ಕನ್ನಡ ಸುದ್ದಿ  /  ಮನರಂಜನೆ  /  Brundavana Serial: ಪುಷ್ಪಾಳ ಆಸೆ ಪೂರೈಸಲು ಕಾಲು ನೋವಿನ ನಾಟಕವಾಡಿದ ಆಕಾಶ್‌, ಗಿರಿಜಾಗಿಲ್ಲ ನೆಮ್ಮದಿ

Brundavana Serial: ಪುಷ್ಪಾಳ ಆಸೆ ಪೂರೈಸಲು ಕಾಲು ನೋವಿನ ನಾಟಕವಾಡಿದ ಆಕಾಶ್‌, ಗಿರಿಜಾಗಿಲ್ಲ ನೆಮ್ಮದಿ

Brindavana Kannada Serial Today Episode April 4th: ʼಬೃಂದಾವನʼ ಧಾರಾವಾಹಿಯ ಗುರುವಾರದ ಎಪಿಸೋಡ್‌ನಲ್ಲಿ ಪುಷ್ಪಾಳ ಆಸೆ ಪೂರೈಸಲು ಕಾಲು ಉಳುಕಿದಂತೆ ನಾಟಕವಾಡುವ ಆಕಾಶ್‌ ಹೆಂಡತಿಯೊಂದಿಗೆ ಹಳ್ಳಿಯಲ್ಲೇ ಉಳಿದು ಬಿಡುತ್ತಾನೆ. ಆಕಾಶ್‌-ಪುಷ್ಪಾ ಮನೆಗೆ ಬಾರದೇ ಗಾಬರಿಗೊಳ್ಳುತ್ತಾರೆ ಸುಧಾಮೂರ್ತಿ. ಮನೆಯಲ್ಲೇ ಉಳಿದ ಆಕಾಶ್‌ನನ್ನು ನೋಡಿ ಗಿರಿಜಾ ಸ್ಥಿತಿ ಅತಂತ್ರ.

ಪುಷ್ಪಾಳ ಆಸೆ ಪೂರೈಸಲು ಕಾಲು ನೋವಿನ ನಾಟಕವಾಡಿದ ಆಕಾಶ್‌, ಗಿರಿಜಾಗಿಲ್ಲ ನೆಮ್ಮದಿ
ಪುಷ್ಪಾಳ ಆಸೆ ಪೂರೈಸಲು ಕಾಲು ನೋವಿನ ನಾಟಕವಾಡಿದ ಆಕಾಶ್‌, ಗಿರಿಜಾಗಿಲ್ಲ ನೆಮ್ಮದಿ

