ಕನ್ನಡ ಸುದ್ದಿ  /  Entertainment  /  Television News Colors Kannada Brindavana Kannada Serial Today Episode 119 Mar 18th Pushpa Is Kidnapped Rst

Brundavana Serial: ಕಪಾಲಿ ಗ್ಯಾಂಗ್‌ ಜೊತೆ ಕಿಟ್ಟಿ-ಆಕಾಶ್‌ ಬಿಗ್‌ ಫೈಟ್‌; ಕೊನೆಗೂ ಸೇಫ್‌ ಆದ್ರು ಪುಷ್ಪಾ-ಚಾರು

Brindavana Kannada Serial Today Episode Mar 18th: : ʼಬೃಂದಾವನʼ ಧಾರಾವಾಹಿಯ ಸೋಮವಾರದ ಎಪಿಸೋಡ್‌ನಲ್ಲಿ ಚಾರುವನ್ನ ಪುಷ್ಪಾ ಇರುವ ಜಾಗಕ್ಕೆ ಕರೆದುಕೊಂಡು ಬಂದ ಕಪಾಲಿ ಗ್ಯಾಂಗ್‌. ಕಪಾಲಿ ಅಡ್ಡಕ್ಕೆ ಬಂದೇ ಬಿಟ್ರು ಕಿಟ್ಟಿ-ಆಕಾಶ್‌. ಕಪಾಲಿಯಿಂದ ಪುಷ್ಪಾ ಜೊತೆಗೆ ಅಲ್ಲಿರುವ ಹೆಣ್ಣುಮಕ್ಕಳನ್ನೂ ಕಾಪಾಡಿದ್ರು ಹೀರೋಗಳು.

ಕಪಾಲಿ ಗ್ಯಾಂಗ್‌ ಜೊತೆ ಕಿಟ್ಟಿ-ಆಕಾಶ್‌ ಬಿಗ್‌ ಫೈಟ್‌; ಕೊನೆಗೂ ಸೇಫ್‌ ಆದ್ರು ಪುಷ್ಪಾ-ಚಾರು
ಕಪಾಲಿ ಗ್ಯಾಂಗ್‌ ಜೊತೆ ಕಿಟ್ಟಿ-ಆಕಾಶ್‌ ಬಿಗ್‌ ಫೈಟ್‌; ಕೊನೆಗೂ ಸೇಫ್‌ ಆದ್ರು ಪುಷ್ಪಾ-ಚಾರು

ಬೃಂದಾವನ ಧಾರಾವಾಹಿಯ ನಿನ್ನೆಯ (ಮಾರ್ಚ್‌ 18) ಸಂಚಿಕೆಯಲ್ಲಿ ಚಾರುವನ್ನು ವ್ಯಾನ್‌ನಲ್ಲಿ ತುಂಬಿಕೊಂಡು ಬಂದ ಕಿಟ್ಟಿ ಅಂಡ್‌ ಗ್ಯಾಂಗ್‌ ಪುಷ್ಪಾಳನ್ನು ಕೂಡಿ ಹಾಕಿರುವ ಜಾಗಕ್ಕೆ ತಂದು ಬಿಡುತ್ತಾರೆ. ಅಲ್ಲಿ ಪುಷ್ಪಾಳನ್ನು ನೋಡಿ ಶಾಕ್‌ ಆಗುವ ಚಾರು ಅವಳು ಹೇಗೆ ಇಲ್ಲಿಗೆ ಬಂದಳು ಎಂಬುದನ್ನು ಕೇಳಿ ತಿಳಿದುಕೊಳ್ಳುತ್ತಾಳೆ. ಕೊನೆಗೆ ಚಾರು ಧೈರ್ಯ ಮಾಡಿ ಪುಷ್ಪಾ ಸೇರಿದಂತೆ ಅಲ್ಲಿರುವ ಹುಡುಕಿಯರನ್ನು ಬಿಡಿಸಿಕೊಂಡು ಹೋಗಬೇಕು ಎಂದು ಪ್ಲಾನ್‌ ಮಾಡುತ್ತಾಳೆ. ತನ್ನ ಪ್ಲಾನ್‌ ಅನ್ನು ಅಲ್ಲಿರುವ ಹುಡುಗಿಯರಿಗೆ ವಿವರಿಸುತ್ತಾರೆ.

ಇತ್ತ ಲೋಕೇಷನ್‌ ಟ್ರ್ಯಾಕ್‌ ಮಾಡಿಕೊಂಡು ಕಪಾಲಿ ಅಡ್ಡಕ್ಕೆ ಬರ್ತಾರೆ ಕಿಟ್ಟಿ ಹಾಗೂ ಆಕಾಶ್‌. ಅವರನ್ನ ನೋಡಿ ಕೋಪಗೊಳ್ಳುವ ಕಪಾಲಿ ತನ್ನ ಸಂಗಡಿಗರಿಗೆ ಅವರಿಗೆ ಹೊಡೆಯುವಂತೆ ಸೂಚಿಸುತ್ತಾನೆ. ಆಕಾಶ್‌-ಕಿಟ್ಟಿಗೆ ಕಪಾಲಿ ಗ್ಯಾಂಗ್‌ ಜೊತೆ ಬಿಗ್‌ ಫೈಟ್‌ ನಡೆಯುತ್ತದೆ.

