ಕನ್ನಡ ಸುದ್ದಿ  /  Entertainment  /  Television News Colors Kannada Brindavana Kannada Serial Today Episode 117 Mar 14th Pushpa Is Kidnapped Rst

Brundavana Serial: ಪಾರ್ಕ್‌ನಿಂದ ಕಿಡ್ನಾಪ್‌ ಆಗೇ ಬಿಟ್ಲು ಪುಷ್ಪಾ; ಹೆಂಡತಿಯನ್ನು ಹುಡುಕಿ ಹೊರಟ ಆಕಾಶ್‌ಗೆ ಎದುರಾದ ರಾಮಾಚಾರಿ

Brindavana Kannada Serial Today Episode Mar 14th: : ʼಬೃಂದಾವನʼ ಧಾರಾವಾಹಿಯ ಗುರುವಾರದ ಎಪಿಸೋಡ್‌ನಲ್ಲಿ ಸಹನಾ ಆಕಾಶ್‌ ಮುಂದೆ ಪ್ರೀತಿ ಹೇಳಿಕೊಳ್ಳುತ್ತಿದ್ದರೆ, ಇತ್ತ ಪಾರ್ಕ್‌ನಲ್ಲಿ ಕೂತಿದ್ದ ಪುಷ್ಪಾಳನ್ನ ಕಿಡ್ನಾಪರ್‌ಗಳು ಎತ್ತಿಕೊಂಡು ಹೋಗುತ್ತಾರೆ. ಪುಷ್ಪಾ ಹುಡುಕೋಕೆ ಆಕಾಶ್‌ಗೆ ಸಾಥ್‌ ಕೊಡುವ ರಾಮಾಚಾರಿ (ಕಿಟ್ಟಿ).

ಪಾರ್ಕ್‌ನಿಂದ ಕಿಡ್ನಾಪ್‌ ಆಗೇ ಬಿಟ್ಲು ಪುಷ್ಪಾ; ಹೆಂಡತಿಯನ್ನು ಹುಡುಕಿ ಹೊರಟ ಆಕಾಶ್‌ಗೆ ಎದುರಾದ ರಾಮಾಚಾರಿ
ಪಾರ್ಕ್‌ನಿಂದ ಕಿಡ್ನಾಪ್‌ ಆಗೇ ಬಿಟ್ಲು ಪುಷ್ಪಾ; ಹೆಂಡತಿಯನ್ನು ಹುಡುಕಿ ಹೊರಟ ಆಕಾಶ್‌ಗೆ ಎದುರಾದ ರಾಮಾಚಾರಿ

ಬೃಂದಾವನ ಧಾರಾವಾಹಿಯ ನಿನ್ನೆಯ (ಮಾ.14) ಸಂಚಿಕೆಯಲ್ಲಿ ಸಹನಾ ಹಾಗೂ ಆಕಾಶ್‌ ಪಾನಿಪುರಿ ತಿನ್ನುತ್ತಾ ಖುಷಿಯಿಂದ ಮಾತನಾಡುತ್ತಿರುತ್ತಾರೆ. ಮಾತಿನ ಮಧ್ಯೆ ಸಹನಾ ಆಕಾಶ್‌ ಬಳಿ ನೀವು ಇಷ್ಟ ಪಡುವ ಹುಡುಗಿ ಹೇಗಿರಬೇಕು ಎಂದು ಪ್ರಶ್ನೆ ಮಾಡುತ್ತಾಳೆ. ಆಗ ಪುಷ್ಪಾಳನ್ನು ಮನದಲ್ಲಿ ನೆನೆಯುತ್ತಾ, ಅವಳ ಬಗ್ಗೆ ಗುಣಗಾನ ಮಾಡುತ್ತಾನೆ ಆಕಾಶ್‌. ಇತ್ತ ಆಕಾಶ್‌ ಹೆಂಡತಿಯ ಬಗ್ಗೆ ಪ್ರೇಮಸುಧೆಯನ್ನೇ ಹರಿಸುತ್ತಿದ್ದರೆ, ಅತ್ತ ಸಹನಾ ಆಕಾಶ್‌ ಹೇಳುತ್ತಿರುವುದೆಲ್ಲಾ ತನಗೆ, ಅವನು ತನ್ನನ್ನೇ ಪ್ರೀತಿಸುತ್ತಿರುವುದು ಎಂದು ಭ್ರಮಾಲೋಕದಲ್ಲಿ ತೇಲುತ್ತಾಳೆ. ತಾನು ನಿಮ್ಮನ್ನು ಬಿಟ್ಟು ಯಾರೊಂದಿಗೆ ಪಾನಿಪುರಿ ಹಂಚಿಕೊಂಡಿಲ್ಲ ಎಂದು ಹೇಳುವ ಸಹನಾ ನಿಮ್ಮೊಂದಿಗೆ ಎಲ್ಲವನ್ನೂ ಹಂಚಿಕೊಳ್ಳುವ ಆಸೆ ನನಗೆ ಎಂದು ತನ್ನ ಮನದ ಮಾತನ್ನು ವ್ಯಕ್ತಪಡಿಸುತ್ತಾಳೆ. ಆದರೆ ಆ ಹೊತ್ತಿಗೆ ಸರಿಯಾಗಿ ಆಕಾಶ್‌ಗೆ ಮನೆಯಿಂದ ಅತ್ತೆ ಅನುಪಮಾ ಕರೆ ಮಾಡುತ್ತಾರೆ.

