ಕನ್ನಡ ಸುದ್ದಿ  /  ಮನರಂಜನೆ  /  Brundavana Serial: ಸಿಂಧು ಪಾಲಿಗೆ ಹೀರೊ ಆದ ಸಿದ್ಧಾರ್ಥ್‌, ನಗಿಸುವ ಸುನಾಮಿ ಬದುಕಿನ ನೋವಿನ ಕಥೆ ಸ್ನೇಹಿತರ ಮುಂದೆ ಅನಾವರಣ

Brundavana Serial: ಸಿಂಧು ಪಾಲಿಗೆ ಹೀರೊ ಆದ ಸಿದ್ಧಾರ್ಥ್‌, ನಗಿಸುವ ಸುನಾಮಿ ಬದುಕಿನ ನೋವಿನ ಕಥೆ ಸ್ನೇಹಿತರ ಮುಂದೆ ಅನಾವರಣ

Brindavana Kannada Serial Today Episode April 16th: ʼಬೃಂದಾವನʼ ಧಾರಾವಾಹಿಯ ಮಂಗಳವಾರದ ಎಪಿಸೋಡ್‌ನಲ್ಲಿ ಸುಧಾಮೂರ್ತಿ ಅವರ ಮುಂದೆ ಭಾರ್ಗವಿ, ಭಾಸ್ಕರ ಅಟ್ಟಹಾಸ ಮೆರೆಯುತ್ತಿದ್ದರೆ, ರೌಡಿಗಳ ಜೊತೆ ಫೈಟ್‌ ಮಾಡಿ ಸಿಂಧುವನ್ನು ಕಾಪಾಡೇಬಿಟ್ಟ ಸಿದ್ಧಾರ್ಥ. ಸದಾ ಎಲ್ಲರನ್ನೂ ನಗುವಿನ ಸುನಾಮಿ ಇಂದು ಪ್ರೇಕ್ಷಕರೂ ಕಣ್ಣೀರು ಹಾಕುವಂತೆ ಮಾಡಲು ಕಾರಣವೇನು ನೋಡಿ.

ಸಿಂಧು ಪಾಲಿಗೆ ಹೀರೊ ಆದ ಸಿದ್ಧಾರ್ಥ್‌, ನಗಿಸುವ ಸುನಾಮಿ ಬದುಕಿನ ನೋವಿನ ಕಥೆ ಸ್ನೇಹಿತರ ಮುಂದೆ ಅನಾವರಣ
ಸಿಂಧು ಪಾಲಿಗೆ ಹೀರೊ ಆದ ಸಿದ್ಧಾರ್ಥ್‌, ನಗಿಸುವ ಸುನಾಮಿ ಬದುಕಿನ ನೋವಿನ ಕಥೆ ಸ್ನೇಹಿತರ ಮುಂದೆ ಅನಾವರಣ

ಬೃಂದಾವನ ಧಾರಾವಾಹಿಯ ನಿನ್ನೆಯ (ಏಪ್ರಿಲ್‌ 16) ಸಂಚಿಕೆಯಲ್ಲಿ ಸುಧಾಮೂರ್ತಿಗಳ ಮುಂದೆ ಭಾರ್ಗವಿ ಹಾಗೂ ಅವಳ ತಮ್ಮಾ ಭಾಸ್ಕರ ಅಟ್ಟಹಾಸ ಮೆರೆಯುತ್ತಾರೆ. ಸಿಂಧುವನ್ನು ಕಿಡ್ನಾಪ್‌ ಮಾಡಿದವರಿಗೆ ಫೋನ್‌ ಮಾಡಿ ಅಹಸ್ಯವಾಗಿ ವರ್ತಿಸುವಂತೆ ಹಾಗೂ ಪೊಲೀಸ್‌ ಮಿಡಿಯಾದವರ ಮುಂದೆ ಬೃಂದಾವನದ ಮರ್ಯಾದೆ ತೆಗೆಯುವಂತೆ ಹೇಳುತ್ತಾರೆ. ಇದನ್ನು ಕೇಳಿ ಗಾಬರಿಗೊಳ್ಳುವ ಸುಧಾಮೂರ್ತಿ ಭಾರ್ಗವಿ ಮುಂದೆ ಸಿಂಧುವಿಗೆ ಏನು ಮಾಡಬೇಡಿ ಎಂದು ಗೋಗರೆಯುತ್ತಾರೆ. ಆದರೆ ಅದಕ್ಕೆ ಕ್ಯಾರೆ ಎನ್ನುತ್ತಿಲ್ಲ ಭಾರ್ಗವಿ.

