ಕನ್ನಡ ಸುದ್ದಿ  /  ಮನರಂಜನೆ  /  Brundavana Serial: ಬೃಂದಾವನದ ಒಗ್ಗಟ್ಟನ್ನ ನಾಶ ಮಾಡ್ತೀನಿ ಎಂದ ಭಾರ್ಗವಿಯ ಮಾತಿಗೆ ನಡುಗಿ ಹೋದ ಸುಧಾಮೂರ್ತಿ

Brundavana Serial: ಬೃಂದಾವನದ ಒಗ್ಗಟ್ಟನ್ನ ನಾಶ ಮಾಡ್ತೀನಿ ಎಂದ ಭಾರ್ಗವಿಯ ಮಾತಿಗೆ ನಡುಗಿ ಹೋದ ಸುಧಾಮೂರ್ತಿ

Brindavana Kannada Serial Today Episode Mar 21th: : ʼಬೃಂದಾವನʼ ಧಾರಾವಾಹಿಯ ಗುರುವಾರದ ಎಪಿಸೋಡ್‌ನಲ್ಲಿ ಭಾರ್ಗವಿ ಬೃಂದಾವನವನ್ನು ಛಿದ್ರ ಛಿದ್ರ ಮಾಡುತ್ತೇನೆ ಎಂದು ಸುಧಾಮೂರ್ತಿ ಅವರಲ್ಲಿ ಭಯ ಹುಟ್ಟಿಸುತ್ತಾಳೆ. ಇತ್ತ ಮನೆಯಲ್ಲಿ ಫೋಟೊ ಬಿದ್ದಿದಕ್ಕೆ ಮನೆ ಮಂದಿ ಗಾಬರಿಯಾಗುತ್ತಾರೆ.

ಬೃಂದಾವನದ ಒಗ್ಗಟ್ಟನ್ನ ನಾಶ ಮಾಡ್ತೀನಿ ಎಂದ ಭಾರ್ಗವಿಯ ಮಾತಿಗೆ ನಡುಗಿ ಹೋದ ಸುಧಾಮೂರ್ತಿ
ಬೃಂದಾವನದ ಒಗ್ಗಟ್ಟನ್ನ ನಾಶ ಮಾಡ್ತೀನಿ ಎಂದ ಭಾರ್ಗವಿಯ ಮಾತಿಗೆ ನಡುಗಿ ಹೋದ ಸುಧಾಮೂರ್ತಿ

ಬೃಂದಾವನ ಧಾರಾವಾಹಿಯ ನಿನ್ನೆಯ (ಮಾರ್ಚ್‌ 21) ಸಂಚಿಕೆಯಲ್ಲಿ ಸುಧಾಮೂರ್ತಿಗೆ ಎದುರಾಗುವ ಭಾರ್ಗವಿ ದ್ವೇಷವನ್ನೇ ಮೈ ತುಂಬಿಕೊಂಡಂತೆ ಮಾತನಾಡುತ್ತಾಳೆ. ತನ್ನ ಬದುಕಿನಲ್ಲಿ ಹಿಂದೆ ಆದ ಘಟನೆಗಳಿಗೆ ಸುಧಾಮೂರ್ತಿ ಅವರೇ ಕಾರಣ ಎನ್ನುವ ಆಕೆ ಸುಧಾಮೂರ್ತಿ ಅವರ ಕನಸಿನ ಕೂಸು ಬೃಂದಾವನವನ್ನು ನಾಶ ಮಾಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಾಳೆ.

ʼನಾನು ಮರಳಿ ಬಂದಾಗ ನಿನ್ನ ಕಣ್ಣಲ್ಲಿ ಭಯ ಕಾಣುತ್ತೆ ಎಂದು ಹೇಳಿ ಹೋಗಿದ್ದೆ, ಆ ಭಯ ಈಗ ನಿನ್ನ ಕಣ್ಣಲ್ಲಿ ಕಾಣುತ್ತಿದೆ. ಇದಕ್ಕಾಗಿಯೇ ನಾನು ಇಷ್ಟು ಕೋಪವನ್ನು ಎದೆಯಲ್ಲಿ ಮುಚ್ಚಿಟ್ಟುಕೊಂಡು ಕಾಯುತ್ತಿದ್ದೇನೆʼ ಎನ್ನುವ ಭಾರ್ಗವಿಯ ದ್ವೇಷದ ಮಾತಿಗೆ ಸುಧಾಮೂರ್ತಿ ʼಆ ದಿನ ಆಗಿದ್ದನ್ನು ತುಂಬಾ ತಾಳ್ಮೆಯಿಂದ ಯೋಚನೆ ಮಾಡುʼ ಎಂದು ಅವಳಲ್ಲಿ ಅಂದಿನ ಪರಿಸ್ಥಿತಿಯ ಬಗ್ಗೆ ವಿವರಿಸಲು ನೋಡುತ್ತಾರೆ. ಆದರೆ ಭಾರ್ಗವಿ ಸುಧಾಮೂರ್ತಿ ಅವರ ಮಾತನ್ನು ಕೇಳಿಸಿಕೊಳ್ಳಲು ಸಿದ್ಧಳಿರುವುದಿಲ್ಲ.

