ಕನ್ನಡ ಸುದ್ದಿ  /  Entertainment  /  Television News Colors Kannada Brindavana Kannada Serial Today Episode 116 Mar 13th Aakash And Pushpa Get Together Rst

Brundavana Serial: ಆಕಾಶ್‌ ಮುಂದೆ ಪ್ರೀತಿ ಹೇಳಿಕೊಳ್ಳಲು ಸಹನಾ ಚಡಪಡಿಕೆ; ಪಾರ್ಕ್‌ನಲ್ಲಿ ಪುಷ್ಪಾ ಕಿಡ್ನಾಪ್‌ಗೆ ದುಷ್ಕರ್ಮಿಗಳ ಸಂಚು

Brindavana Kannada Serial Today Episode Mar 12th: : ʼಬೃಂದಾವನʼ ಧಾರಾವಾಹಿಯ ಬುಧವಾರದ ಎಪಿಸೋಡ್‌ನಲ್ಲಿ ಪುಷ್ಪಾ-ಆಕಾಶ್‌ ಪಾರ್ಕ್‌ನಲ್ಲಿ ಹಿತವಾಗಿ ಸಮಯ ಕಳೆಯುತ್ತಿರುವ ಹೊತ್ತಿನಲ್ಲಿ ಪದೇ ಪದೇ ಕಾಲ್‌ ಮಾಡುವ ಸಹನಾ ಆಕಾಶ್‌ನನ್ನು ತಾನಿರುವ ಜಾಗಕ್ಕೆ ಕರೆಸಿಕೊಳ್ಳುತ್ತಾಳೆ. ಇತ್ತ ಪಾರ್ಕ್‌ನಲ್ಲಿ ಒಂಟಿಯಾಗಿರುವ ಪುಷ್ಪಾಳ ಕಿಡ್ನಾಪ್‌ಗೆ ದುಷ್ಕರ್ಮಿಗಳ ಸಂಚು.

ಆಕಾಶ್‌ ಮುಂದೆ ಪ್ರೀತಿ ಹೇಳಿಕೊಳ್ಳಲು ಸಹನಾ ಚಡಪಡಿಕೆ; ಪಾರ್ಕಿನಲ್ಲಿ ಪುಷ್ಪಾ ಕಿಡ್ನಾಪ್‌ಗೆ ದುಷ್ಕರ್ಮಿಗಳ ಸಂಚು
ಆಕಾಶ್‌ ಮುಂದೆ ಪ್ರೀತಿ ಹೇಳಿಕೊಳ್ಳಲು ಸಹನಾ ಚಡಪಡಿಕೆ; ಪಾರ್ಕಿನಲ್ಲಿ ಪುಷ್ಪಾ ಕಿಡ್ನಾಪ್‌ಗೆ ದುಷ್ಕರ್ಮಿಗಳ ಸಂಚು

ಬೃಂದಾವನ ಧಾರಾವಾಹಿಯ ನಿನ್ನೆಯ (ಮಾ.13) ಸಂಚಿಕೆಯಲ್ಲಿ ಪುಷ್ಪಾ-ಆಕಾಶ್‌ ಪ್ರಣಯ ಪಕ್ಷಿಗಳಂತೆ ಪಾರ್ಕ್‌ನಲ್ಲಿ ಸಮಯ ಕಳೆಯುತ್ತಿರುವ ಮತ್ತೆ ಕಾಲ್‌ ಮಾಡುತ್ತಾಳೆ ಸಹನಾ. ಆಗಲೂ ಸಹನಾ ಕಾಲ್‌ ಅವಾಯ್ಡ್‌ ಮಾಡಲು ಯತ್ನಿಸುವ ಆಕಾಶ್‌ಗೆ ಪುಷ್ಪಾ ಬುದ್ಧಿವಾದ ಹೇಳುತ್ತಾಳೆ. ಅಲ್ಲದೇ ಕರೆ ಸ್ವೀಕರಿಸಿ ಏನು ಎಂದು ಕೇಳಲು ಹೇಳುತ್ತಾಳೆ. ಕಾಲ್‌ ಪಿಕ್‌ ಮಾಡುವ ಆಕಾಶ್‌ ಬಳಿ ಸಹನಾ ನಾನು ನಿಮ್ಮನ್ನು ಅರ್ಜೆಂಟಾಗಿ ಮೀಟ್‌ ಆಗಬೇಕು, ಬರ್ತೀರಾ ಎಂದು ಕೇಳುವ ಸಹನಾ, ಭೇಟಿಯಾಗುವ ಜಾಗವನ್ನೂ ತಾನೇ ತಿಳಿಸುತ್ತಾಳೆ. ಇತ್ತ ಪುಷ್ಪಾಳನ್ನು ಬಿಡಲಾಗದ ಆಕಾಶ್‌ ಒಲ್ಲದ ಮನಸ್ಸಿನಿಂದ ಸಹನಾಳನ್ನು ಭೇಟಿ ಮಾಡಲು ಹೊರಡುತ್ತಾನೆ.

