ಕನ್ನಡ ಸುದ್ದಿ  /  Entertainment  /  Television News Colors Kannada Brindavana Kannada Serial Today Episode 120 Mar 19th Aaksh Brings Pushpa Back Rst

Brundavana Serial: ಗಂಡನಿಗಾಗಿ ಮನೆಯವರ ಮುಂದೆ ಸುಳ್ಳು ಹೇಳುವ ಪುಷ್ಪಾ; ಸತ್ಯಮೂರ್ತಿಗೆ ಕಾಡುತ್ತಿದೆ ಅನುಮಾನ

Brindavana Kannada Serial Today Episode Mar 19th: : ʼಬೃಂದಾವನʼ ಧಾರಾವಾಹಿಯ ಮಂಗಳವಾರದ ಎಪಿಸೋಡ್‌ನಲ್ಲಿ ಆಕಾಶ್‌-ಪುಷ್ಪಾ ಸೇಫ್‌ ಆಗಿ ಮನೆ ಸೇರ್ತಾರೆ. ಗಂಡನಿಗಾಗಿ ಮನೆಯವರ ಮುಂದೆ ಸುಳ್ಳು ಹೇಳ್ತಾಳೆ ಪುಷ್ಪಾ. ಇತ್ತ ಸಹನಾಗೆ ಕನಸಿನಲ್ಲೂ ಆಕಾಶ್‌ದೇ ಜಪ. ಸತ್ಯಮೂರ್ತಿಯ ತಲೆಯಲ್ಲಿ ಹರಿದಾಡುತ್ತಿದೆ ಅನುಮಾನದ ಹುಳ.

ಗಂಡನಿಗಾಗಿ ಮನೆಯವರ ಮುಂದೆ ಸುಳ್ಳು ಹೇಳುವ ಪುಷ್ಪಾ; ಸತ್ಯಮೂರ್ತಿಗೆ ಕಾಡುತ್ತಿದೆ ಅನುಮಾನ
ಗಂಡನಿಗಾಗಿ ಮನೆಯವರ ಮುಂದೆ ಸುಳ್ಳು ಹೇಳುವ ಪುಷ್ಪಾ; ಸತ್ಯಮೂರ್ತಿಗೆ ಕಾಡುತ್ತಿದೆ ಅನುಮಾನ

ಬೃಂದಾವನ ಧಾರಾವಾಹಿಯ ನಿನ್ನೆಯ (ಮಾರ್ಚ್‌ 19) ಸಂಚಿಕೆಯಲ್ಲಿ ಪುಷ್ಪಾ ಹಾಗೂ ಆಕಾಶ್‌ ಇಬ್ಬರೂ ಸೇಫ್‌ ಆಗಿ ಮನೆಗೆ ಬರುತ್ತಾರೆ. ಇವರಿಬ್ಬರ ದಾರಿಯನ್ನೇ ಕಾಯುತ್ತಿದ್ದ ಮನೆಯವರು ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ. ಆದರೆ ಕ್ಷಣಕಾಲದಲ್ಲಿ ಪುಷ್ಪಾಳ ಕೈಯಲ್ಲಾಗಿರುವ ಗಾಯವನ್ನು ನೋಡಿ ಗಾಬರಿ ಪಡುತ್ತಾರೆ. ಮಾತ್ರವಲ್ಲ, ಆಕಾಶ್‌ನನ್ನ ತರಾಟೆಗೆ ತೆಗೆದುಕೊಳ್ಳುತ್ತಾರೆ. ಹೆಂಡತಿಯನ್ನು ಹೊರಗಡೆ ಕರೆದುಕೊಂಡು ಹೋದಾಗ ಚೆನ್ನಾಗಿ ನೋಡಿಕೊಂಡಿಲ್ಲ ಎಂದು ಬಯ್ಯುತ್ತಾರೆ. ಹೆಂಡತಿ ಕಿಡ್ನಾಪ್‌ ಆದ ಘಟನೆಯನ್ನು ವಿವರಿಸಲು ಹೊರಟ ಆಕಾಶ್‌ನನ್ನು ತಡೆಯುವ ಪುಷ್ಪಾ ಪಾರ್ಕ್‌ನಲ್ಲಿ ಮುಳ್ಳಿನ ಬೇಲಿ ತಾಕಿ ಕೈ ಗಾಯವಾಗಿದ್ದು, ಆಕಾಶ್‌ ಅವರದ್ದು ತಪ್ಪಿಲ್ಲ ಎಂದು ಗಂಡನ ಪರವಾಗಿ ಮಾತನಾಡುತ್ತಾಳೆ. ಆದರೆ ಪುಷ್ಪಾ-ಆಕಾಶ್‌ ವರ್ತನೆ ಬಗ್ಗೆ ಸತ್ಯಮೂರ್ತಿ ಮನದಲ್ಲಿ ಅನುಮಾನ ಮೂಡುತ್ತದೆ.