ತಪ್ಪಿಸಿಕೊಳ್ಳಲು ಚಾರು ಪ್ಲಾನ್‌

ಶೀನಿ ಪುಷ್ಪಾ-ಚಾರು ಇರುವ ಗೋಡೌನ್‌ಗೆ ಬಂದ ಕೂಡಲೇ ಮೊದಲೇ ಪ್ಲಾನ್‌ ಮಾಡಿದಂತೆ ಎಲ್ಲಾ ಹುಡುಗಿಯರು ಸೇರಿ ಅವನನ್ನು ಹಿಗ್ಗಾಮುಗ್ಗಾ ಥಳಿಸುತ್ತಾರೆ. ಆಕಾಶ್‌ ಹಾಗೂ ಕಿಟ್ಟಿ ಕಪಾಲಿ ಗ್ಯಾಂಗ್‌ನ ಎಲ್ಲರಿಗೂ ಹೊಡೆದು ನೆಲಕ್ಕುರುಳಿಸುತ್ತಾರೆ. ಅಷ್ಟೊತ್ತಿಗೆ ಹುಡುಗಿಯರ ಗ್ಯಾಂಗ್‌ ಸಮೇತ ಅವರಿರುವ ಜಾಗಕ್ಕೆ ಬರ್ತಾರೆ ಚಾರು-ಪುಷ್ಪಾ. ಇನ್ನೇನು ಕಪಾಲಿ ಗ್ಯಾಂಗ್‌ ಆಟ ಮುಗಿಯಿತು ಎನ್ನುವಷ್ಟರಲ್ಲಿ ನಿಧಾನಕ್ಕೆ ಎದ್ದೇಳುವ ಕಪಾಲಿ ಆಕಾಶ್‌ಗೆ ಚಾಕುಯಿಂದ ಇರಿಯಲು ಬರುತ್ತಾನೆ. ಆಗ ಕೈ ಅಡ್ಡ ಹಾಕುವ ಪುಷ್ಪಾ ಕೈ ಸೀಳಿ ಹೋಗುತ್ತದೆ. ಅಷ್ಟೊತ್ತಿಗೆ ಸರಿಯಾಗಿ ಪೊಲೀಸರು ಅಲ್ಲಿಗೆ ಎಂಟ್ರಿ ಕೊಡ್ತಾರೆ.

ಕಪಾಲಿ ಗ್ಯಾಂಗ್‌ ಅನ್ನು ಬಂಧಿಸಲು ಪೊಲೀಸರು, ಆಕಾಶ್‌, ಚಾರು, ರಾಮಾಚಾರಿ (ಕಿಟ್ಟಿ)ಗೆ ಧನ್ಯವಾದ ಹೇಳಿ ಅಲ್ಲಿಂದ ತೆರಳುತ್ತಾರೆ. ಆದರೆ ಚಾರು ಮಾತ್ರ ಕಿಟ್ಟಿಗೆ ಹಿಗ್ಗಾಮುಗ್ಗಾ ಹೊಡೆಯುತ್ತಾಳೆ, ಅಲ್ಲದೆ ತನ್ನನ್ನು ಕಪಾಲಿ ಗ್ಯಾಂಗ್‌ಗೆ ಮಾರಿದ್ದನ್ನು ನೆನೆದು ಆಕ್ರೋಶಗೊಂಡು ಬಾಯಿಗೆ ಬಂದಂತೆ ಬೈಯುತ್ತಾಳೆ. ಇದನ್ನೆಲ್ಲಾ ಕೇಳಿಸಿಕೊಳ್ಳುವ ಆಕಾಶ್‌ ಚಾರು ಬಳಿ ನಡೆದ ವಿಷಯವನ್ನು ಹೇಳುತ್ತಾನೆ. ಅಲ್ಲದೇ ಚಾರುವನ್ನು ಕಪಾಲಿ ಬಳಿಗೆ ಕಳುಹಿಸಿದ ಕಾರಣವನ್ನು ವಿವರಿಸುತ್ತಾನೆ. ಆಗ ಚಾರುವಿನ ಕೋಪ ಕೊಂಚ ತಣ್ಣಗಾಗುತ್ತದೆ.