ಆಕಾಶ್‌ಗೆ ಕಾಲ್‌ ಮಾಡುವ ಅನುಪಮಾ ಹಾಗೂ ತಂಡ ಆಕಾಶ್‌ಗೆ ಛೇಡಿಸುತ್ತಾರೆ. ಪುಷ್ಪಾ ಜೊತೆ ಇದ್ದು ಮನೆಗೆ ದಾರಿ ನೆನಪು ಹೋಯ್ತಾ ಎಂದು ಅಣಿಕಿಸುತ್ತಾರೆ. ಆಗ ಆಕಾಶ್‌ಗೆ ತಾನು ಪುಷ್ಪಾಳನ್ನ ಪಾರ್ಕ್‌ನಲ್ಲಿ ಬಿಟ್ಟು ಬಂದಿರುವ ವಿಚಾರ ನೆನಪಿಗೆ ಬರುತ್ತದೆ. ತಕ್ಷಣಕ್ಕೆ ಒಂದು ಕ್ಷಣವೂ ತಡ ಮಾಡದೇ ಸಹನಾಗೆ ಬಾಯ್‌ ಹೇಳಿ ಹೊರಡುತ್ತಾನೆ ಆಕಾಶ್‌. ತನ್ನದ ಮನದ ಮಾತು ಹೇಳಿಕೊಳ್ಳಲು ಆಗದೇ, ಆಕಾಶ್‌ ಅಷ್ಟೊಂದು ಗಡಿಬಿಡಿಯಲ್ಲಿ ಯಾಕೆ ಹೋದ ಎಂಬ ಅರಿವೂ ಆಗದೇ ಸಹನ ಚಡಪಡಿಸುತ್ತಾ ನಿಲ್ಲುತ್ತಾಳೆ.

ಪುಷ್ಪಾಳನ್ನ ಕಿಡ್ನಾಪ್‌ ಮಾಡಿದ ಕಪಾಲಿ ಗ್ಯಾಂಗ್‌

ಇತ್ತ ಗಂಡನಿಗೆ ಕಾಯುತ್ತ ಪಾರ್ಕ್‌ನಲ್ಲಿ ಒಬ್ಬಳೇ ಕುಳಿತ ಪುಷ್ಪಾಳಿಗೆ ಗಂಡಾಂತರವೊಂದು ಎದುರಾಗುತ್ತದೆ. ಪಾರ್ಕ್‌ಗೆ ಬರುವ ಕಪಾಲಿ ಗ್ಯಾಂಗ್‌ ಪುಷ್ಪಾ ಒಬ್ಬಳೇ ಕುಳಿತಿದ್ದನ್ನು ನೋಡಿ ಅವಳನ್ನ ಎತ್ತಿಕೊಂಡು ಹೋಗುತ್ತಾರೆ. ಆಕಾಶ್‌ ಬೈಕ್‌ನಲ್ಲಿ ತನ್ನ ಎದುರೇ ಬಂದರೂ ಪುಷ್ಪಾ ಅವನನ್ನು ಕೂಗದಂತೆ ರೌಡಿಗಳು ಅವರ ಬಾಯಿ ಮುಚ್ಚಿರುತ್ತಾರೆ. ಕೊನೆಗೆ ಅವಳನ್ನು ಕಪಾಲಿ ಇರುವ ಸ್ಥಳಕ್ಕೆ ಕರೆದುಕೊಂಡು ಹೋಗು ಗೂಂಡಾಗಳು ಇತರ ಹುಡುಗಿಯರ ಜೊತೆ ಕೂಡಿ ಹಾಕುತ್ತಾರೆ. ಅಲ್ಲಿ ಆ ಹುಡುಗಿಯನ್ನು ವಿದೇಶಕ್ಕೆ ಮಾರುವ ಕಪಾಲಿ ಪ್ಲಾನ್‌ ಪುಷ್ಪಾಳಿಗೆ ತಿಳಿಯುತ್ತದೆ.