ಗಂಡನ ಸಂತೋಷಕ್ಕಾಗಿ ಏನ್‌ ಬೇಕಾದ್ರೂ ಮಾಡ್ತೀನಿ ಎನ್ನುವ ಪುಷ್ಪಾ

ಮನೆಯವರ ಬಳಿ ಹೇಗೋ ಸುಳ್ಳು ಹೇಳಿ ನಿಭಾಯಿಸುವ ಪುಷ್ಪಾ ರೂಮ್‌ಗೆ ಬಂದಾಗ ಅವಳ ಬಳಿ ಆಕಾಶ್‌ ಎಂದಿಗೂ ಯಾವ ಕಾರಣಕ್ಕೂ ಸುಳ್ಳು ಹೇಳದ ನೀವು ಮನೆಯವರ ಮುಂದೆ ಸುಳ್ಯಾಕೆ ಹೇಳಿದ್ರಿ ಎಂದು ಆಕಾಶ್‌ ಕೇಳುತ್ತಾನೆ. ಅದಕ್ಕೆ ಉತ್ತರಿಸುವ ಆಕಾಶ್‌ ʼನಾನು ಕಿಡ್ನಾಪ್‌ ಆಗಿದ್ದೆ ಎಂದು ಮನೆಯಲ್ಲಿ ತಿಳಿದರೆ ಎಲ್ಲರೂ ಬೇಸರ ಮಾಡಿಕೊಳ್ಳುತ್ತಾರೆ, ಅದರಿಂದ ಇಡೀ ಮನೆಯ ನೆಮ್ಮದಿ ಕೆಡುತ್ತದೆ. ಜೊತೆಗೆ ನೀವು ನನ್ನ ಜೊತೆಗೆ ಇದ್ರು ನನ್ನನ್ನು ಕಾಪಾಡಿಲ್ಲ ಎಂದು ಮನೆಯವರು ಬೇಸರ ಮಾಡಿಕೊಳ್ಳುತ್ತಾರೆ. ಅಲ್ಲದೇ ನಿಮ್ಮ ಮೇಲೆ ಅವರಿಗೆ ಕೋಪ ಬರಬಹುದು. ಅದು ನನಗೆ ಇಷ್ಟವಿಲ್ಲ. ನಾನು ಸಾಯುವವರೆಗೂ ಯಾರೂ ನಿಮ್ಮ ಬಗ್ಗೆ ಏನೂ ಹೇಳಲು ಬಿಡುವುದಿಲ್ಲʼ ಎಂದು ಗಂಡನ ಮೇಲಿನ ಪ್ರೀತಿ, ಅಭಿಮಾನವನ್ನು ಮಾತಿನಲ್ಲೇ ವ್ಯಕ್ತಪಡಿಸುತ್ತಾಳೆ ಪುಷ್ಪಾ.

ಪುಷ್ಪಾಳ ಮಾತಿನ ಮೇಲೆ ಸತ್ಯಮೂರ್ತಿಗಿಲ್ಲ ನಂಬಿಕೆ

ಪುಷ್ಪಾ ಮುಳ್ಳಿನ ತಂತಿ ತಾಕಿ ಕೈಗೆ ಗಾಯವಾಗಿದ್ದು ಎಂದು ಮನೆಯವರನ್ನೆಲ್ಲಾ ನಂಬಿಸಿದ್ರೂ ಕೂಡ ಸತ್ಯಮೂರ್ತಿ ಅದನ್ನು ನಂಬಲು ತಯಾರಿಲ್ಲ. ಅಲ್ಲದೇ ಮೊದಲು ತನ್ನ ಹೆಂಡತಿಯ ಬಳಿ ಪುಷ್ಪಾ ಕೈಗೆ ಗಾಯವಾಗಿದ್ದು ಮುಳ್ಳಿನ ತಂತಿಯಿಂದಲ್ಲ, ಅದಕ್ಕೆ ಕಾರಣ ಬೇರೆಯೇ ಇದು ಎಂದು ಹೇಳಿ ಬೈಸಿಕೊಳ್ಳುತ್ತಾನೆ. ನಂತರ ಅನುಪಮಾ ಹಾಗೂ ಇತರರ ಮುಂದೆ ಕೂಡ ಹಾಗೇ ಹೇಳುವ ಸತ್ಯಮೂರ್ತಿ ಪುಷ್ಪಾ ಕೂದಲು ಕೆದರಿದ್ದು, ಆಕಾಶ್‌ ಶರ್ಟ್‌ ಮಣ್ಣಾಗಿದ್ದು ಗಮನಿಸಿ. ಪುಷ್ಪಾಳನ್ನು ರೌಡಿಗಳು ಎತ್ತಿಕೊಂಡು ಹೋಗಿ ಎಲ್ಲೋ ಕೂಡಿ ಹಾಕಿದ್ದರು, ಆಕಾಶ್‌ ಫೈಟ್‌ ಮಾಡಿ ಅವಳನ್ನು ಬಿಡಿಸಿಕೊಂಡು ಬಂದಿದ್ದಾನೆ ಎಂದು ಹೇಳುತ್ತಾರೆ. ಆದರೆ ಇದನ್ನ ಯಾರೂ ನಂಬುವುದಿಲ್ಲ. ಜೊತೆಗೆ ಎಲ್ಲರೂ ಸತ್ಯಮೂರ್ತಿಗೆ ಬೈದು ಛೀಮಾರಿ ಹಾಕುತ್ತಾರೆ.