ಸಿಕ್ಕ ಅವಕಾಶವನ್ನೇ ಬಳಸಿಕೊಳ್ಳುವ ಆಕಾಶ್‌ ಚಾರು ಬಳಿ ಮನುಷ್ಯನನ್ನ ತಪ್ಪು ತಿಳಿದುಕೊಳ್ಳುವ ಮುಂಚೆ ಸಾವಿರ ಬಾರಿ ಯೋಚಿಸಬೇಕು, ಮೇಲ್ನೋಟಕ್ಕೆ ಕಂಡಿದ್ದೆಲ್ಲವೂ ನಿಜ ಇರುವುದಿಲ್ಲ. ಇದಕ್ಕೆ ನಾನೇ ಸಾಕ್ಷಿ ಎಂದೆಲ್ಲಾ ಕಿಟ್ಟಿ ಬಗ್ಗೆ ಚಾರುಗಿರುವ ತಪ್ಪು ಅಭಿಪ್ರಾಯವನ್ನು ಹೋಗಲಾಡಿಸಲು ನೋಡ್ತಾನೆ.

ಕುಟಂಬದ ಮಹತ್ವ ವಿವರಿಸುವ ಕಿಟ್ಟಿ

ಇತ್ತ ಪುಷ್ಪಾಳನ್ನ ಹೊಗಳುವ ಕಿಟ್ಟಿ ಆಕಾಶ್‌ ಕುಟುಂಬದ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತಾನೆ, ಅಲ್ಲದೇ ಕುಟುಂಬ, ಮನೆ-ಮಠ ಇಲ್ಲದವರ ಪರಿಸ್ಥಿತಿಯನ್ನು ವಿವರಿಸುತ್ತಾನೆ. ಅವರ ಪರಿಸ್ಥಿತಿ ಹೇಗಿರುತ್ತದೆ ಎಂಬುದನ್ನು ನನ್ನ ಮನದ ನೋವು ಎಂಬಂತೆ ವಿವರಿಸುವ ಕಿಟ್ಟಿ ಅಲ್ಲಿರುವವರಿಗೆ ಕುಟುಂಬದ ಮಹತ್ವವನ್ನು ತಿಳಿಸುತ್ತಾನೆ.

ಪ್ರೇಮದ ಅಮಲಲ್ಲಿ ಸಹನಾ

ಇತ್ತ ಆಕಾಶ್‌ ಜೊತೆಗೆ ಮಾತನಾಡಲು ಸಾಧ್ಯವಾಗದ ಸಹನಾ ಹಾಸ್ಟೆಲ್‌ಗೆ ಮರುಳುತ್ತಾಳೆ. ಯೋಚಿಸುತ್ತಾ ನಿಂತಿದ್ದ ಸಹನಾಳ ತಲೆಯನ್ನು ಮತ್ತೆ ಕೆಡಿಸುತ್ತಾಳೆ ಮಿಂಚು. ಆಕಾಶ್‌ಗೆ ನಿಮ್ಮ ಮೇಲೆ ಪ್ರೀತಿ ಇದೆ, ಅದನ್ನು ಅವರು ಕಾಲೇಜಿ ಮೊದಲ ದಿನವೇ ಹೇಳಿದ್ರು. ನೀನು ಅದನ್ನು ರ್ಯಾಗಿಂಗ್‌ ಅದ್ಕೊಂಡೆ. ಇನ್ನು ನಿನ್ನ ಸರದಿ. ನೀನೇ ಹೋಗಿ ಅವರ ಮುಂದೆ ಪ್ರೀತಿ ನಿವೇದನೆ ಮಾಡು ಎಂದೆಲ್ಲಾ ಹೇಳುತ್ತಾಳೆ. ಪ್ರೀತಿ ಹೇಳದೇ ಅನ್ಯಾಯ ಮಾಡಿಕೊಳ್ಳಬೇಡ ಎಂದು ಉಪದೇಶ ಮಾಡುತ್ತಾಳೆ.

ಕೊನೆಗೂ ಪುಷ್ಪಾಳ ಕಿಡ್ನಾಪ್‌ ಪ್ರಕರಣ ಸುಖ್ಯಾಂತವಾಗಿ, ಪುಷ್ಪಾ ಸೇಪ್‌ ಆಗ್ತಾಳೆ. ಮಾತ್ರವಲ್ಲ ಹೆಣ್ಣುಮಕ್ಕಳನ್ನು ವಿದೇಶಕ್ಕೆ ಮಾರಾಟ ಮಾಡುವ ದಂಧೆ ನಡೆಸುವ ಕಪಾಲಿ ಗ್ಯಾಂಗ್‌ ಕೂಡ ಅರೆಸ್ಟ್‌ ಆಗುತ್ತದೆ.

ಇತ್ತ ಆಕಾಶ್‌ ಪುಷ್ಪಾಳಿಗಾಗಿ ಜೀವ ಕೊಡಲು ಸಿದ್ಧನಾಗ್ತಾ ಇದ್ರೆ, ಅತ್ತ ಸಹನಾ ಆಕಾಶ್‌ ಇಲ್ಲದೇ ಬದುಕಿಲ್ಲ ಎನ್ನುವಷ್ಟು ಪ್ರೀತಿಸಲು ಆರಂಭಿಸುತ್ತಾಳೆ. ಎಲ್ಲಿಗೆ ತಲುಪುವುದು ಈ ಪಯಣ.