ಕನ್ನಡ ಸುದ್ದಿ  /  Entertainment  /  Television News Colors Kannada Brindavana Kannada Serial Today Episode 118 Mar 15th Pushpa Is Kidnapped Rst

Brundavana Serial: ಪುಷ್ಪಾಳನ್ನು ಕಾಪಾಡೋಕೆ ಚಾರುವನ್ನು ಪಣಕ್ಕಿಟ್ಟ ರಾಮಾಚಾರಿ ಅಲಿಯಾಸ್‌ ಕಿಟ್ಟಿ; ಇವನ ಪ್ಲಾನ್‌ ಆದ್ರೂ ಏನು?

Brindavana Kannada Serial Today Episode Mar 15th: : ʼಬೃಂದಾವನʼ ಧಾರಾವಾಹಿಯ ಶುಕ್ರವಾರದ ಎಪಿಸೋಡ್‌ನಲ್ಲಿ ಆಕಾಶ್‌-ಕಿಟ್ಟಿ ಸೇರಿ ಪುಷ್ಪಾ ಇರುವ ಲೊಕೇಷನ್‌ ಹುಡುಕೋಕೆ ಸಖತ್‌ ಪ್ಲಾನ್‌ ಮಾಡ್ತಾರೆ, ಇದಕ್ಕೆ ಚಾರುವನ್ನು ಬಳಸಿಕೊಳ್ತಾನೆ ಕಿಟ್ಟಿ. ಇತ್ತ ಮನೆಯವರು ಪುಷ್ಪಾ-ಆಕಾಶ್‌ ಮನೆಗೆ ಬಾರದೇ ಕಂಗಾಲಾಗಿದ್ದಾರೆ.

ಪುಷ್ಪಾಳನ್ನು ಕಾಪಾಡೋಕೆ ಚಾರುವನ್ನು ಪಣಕ್ಕಿಟ್ಟ ರಾಮಾಚಾರಿ ಅಲಿಯಾಸ್‌ ಕಿಟ್ಟಿ; ಇವನ ಪ್ಲಾನ್‌ ಆದ್ರೂ ಏನು?
ಪುಷ್ಪಾಳನ್ನು ಕಾಪಾಡೋಕೆ ಚಾರುವನ್ನು ಪಣಕ್ಕಿಟ್ಟ ರಾಮಾಚಾರಿ ಅಲಿಯಾಸ್‌ ಕಿಟ್ಟಿ; ಇವನ ಪ್ಲಾನ್‌ ಆದ್ರೂ ಏನು?

ಬೃಂದಾವನ ಧಾರಾವಾಹಿಯ ನಿನ್ನೆಯ (ಮಾ.15) ಸಂಚಿಕೆಯಲ್ಲಿ ಆಕಾಶ್‌ ಬಳಿ ಪುಷ್ಪಾಳನ್ನು ಕಾಪಾಡಲು ಏನು ಮಾಡಬಹುದು ಎಂಬ ಐಡಿಯಾವನ್ನು ವಿವರಿಸುತ್ತಾರೆ ಕಿಟ್ಟಿ. ಆದರೆ ಕಿಟ್ಟಿ ಹೇಳಿದ ಐಡಿಯಾ ಕೇಳಿ ಇನ್ನಷ್ಟು ಗಾಬರಿಗೆ ಒಳಗಾಗುವ ಆಕಾಶ್‌ ಇದನ್ನೆಲ್ಲಾ ಮಾಡಲು ಸಾಧ್ಯವೇ ಎಂದು ಪ್ರಶ್ನಿಸುತ್ತಾನೆ, ಅಲ್ಲದೇ ಹೀಗೆ ಮಾಡಲು ಯಾರಿಂದ ಸಾಧ್ಯ ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ಉತ್ತರಿಸುವ ಕಿಟ್ಟಿ ಅನ್ಯಾಯವನ್ನು ದಹಿಸಲು ನಾವು ಅನ್ಯಾಯದ ಮಾರ್ಗವನ್ನೇ ಹಿಡಿಯಬೇಕು ಆಗಷ್ಟೇ ನ್ಯಾಯ ಗೆಲ್ಲಲು ಸಾಧ್ಯ ಎಂದು ಆಕಾಶ್‌ಗೆ ನೀತಿಪಾಠ ಹೇಳುತ್ತಾನೆ. ಅಲ್ಲದೇ ಈ ಕೆಲಸ ಮಾಡೋಕೆ ಚಾರು ಮೇಡಂ ಅವರಿಂದ ಮಾತ್ರ ಸಾಧ್ಯ ಎನ್ನುತ್ತಾನೆ. ಇದಕ್ಕೆ ಆಕಾಶ್‌ ಮನಸ್ಸು ಒಪ್ಪುವುದಿಲ್ಲ. ಅಲ್ಲದೇ ಇದರಿಂದ ಪುಷ್ಪಾಗಾದಂತೆ ಚಾರು ಅತ್ತಿಗೆಗೂ ಆದ್ರೆ ಏನ್‌ ಮಾಡೋದು ಅಂತ ಪ್ರಶ್ನೆ ಮಾಡ್ತಾನೆ. ಅದಕ್ಕೆ ಉತ್ತರಿಸುವ ರಾಮಾಚಾರಿ ಅದನ್ನು ನಾವು ಎದುರಿಸಬೇಕು ಎಂದು ಆಕಾಶ್‌ಗೆ ಧೈರ್ಯ ತುಂಬುತ್ತಾನೆ. ಮಾತ್ರವಲ್ಲ, ಕೂಡಲೇ ಚಾರುಗೆ ಕರೆ ಮಾಡಿ ತಾನು ಹೇಳಿದ ಕಡೆ ಬರುವಂತೆ ತಿಳಿಸುತ್ತಾನೆ. ಚಾರು ಬರೋಲ್ಲ ಅಂತ ರೇಗಿದ್ರು, ಹೇಗೋ ಸಮಾಧಾನ ಮಾಡಿ ಅವಳನ್ನು ತಾನಿರುವ ಜಾಗಕ್ಕೆ ಕರೆಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾನೆ ಕಿಟ್ಟಿ.

