Brundavana Serial: ಪುಷ್ಪಾಳ ಊರಿನಲ್ಲಿ ಹಳ್ಳಿ ಹೈದನಾದ ಆಕಾಶ್‌, ಮಗಳ ಮನಕದ್ದ ಹುಡುಗನ ಹುಡುಕಾಟದಲ್ಲಿ ಭಾರ್ಗವಿ-television news colors kannada brindavana kannada serial today episode 129 april 1st akash in village former getup rst ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Brundavana Serial: ಪುಷ್ಪಾಳ ಊರಿನಲ್ಲಿ ಹಳ್ಳಿ ಹೈದನಾದ ಆಕಾಶ್‌, ಮಗಳ ಮನಕದ್ದ ಹುಡುಗನ ಹುಡುಕಾಟದಲ್ಲಿ ಭಾರ್ಗವಿ

Brundavana Serial: ಪುಷ್ಪಾಳ ಊರಿನಲ್ಲಿ ಹಳ್ಳಿ ಹೈದನಾದ ಆಕಾಶ್‌, ಮಗಳ ಮನಕದ್ದ ಹುಡುಗನ ಹುಡುಕಾಟದಲ್ಲಿ ಭಾರ್ಗವಿ

Brindavana Kannada Serial Today Episode April 1st: : ʼಬೃಂದಾವನʼ ಧಾರಾವಾಹಿಯ ಸೋಮವಾರದ ಎಪಿಸೋಡ್‌ನಲ್ಲಿ ತವರು ಮನೆಯಲ್ಲಿದ್ರು ಅಜ್ಜಮ್ಮನ ಕಾಳಜಿ ಮಾಡೋದು ನೆನಪು ಬಿಡದ ಪುಷ್ಪಾ. ಅತ್ತ ಹೆಂಡತಿ ಊರಿನಲ್ಲಿ ಆಕಾಶ್‌ ಹಳ್ಳಿ ಹೈದನಾದ್ರೆ, ಇತ್ತ ಮಗಳ (ಸಹನಾ) ಮನಸ್ಸು ಕದ್ದ ಹುಡುಗ ಯಾರು ಎಂದು ತಲಾಶ್‌ ಮಾಡುತ್ತಿದ್ದಾಳೆ ಭಾರ್ಗವಿ.

ಪುಷ್ಪಾಳ ಊರಿನಲ್ಲಿ ಹಳ್ಳಿ ಹೈದನಾದ ಆಕಾಶ್‌, ಮಗಳ ಮನ ಕದ್ದ ಹುಡುಗನ ಹುಡುಕಾಟದಲ್ಲಿ ಭಾರ್ಗವಿ
ಪುಷ್ಪಾಳ ಊರಿನಲ್ಲಿ ಹಳ್ಳಿ ಹೈದನಾದ ಆಕಾಶ್‌, ಮಗಳ ಮನ ಕದ್ದ ಹುಡುಗನ ಹುಡುಕಾಟದಲ್ಲಿ ಭಾರ್ಗವಿ

ಬೃಂದಾವನ ಧಾರಾವಾಹಿಯ ನಿನ್ನೆಯ (ಏಪ್ರಿಲ್‌ 1) ಸಂಚಿಕೆಯಲ್ಲಿ ತವರು ಮನೆಯಲ್ಲಿರುವ ಪುಷ್ಪಾ ಅಜ್ಜಮ್ಮನಿಗೆ ಕರೆ ಮಾಡಿ ಆರೋಗ್ಯ ವಿಚಾರಿಸುತ್ತಾಳೆ. ʼತಿಂಡಿ ತಿಂದ್ರಾ ಅಜ್ಜಮ್ಮʼ ಎಂದು ಕೇಳುವ ಪುಷ್ಪಾ, ಯಾವ ಹೊತ್ತಿಗೆ ಯಾವ ಮಾತ್ರೆ ತೆಗೆದುಕೊಳ್ಳಬೇಕು ಎಂದು ಮತ್ತೊಮ್ಮೆ ನೆನಪಿಸುತ್ತಾಳೆ. ಅವಳ ಕಾಳಜಿಗೆ ಸೋಲುವ ಸುಧಾಮೂರ್ತಿ ʼನನ್ನ ಚಿಂತೆ ಬಿಡು ಪುಷ್ಪಾ, ನನ್ನನ್ನ ನೋಡಿಕೊಳ್ಳಲು ಈ ಮನೆಯಲ್ಲಿ 34 ಮಂದಿ ಇದ್ದಾರೆ, ನೀನು ಅಪರೂಪಕ್ಕೆ ತವರುಮನೆಗೆ ಹೋಗಿದ್ದೀಯಾ, ಒಂದೆರಡು ದಿನ ನೆಮ್ಮದಿಯಿಂದ ಇದ್ದು ಬಾʼ ಎಂದು ಪುಷ್ಪಾಳಿಗೆ ಪ್ರೀತಿಯಿಂದ ಗದರುತ್ತಾಳೆ. ʼಬೃಂದಾವನದ 36 ಜನರ ನಂಬಿಕೆ, ಒಲವು ಇರುವುದು ನಿಮ್ಮ ಮೇಲೆ ಅಂದ ಮೇಲೆ ನೀವು ಚೆನ್ನಾಗಿರಬೇಕು ಅಜ್ಜಮ್ಮʼ ಎಂದು ಮನಸಾರೆ ಹೇಳುತ್ತಾರೆ. ಪುಷ್ಪಾಳ ಮಾತನ್ನ ಮರೆಯಿಂದ ಕೇಳಿಸಿಕೊಳ್ಳುವ ಆಕಾಶ್‌ ಮನಸ್ಸು ತುಂಬಿ ಬರುತ್ತದೆ.