ಟ್ರೆಂಡಿಂಗ್​ ಸುದ್ದಿ

ಮಾಸ್‌ ಎಂಟ್ರಿ ಕೊಟ್ಟ ಸಿದ್ಧಾರ್ಥ್‌

ಭಾಸನ ಜೊತೆಗೆ ಸಿಂಧುವನ್ನು ಕಿಡ್ನಾಪ್‌ ಮಾಡಿದ ಹುಡುಗಿ ಮಾಡುತ್ತಿರುವ ಹೊತ್ತಿನಲ್ಲೇ ಅವರಿರುವ ಮನೆ ಬಾಗಿಲು ತಟ್ಟಿದ ಶಬ್ದವಾಗುತ್ತದೆ. ಮಿಡಿಯಾದವರು, ಪೊಲೀಸರು ಬಂದಿದ್ದಾರೆ ಎಂದು ಎಂದು ಖುಷಿಯಿಂದ ಬಾಗಿಲು ತೆರೆದರೆ ಮೊದಲು ಸಿದ್ಧಾರ್ಥ್‌ ಕಾಣಿಸುತ್ತಾನೆ, ನಂತರ ಅವನ ಹಿಂದೆಯೇ ಪುಷ್ಪಾ ಬರುತ್ತಾಳೆ. ಅವರನ್ನು ನೋಡಿ ಚಾನೆಲ್‌ನವರು ಎಂದುಕೊಳ್ಳುವ ರೌಡಿಗಳು ಪೊಲೀಸರು ಎಲ್ಲಿ ಎಂದು ಪ್ರಶ್ನೆ ಮಾಡುತ್ತಾರೆ. ಅವರ ಮಾತಿಗೆ ತಕ್ಕ ಉತ್ತರ ನೀಡುವ ಸಿದ್ಧಾರ್ಥ್‌ ಅವರನ್ನು ಸರಿಯಾಗಿ ಹೊಡೆದು ಬುದ್ಧಿ ಕಲಿಸುತ್ತಾನೆ. ಭಾಸನ ಗೆಳತಿ, ಸಿಂಧುವನ್ನು ಕಿಡ್ನಾಪ್‌ ಮಾಡಿರುವಾಕೆ ಬೇಡಿಕೊಂಡರೂ ಬಿಡದ ಸಿದ್ಧಾರ್ಥ್‌ ಇವರೆಲ್ಲರನ್ನೂ ಪೊಲೀಸ್‌ಗೆ ಒಪ್ಪಿಸಲು ಸಿದ್ಧನಾಗುತ್ತಾನೆ. ಇತ್ತ ಸಿಂಧುವನ್ನು ಮನೆಗೆ ಕರೆದುಕೊಂಡು ಹೋಗುವಂತೆ ಸಿದ್ಧಾರ್ಥ್‌ ಬಳಿ ರಿಕ್ವೆಸ್ಟ್‌ ಮಾಡುವ ಪುಷ್ಪಾ ತಾನು ಭಾರ್ಗವಿ ಮನೆಗೆ ಹೋಗಿ ಅಜ್ಜಮ್ಮನನ್ನು ಕರೆ ತರುತ್ತೇನೆ ಎಂದು ಹೇಳಿ ಹೊರಡುತ್ತಾಳೆ.