ʼನನ್ನ ತಾಳ್ಮೆಯನ್ನು ನೀನೇ ಕೊಂದು ಹಾಕಿದೆ. ನಿನ್ನ ಅಂದಿನ ನಿರ್ಧಾರಕ್ಕೆ ಕಾರಣ ನಿನ್ನ ಕುಟುಂಬ. ನಿನ್ನ ಕುಟುಂಬ ನಿನ್ನ ಜೊತೆಗೆ ಇದ್ದಾರೆ ಎಂಬ ಕಾರಣಕ್ಕೆ ಅಲ್ವಾ ನೀನು ಅಂದು ಆ ನಿರ್ಧಾರ ತೆಗೆದುಕೊಂಡಿದ್ದು, ಆ ನಿನ್ನ ಕುಟುಂಬದ ಒಗ್ಗಟ್ಟನ್ನು ನಾನು ಮುರಿತೀನಿ, ಎಲ್ಲರೂ ನಿನ್ನ ಮಾತನ್ನ ಕೇಳಿಸಿಕೊಳ್ಳುತ್ತಾರೆ ಎಂಬ ಜಂಭದಿಂದ ನೀನು ಅಂದು ನಿನ್ನ ವಿರುದ್ಧ ನಿಂತೆ, ಆದರೆ ಅದೇ ಕುಟುಂಬ ಇನ್ನು ಮುಂದೆ ನಿನ್ನ ಜೊತೆ ಇರೊಲ್ಲ, ಇರೋದಕ್ಕೆ ನಾನು ಬಿಡೋದು ಇಲ್ಲ. ಜೀವನದಲ್ಲಿ ನಾನು ಅನುಭವಿಸಿದ್ದನ್ನ ನೀನು ಅನುಭವಿಸಲೇಬೇಕುʼ ಎಂದು ಧಮಕಿ ಹಾಕುತ್ತಾಳೆ.

ಟ್ರೆಂಡಿಂಗ್​ ಸುದ್ದಿ

ʼಆ ದಿನ ತಪ್ಪು ಮಾಡಿದ್ದು ನೀನೇ ಎಂದು ಸುಧಾಮೂರ್ತಿ ಅವರು ಹೇಳಿದ್ರು ಕೂಡʼ ಅದಕ್ಕೊಪ್ಪದ ಭಾರ್ಗವಿ ʼನೀನೇ ತಪ್ಪು ಮಾಡಿದ್ದು, ನೀನೇ ನನಗೆ ಇಷ್ಟು ವರ್ಷ ಶಿಕ್ಷೆ ಕೊಟ್ಟಿದ್ದು. ಅಂದ ಮೇಲೆ ಪ್ರತಿಕಾರ ತೀರಿಸಿಕೊಳ್ಳಲೇಬೇಕು ಅಲ್ವಾ, ಆದರೆ ನೀನೇನು ಹೀಗೆ ಹಾರ್ಟ್‌ ಪೇಶಂಟ್‌ ಆಗಿದೀಯಾ, ನಿನ್ನ ಹೃದಯನಾ ಗಟ್ಟಿ ಮಾಡ್ಕೋ, ಇನ್ನು ನೀನು ನೋಡೋದು ಬಹಳಷ್ಟಿದೆʼ ಎನ್ನುತ್ತಾಳೆ.

ಮಾತಿನಲ್ಲೇ ಬೆದರಿಸುತ್ತಿರುವ ಭಾರ್ಗವಿಗೆ ʼನಿನಗಿನ್ನೂ ನನ್ನ ಕುಟುಂಬದ ಬಗ್ಗೆ ಗೊತ್ತಿಲ್ಲʼ ಎಂದು ಹೇಳಲು ಹೋಗುವ ಸುಧಾಮೂರ್ತಿ ಅವರನ್ನು ತಡೆಯುವ ಭಾರ್ಗವಿ ʼನನಗೆ ಎಲ್ಲವೂ ಗೊತ್ತಿದೆ. 36 ಜನ ಇರುವ ಕುಟುಂಬಕ್ಕೆ ಈಗ ಒಂದು ಹೊಸ ಸೇರ್ಪಡೆಯಾಗಿದೆ. ಸದ್ಯ ಒಂದು ಒಲೆ ಉರಿಯುತ್ತಿರುವ ನಿನ್ನ ಮನೆಯಲ್ಲಿ 7 ಒಲೆ ಉರಿಯುವಂತೆ ಮಾಡುತ್ತೇನೆ. ನಿನ್ನ ಮನೆಯ ಒಗ್ಗಟ್ಟನ್ನು ನಾನು ಮುರಿಯತ್ತೇನೆʼ ಎಂದು ರೋಷಾವೇಷದಿಂದ ಮಾತನಾಡುವ ಭಾರ್ಗವಿ ಸುಧಾಮೂರ್ತಿ ಅವರು ಥರಗಟ್ಟುವಂತೆ ಮಾಡುತ್ತಾಳೆ.