ಬೃಂದಾವನ ಧಾರಾವಾಹಿಯ ನಿನ್ನೆಯ (ಏಪ್ರಿಲ್‌ 4) ಸಂಚಿಕೆಯಲ್ಲಿ ಊರಿಗೆ ಹೊರಟು ನಿಲ್ಲುತ್ತಾರೆ ಆಕಾಶ್‌-ಪುಷ್ಪಾ. ಮನೆಯಿಂದ ಹೊರ ಬಂದು ಅಣ್ಣನ ಕಾಲಿಗೆ ಬಿದ್ದು ಹೊರಡುತ್ತೇನೆ ಎಂದು ಹೇಳುವ ಪುಷ್ಪಾಳನ್ನು ನೋಡಿ ಕಣ್ಣೀರಾಗುತ್ತಾನೆ ಅಪ್ಪಣ್ಣ. ಹುಷಾರಾಗಿ ಹೋಗಿ, ಆಗಾಗ ಫೋನ್‌ ಮಾಡುತ್ತಿರುವ ಎನ್ನುವ ಅಪ್ಪಣ್ಣ ʼಇನ್ನೂ ಒಂದೆರಡು ದಿನ ಬಿಟ್ಟು ಹೋದರೆ ಚೆನ್ನಾಗಿತ್ತುʼ ಎನ್ನುತ್ತಾನೆ. ಅವರು ಹೊರಟು ನಿಂತಿದ್ದು ನೋಡಿ ನೆಮ್ಮದಿಯ ನಿಟ್ಟುಸಿರುವ ಬಿಡುವ ಗಿರಿಜಾ ಗೆಳತಿ ಲಲಿತಾಳ ಜೊತೆ ಸಂತಸ ಹಂಚಿಕೊಳ್ಳುತ್ತಾಳೆ. ಆಗ ಲಲಿತಾ ಹೊರಟವರು ಏನಾದ್ರೂ ಆಗಿ ಇನ್ನೂ ಒಂದೆರಡು ದಿನ ಇರುವ ಹಾಗೆ ಆದ್ರೆ ನಿನ್ನ ಗತಿ ಏನು? ಎಂದು ಪ್ರಶ್ನಿಸುತ್ತಾಳೆ. ಹೀಗಂದಿದ್ದೇ ತಡ, ಒಂದೆರಡು ಹೆಜ್ಜೆ ಮುಂದೆ ಹೋಗಿದ್ದ ಆಕಾಶ್‌ ಇದ್ದಕ್ಕಿದ್ದಂತೆ ಕಾಲು ಉಳುಕಿ ಬಿದ್ದು ಬಿಡುತ್ತಾನೆ. ʼಅಮ್ಮಾ ನೋವುʼ ಎಂದು ಜೋರಾಗಿ ಕೂಗಿಕೊಳ್ಳುತ್ತಾನೆ. ಮುಂದೆ ಹೋಗಿದ್ದ ಪುಷ್ಪಾ, ಅಪ್ಪಣ್ಣ, ಮಲ್ಲಿ ಆಕಾಶ್‌ ಬಳಿಗೆ ಓಡಿ ಬರುತ್ತಾರೆ. ಅವನನ್ನು ಎತ್ತಿಕೊಂಡು ಮನೆಯೊಳಗೆ ಹೋಗುತ್ತಾರೆ. ಇದನ್ನು ನೋಡಿದ ಗಿರಿಜಾ ಜೀವ ಬಾಯಿಗೆ ಬಂದಂತೆ ಆಡುತ್ತಾಳೆ. ಅಲ್ಲದೇ ಲಲಿತಾ ಬಾಯಿ ಸರಿ ಇಲ್ಲ ಎಂದು ಅವಳಿಗೆ ಬಾಯಿಗೆ ಬಂದಂತೆ ಬೈಯುತ್ತಾಳೆ.

ಟ್ರೆಂಡಿಂಗ್​ ಸುದ್ದಿ

ಅಪ್ಪಣ್ಣನಿಗೆ ಅರಿವಾಗುತ್ತೆ ಆಕಾಶ್‌ ನಾಟಕ

ಅಪ್ಪಣ್ಣನಿಗೆ ಉಳುಕು ತೆಗೆಯಲು ಬರುತ್ತದೆ ಎಂಬ ವಿಚಾರ ತಿಳಿಯದ ಆಕಾಶ್‌ ಕಾಲು ಉಳುಕಿದೆ ಎಂದು ಬಿಟ್ಟಿರುತ್ತಾನೆ. ಆದರೆ ಮನೆಯೊಳಗೆ ಹೋದಾಗ ಎಲ್ಲಿ ಉಳುಕು ನಾನು ಉಳುಕು ತೆಗೆಯುತ್ತೇನೆ ಎಂದು ಅಪ್ಪಣ್ಣ ಹೇಳಿದಾಗ ಗಾಬರಿಯಾದ್ರೂ ಸಾವರಿಕೊಂಡು ತುಂಬಾ ನೋವಿದೆ ಎಂದು ಇನ್ನಷ್ಟು ನಾಟಕ ಮಾಡುತ್ತಾನೆ. ಅವನಿಗೆ ಕಾಲು ಉಳುಕಿಲ್ಲ ನಾಟಕ ಮಾಡುತ್ತಿದ್ದಾನೆ ಎಂಬ ವಿಚಾರ ಅಪ್ಪಣ್ಣನಿಗೆ ಅರ್ಥವಾಗುತ್ತದೆ.