ಪ್ರೀತಿ ಹೇಳಿಕೊಳ್ಳಲು ಸಿದ್ಧಳಾಗಿ ಬರುವ ಸಹನಾ

ಆಕಾಶ್‌ ಮುಂದೆ ಪ್ರೇಮ ನಿವೇದನೆ ಮಾಡಲೇಬೇಕು ಎಂದು ಸಿದ್ಧಳಾಗಿ ತಾನು ಹೇಳಿದ್ದ ದೇವಾಲಯಕ್ಕೆ ಬರುತ್ತಾಳೆ ಸಹನಾ. ಅವಳು ಬರುವ ಹೊತ್ತಿಗೆ ಆಕಾಶ್‌ ಕೂಡ ಅಲ್ಲಿಗೆ ಬಂದಿರುತ್ತಾನೆ. ಮಾತನಾಡಲು ಆರಂಭಿಸಿದ ಸಹನಾ ಎಲ್ಲವನ್ನೂ ಗೊಂದಲ ಗೊಂದಲದಿಂದ ಹೇಳುತ್ತಾಳೆ. ತಾನು ಡೈರಿ ಓದಿದೆ ಎಂದು ಹೇಳುವ ಆಕೆ ಇದ್ದಕ್ಕಿದ್ದಂತೆ ಅಡ್ಡ ಮಾತನಾಡುತ್ತಾಳೆ. ತನ್ನ ಮನಸ್ಸಿನಲ್ಲಿ ನೀವು ಇದೀರಾ ಎಂದು ನೇರವಾಗಿ ಹೇಳದೇ ಏನೇನೋ ಹೇಳುವ ಸಹನಾಳ ಮಾತು ಆಕಾಶ್‌ಗೆ ಅರ್ಥವಾಗುವುದಿಲ್ಲ. ಕೊನೆಗೆ ಪಾನಿಪುರಿ ತಿನ್ನುತ್ತಾ ಮಾತನಾಡೋಣ ಎಂದು ಆಕಾಶ್‌ ಬಳಿ ಹೇಳುವ ಸಹನಾ ಚಡಪಡಿಕೆಯ ನಡುವೆಯೂ ಹೇಗಾದ್ರೂ ಪ್ರೀತಿ ಹೇಳಿಕೊಳ್ಳಲೇಬೇಕು ಎಂದು ಮನಸ್ಸಿನಲ್ಲೇ ನಿರ್ಧಾರ ಮಾಡುತ್ತಾಳೆ.

ಪುಷ್ಪಾಳಿಗೆ ಪಾರ್ಕ್‌ನಲ್ಲಿ ಎದುರಾಗಿದೆ ಕಂಟಕ

ಇತ್ತ ಗಂಡನ ಬರುವಿಕೆಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿರುವ ಪುಷ್ಪಾಗೆ ಒಂದರ ಹಿಂದೆ ಒಂದು ಕಂಟಕಗಳು ಎದುರಾಗುತ್ತಿವೆ. ಕಡಲೆಕಾಯಿ ಮಾರುವ ಮಹಿಳೆಯೊಬ್ಬರ ಬಳಿ ಕುಳಿತು ಮಾತನಾಡುತ್ತಿರುವ ಪುಷ್ಪಾಳನ್ನು ಅಪಹರಿಸಲು ದುಷ್ಕರ್ಮಿಗಳು ಪ್ಲಾನ್‌ ಮಾಡ್ತಾರೆ.

ಆಕಾಶ್‌ ಮುಂದೆ ತನ್ನ ಪ್ರೀತಿಯನ್ನು ಹೇಳಿಕೊಳ್ತಾಳ ಸಹನಾ, ದುಷ್ಕರ್ಮಿಗಳು ಪುಷ್ಪಾಳನ್ನ ಕಿಡ್ನಾಪ್‌ ಮಾಡೇ ಬಿಡ್ತಾರಾ ಅಥವಾ ಅದನ್ನ ತಡಿಯೋಕೆ ಹೀರೋ ರೀತಿ ಆಕಾಶ್‌ ಬರ್ತನಾ, ಸಹನಾ ಪ್ರೀತಿ ಹೇಳಿಕೊಂಡ್ರೆ ಪುಷ್ಪಾ ಬದುಕಿನ ಕಥೆ ವ್ಯಥೆ ಆಗುತ್ತಾ ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point