ಚಾರುವನ್ನು ಇನ್ನೊಂದು ಜಾಗಕ್ಕೆ ಕರೆದುಕೊಂಡು ಹೋಗುತ್ತಾನೆ ಕಿಟ್ಟಿ. ಅಲ್ಲಿ ಹೋಗಿ ಕಪಾಲಿ ಗ್ಯಾಂಗ್‌ನ ಶೀನನಿಗೆ ಕರೆ ಮಾಡುವ ಕಿಟ್ಟಿ ನೀವು ಹೇಳಿದಂತೆ ಹುಡುಗಿಯನ್ನು ಕರೆದುಕೊಂಡು ಬಂದಿದ್ದೇನೆ, ನೀವು ಎಲ್ಲಿದ್ದೀರಾ ಎಂದು ಕೇಳುತ್ತಾನೆ. ಆರಂಭದಲ್ಲಿ ಕಿಟ್ಟಿಯನ್ನು ಅನುಮಾನಿಸುವ ಶೀನ ನಂತರ ತಾವಿರುವ ಜಾಗ ಹೇಳುತ್ತಾನೆ. ಅಲ್ಲಿಂದ ಹೊರಟ ಚಾರುವನ್ನು ಅಡ್ಡಗಟ್ಟುವ ಶೀನ ಅಂಡ್‌ ಗ್ಯಾಂಗ್‌ ಕಿಟ್ಟಿಗೆ 50 ಸಾವಿರ ಹಣ ನೀಡಿ ಅವಳನ್ನು ಕಿಡ್ನಾಪ್‌ ಮಾಡಿಕೊಂಡು ಅಲ್ಲಿಂದ ಕರೆದುಕೊಂಡು ಹೋಗುತ್ತಾರೆ. ಇದೇನಪ್ಪಾ ಕಿಟ್ಟಿ ಚಾರು ಮೇಡಂ ಅನ್ನು ಅವ್ರಿಗೆ ಸೇಲ್‌ ಮಾಡಿದ್ನಾ, ಕಿಟ್ಟಿ ಉದ್ದೇಶ ಆದ್ರೂ ಏನು ಅಂದ್ಕೋಬೇಡಿ. ಮುಂದೆ ಓದಿ.