ಆಕಾಶ್‌-ಪುಷ್ಪಾ ಮನೆಗೆ ಬಾರದೇ ಗಾಬರಿಯಾದ ಸುಧಾಮೂರ್ತಿ

ಮನೆಯ ಬಾಗಿಲಲ್ಲೇ ಶತಪಥ ಹಾಕುತ್ತಾ ತಿರುಗುತ್ತಿದ್ದ ಸತ್ಯಮೂರ್ತಿಯನ್ನು ನೋಡಿದ ಅನುಪಮಾ ಹಾಗೂ ಸುಧಾಮೂರ್ತಿ ಯಾಕಿರಬಹುದು ಎಂದು ಯೋಚಿಸುತ್ತಾರೆ. ಸತ್ಯಮೂರ್ತಿಯ ಬಳಿ ʼಭಾವ ಯಾರಿಗೆ ಕಾಯ್ತಾ ಇದೀರಾ ಮನೆ ಬಾಗಿಲಲ್ಲೇʼ ಎಂದು ಪ್ರಶ್ನೆ ಮಾಡ್ತಾಳೆ ಅನುಪಮಾ. ಅದಕ್ಕೆ ಸತ್ಯಮೂರ್ತಿ ʼಆಕಾಶ್‌-ಪುಷ್ಪಾ ಊರಿಂದ ಹೊರಟಿದ್ದಾರೆ, ಇಷ್ಟೊತ್ತಿಗೆ ಇಲ್ಲಿಗೆ ಬರಬೇಕಿತ್ತು. ಆದರೆ ಇನ್ನೂ ಬಂದಿಲ್ಲ ಯಾಕೆ ಅಂತ ಕಾಯ್ತಾ ಇದೀನಿʼ ಅಂತಾರೆ. ಅದನ್ನ ಕೇಳಿ ಗಾಬರಿಗೊಳ್ಳುವ ಸುಧಾಮೂರ್ತಿ ಅವರು ಬರ್ತಾರೆ ಅಂತ ನಿಂಗ್ಯಾರ್ ಹೇಳಿದ್ದು ಎಂದು ಪ್ರಶ್ನೆ ಮಾಡ್ತಾರೆ. ಅದಕ್ಕೆ ನಾನು ಆಕಾಶ್‌ಗೆ ಕಾಲ್‌ ಮಾಡಿದ್ದೆ, ಹೊರಡ್ತೀವಿ ಅಂತ ಹೇಳಿದ್ರು, ಇನ್ನೂ ಯಾಕೆ ಬಂದಿಲ್ಲ ಅಂತ ಕಾಯ್ತಾ ಇದೀನಿ ಎಂದು ಮತ್ತೂ ಗಾಬರಿ ಪಡಿಸುತ್ತಾನೆ. ಗಾಬರಿಯಿಂದ ಆಕಾಶ್‌ಗೆ ಕಾಲ್‌ ಮಾಡ್ತಾರೆ ಕಾಲ್‌ ಮಾಡುವಂತೆ ಅನುಪಮಾಳಿಗೆ ಹೇಳ್ತಾರೆ ಸುಧಾಮೂರ್ತಿ. ಆದರೆ ಆಕಾಶ್‌ ಕಾಲ್‌ ನಾಟ್‌ ರಿಚೇಬಲ್‌ ಬರುತ್ತೆ, ಸತ್ಯಮೂರ್ತಿ ಅವರ ನಂಬರ್‌ ಕೂಡ ನಾಟ್‌ ರಿಚೇಬಲ್‌ ಬರುತ್ತೆ. ಆಗ ಪುಷ್ಪಾಳ ನಂಬರ್‌ಗೆ ಕಾಲ್‌ ಮಾಡಲು ಹೇಳುತ್ತಾರೆ. ಪುಷ್ಪಾಳ ನಂಬರ್‌ಗೆ ಕಾಲ್‌ ಮಾಡಿದ್ರೆ ರೀಚ್‌ ಆಗುತ್ತೆ. ಇದ್ರಿಂದ ಖುಷಿ ಪಡುವ ಸುಧಾಮೂರ್ತಿ ಪುಷ್ಪಾ ಬಳಿ ಯಾಕಿನ್ನೂ ಬಂದಿಲ್ಲ ಎಂದು ಪ್ರಶ್ನೆ ಮಾಡುತ್ತಾರೆ. ಆಗ ಪುಷ್ಪಾ ಅಜ್ಜಮ್ಮನ ಬಳಿ ಅಣ್ಣ ಇಲ್ಲೇ ಉಳಿದುಕೊಳ್ಳುವಂತೆ ಹೇಳಿದ ಅದಕ್ಕೆ ಬಂದಿಲ್ಲ ಎಂದು ಸುಳ್ಳು ಹೇಳುತ್ತಾಳೆ. ಆಕಾಶ್‌ಗೆ ಕಾಲು ಉಳುಕಿದ ಕಾರಣಕ್ಕೆ ಬಂದಿಲ್ಲ ಎಂಬ ವಿಚಾರವನ್ನು ಅಜ್ಜಮ್ಮನ ಬಳಿ ಹೇಳುವುದಿಲ್ಲ.