ಸಹನಾಗೆ ಕನಸಲೂ ಆಕಾಶ್‌ ಮನಸಲೂ ಆಕಾಶ್‌

ಅತ್ತ ಆಕಾಶ್‌ ಪುಷ್ಪಾಳನ್ನು ಮನಸ್ಫೂರ್ತಿಯಾಗಿ ಒಪ್ಪಿಕೊಂಡು ಜೀವನ ಸಾಗಿಸಲು ಬಯಸುತ್ತಿದ್ದರೆ, ಇತ್ತ ಸಹನಾ ಆಕಾಶ್‌ ಗುಂಗಿನಲ್ಲೇ ಕನವರಿಸುತ್ತಿದ್ದಾಳೆ. ರಾತ್ರಿ ಮಲಗಿದ್ದಾಗ ಆಕಾಶ್‌ ಬಂದು ಪ್ರೊಪೋಸ್‌ ಮಾಡಿದಂತೆ ಕನಸು ಕಾಣುವ ಸಹನಾ, ಆಕಾಶ್‌ ಎಂದು ಪಕ್ಕದಲ್ಲಿ ಮಲಗಿದ್ದ ಮಿಂಚುವನ್ನು ತಬ್ಬಿಕೊಂಡು ಲವ್‌ ಯು ಆಕಾಶ್‌ ಎಂದು ತಡಬಡಿಸುತ್ತಾಳೆ. ಇದರಿಂದ ಎಚ್ಚರಗೊಳ್ಳುವ ಮಿಂಚು ಸಹನಾಗೆ ಮತ್ತೆ ಬಿಟ್ಟಿ ಅಡ್ವೈಸ್‌ ಮಾಡಿ, ಆಕಾಶ್‌ ಮುಂದೆ ನಿನ್ನ ಪ್ರೀತಿ ಹೇಳಿಕೊಂಡು ಬಿಡು ಎಂದು ಅವಳನ್ನು ಪ್ರೇರೆಪಿಸುತ್ತಾಳೆ.

ಇತ್ತ ಡೈನಿಂಗ್‌ ಟೇಬಲ್‌ ಮುಂದೆ ಊಟ ಮಾಡಲು ಕಷ್ಟಪಡುತ್ತಿರುವ ಪುಷ್ಪಾಳಿಗೆ ತಿನ್ನಿಸುವ ಆಕಾಶ್‌, ಪ್ರೀತಿಯಿಂದ ಅವಳನ್ನು ನೋಡಿಕೊಳ್ಳುತ್ತಾನೆ. ಇದನ್ನು ನೋಡಿ ಮನೆಯವರು ಖುಷಿಪಡುತ್ತಾರೆ.

ಸಹನಾ ಆಕಾಶ್‌ಗೆ ಪ್ರಪೋಸ್‌ ಮಾಡ್ತಾಳಾ, ಅದಕ್ಕೆ ಆಕಾಶ್‌ ಪ್ರತಿಕ್ರಿಯೆ ಹೇಗಿರಬಹುದು, ಸತ್ಯಮೂರ್ತಿ ಅನುಮಾನವೇ ನಿಜ ಎಂಬುದು ಮನೆಯವರಿಗೆ ತಿಳಿಯುತ್ತಾ, ಇವೆಲ್ಲವನ್ನೂ ತಿಳಿಯಲು ಮುಂದಿನ ಸಂಚಿಕೆಗಳನ್ನು ನಿರೀಕ್ಷಿಸಿ.

IPL_Entry_Point