವರಿಬ್ಬರೂ ಬೈಕ್‌ನಲ್ಲಿ ಹೋಗಿದ್ದನ್ನು ಹೇಳಿ ಹೊಟ್ಟೆ ಉರಿಸುತ್ತಾರೆ.

ಆಕಾಶ್‌ ಭೇಟಿಯಾಗಲು ತವಕಿಸುತ್ತಿರುವ ಸಹನಾ

ಇತ್ತ ಇಂದು ಏನಾದ್ರೂ ಮಾಡಿ ಆಕಾಶ್‌ ಮುಂದೆ ತನ್ನ ಪ್ರೇಮ ನಿವೇದನೆ ಮಾಡಲೇಬೇಕು ಎಂದು ನಿರ್ಧಾರ ಮಾಡಿರುವ ಸಹನಾ, ಆಕಾಶ್‌ಗೆ ಕರೆ ಮಾಡುತ್ತಾಳೆ. ಆದರೆ ಹೆಂಡತಿಯ ಜೊತೆಗೆ ಬೈಕ್‌ ರೈಡ್‌ ಹೋಗಿರುವ ಆಕಾಶ್‌ ಸಹನಾಳ ಕರೆಯನ್ನು ಸ್ವೀಕರಿಸುವುದಿಲ್ಲ. ಸಹನಾ ಎಷ್ಟೇ ಬಾರಿ ಕಾಲ್‌ ಮಾಡಿದ್ರು ಆಕಾಶ್‌ ಉತ್ತರಿಸುವುದಿಲ್ಲ. ಆಗ ಅವಳ ಸ್ನೇಹಿತೆ ಮಿಂಚು ಅವಳಿಗೆ ಇನ್ನೊಂದಿಷ್ಟು ಸಲಹೆಗಳನ್ನು ನೀಡುತ್ತಾಳೆ, ಅಲ್ಲದೇ ಆಕಾಶ್‌ನಿಗೆ ನಿನ್ನ ಮೇಲೆ ಬೆಟ್ಟದಷ್ಟು ಪ್ರೀತಿ ಇದೆ. ನೀನಲ್ಲದೆ ಅವಳ ಬದುಕಿನಲ್ಲಿ ಬೇರೆಯವರು ಇಂಪಾರ್ಟೆಂಟ್‌ ವ್ಯಕ್ತಿ ಇರಲು ಸಾಧ್ಯವೇ ಇಲ್ಲ ಎಂದೆಲ್ಲಾ ಇನ್ನಷ್ಟು ಆಕಾಶ್‌ ಮೇಲೆ ನಂಬಿಕೆ, ಪ್ರೀತಿ ಹುಟ್ಟುವಂತೆ ಮಾಡುತ್ತಾಳೆ.

ಪಾರ್ಕ್‌ನಲ್ಲಿ ಚುಕ್ಕಿಯನ್ನು ಭೇಟಿಯಾದ ಆಕಾಶ್‌-ಪುಷ್ಪಾ

ಪಾರ್ಕ್‌ನಲ್ಲಿ ನಾದಸ್ವರ ನುಡಿಸುತ್ತಿರುವ ಚುಕ್ಕಿಯನ್ನು ನೋಡಿದ ಆಕಾಶ್‌-ಪುಷ್ಪಾ ಅವಳನ್ನು ಭೇಟಿ ಮಾಡಿ ಮಾತನಾಡಿಸುತ್ತಾರೆ. ಚುಕ್ಕಿ ಹಾಗೂ ಅವಳ ತಾಯಿಯ ಬಾಂಧವ್ಯ ನೋಡಿದ ಪುಷ್ಪಾ ತನ್ನ ಅಣ್ಣನ ನೆನಪಾಗಿ ಕಣ್ಣೀರು ಸುರಿಸುತ್ತಾಳೆ. ಚುಕ್ಕಿ ಹಾಗೂ ಅವರ ಅಮ್ಮನನ್ನು ಪರಿಚಯಿಸಿಕೊಳ್ಳುವ ಆಕಾಶ್‌-ಪುಷ್ಪಾ ಅಲ್ಲಿಂದ ಹೊರಡುತ್ತಾರೆ.

ಪಾರ್ಕ್‌ನಲ್ಲಿ ಪುಷ್ಪಾಳ ಒಳ್ಳೆಯತನ ಅನಾವರಣ

ಬೈಕ್‌ನಲ್ಲಿ ಸುತ್ತಾಡುತ್ತ ಪಾರ್ಕ್‌ಗೆ ಬರುವ ಆಕಾಶ್‌-ಪುಷ್ಪಾ ಒಂದೆಡೆ ಕುಳಿತುಕೊಳ್ಳಬೇಕು ಎಂದು ಬಂದಾಗ ವಯಸ್ಸಾದ ಅಜ್ಜಿಯೊಬ್ಬರು ತಲೆತಿರುಗಿ ಬೀಳಲು ಮುಂದಾಗುತ್ತಾರೆ. ಆಗ ಅವರನ್ನು ಹಿಡಿದು ಕೂರಿಸಿ ಆರೈಕೆ ಮಾಡುತ್ತಾಳೆ ಪುಷ್ಪಾ. ಇನ್ನೊಂದು ಕಡೆ ಆಕಾಶ್‌ ತನಗೆಂದು ತಂದ ತಿಂಡಿಯನ್ನು ಹಸಿವೆ ಎಂದು ಬಂದ ಭಿಕ್ಷುಕನಿಗೆ ನೀಡಿ ಅವನ ಹಸಿವು ನೀಗಿಸುತ್ತಾಳೆ. ಇದನ್ನೆಲ್ಲಾ ನೋಡಿದ ಆಕಾಶ್‌ಗೆ ಪುಷ್ಪಾ ಮೇಲೆ ಪ್ರೀತಿ-ಅಭಿಮಾನ ಹೆಚ್ಚಾಗುತ್ತದೆ.

ಅತ್ತ ಆಕಾಶ್‌ ಪುಷ್ಪಾಳನ್ನು ಪ್ರೀತಿಸಿಲು ಆರಂಭಿಸಿದರೆ, ಇತ್ತ ಸಹನಾ ಆಕಾಶ್‌ ಪ್ರೀತಿ ಪಡೆಯಲು ಹಾತೊರೆಯುತ್ತಿದ್ದಾನೆ. ಆಕಾಶ್‌ ಪ್ರೀತಿ ಸಹನಾಗೋ ಪುಷ್ಪಾಗೋ? ನಿಜಕ್ಕೂ ಆಕಾಶ್‌ ಪುಷ್ಪಾಳನ್ನು ಪ್ರೀತಿ ಮಾಡ್ತಾನಾ, ಹೆಂಡತಿಗಾಗಿ ಇಷ್ಟಪಟ್ಟ ಹುಡುಕಿಯನ್ನು ದೂರ ಮಾಡ್ತಾನಾ, ಈ ಎಲ್ಲವನ್ನೂ ತಿಳಿಯಲು ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

IPL_Entry_Point