ನಾಟಕದ ಉದ್ದೇಶ ಅಪ್ಪಣ್ಣನಿಗೆ ತಿಳಿಸಿದ ಆಕಾಶ್‌

ಮನೆಯಲ್ಲಿ ಮಲಗಿದ್ದ ಅಪ್ಪಣ್ಣ ಆಕಾಶ್‌ ಕೋಣೆಯಿಂದ ಸರಿಯಾಗಿ ನಡೆದುಕೊಂಡು ಬರುತ್ತಿರುವುದನ್ನು ನೋಡಿ ಏನ್‌ ಆಕಾಶಪ್ಪ ಕಾಲು ನೋವು ಸರಿ ಆಯ್ತಾ ಎಂದು ಪ್ರಶ್ನೆ ಮಾಡ್ತಾನೆ, ಅದಕ್ಕೆ ಆಕಾಶ್‌ ಅಯ್ಯೋ ಇಲ್ಲ ಅಪ್ಪಣ್ಣ, ಜೋರು ನೋವಿದೆ ಎಂದು ನಾಟಕ ಮಾಡುತ್ತಾನೆ. ಆಗ ಅಪ್ಪಣ್ಣ ನಿಮಗೆ ಕಾಲು ನೋವಿಲ್ಲ ಎನ್ನುವುದು ನನಗೆ ಗೊತ್ತಾಗಿದೆ, ಆದರೂ ಯಾಕ್ಹೀಗೆ ನಾಟಕ ಮಾಡಿದ್ರಿ ಎಂದು ಕೇಳುತ್ತಾನೆ. ಅದಕ್ಕೆ ಉತ್ತರಿಸುವ ಆಕಾಶ್‌ ಅಪ್ಪಣ್ಣ ಪುಷ್ಪಾ ಅವರಿಗೆ ಇನ್ನೂ ಎರಡು ದಿನ ಇಲ್ಲೇ ಉಳಿದುಕೊಳ್ಳುವ ಆಸೆ ಇತ್ತು, ಆದರೆ ನಾನೇ ನನಗೋಸ್ಕರ ಹೊರಡುವ ಯೋಚನೆ ಮಾಡಿದ್ರು, ಅವರ ಆಸೆ ಪೂರೈಸುವುದಕ್ಕಾಗಿ ಈ ನಾಟಕ ಮಾಡಿದೆ ಎಂದು ಸತ್ಯ ಹೇಳುತ್ತಾರೆ. ಇದನ್ನು ಕೇಳಿ ಅಪ್ಪಣ್ಣನ ಮನಸ್ಸು ತುಂಬಿ ಬರುತ್ತದೆ. ಆದರೆ ಆಕಾಶ್‌ ಮನೆಯಲ್ಲೇ ಉಳಿದುಕೊಂಡಿದ್ದು ಗಿರಿಜಾಗೆ ನುಂಗುಲಾರದ ತುತ್ತಾಗಿರುತ್ತದೆ. ಪದೇ ಪದೇ ದುಡ್ಡಿನ ವಿಚಾರ ನೆನಪಿಸುವ ಆಕಾಶ್‌ ಗಿರಿಜಾಳಿಗೆ ಹೆದರಿಕೆ ಹುಟ್ಟುವಂತೆ ಮಾಡುತ್ತಾನೆ.

ಆಕಾಶ್‌ ನಿಜಕ್ಕೂ ಪುಷ್ಪಾಳಿಗೊಸ್ಕರಾನೇ ಹಳ್ಳಿಯಲ್ಲಿ ಉಳಿದುಕೊಂಡಿದ್ದಾ ಅಥವಾ ಗಿರಿಜಾಳ ಬಂಡವಾಳ ಬಯಲು ಮಾಡಲು ಉಳಿದುಕೊಂಡಿದ್ದಾ, ಸುಧಾಮೂರ್ತಿ ಭಯದಂತೆ ಮನೆಯವರಿಗೆ ಏನಾದ್ರೂ ತೊಂದರೆ ಎದುರಾಗುವುದಾ? ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

IPL_Entry_Point