Brundavana Serial: ಸುಧಾಮೂರ್ತಿ ಮನೆಯ ಒಗ್ಗಟ್ಟು ಕೆಡಿಸಲು ಬಂದ ಭಾರ್ಗವಿಯೇ ಸಹನಾಳ ತಾಯಿ, ಬೃಂದಾವನದಲ್ಲೊಂದು ಬಿಗ್‌ ಟ್ವಿಸ್ಟ್‌-television news colors kannada brindavana kannada serial today episode 123 mar 22nd bhargavi is sahanas mother rst ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Brundavana Serial: ಸುಧಾಮೂರ್ತಿ ಮನೆಯ ಒಗ್ಗಟ್ಟು ಕೆಡಿಸಲು ಬಂದ ಭಾರ್ಗವಿಯೇ ಸಹನಾಳ ತಾಯಿ, ಬೃಂದಾವನದಲ್ಲೊಂದು ಬಿಗ್‌ ಟ್ವಿಸ್ಟ್‌

Brundavana Serial: ಸುಧಾಮೂರ್ತಿ ಮನೆಯ ಒಗ್ಗಟ್ಟು ಕೆಡಿಸಲು ಬಂದ ಭಾರ್ಗವಿಯೇ ಸಹನಾಳ ತಾಯಿ, ಬೃಂದಾವನದಲ್ಲೊಂದು ಬಿಗ್‌ ಟ್ವಿಸ್ಟ್‌

Brindavana Kannada Serial Today Episode Mar 22nd: : ʼಬೃಂದಾವನʼ ಧಾರಾವಾಹಿಯ ಶುಕ್ರವಾರದ ಎಪಿಸೋಡ್‌ನಲ್ಲಿ ಮನೆಯ ಒಗ್ಗಟ್ಟನ್ನು ಕಾಪಾಡುವ ವಿಚಾರವಾಗಿ ಪುಷ್ಪಾಳ ಬಳಿ ಪ್ರಮಾಣ ಮಾಡಿಸಿಕೊಂಡ ಸುಧಾಮೂರ್ತಿ. ಭಾರ್ಗವಿ ಸಹನಾ ತಾಯಿ ಅನ್ನೋ ಬಿಗ್‌ ಟ್ವಿಸ್ಟ್‌. ಆಕಾಶ್‌ಗೆ ಪ್ರಪೋಸ್‌ ಮಾಡೇ ಬಿಡ್ತಾಳಾ ಸಹನಾ.

ಸುಧಾಮೂರ್ತಿ ಮನೆಯ ಒಗ್ಗಟ್ಟು ಕೆಡಿಸಲು ಬಂದ ಭಾರ್ಗವಿ ಸಹನಾಳ ತಾಯಿ, ಬೃಂದಾವನದಲ್ಲೊಂದು ಬಿಗ್‌ ಟ್ವಿಸ್ಟ್‌
ಸುಧಾಮೂರ್ತಿ ಮನೆಯ ಒಗ್ಗಟ್ಟು ಕೆಡಿಸಲು ಬಂದ ಭಾರ್ಗವಿ ಸಹನಾಳ ತಾಯಿ, ಬೃಂದಾವನದಲ್ಲೊಂದು ಬಿಗ್‌ ಟ್ವಿಸ್ಟ್‌