ಪಾರ್ಕ್‌ನಲ್ಲಿ ಹೆಂಡತಿ ಕಾಣದೇ ಆಕಾಶ್‌ ಕಂಗಾಲು

ಹೆಂಡತಿಯನ್ನು ಹುಡುಕುತ್ತಾ ಪಾರ್ಕ್‌ಗೆ ಬರುವ ಆಕಾಶ್‌ಗೆ ಅಲ್ಲಿ ತನ್ನ ಹೆಂಡತಿ ಇಲ್ಲ ಎನ್ನುವುದು ಅರಿವಾಗುತ್ತದೆ. ಪಾರ್ಕ್‌ನಲ್ಲಿದ್ದವರ ಬಳಿ ವಿಚಾರಿಸಿದಾಗ ಪುಷ್ಪಾಳನ್ನು ಕಪಾಲಿ ಗ್ಯಾಂಗ್‌ನವರು ಎತ್ತಿಕೊಂಡು ಹೋದ ಸುದ್ದಿ ಹೇಳುತ್ತಾರೆ. ಇದರಿಂದ ಕಂಗಾಲಾಗುವ ಆಕಾಶ್‌ ಪುಷ್ಪಾಳನ್ನ ಹುಡುಕಿ ಹೊರಡುತ್ತಾನೆ. ದಾರಿಯುದ್ದಕ್ಕೂ ಹೆಂಡತಿಯ ಬಗ್ಗೆ ಯೋಚಿಸುತ್ತಾ ಸಾಗುವ ಆಕಾಶ್‌ ಬೈಕ್‌ವೊಂದಕ್ಕೆ ಡಿಕ್ಕಿ ಹೊಡೆಯುತ್ತಾನೆ.

ಆಕಾಶ್‌ಗೆ ಎದುರಾದ ರಾಮಾಚಾರಿ

ಆಕಾಶ್‌ ಡಿಕ್ಕಿ ಹೊಡೆದು ಬೀಳಲು ಸಿದ್ಧರಾದ ವ್ಯಕ್ತಿಯನ್ನು ಸಾವರಿಸಿಕೊಂಡು ಎಬ್ಬಿಸುತ್ತಾನೆ. ಅವರನ್ನು ನೋಡಿದಾಕ್ಷಣ ರಾಮಾಚಾರಿ ಎಂದು ಗುರುತು ಹಿಡಿದು ಮಾತಾಡಿಸುವ ಆಕಾಶ್‌ ಪುಷ್ಪಾ ಕಾಣೆಯಾಗಿರುವ ವಿಚಾರ ತಿಳಿಸುತ್ತಾನೆ. ಆದರೆ ಆಕಾಶ್‌ಗೆ ಎದುರಾಗಿರುವುದು ರಾಮಾಚಾರಿ ಆಗಿರದೇ ಕಿಟ್ಟಿ ಆಗಿರುತ್ತಾನೆ. ಕಿಟ್ಟಿ ಆಕಾಶ್‌ಗೆ ಪುಷ್ಪಾಳನ್ನು ಹುಡುಕಲು ನೆರವಾಗುವ ಭರವಸೆ ನೀಡುತ್ತಾನೆ. ಅಲ್ಲದೇ ಸದ್ಯ ಪುಷ್ಪಾಳನ್ನು ಎಲ್ಲಿ ಇರಿಸಿದ್ದಾರೆ, ಕಪಾಲಿ ಗ್ಯಾಂಗ್‌ ಎಲ್ಲಿದೆ ಎಂಬುದನ್ನ ಫೋನ್‌ ಮಾಡಿ ತಿಳಿದುಕೊಳ್ಳಲು ಹೇಳುತ್ತಾನೆ ಕಿಟ್ಟಿ.

ಕಿಟ್ಟಿ ಸಹಾಯದಿಂದ ಪುಷ್ಪಾಳನ್ನು ಹುಡುಕುವಲ್ಲಿ ಯಶಸ್ವಿಯಾಗಾನ್ತಾ ರಾಮಾಚಾರಿ, ರೌಡಿ ಪುಷ್ಪಾಳಿಗೆ ತೊಂದರೆ ಮಾಡ್ತಾರಾ, ಇತ್ತ ಸಹನಾ ಆಕಾಶ್‌ ಹೇಳಿದ್ದು ತನ್ನ ಬಗ್ಗೆಯೇ ಎಂದು ತಿಳಿದುಕೊಂಡು ಪ್ರೀತಿಯನ್ನು ಮುಂದುವರಿಸುತ್ತಾಳಾ, ಈ ಎಲ್ಲವನ್ನೂ ತಿಳಿಯಲು ಮುಂದಿನ ಸಂಚಿಕೆಗಳನ್ನು ನಿರೀಕ್ಷಿಸಿ.

(This copy first appeared in Hindustan Times Kannada website. To read more like this please logon to kannada.hindustantimes.com)

 

IPL_Entry_Point