ನಗಿಸುವ ಸುನಾಮಿ ಬದುಕಿನ ಹಿಂದಿನ ನೋವಿನ ಕಥೆ ಅನಾವರಣ

ಕಾಲೇಜಿನಲ್ಲಿ ಎಲ್ಲರೂ ಒಂದಾಗಿ ಊಟ ಮಾಡುತ್ತಿರುವಾಗ ಒಂದೆಡೆ ಎದ್ದು ಹೋಗುತ್ತಾನೆ ಸುನಾಮಿ. ಪ್ರತಿ ಎಲ್ಲ ಸಮಯದಲ್ಲೂ ಜೊತೆ ಇರುವ ಸುನಾಮಿ ಊಟದ ಸಮಯಕ್ಕೆ ಯಾಕೆ ಎದ್ದು ಬೇರೆ ಹೋಗುತ್ತಾನೆ ಎಂಬುದು ಸ್ನೇಹಿತರಿಗೆ ಯಕ್ಷಪ್ರಶ್ನೆಯಾಗುತ್ತದೆ. ಇದನ್ನು ಕಂಡುಹಿಡಿಯಲೇಬೇಕು ಎಂದು ನಿರ್ಧಾರ ಮಾಡಿ ಅವನು ಇರುವ ಜಾಗಕ್ಕೆ ಸಹನಾ, ಕಾರ್ತಿ, ಮಿಂಚು, ಆಕಾಶ್‌ ಹಾಗೂ ಉಳಿದ ಸ್ನೇಹಿತರು ಹೋಗುತ್ತಾರೆ. ಮೊದಲಿಗೆ ಒಬ್ಬನೇ ಊಟ ಮಾಡುವ ಬಗ್ಗೆ ಬಿಲ್ಡ್‌ಅಪ್‌ ಕೊಟ್ಟುಕೊಳ್ಳುವ ಸುನಾಮಿ ತನ್ನ ತಂದೆ ತಾಯಿ ಕೋಟ್ಯಾಧಿಪತಿಗಳು ನನಗೆ ಕಣ್ಸರೆ ಆಗುತ್ತದೆ ಎನ್ನುವ ಕಾರಣಕ್ಕೆ ಅವರು ಮೊದಲಿನಿಂದಲೂ ಒಬ್ಬನೇ ಊಟ ಮಾಡಿ ಅಭ್ಯಾಸ ಎಂದೆಲ್ಲಾ ಹೇಳುತ್ತಾನೆ. ಅಲ್ಲದೇ ಬಾಕ್ಸ್‌ನಲ್ಲಿ ಪಾಸ್ತಾ ಇದೆ ಎಂದು ಜಂಭ ಕೊಚ್ಚಿಕೊಳ್ಳುತ್ತಾನೆ. ಅವನ ಬಾಕ್ಸ್‌ ಕಿತ್ತು ಅದರಲ್ಲಿ ಏನಿದೆ ಎಂದು ನೋಡಿದ ಸಹನಾ ಇದ್ದಕ್ಕಿದ್ದಂತೆ ಡಲ್‌ ಆಗುತ್ತಾಳೆ. ಅದಕ್ಕೆ ಕಾರಣ ಅದರಲ್ಲಿ ಚಿತ್ರಾನ್ನ ಇದ್ದು, ಅದು ಹಳಸಿರುತ್ತದೆ. ಇದನ್ನು ನೋಡಿದ ಎಲ್ಲರಿಗೂ ಬೇಸರವಾಗುತ್ತದೆ. ಆಗ ಸುನಾಮಿ ತನ್ನ ಜೀವನದ ಕಷ್ಟವನ್ನು ಎಲ್ಲರ ಮುಂದೆ ಹೇಳಿಕೊಂಡು ಕಣ್ಣೀರಾಗುತ್ತಾನೆ. ತನ್ನ ತಂದೆ ವಾಚ್‌ಮನ್‌, ತಾಯಿ ಬೇರೆಯವರ ಮನೆ ಕೆಲಸಕ್ಕೆ ಹೋಗುತ್ತಾರೆ, ತಾನು ಕೂಡ ರಜೆ ಇದ್ದಾಗ ಸೆಂಟ್ರಿಂಗ್‌ ಕೆಲಸಕ್ಕೆ ಹೋಗುತ್ತೇನೆ. ತನ್ನ ತಾಯಿ ಬೇರೆಯವರ ಮನೆಗೆ ಹೋದಾಗ ಕೊಡುವ ಮಿಕ್ಕಿದ ಅನ್ನಕ್ಕೆ ಒಗ್ಗರಣೆ ಹಾಕಿ ಚಿತ್ರಾನ್ನ ಮಾಡುತ್ತಾರೆ. ತಾನು ಬಡವ ಎಂದು ಅರಿತರೆ ಸ್ನೇಹಿತರು ಎಲ್ಲಿ ದೂರಾಗುತ್ತಾರೋ ಎಂಬ ಭಯದಿಂದ ಸುಳ್ಳು ಹೇಳಿದ್ದಾಗಿ ಒಪ್ಪಿಕೊಳ್ಳುತ್ತಾನೆ. ಜೊತೆಗೆ ತಾನು ಕಣ್ಣೀರು ಸುರಿಸಿ, ಪ್ರೇಕ್ಷಕರನ್ನೂ ಅಳಿಸುತ್ತಾನೆ.

ಆಗ ಆಕಾಶ್‌ ಸ್ನೇಹದ ಮಹತ್ವವನ್ನು ಎತ್ತಿ ಹೇಳಿ ಸ್ನೇಹ ಎಂದಿಗೂ ಹಣ ನೋಡಿ ಬರುವುದಲ್ಲ, ಇನ್ನು ಮುಂದೆ ನಿನ್ನ ಕಷ್ಟಕ್ಕೆ ನಾವಿದ್ದೇವೆ ಎಂದು ಭರವಸೆ ನೀಡುತ್ತಾನೆ. ಮಾತ್ರವಲ್ಲ ಸುನಾಮಿ ಬಾಕ್ಸ್‌ನಲ್ಲಿದ್ದ ಹಳಸಿದ ಚಿತ್ರಾನ್ನವನ್ನು ಸ್ನೇಹಿತರೆಲ್ಲಾ ಹಂಚಿ ತಿನ್ನುತ್ತಾರೆ.

ಪುಷ್ಪಾ ಭಾರ್ಗವಿ ಮನೆಗೆ ಹೋದ್ರೆ ಮುಂದೆ ಏನಾಗಬಹುದು, ಸಿಂಧುವನ್ನು ಸೇಫಾಗಿ ಮನೆಗೆ ಸೇರಿಸ್ತಾನಾ ಆಕಾಶ್‌, ಭಾರ್ಗವಿ ಇನ್ನಾದ್ರೂ ಸುಮ್ಮನಾಗಾಳ್ತಾ ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

IPL_Entry_Point