ಬೃಂದಾವನ ಧಾರಾವಾಹಿಯ ನಿನ್ನೆಯ (ಮಾರ್ಚ್‌ 22) ಸಂಚಿಕೆಯಲ್ಲಿ ಆಕಾಶ್‌ನನ್ನು ಕಾಲೇಜಿಗೆ ಕಳುಹಿಸುವ ಸುಧಾಮೂರ್ತಿ ಪುಷ್ಪಾ ಜೊತೆ ಆಸ್ಪತ್ರೆಯ ಆವರಣದಲ್ಲೇ ಇರುತ್ತಾರೆ. ಫೈಲ್‌ಗಳನ್ನು ಜೋಡಿಸುತ್ತಾ ಹೊರಡೋಣ ಅಜ್ಜಮ್ಮ ಎಂದು ಹಿಂದೆ ತಿರುಗಿ ನೋಡುವ ಪುಷ್ಪಾ ಸುಧಾಮೂರ್ತಿಯನ್ನು ನೋಡಿ ಗಾಬರಿಯಾಗುತ್ತಾಳೆ. ಸುಧಾಮೂರ್ತಿ ಅಲ್ಲೇ ಇರುವ ಬೆಂಚಿನ ಮೇಲೆ ಕುಸಿದು ಕುಳಿತಿರುತ್ತಾಳೆ. ಅವರ ವರ್ತನೆ ನೋಡಿದ ಪುಷ್ಪಾಳಿಗೆ ಗಾಬರಿ ಹಾಗೂ ಅನುಮಾನ ಮೂಡುತ್ತದೆ. ಏನಾಯ್ತು ಎಂದು ಕೇಳಿದಾಗ ಮತ್ತೆ ಮೊದಲಿನಂತೆ ಆಸ್ಪತ್ರೆಯಲ್ಲಿ ಜನರನ್ನು ನೋಡಿ ಭಯ ಆಗ್ತಿದೆ ಅಂತಲೇ ಹೇಳುತ್ತಾಳೆ. ಅಲ್ಲದೇ ಮನೆಯ ವಿಚಾರವಾಗಿ ಮಾತನಾಡುತ್ತಾ ಬೃಂದಾವನ ನನ್ನ ಉಸಿರು, ಬೃಂದಾವನದ ಒಗ್ಗಟ್ಟು ಮುರಿದರೆ ನನ್ನ ಉಸಿರು ನಿಂತಂತೆ ಎಂದೆಲ್ಲಾ ಹೇಳುತ್ತಾರೆ. ಅಲ್ಲದೇ ಪುಷ್ಪಾ ಬಳಿ ನೀನು ನನಗೊಂದು ಪ್ರಾಮಿಸ್‌ ಮಾಡಬೇಕು, ನೀನು ನನಗೆ ಮಾಡಿದ ಪ್ರಮಾಣವನ್ನು ಯಾವುದೇ ಕಾರಣಕ್ಕೂ ಮುರಿಯಬಾರದು ಎಂದು ಮನವಿ ಮಾಡಿಕೊಳ್ಳುತ್ತಾರೆ.

ಪುಷ್ಪಾಳನ್ನು ಮೊದಲ ಬಾರಿ ಅವಳ ಊರಿನಲ್ಲಿ ನೋಡಿದ ಸಂದರ್ಭ ವಯಸ್ಸಾದ ದಂಪತಿಗಳನ್ನು ಅವರ ಮಕ್ಕಳು ಮನೆಯಿಂದ ಹೊರ ಹಾಕಿದ್ದನ್ನು ಆಕೆ ವಿರೋಧಿಸಿದ್ದಳು. ಅಲ್ಲದೇ ದಂಪತಿಗಳನ್ನು ಅವರ ಮಕ್ಕಳ ಮನೆ ಬಳಿಗೆ ಕರೆದುಕೊಂಡು ಹೋಗಿ ಮನೆಯಲ್ಲಿ ಹಿರಿಯರು ಯಾಕೆ ಇರಬೇಕು ಎಂಬುದನ್ನು ವಿವರಿಸಿ ಹೇಳಿ, ಆ ದಂಪತಿಗಳ ಮಕ್ಕಳ ಕಣ್ತೆರಿಸಿರುತ್ತಾಳೆ. ಇದೆಲ್ಲವನ್ನೂ ನೋಡಿದ್ದ ಸುಧಾಮೂರ್ತಿ ತಮ್ಮ ಮೊಮ್ಮನಿಗೆ ಮಡದಿಯಾಗಿ ಬಂದರೆ ಇಂತಹವಳೇ ಬರಬೇಕು ಎಂದು ಅಂದುಕೊಳ್ಳುತ್ತಾರೆ. ಅಲ್ಲದೇ ಆ ದಿನವೇ ಪುಷ್ಪಾಳನ್ನು ತಮ್ಮ ಮನೆಗೆ ತಂದುಕೊಳ್ಳಬೇಕು ಎಂದು ನಿರ್ಧಾರ ಮಾಡುತ್ತಾರೆ. ಅಂದಿನ ಘಟನೆಯನ್ನು ನೆನೆಯುವ ಸುಧಾಮೂರ್ತಿ ಆ ದಿನ ನಿಂಗೆ ಆ ದಂಪತಿಗಳನ್ನು ಮನೆಗೆ ಸೇರಿಸಿದೆ, ಅವರು ಈಗ ಹೇಗಿದ್ದಾರೆ, ಎಲ್ಲರೂ ಜೊತೆಯಾಗಿ ಇದ್ದಾರಾ ಎಂದೆಲ್ಲಾ ವಿಚಾರಿಸುತ್ತಾರೆ. ಅದಕ್ಕೆ ಪುಷ್ಪಾ ಮನೆಯಲ್ಲಿ ಹಿರಿಯರು ಇರಬೇಕಾದ ಅವಶ್ಯಕತೆ ಎಷ್ಟಿದೆ, ಅಪ್ಪ-ಅಮ್ಮನ ಮಹತ್ವ ಏನು ಎಂಬುದನ್ನೆಲ್ಲಾ ಅಜ್ಜಮ್ಮನ ಮುಂದೆ ಹೇಳುತ್ತಾಳೆ. ಇದನ್ನೆಲ್ಲಾ ಕೇಳಿ ಪುಷ್ಪಾಳ ಮೇಲೆ ಇನ್ನಷ್ಟು ಅಭಿಮಾನ ಬೆಳೆಸಿಕೊಳ್ಳುವ ಅಜ್ಜಮ್ಮ ʼನೀನು ಎಂಥದ್ದೇ ಸಂದರ್ಭ ಬರಲಿ ಬೃಂದಾವನದ ಒಗ್ಗಟ್ಟು ಮುರಿಯಲು ಬಿಡುವುದಿಲ್ಲʼ ಎಂದು ನನಗೆ ಆಣೆ ಮಾಡು ಎಂದು ಪ್ರಮಾಣ ಮಾಡಿಸಿಕೊಳ್ಳುತ್ತಾರೆ. ʼನನಗೆ ನಿಮ್ಮ ಋಣ ತಿರಿಸೋಕೆ ಒಂದು ಅವಕಾಶ ಬೇಕು. ಆ ಅವಕಾಶ ಈಗ ನಿಮಗೆ ನೀಡುವ ಆಣೆಯ ಮೂಲಕ ನೆರವೇರುತ್ತದೆ ಎಂದರೆ ನನಗೂ ಖುಷಿ. ನಾನು ನನ್ನ ಪ್ರಾಣ ಒತ್ತೆ ಇಟ್ಟಾದರೂ ಬೃಂದಾವನದ ಒಗ್ಗಟ್ಟು ಕಾಪಾಡುತ್ತೇನೆʼ ಎಂದು ಅಜ್ಜಮ್ಮನಿಗೆ ಆಣೆ ಮಾಡುವ ಮೂಲಕ ಭರವಸೆ ನೀಡುತ್ತಾಳೆ.

