Brundavana Serial: ಹಳ್ಳಿ ಜೀವನವನ್ನು ಹಾಡಿ ಹೊಗಳುವ ಆಕಾಶ್‌, ಬಂಡವಾಳ ಬಯಲಾಗುವ ಭಯದಲ್ಲಿ ಗಿರಿಜಾ-television news colors kannada brindavana kannada serial today episode 130 april 2nd akash makes girija anxious rst ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Brundavana Serial: ಹಳ್ಳಿ ಜೀವನವನ್ನು ಹಾಡಿ ಹೊಗಳುವ ಆಕಾಶ್‌, ಬಂಡವಾಳ ಬಯಲಾಗುವ ಭಯದಲ್ಲಿ ಗಿರಿಜಾ

Brundavana Serial: ಹಳ್ಳಿ ಜೀವನವನ್ನು ಹಾಡಿ ಹೊಗಳುವ ಆಕಾಶ್‌, ಬಂಡವಾಳ ಬಯಲಾಗುವ ಭಯದಲ್ಲಿ ಗಿರಿಜಾ

Brindavana Kannada Serial Today Episode April 2nd: : ʼಬೃಂದಾವನʼ ಧಾರಾವಾಹಿಯ ಮಂಗಳವಾರದ ಎಪಿಸೋಡ್‌ನಲ್ಲಿ ಆಕಾಶ್‌ ಗದ್ದೆಯಲ್ಲಿ ಕೆಲಸ ಮಾಡುವ ಜೊತೆಗೆ ಹಳ್ಳಿ ಜನ ಜೀವನದ ಬಗ್ಗೆ ಅಭಿಮಾನ ಮಾತುಗಳನ್ನಾಡುತ್ತಾನೆ, ಜೊತೆಗೆ ಗಿರಿಜಾಗೆ ಭಯ ಪಡಿಸಲು ಮರೆಯುವುದಿಲ್ಲ. ಇತ್ತ ಆಕಾಶ್‌ ನೆನಪಿನಲ್ಲಿ ಕೊರಗುತ್ತಿದ್ದಾಳೆ ಸಹನಾ.

ಹಳ್ಳಿಯಲ್ಲೇ ಉಳಿದ ಆಕಾಶ್‌-ಪುಷ್ಪಾ, ಬಂಡವಾಳ ಬಯಲಾಗುವ ಭಯದಲ್ಲಿ ಗಿರಿಜಾ
ಹಳ್ಳಿಯಲ್ಲೇ ಉಳಿದ ಆಕಾಶ್‌-ಪುಷ್ಪಾ, ಬಂಡವಾಳ ಬಯಲಾಗುವ ಭಯದಲ್ಲಿ ಗಿರಿಜಾ

ಬೃಂದಾವನ ಧಾರಾವಾಹಿಯ ನಿನ್ನೆಯ (ಏಪ್ರಿಲ್‌ 2) ಸಂಚಿಕೆಯಲ್ಲಿ ಗದ್ದೆಯಲ್ಲಿ ಅಪ್ಪಣ್ಣನೊಂದಿಗೆ ಕೆಲಸ ಮಾಡುತ್ತಿರುವ ಆಕಾಶ್‌ನನ್ನು ನೋಡಿ ಊರಿನ ಶಿವಣ್ಣ-ಯಂಕಣ್ಣ ʼಬೇರೆ ಊರಿಂದ ಅಪ್ಪಣ್ಣ ಯಾರನ್ನೋ ಕೆಲಸಕ್ಕೆ ಕರೆದುಕೊಂಡು ಬಂದಿದ್ದಾನೆʼ ಎಂದು ಮಾತನಾಡಿಕೊಳ್ಳುತ್ತಾರೆ. ಹತ್ತಿರ ಅಪ್ಪಣ್ಣನ ಬಳಿ ಈ ಬಗ್ಗೆ ಕೇಳಿದಾಗ ಅಲ್ಲಿ ಕೆಲಸ ಮಾಡುತ್ತಿರುವುದು ಕೆಲಸಗಾರನಲ್ಲ, ಆಕಾಶ್‌ ಎಂಬುದು ಅರಿವಾಗುತ್ತದೆ. ಆಕಾಶ್‌ ಬಳಿ ಅವರು ಕ್ಷಮೆ ಕೇಳುವುದು ಮಾತ್ರವಲ್ಲ, ಅಪ್ಪಣ್ಣ ಬಳಿ ʼಅಳಿಯಂದಿರ ಕೈಯಲ್ಲಿ ಯಾಕೆ ಕೆಲಸ ಮಾಡಿಸುತ್ತಿದ್ದೀಯಾʼ ಎಂದು ಬೈಯುತ್ತಾರೆ. ಅದಕ್ಕೆ ಆಕಾಶ್‌ ʼಅವ್ರೇನು ಕರೆದಿಲ್ಲ, ನಾನಾಗಿಯೇ ಬಂದೆʼ ಎನ್ನುತ್ತಾನೆ. ಅದಕ್ಕೆ ಯಂಕಣ್ಣ ಅಯ್ಯೋ, ಇದೆಲ್ಲಾ ನಿಮಗೆ ಸಿಟ್‌ ಆಗಕ್ಕಿಲ್ಲ ಬಿಡಿʼ ಎನ್ನುತ್ತಾನೆ. ಅದಕ್ಕೆ ಆಕಾಶ್‌ ʼಸಿಟಿಯವರು ಅಂದ್ರೆ ಸಿಟಿಯಲ್ಲೇ ಕುತ್ಕೊಂಡು ಪಬ್ಬು, ಮಾಲ್‌ ಅಂತ ಸುತ್ತಾಡ್ಕೊಂಡು ಇರ್ಬೇಕು, ಹಳ್ಳಿಯವರು ಅಂದ್ರೆ ಹಳ್ಳಿಯಲ್ಲೇ ಇದ್ಕೊಂಡು, ಗದ್ದೆ ಕೆಲಸ ಮಾಡ್ಕೊಂಡ್‌ ಇರ್ಬೇಕುʼ ಅಂತ ನೀವು ಅಂದ್ಕೊಂಡ್‌ ಬಿಟ್ಟಿದೀರಾ ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ಶಿವಣ್ಣ ಅದೇ ಅಲ್ವಾ ಸ್ವಾಮಿ ನಮ್‌ ಜೀವನ ಅಂತಾನೆ. ಆಗ ಆಕಾಶ್‌ ನಿಮ್ಮಲ್ಲಿ ಈ ಮೆಂಟಾಲಿಟಿ ಇರುವುದಕ್ಕೆ ರೈತರು ಸಿಟಿ ಬಂದಾಗ ಮಾಲ್‌ಗಳಲ್ಲಿ, ಮೆಟ್ರೊಗಳಲ್ಲಿ ಜನ ಅವಮಾನ ಮಾಡೋದು. ರೈತರು ಯಾವುದ್ರಲ್ಲಿ ಕಮ್ಮಿ ಇದಾರೆ ಹೇಳಿ, ನಮ್ಮ ರೈತರಲ್ಲಿ ಇರುವ ಕೊರತೆ ಆದ್ರೂ ಏನ್‌ ಹೇಳಿ, ರೈತ ಅನ್ನ ಕೊಡ್ತಾರೆ, ನಮ್ಮೆಲ್ಲರಿಗೂ ಅನ್ನ ಕೊಡುವವರು ರೈತರು. ರೈತರು ನಮ್ಮ ದೇಶದ ಬೆನ್ನೆಲುಬು, ಅನ್ನ ಪರಬ್ರಹ್ಮ ಅಂದ್‌ ಮೇಲೆ ರೈತಂಗೆ ಏನ್‌ ಹೇಳಬೇಕು ಹೇಳಿʼ ಎಂದು ರೈತರ ಬಗ್ಗೆ ಅಭಿಮಾನ ಮಾತುಗಳನ್ನು ಆಡುತ್ತಾನೆ. ಹಳ್ಳಿಗರು ಆಕಾಶ್‌ ಮಾತು ಕೇಳಿ ಮನಸ್ಸು ತುಂಬಿ ಹರಸುತ್ತಾರೆ. ಆಕಾಶ್‌ ಗುಣ, ಮಾತು ಕಂಡು ಅಪ್ಪಣ್ಣನ ಮನಸ್ಸು ಅಭಿಮಾನದಿಂದ ತುಂಬಿ ಹೋಗುತ್ತದೆ.

ಆಕಾಶ್‌ ನೆನಪಿನಲ್ಲಿ ಕೊರಗುವ ಸಹನಾ

ಇತ್ತ ಆಕಾಶ್‌ ಫೋನ್‌ಗೂ ಸಿಗದೇ, ಮೆಸೇಜ್‌ಗೂ ಸಿಗದೇ ಇರುವ ಕಾರಣ ಕೊರಗುವ ಸಹನಾ ಗೆಳತಿ ಮಿಂಚು ಬಳಿ ಮನದ ಮಾತುಗಳನ್ನು ಹೇಳಿಕೊಳ್ಳುತ್ತಾಳೆ. ಅವಳಿಗೆ ಸಾಮಾಧಾನ ಮಾಡುವ ಮಿಂಚು ʼಆಕಾಶ್‌ ಅವರ ಊರಿಗೆ ಹೋಗಿರಬಹುದು, ಅಲ್ಲಿ ನೆಟ್‌ವರ್ಕ್‌ ಇಲ್ಲದೇ ಇರಬಹುದು. ಅದಕ್ಕಾಗಿ ಫೋನ್‌, ಮೆಸೇಜ್‌ಗೆ ಸಿಗ್ತಿಲ್ಲ. ಅದಕ್ಕೆ ಹೇಳೋದು ಪ್ರೀತಿ ಮಾಡುವ ಮುನ್ನ ಅವರು ಯಾರು, ಅವರ ಹಿನ್ನೆಲೆ ಏನು ಅಂತ ವಿಚಾರಿಸಬೇಕು ಅಂತ. ನಾಳೆ ನಿಮ್‌ ಅಮ್ಮ ಆಕಾಶ್‌ ಬಗ್ಗೆ ಕೇಳಿದ್ರೆ ನೀನು ಏನ್‌ ಹೇಳ್ತೀಯಾ, ಅವರ ಊರು ಮನೆಯವರ ಬಗ್ಗೆ ಕೇಳಿದ್ರೆ ನಿಂಗೆ ಹೇಳೋಕೆ ಏನು ಗೊತ್ತಿದೆ. ಅದಕ್ಕಾಗಿ ನೀನು ಮೊದಲು ಅದನ್ನೆಲ್ಲಾ ತಿಳ್ಕೊ ಅಂತ ಸಲಹೆ ನೀಡ್ತಾಳೆ.

ಬುತ್ತಿ ಊಟಕ್ಕೆ ಫಿದಾ ಆಗುವ ಪುಷ್ಪಾಳ ಗಂಡ

ಹೊಲದಲ್ಲಿರುವ ಅಣ್ಣಾ ಹಾಗೂ ಆಕಾಶ್‌ಗೆ ಬುತ್ತಿ ಹೊತ್ತು ತರುವ ಪುಷ್ಪಾ ಆಕಾಶ್‌ ಕೈಗಳಲ್ಲಿರುವ ಗಾಯವನ್ನು ನೋಡಿ ಕಣ್ಣೀರಾಗುತ್ತಾಳೆ. ಇತ್ತ ಪುಷ್ಪಾ ತಂದ ಊಟ ತಿಂದು ಖುಷಿ ಪಡುವ ಆಕಾಶ್‌ ಒಂದೆಡೆಯಾದರೆ ಬಾಲ್ಯದಿಂದಲೂ ಅಣ್ಣ ನೀಡುತ್ತಿದ್ದ ಕೈತುತ್ತು ನೆನಪಾಗಿ ಕಣ್ಣೀರು ಸುರಿಸುತ್ತಾಳೆ ಪುಷ್ಪಾ. ಹಿಂದಿನ ದಿನಗಳನ್ನೆಲ್ಲಾ ನೆನೆದು ಅಪ್ಪಣ್ಣ-ಪುಪ್ಪಾ ಇಬ್ಬರೂ ದುಃಖ ಪಡುತ್ತಾರೆ. ಕೊನೆಗೆ ಶಿವಣ್ಣ-ಯಂಕಣ್ಣನಿಗೂ ಊಟ ಬಡಿಸಿ ಮನೆಗೆ ತೆರಳುತ್ತಾರೆ ಪುಷ್ಪಾ ಮಲ್ಲಿ.

ಗಿರಿಜಾಳಿಗೆ ಭಯ ಪಡಿಸುವ ಆಕಾಶ್‌

ಗಿರಿಜಾ ಹಾಗೂ ಲಲಿತಾ ಸೇರಿ ಆಕಾಶ್‌ನಿಂದ ತಪ್ಪಿಸಿಕೊಳ್ಳುವ ಮಾರ್ಗ ಹುಡುಕುತ್ತಿರುತ್ತಾರೆ. ಕೊನೆಗೆ ಗಿರಿಜಾ ತಾನು ಆಕಾಶ್‌ ಕಾಲಿಗೆ ಬಿದ್ದು ಇನ್ನು ಮುಂದೆ ಹೀಗೆ ಮಾಡುವುದಿಲ್ಲ ಎಂದು ನಾಟಕ ಮಾಡುತ್ತೇನೆ ಎಂದು ಹೇಳಿ ನಂಬಿಸುತ್ತೇನೆ ಎಂದು ಲಲಿತಾ ಬಳಿ ಹೇಳುತ್ತಾಳೆ. ಆದರೆ ಗಿರಿಜಾ ಚಾಪೆ ಅಡಿ ನುಸುಳಿದ್ರೆ ರಂಗೋಲಿ ಅಡಿ ನುಸುಳುವ ಆಕಾಶ್‌ ಅಪ್ಪಣ್ಣನ ಎದುರಿಗೆ 2 ಕೋಟಿ ವಿಚಾರ, ಎದೆನೋವಿನ ವಿಚಾರ ಮಾತನಾಡಿ ಗಿರಿಜಾಳಿಗೆ ಇನ್ನಷ್ಟು ಭಯ ಪಡಿಸುತ್ತಾನೆ.

ಆಕಾಶ್‌ ಅಪ್ಪಣ್ಣನ ಮುಂದೆ ಗಿರಿಜಾಳ ಬಂಡವಾಳ ಬಯಲು ಮಾಡ್ತಾನಾ, ಆಕಾಶ್‌ಗೆ ಮದುವೆಯಾಗಿದೆ ಎಂದು ತಿಳಿದ್ರೆ ಸಹನಾ ಏನು ಮಾಡಬಹುದು, ಆಕಾಶ್‌ ಯಾರು ಎಂಬುದು ಭಾರ್ಗವಿಗೆ ತಿಳಿಯುತ್ತಾ? ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

mysore-dasara_Entry_Point