ಇತ್ತ ಜೋರಾಗಿ ಬೀಸಿದ ಬಿರುಗಾಳಿಗೆ ಫ್ಯಾಮಿಲಿ ಫೋಟೊ ನೆಲಕ್ಕೆ ಬಿದ್ದು ಫೇಮ್‌ ಒಡೆದು ಹೋಗಿದ್ದಕ್ಕೆ ಗಾಬರಿಗೊಳ್ಳುವ ಸುಧಾಮೂರ್ತಿ ಅವರ ಗಂಡ ಇದು ಅಪಶಕುನ ಸೂಚನೆ ಇರಬಹುದು, ನಮ್ಮ ಕುಟುಂಬಕ್ಕೆ ಯಾರ ಕೆಟ್ಟ ದೃಷ್ಟಿ ಬಿದ್ದಿರಬಹುದು ಎಂದು ಭಯ ಪಡುತ್ತಾರೆ. ಅವರಿಗೆ ಮೊಮ್ಮಗಳು ಶ್ವೇತ ಕೂಡ ಧ್ವನಿಗೂಡಿಸುತ್ತಾಳೆ. ಆಗ ಅಲ್ಲಿಯೇ ಇದ್ದ ಸತ್ಯಮೂರ್ತಿ ಇದಕ್ಕೂ ಕೂಡ ಪುಷ್ಪಾಳನ್ನೇ ಕಾರಣವನ್ನಾಗಿಸುತ್ತಾರೆ. ಪುಷ್ಪಾಳ ಕಾರಣದಿಂದ ನಮ್ಮ ಮನೆ ಛಿದ್ರವಾಗಲಿದೆ ಎಂದು ಮೈಮೇಲೆ ದ್ವೇಷ ಬಂದವರಂತೆ ಮಾತನಾಡುತ್ತಾರೆ.

ಆಕಾಶ್‌-ಪುಷ್ಪಾ ಮುಂದೆ ಬಾಯಿ ಬಿಡದ ಸುಧಾಮೂರ್ತಿ

ಭಾರ್ಗವಿ ಅಲ್ಲಿಂದ ಹೋದರೂ ಗಡಗಡ ನಡುಗುವ ಸುಧಾಮೂರ್ತಿ ಭಾರ್ಗವಿಯ ಮಾತುಗಳನ್ನೇ ನೆನೆದು ಬೆಚ್ಚಿ ಬೀಳುತ್ತಾರೆ. ಇತ್ತ ಎಂದೂ ಕಾಣವ ಭಯ ಅಜ್ಜಿಯ ಮುಖದಲ್ಲಿ ಇರುವುದನ್ನು ಕಂಡ ಪುಷ್ಪಾ-ಆಕಾಶ್‌ ಅವರ ಬಳಿ ಏನಾಯಿತು ಎಂದು ಕೇಳಿದರೆ ಅದಕ್ಕೆ ಸರಿಯಾಗಿ ಉತ್ತರಿಸದ ಆಕೆ ಆಸ್ಪತ್ರೆ, ಕಾಯಿಲೆ ಇರುವವರನ್ನು ನೋಡಿ ಭಯ ಆಯ್ತು ಎಂದು ಸುಳ್ಳು ಹೇಳುತ್ತಾರೆ. ಕೊನೆಗೆ ಆಕಾಶ್‌ನನ್ನು ಆಫೀಸಿಗೆ ಹೋಗಲು ಹೇಳುವ ಸುಧಾಮೂರ್ತಿ ನಾನು ಪುಷ್ಪಾ ಕ್ಯಾಬ್‌ನಲ್ಲಿ ಮನೆಗೆ ಹೋಗುತ್ತೇವೆ ಎಂದು ಹೊರಡುತ್ತಾರೆ.

ಈ ಭಾರ್ಗವಿ ಯಾರು, ಆಕೆಗೆ ಬೃಂದಾವನ ಮೇಲೆ, ಸುಧಾಮೂರ್ತಿ ಅವರ ಮೇಲೆ ಯಾಕಿಷ್ಟು ಕೋಪ, ಆಕೆ ನಿಜಕ್ಕೂ ಬೃಂದಾವನದ ಒಗ್ಗಟ್ಟನ್ನು ನಾಶ ಮಾಡ್ತಾಳಾ ಈ ಎಲ್ಲವನ್ನೂ ನೋಡಲು ಮುಂದಿನ ಸಂಚಿಕೆಗಳನ್ನು ನಿರೀಕ್ಷಿಸಿ.