ಸಹನಾಗೆ ಚಿಕ್ಕೋಡಿ ವಾರ್ನಿಂಗ್‌

ಇತ್ತ ಕಾಲೇಜಿನಲ್ಲಿ ಸಹನಾ ಆಕಾಶ್‌ಗೆ ಪ್ರಪೋಸ್‌ ಮಾಡೋಕೆ ರೆಡಿ ಆಗಿ ತುದಿಗಾಲಿನಲ್ಲಿ ನಿಂತಿದ್ರೆ, ಅಲ್ಲಿಗೆ ಬರುವ ಸುನಾಮಿ ಹಾಗೂ ಚಿಕ್ಕೊಡಿ ಸಹನಾ ಖುಷಿಗೆ ಕಾರಣ ಏನು ಕೇಳ್ತಾರೆ. ಅವಳು ಆಕಾಶ್‌ ಬರೆದ ಡೈರಿ ಓದಿದ್ದು, ಇವತ್ತು ಅವನಿಗೆ ಪ್ರಪೋಸ್‌ ಮಾಡೋಕೆ ರೆಡಿ ಆಗಿರುವ ವಿಚಾರ ಕೇಳಿ ಶಾಕ್‌ ಆಗುವ ಚಿಕ್ಕೋಡಿ ಹೇಗಾದ್ರೂ ಇದನ್ನು ತಡಿಬೇಕು ಅಂತ ನಿರ್ಧಾರ ಮಾಡಿ ಆಕಾಶ್‌ಗೆ ಈಗಾಗಲೇ ಮದುವೆ ಆಗಿರುವ ವಿಚಾರ ಹೇಳಿ ಬಿಡ್ತಾನೆ. ಆದರೆ ಸಹನಾ ಅದನ್ನು ಕೇಳಿಸಿಕೊಳ್ಳುವುದೇ ಇಲ್ಲ.