ಸಹನಾಳ ಹುಡುಗನ ಹುಡುಕಾಟದಲ್ಲಿ ಭಾರ್ಗವಿ

ಡೈನಿಂಗ್‌ ಟೇಬಲ್‌ ಮುಂದೆ ಕೂತು ತಿಂಡಿ ತಿನ್ನುತ್ತಿರುತ್ತಾರೆ ಭಾರ್ಗವಿ ಹಾಗೂ ಸಹನಾ. ಮಗಳು ಪದೇ ಪದೇ ಮೊಬೈಲ್‌ ನೋಡುವುದನ್ನು ಗಮನಿಸುವ ಭಾರ್ಗವಿ ಅವಳ ಬಳಿ ʼಸ್ವೀಟಿ, ಕಾಲೇಜಿನಲ್ಲಿ ಪ್ರೀತಿ-ಪ್ರೇಮ ಅಂತ ಯಾರಾದ್ರೂ ನಿನ್ನ ತಲೆ ಕೆಡಿಸಿದ್ದಾರಾ?ʼ ಎಂದು ನೇರವಾಗಿಯೇ ಪ್ರಶ್ನಿಸುತ್ತಾಳೆ. ಇದರಿಂದ ಗಾಬರಿಯಾಗುವ ಸಹನಾ ʼಇಲ್ಲಮ್ಮ ಹಾಗೆಲ್ಲ ಏನೂ ಇಲ್ಲʼ ಎನ್ನುತ್ತಾಳೆ. ಅಲ್ಲದೇ ʼನೀನ್ಯಾಕೆ ನನ್ನ ಬಳಿ ಹೀಗೆ ಪ್ರಶ್ನೆ ಮಾಡ್ತಾ ಇದೀಯಾʼ ಎಂದು ಕೇಳುತ್ತಾಳೆ. ಅದಕ್ಕೆ ಉತ್ತರಿಸುವ ಭಾರ್ಗವಿ ʼಈಗಿನ ಮಕ್ಕಳು ಓದಿನ ವಿಚಾರದಲ್ಲಿ ಅಷ್ಟೊಂದು ತಲೆ ಕೆಡಿಸಿಕೊಂಡಿಲ್ಲ ಅಂದ್ರು ಪ್ರೀತಿ-ಪ್ರೇಮ ವಿಚಾರದಲ್ಲಿ ಸಾಯೋಕು ರೆಡಿ ಇಡ್ತಾರೆ, ನೀನು ಅದೇ ರೀತಿ ಪ್ರೀತಿ-ಪ್ರೇಮ ಅಂತೇನಾದ್ರೂ ಇದ್ರೆ ಅಂತ ಕೇಳ್ದೆ, ಹಾಗೆನಾದ್ರೂ ಇದ್ರೆ ನನ್‌ ಜೊತೆ ಹೇಳುʼ ಎಂದು ಸಹನಾಗೆ ಹೇಳುತ್ತಾಳೆ.

ಇತ್ತ ಡೈನಿಂಗ್‌ ಟೇಬಲ್‌ನಿಂದ ಎದ್ದು ಬರುವ ಭಾರ್ಗವಿ ಯಾರಿಗೋ ಕಾಲ್‌ ಮಾಡಿ ʼನಾನೊಂದು ಫೋಟೊ ಕಳಸ್ತೀನಿ, ಆ ಹುಡುಗ ಯಾರು, ಏನು ಎನ್ನುವ ಎಲ್ಲಾ ಡಿಟೈಲ್ಸ್‌ ಬೇಕುʼ ಎನ್ನುತ್ತಾಳೆ. ಅಲ್ಲದೇ ಆಕಾಶ್‌ ಫೋಟೊ ನೋಡುತ್ತಾ ಈ ಹುಡುಗ ಯಾರು, ಇವನನ್ನು ನೋಡಿದ್ರೆ ನಂಗೆ ಯಾಕಿಷ್ಟು ಗೊಂದಲ ಕಾಡ್ತಿದೆ, ಇವನು ಯಾರಿರಬಹುದುʼ ಎಂದು ಯೋಚಿಸುತ್ತಿರುತ್ತಾಳೆ.