ಕ್ಷಣ ಹೊತ್ತು ಶೀನನ ಕಾರ್‌ ಅನ್ನೇ ಫಾಲೋ ಮಾಡುವ ಕಿಟ್ಟಿ ನಂತರ ತನ್ನ ದಾರಿ ಹಿಡಿದು ಆಕಾಶ್‌ ಬಳಿಗೆ ಬರುತ್ತಾನೆ. ಅಲ್ಲದೇ ಆಕಾಶ್‌ಗೆ ಚಾರು ಮೇಡಂ ಅನ್ನು ರೌಡಿಗಳು ಎತ್ತಿಕೊಂಡು ಹೋದ್ರು, ಅವರಿರುವ ಜಾಗಕ್ಕೆ ನನ್ನನ್ನು ಕರೆಸಿಕೊಂಡಿಲ್ಲ ಎನ್ನುತ್ತಾರೆ. ಇದರಿಂದ ಆಕಾಶ್‌ಗೆ ಇನ್ನಷ್ಟು ಭಯ, ಬೇಸರವಾಗುತ್ತೆ. ಆಗ ಕಿಟ್ಟಿ ಭಯಪಡಬೇಡ ಬ್ರದರ್‌, ಅವನ ಬಳಿ ಹೇಗೆ ಪ್ಲಾನ್‌ ಎ, ಬಿ ಇದ್ಯೋ, ಹಾಗೆ ನನ್ನ ಬಳಿಯೂ ಪ್ಲಾನ್‌ ಎ, ಬಿ, ಝಡ್‌ವರೆಗೂ ಇದೆ ಎನ್ನುತ್ತಾರೆ. ಅಲ್ಲದೇ ತಾನು ಚಾರು ಬ್ಯಾಗ್‌ ಒಳಗೆ ಲೊಕೇಷನ್‌ ಟ್ರ್ಯಾಕರ್‌ ಹಾಕಿರುವುದನ್ನು ಹೇಳುತ್ತಾನೆ. ಆ ಕೂಡಲೇ ಆಕಾಶ್‌-ಕಿಟ್ಟಿ ಇಬ್ಬರೂ ಲೊಕೇಷನ್‌ ಹುಡುಕಿ ಹೊರಡುತ್ತಾರೆ.

ಇತ್ತ ಮನೆಯಲ್ಲಿ ಆಕಾಶ್‌-ಪುಷ್ಪಾ ಇನ್ನೂ ಬಂದಿಲ್ಲ ಎಂದು ಗಾಬರಿಯಿಂದ ಕಾಯುತ್ತಿರುವ ಅನುಪಮಾ ಹಾಗೂ ಇತರರು ಅವರ ಬರುವಿಕೆಯನ್ನೇ ಎದುರು ನೋಡುತ್ತಿರುತ್ತಾರೆ. ಆಗ ಅಲ್ಲಿಗೆ ಬರುವ ಸತ್ಯಮೂರ್ತಿ ಅಪಶಕುನದ ಮಾತು ಹೇಳುತ್ತಾನೆ, ಒಂದೋ ಆಕಾಶ್‌ ಪುಷ್ಪಾಳನ್ನು ಅವಳ ಮನೆಗೆ ಬಿಟ್ಟು ಗುಡ್‌ ಬೈ ಹೇಳಿ ಬಂದಿರುತ್ತಾನೆ, ಎಲ್ಲ ಅಂದ್ರೆ ಪುಷ್ಪಾಳನ್ನು ರೌಡಿಗಳು ಎತ್ತಿಕೊಂಡು ಹೋಗಿರುತ್ತಾರೆ ಎನ್ನುತ್ತಾನೆ. ಈ ಮಾತು ಕೇಳಿ ಮನೆಯವರಿಗೆ ಗಾಬರಿ ಇನ್ನಷ್ಟು ಹೆಚ್ಚಾಗುತ್ತದೆ.

ಕಿಟ್ಟಿ-ಆಕಾಶ್‌ ಶೀನ ಲೊಕೇಷನ್‌ ಟ್ರೇಸ್‌ ಮಾಡಿ, ಕಪಾಲಿ ಪುಷ್ಪಾಳನ್ನು ಇಟ್ಟಿರುವ ಜಾಗ ಸೇರ್ತಾರಾ, ಚಾರಿಗೆ ಕಿಟ್ಟಿ ಉದ್ದೇಶ ಅರ್ಥ ಆಗುತ್ತಾ, ಸತ್ಯಮೂರ್ತಿ ಹೇಳಿರುವ ವಿಚಾರ ಸತ್ಯ ಆಗಿದೆ ಅಂತ ಗೊತ್ತಾದ್ರೆ ಮನೆಯವರ ಸ್ಥಿತಿ ಏನಾಗಬಹುದು, ಒಟ್ಟಾರೆ ಕಿಡ್ನಾಪರ್‌ಗಳಿಂದ ಚಾರು, ಪುಷ್ಪಾ ಬಚಾವ್‌ ಆಗ್ತಾರಾ, ಕಪಾಲಿ ಗ್ಯಾಂಗ್‌ ಪೊಲೀಸರ ಕೈಗೆ ಸಿಕ್ಕು ಬೀಳ್ತಾರಾ ಈ ಎಲ್ಲವನ್ನೂ ಮುಂದಿನ ವಾರದ ಸಂಚಿಕೆಗಳಲ್ಲಿ ನಿರೀಕ್ಷಿಸಿ.

IPL_Entry_Point