ಆಕಾಶ್‌ ಬಂದ, ಭಾರ್ಗವಿನೂ ಬಂದ್ಲು

ದೂರದಲ್ಲಿ ಕಾರ್‌ನಲ್ಲಿ ಬರುತ್ತಿರುವ ಆಕಾಶ್‌ನನ್ನು ನೋಡಿ ಖುಷಿ ಪಡುವ ಸಹನಾ ಇವತ್ತು ಪ್ರಪೋಸ್‌ ಮಾಡಲೇಬೇಕು ಎಂದು ಮುಂದೆ ಹೋಗುತ್ತಾಳೆ. ಆ ಕಡೆ ಆಕಾಶ್‌ ಮುಂದೆ ಬರ್ತಾ ಇದ್ರೆ, ಈ ಕಡೆಯಿಂದ ಸಹನಾ ಅವನ ಕಡೆಗೆ ಹೋಗ್ತಾ ಇರ್ತಾಳೆ. ಅಷ್ಟೊತ್ತಿಗೆ ಸರಿಯಾಗಿ ಕಾರೊಂದು ಸಹನಾ ಪಕ್ಕ ಬಂದು ನಿಲ್ಲುತ್ತದೆ. ಕಾರಿನಲ್ಲಿರುವ ವ್ಯಕ್ತಿಯನ್ನು ಕಂಡು ಸಹನಾ ಮಾಮ್‌ ನೀನಾ ಎಂದು ಉದ್ಗಾರ ತೆಗೆಯುತ್ತಾಳೆ. ಇಲ್ಲಿ ಪ್ರೇಕ್ಷಕರಿಗೆ ಒಂದು ಟ್ವಿಸ್ಟ್‌ ಇರುತ್ತದೆ. ಅದೇನೆಂದರೆ ಸುಧಾಮೂರ್ತಿ ಭಯಕ್ಕೆ ಕಾರಣಳಾಗಿದ್ದ ಭಾರ್ಗವಿಯೇ ಸಹನಾಳ ತಾಯಿಯಾಗಿರುತ್ತಾಳೆ.

ಭಾರ್ಗವಿ ಬಂದಿರುವ ಕಾರಣ ಸಹನಾ ಆಕಾಶ್‌ಗೆ ಪ್ರಪೋಸ್‌ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಮಿಂಚು ಆಕಾಶ್‌ ಬಳಿ ಸಹನಾ ನಿನ್ನ ಬಳಿ ಮುಖ್ಯವಾದ ವಿಚಾರ ಮಾತನಾಡಬೇಕು ಅಂತಿದ್ದಾಳೆ, ಅದೇನು ಅಂತ ಹೋಗಿ ಕೇಳಿ ಎಂದು ಆಕಾಶ್‌ಗೆ ಒತ್ತಾಯ ಮಾಡುತ್ತಾಳೆ. ಇತ್ತ ಚಿಕ್ಕೋಡಿ ಇದನ್ನೆಲ್ಲಾ ತಡೆಯಲು ಸಾಧ್ಯವಾಗದೇ ಬೇಸರದಿಂದ ನಿಂತಿರುತ್ತಾನೆ. ಮನೆಗೆ ಬರುವ ಪುಷ್ಪಾ, ಸುಧಾಮೂರ್ತಿ ಮನೆಯ ಗೋಡೆಯ ಮೇಲಿದ್ದ ಫ್ಯಾಮಿಲಿ ಫೋಟೊ ಒಡೆದಿರುವುದನ್ನು ನೋಡಿ ಶಾಕ್‌ ಆಗ್ತಾರೆ.

ಭಾರ್ಗವಿ ಮಗಳು ಸಹನಾಳನ್ನ ಇರಿಸಿಕೊಂಡು ಬೃಂದಾವನ ಒಡೆಯಲು ನೋಡ್ತಾರಾ, ಸಹನಾ ಪ್ರಪೋಸ್‌ ಮಾಡಿದ್ರೆ ಆಕಾಶ್‌ ಒಪ್ಕೋತಾನಾ, ಅಜ್ಜಮ್ಮನಿಗೆ ನೀಡಿದ ಪ್ರಾಮಿಸ್‌ ಕಾಪಾಡಿಕೊಳ್ಳಲು ಪುಷ್ಪಾಳಿಂದ ಸಾಧ್ಯಾನಾ, ಇದನ್ನೆಲ್ಲಾ ತಿಳಿಯಲು ಮುಂದಿನ ಸಂಚಿಕೆಗಳನ್ನು ನಿರೀಕ್ಷಿಸಿ.

mysore-dasara_Entry_Point