ಬೃಂದಾವನದಲ್ಲಿ ಎಲ್ಲರಿಗೂ ಪುಷ್ಪಾಳದ್ದೇ ಜಪ

ಇತ್ತ ಒಂದೆರಡು ದಿನ ಪುಷ್ಪಾ ಮನೆಯಲ್ಲಿ ಇಲ್ಲದೇ ಇರುವುದು ಬೃಂದಾವನದ ಪ್ರತಿಯೊಬ್ಬರಿಗೂ ಏನನ್ನೋ ಕಳೆದುಕೊಂಡು ಭಾವ ಆವರಿಸುವಂತೆ ಮಾಡಿದೆ. ಪೇಪರ್‌ಗಾಗಿ ಪುಷ್ಪಾಳನ್ನು ಕೂಗುವ ಅಲುಮೇಲು ಒಂದು ಕಡೆಯಾದ್ರೆ, ತಲೆನೋವಿನ ಔಷಧಿಗೂ ಪುಷ್ಪಾಳೇ ಬೇಕು ಎನ್ನುವ ಸ್ನೇಹ ಇನ್ನೊಂದು ಕಡೆ. ಕೊನೆಗೆ ಸದಾ ಪುಷ್ಪಾಳ ಮೇಲೆ ರೇಗುವ ಸತ್ಯಮೂರ್ತಿ ಕೂಡ ಪುಷ್ಪಾಳ ಕೈರುಚಿ ಇಲ್ಲದೇ ನಾಲಿಗೆ ಕೆಟ್ಟಿದೆ ಎಂಬುದನ್ನು ಒಪ್ಪಿಕೊಳ್ಳುತ್ತಾರೆ.

ಹಳ್ಳಿಯಲ್ಲಿ ಗದ್ದೆ ಕೆಲಸ ಮಾಡುವ ಆಕಾಶ್‌

ಇತ್ತ ಬೆಳಗೆದ್ದು ಗದ್ದೆ ಕೆಲಸಕ್ಕೆ ಹೊರಡುವ ಅಪ್ಪಣ್ಣನ ಜೊತೆ ತಾನು ಬರ್ತೀನಿ ಎಂದು ಸಿದ್ಧನಾಗುತ್ತಾನೆ ಆಕಾಶ್‌. ಆದರೆ ಅವನ ಪ್ಯಾಂಟ್‌ ಶರ್ಟ್‌ ನೋಡಿ ʼಈ ಡ್ರೆಸ್‌ನಲ್ಲಿ ತೋಟಕ್ಕೆ ಬರೋಕ್ಕೆ ಆಗೊಲ್ಲ ಆಕಾಶಪ್ಪ, ನೀವು ಮನೆಯಲ್ಲೇ ಇರಿ ನಾನು ಹೋಗಿ ಬರ್ತೀನಿʼ ಅಂತಾನೆ, ಅದಕ್ಕೆ ಉತ್ತರಿಸುವ ಆಕಾಶ್‌ ʼಅಷ್ಟೇ ತಾನೇ, ಒಂದೆರಡು ನಿಮಿಷ ಇರಿ, ಬರ್ತೀನಿʼ ಎಂದು ಒಳಗೆ ಹೋಗಿ ಹಳ್ಳಿ ಹೈದನ ಗೆಟಪ್‌ನಲ್ಲಿ ಮರಳಿ ಬರುತ್ತಾನೆ. ಅಲ್ಲದೇ ಅಪ್ಪಣ್ಣನ ಜೊತೆಗೆ ತೋಟಕ್ಕೆ ಹೋಗುವ ಆಕಾಶ್‌ ಎಳನೀರು ಕುಡಿದು, ಗದ್ದೆ ಕೆಲಸದಲ್ಲೂ ಜೊತೆಯಾಗುತ್ತಾನೆ.

ಭಾರ್ಗವಿಗೆ ಆಕಾಶ್‌ ಯಾರು ಎಂಬ ಸತ್ಯ ತಿಳಿಯುತ್ತಾ, ಬೃಂದಾವನದ ಮನೆ ಮಗನನ್ನು ಸಹನಾ ಪ್ರೀತಿಸುತ್ತಿದ್ದಾಳೆ ಎಂಬುದನ್ನು ತಿಳಿದರೆ ಭಾರ್ಗವಿ ಏನು ಮಾಡಬಹುದು, ಆಕಾಶ್‌ ನಿಜಕ್ಕೂ ಪುಷ್ಪಾಳ ವಿಚಾರದಲ್ಲಿ ಬದಲಾಗಿದ್ದಾನಾ? ಈ ಎಲ್ಲವನ್ನೂ ತಿಳಿಯಲು ಮುಂದಿನ ಸಂಚಿಕೆಗಳನ್ನು ನಿರೀಕ್ಷಿಸಿ.