ಕನ್ನಡ ಸುದ್ದಿ  /  ಮನರಂಜನೆ  /  Brundavana Serial: ಭಾರ್ಗವಿ ಮನೆಗೆ ರೆಬಲ್‌ ಎಂಟ್ರಿ ಕೊಟ್ಟು, ಖಡಕ್‌ ವಾರ್ನಿಂಗ್‌ ನೀಡಿದ ಪುಷ್ಪಾ; ಅಜ್ಜಮ್ಮ ಫುಲ್‌ ಖುಷ್‌

Brundavana Serial: ಭಾರ್ಗವಿ ಮನೆಗೆ ರೆಬಲ್‌ ಎಂಟ್ರಿ ಕೊಟ್ಟು, ಖಡಕ್‌ ವಾರ್ನಿಂಗ್‌ ನೀಡಿದ ಪುಷ್ಪಾ; ಅಜ್ಜಮ್ಮ ಫುಲ್‌ ಖುಷ್‌

Brindavana Kannada Serial Today Episode April 17th: ʼಬೃಂದಾವನʼ ಧಾರಾವಾಹಿಯ ಬುಧವಾರದ ಎಪಿಸೋಡ್‌ನಲ್ಲಿ ಸಿಂಧುಗಾಗಿ ಭಾರ್ಗವಿ ಮುಂದೆ ಮುಂಡಿಯೂರಿ ಕುಳಿತು ಬೇಡಿಕೊಳ್ಳುವ ಅಜ್ಜಮ್ಮ. ಪುಷ್ಪಾಳ ರೆಬಲ್‌ ಎಂಟ್ರಿ, ಖಡಕ್‌ ವಾರ್ನಿಂಗ್‌ ವರಸೆ ಕಂಡು ಬೆಚ್ಚಿ ಕಂಡ ