ಕನ್ನಡ ಸುದ್ದಿ  /  Entertainment  /  Television News Colors Kannada Brindavana Kannada Serial Today Episode 131 April 3rd Akash Makes Girija Anxious Rst

Brundavana Serial: ಅಪ್ಪಣ್ಣನ ಹಾರ್ಟ್‌ ವಿಚಾರ ಹೇಳಿ ಗಿರಿಜಾಳ ಎದೆಯಲ್ಲಿ ನಡುಕ ಹುಟ್ಟಿಸಿದ ಆಕಾಶ್‌, ಆಟ ಶುರುವಿಟ್ಟುಕೊಂಡ ಭಾರ್ಗವಿ

Brindavana Kannada Serial Today Episode April 3rd: : ʼಬೃಂದಾವನʼ ಧಾರಾವಾಹಿಯ ಬುಧವಾರದ ಎಪಿಸೋಡ್‌ನಲ್ಲಿ ಅಪ್ಪಣ್ಣನ ಮುಂದೆ ಪದೇ ಪದೇ ಹೃದಯದ ವಿಚಾರ ಮಾತನಾಡುವ ಆಕಾಶ್‌ ಗಿರಿಜಾಳನ್ನು ಭಯ ಪಡಿಸುತ್ತಾನೆ. ಸುಧಾಮೂರ್ತಿ ಮೊಮ್ಮಗನಿಗೆ ಆಕ್ಸಿಡೆಂಟ್‌ ಮಾಡಿಸುವ ಭಾರ್ಗವಿ, ಪ್ರೀತಿ ವಿಚಾರದಲ್ಲಿ ಮಗಳಿಗೆ ಎಚ್ಚರಿಕೆ ನೀಡುತ್ತಾಳೆ.

ಅಪ್ಪಣ್ಣನ ಹಾರ್ಟ್‌ ವಿಚಾರ ಹೇಳಿ ಗಿರಿಜಾಳ ಎದೆಯಲ್ಲಿ ನಡುಕ ಹುಟ್ಟಿಸಿದ ಆಕಾಶ್‌
ಅಪ್ಪಣ್ಣನ ಹಾರ್ಟ್‌ ವಿಚಾರ ಹೇಳಿ ಗಿರಿಜಾಳ ಎದೆಯಲ್ಲಿ ನಡುಕ ಹುಟ್ಟಿಸಿದ ಆಕಾಶ್‌

ಬೃಂದಾವನ ಧಾರಾವಾಹಿಯ ನಿನ್ನೆಯ (ಏಪ್ರಿಲ್‌ 3) ಸಂಚಿಕೆಯಲ್ಲಿ ಮೈಗೆ ಎಣ್ಣೆ ಹಚ್ಚಿಸಿಕೊಂಡು ಬಿಸಿಲಿನಲ್ಲಿ ಕುಳಿತಿರುವ ಆಕಾಶ್‌ ಅಪ್ಪಣ್ಣ, ಗಿರಿಜಾ, ಲಲಿತಾ ಹಾಗೂ ಮಲ್ಲಿ ಇರುವಾಗ ಬೇಕಂತಲೇ ಅಪ್ಪಣ್ಣನಿಗೆ ಹಾರ್ಟ್‌ನಲ್ಲಿ ಹೋಲ್‌ ಇದೆ ಎಂದು ಗಿರಿಜಾ ಸುಳ್ಳು ಹೇಳಿದ ವಿಚಾರವನ್ನು ಕೆಣಕುತ್ತಾನೆ. ಪದೇ ಪದೇ ಹೃದಯದ ಬಗ್ಗೆ ಮಾತನಾಡುತ್ತಿರುವ ಆಕಾಶ್‌ನನ್ನು ನೋಡಿ ಹೃದಯವೇ ಬಾಯಿಗೆ ಬಂದಂತೆ ಆಡುತ್ತಾಳೆ ಗಿರಿಜಾ. ಅವಳ ವರ್ತನೆ ಕಂಡು ಅಪ್ಪಣ್ಣನಿಗೆ ಅನುಮಾನ ಬಂದರೂ ಕೂಡ ಮಾತಿನಲ್ಲೇ ಸಾಗ ಹಾಕುವ ಆಕೆ, ಪುಷ್ಪಾಳನ್ನು ಕರೆದು ಆಕಾಶ್‌ಗೆ ಸ್ನಾನ ಮಾಡಿಸುವಂತೆ ಹೇಳುತ್ತಾಳೆ. ಆ ಮೂಲಕ ಆಕಾಶ್‌ ಬಾಯಿ ಬಿಡದಂತೆ ನೋಡಿಕೊಳ್ಳುತ್ತಾಳೆ.

ಮಗಳಿಗೆ ಎಚ್ಚರಿಕೆ ನೀಡುವ ಭಾರ್ಗವಿ

ಆಕಾಶ್‌ ಫೋನ್‌ಗೂ ಮೆಸೇಜ್‌ಗೂ ಸಿಗದೇ ಒದ್ದಾಡುವ ಸಹನಾಳನ್ನು ಗಮನಿಸುವ ಭಾರ್ಗವಿ ʼಸ್ವೀಟಿ ನೀನ್ಯಾಕೆ ಹೀಗಿದ್ದೀಯಾ, ಏನಾಗಿದೆ ನಿಂಗೆ, ನಿನ್ನನ್ನು ನೋಡಿದ್ರೆ ಯಾರನ್ನೋ ಮಿಸ್‌ ಮಾಡಿಕೊಳ್ಳುತ್ತಿರುವ ಹಾಗಿದೆ?ʼ ಎಂದು ಪ್ರಶ್ನಿಸುತ್ತಾಳೆ. ಅದಕ್ಕೆ ಸಹನಾ ʼಹಾಗೇನಿಲ್ಲ ಮಾಮ್‌, ಫ್ರೆಂಡ್‌ಗೆ ಕಾಲ್‌ ಮಾಡ್ತಿದ್ದೆ, ನಾಟ್‌ ರೀಚೆಬಲ್‌ ಬರ್ತಿದೆʼ ಎನ್ನುತ್ತಾಳೆ. ಅದಕ್ಕೆ ಉತ್ತರಿಸುವ ಭಾರ್ಗವಿ ʼನಾಟ್‌ ರೀಚೆಬಲ್‌ ಬರ್ತಿದೆ ಅಂದ್ರೆ ರೀಚ್‌ ಆಗದೇ ಇರುವಷ್ಟು ದೂರ ಹೋಗಿದ್ದಾರೆʼ ಎಂದರ್ಥ ಅಂದಾಗ ತಕ್ಷಣಕ್ಕೆ ಗಾಬರಿಗೊಳ್ಳುವ ಸಹನಾ ʼನಾವು ಜಸ್ಟ್‌ ಫ್ರೆಂಡ್ಸ್‌ ಅಷ್ಟೇʼ ಅಂತಾಳೆ. ಅದಕ್ಕೆ ಕೌಂಟರ್‌ ಕೊಡುವ ಭಾರ್ಗವಿ ಜಸ್ಟ್‌ ಫ್ರೆಂಡ್ಸ್‌ ಇದ್ದವರು ನಾಳೆ ಬೆಸ್ಟ್‌ ಆಗಬಹುದು. ಆದರೆ ಬೆಸ್ಟ್‌ ಆಗದೇ ಇದ್ರೆ ನನ್ನ ಪ್ರತಿಕ್ರಿಯೆ ಹೀಗಿರುತ್ತೆ ಎಂಬುದು ನಿನಗೆ ಗೊತ್ತಲ್ಲ ಎಂದು ಮಗಳನ್ನು ಪ್ರಶ್ನಿಸುತ್ತಾಳೆ. ಅದಕ್ಕೆ ಸಹನಾ ʼಮಾಮ್‌ ನನ್ನ ಆಯ್ಕೆ ಯಾವಾಗ್ಲೂ ಬೆಸ್ಟ್‌ ಆಗಿರುತ್ತೆ, ಅದು ವಸ್ತು ಆಗಿರಲಿ, ವ್ಯಕ್ತಿ ಆಗಿರಲಿʼ ಎಂದು ಆತ್ಮವಿಶ್ವಾಸದಿಂದ ಹೇಳುತ್ತಾಳೆ. ಆಗ ಭಾರ್ಗವಿ ನಿನ್ನ ಆಯ್ಕೆ ಎಂಥದ್ದು ಎಂದು ಸದ್ಯದಲ್ಲೇ ಗೊತ್ತಾಗುತ್ತೆ ಎಂದು ಹೇಳಿ ಅಲ್ಲಿಂದ ಹೋಗುತ್ತಾಳೆ.

ಸುಧಾಮೂರ್ತಿ ಮೊಮ್ಮಗನಿಗೆ ಆಕ್ಸಿಡೆಂಟ್‌!

ಸುಧಾಮೂರ್ತಿ ಅವರ ಮೊಮ್ಮಗ ರಸ್ತೆಯಲ್ಲಿ ಹೋಗುತ್ತಿರುವಾಗ ಆಕ್ಸಿಡೆಂಟ್‌ ಆಗುತ್ತದೆ. ರಸ್ತೆಯಲ್ಲಿ ಸರಿಯಾಗಿಯೇ ಹೋಗುತ್ತಿದ್ದ ರಾಘವೇಂದ್ರನಿಗೆ ಕಾರೊಂದು ಬಂದು ಗುದ್ದಿ ಹೋಗುತ್ತದೆ. ಸಣ್ಣಪುಟ್ಟ ಗಾಯ ರಾಘವೇಂದ್ರ ಹೇಗೋ ಮನೆಗೆ ಬಂದು ಸೇರುತ್ತಾನೆ. ಮನೆಯಲ್ಲಿ ಅಪಘಾತ ಹೇಗಾಯ್ತು ಎಂದು ಕೇಳಿದಾಗ ಯಾರೋ ಬಂದು ಗುದ್ದಿದ್ದರ ಬಗ್ಗೆ ಹೇಳುತ್ತಾನೆ. ಇದರಿಂದ ಸುಧಾಮೂರ್ತಿಗೆ ಇದು ಭಾರ್ಗವಿಯದ್ದೇ ಕೆಲಸ ಎಂಬುದು ಅರ್ಥವಾಗುತ್ತದೆ. ಹಾಲ್‌ನಿಂದ ಕೋಣೆಗೆ ಬರುವ ಸುಧಾಮೂರ್ತಿಗೆ ಭಾರ್ಗವಿ ಫೋನ್‌ ಕಾಯತ್ತಿರುತ್ತದೆ. ಒಂದು ಕ್ಷಣಕ್ಕೆ ಭಾರ್ಗವಿಗೆ ಜೋರಾಗಿ ಮಾತನಾಡುವ ಸುಧಾಮೂರ್ತಿ ʼನಿನಗೆ ಮನುಷತ್ವ ಇಲ್ವಾ, ನೀನು ಹೆಣ್ಣಲ್ವಾ?ʼ ಎಂದು ಪ್ರಶ್ನೆ ಮಾಡುತ್ತಾಳೆ. ಅದಕ್ಕೆ ಭಾರ್ಗವಿ ʼನೀನು ಆ ಬೃಂದಾವನದ ಆಲದ ಮರ ಅಲ್ವಾ, ನಿನ್ನ ಮನೆಯ ಒಂದೊಂದೇ ಕೊಂಬೆಗಳನ್ನು ನಾನು ಕಡಿಯುತ್ತಾ ಬರುತ್ತೇನೆ. ನೀನು ಎಲ್ಲರನ್ನೂ ಹೇಗೆ ಕಾಪಾಡಿಕೊಳ್ಳುತ್ತೀಯಾ, ನಿನ್ನ ಮೊಮ್ಮಕ್ಕಳು-ಮಕ್ಕಳು ಶಾಲೆ-ಕಾಲೇಜು, ಕೆಲಸಕ್ಕೆ ಎಂದು ಹೊರಗಡೆ ಹೋಗಲೇಬೇಕು. ಅದ್ಹೇಗೆ ಎಲ್ಲರನ್ನೂ ಕಾಪಾಡಿಕೊಳ್ಳುತ್ತೀಯಾ ಕಾಪಾಡಿಕೊʼ ಎಂದು ಸವಾಲು ಹಾಕುತ್ತಾಳೆ.

ಪುಷ್ಪಾ ಮಾತು ಕೇಳಿ ಹರ್ಷಗೊಂಡ ಆಕಾಶ್‌

ಮರಳಿ ಬೃಂದಾವನಕ್ಕೆ ಹೊರಟ ಪುಷ್ಪಾ-ಆಕಾಶ್‌ಗೆ ಬೀಳ್ಕೊಡುವಾಗ ಬಾಳೆಗೊನೆ, ಸೊಪ್ಪು-ತರಕಾರಿ ಎಂದು ತಮ್ಮ ತೋಟದಲ್ಲಿ ಬೆಳೆದಿದ್ದನ್ನೆಲ್ಲಾ ಕಾರಿಗೆ ತಂಬಿಸುತ್ತಾನೆ ಅಪ್ಪಣ್ಣ, ಆಗಲೂ ಆಕಾಶ್‌ ಗಿರಿಜಾಳಿಗೆ ಭಯ ಪಡಿಸುವುದು ಬಿಡುವುದಿಲ್ಲ. ಇತ್ತ ಮಲ್ಲಿಗೆ ಹೇಳಿ ಬರುತ್ತೇನೆ ಎಂದು ಹೊರಟ ಪುಷ್ಪಾಳನ್ನು ಹಿಂಬಾಲಿಸಿ ಹೋಗುವ ಆಕಾಶ್‌ ಪುಷ್ಪಾ ಮಲ್ಲಿಯ ಬಳಿ ಅಜ್ಜಮ್ಮನ ಬಗ್ಗೆ, ಮನೆಯವರ ಬಗ್ಗೆ ಹಾಗೂ ತನ್ನ ಬಗ್ಗೆ ಹೇಳಿದ ಮಾತುಗಳನ್ನು ಕೇಳಿ ಹರ್ಷಗೊಳ್ಳುತ್ತಾನೆ. ಅವನಿಗೇ ಅರಿಯದಂತೆ ಅವನ ಮುಖದಲ್ಲಿ ನಗು ಮೂಡುತ್ತದೆ.

ಊರಿಗೆ ಮರಳುವ ಮೊದಲು ಅಪ್ಪಣ್ಣನ ಬಳಿ ಗಿರಿಜಾಳ ವಿಚಾರ ಹೇಳ್ತಾನಾ ಆಕಾಶ್‌, ಭಾರ್ಗವಿ ನಿಜಕ್ಕೂ ಬೃಂದಾವನವನ್ನು ನಾಶ ಮಾಡ್ತಾಳಾ, ಆಕಾಶ್‌ ಸಹನಾಗೆ ಸಿಕ್ತಾನಾ, ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

IPL_Entry_Point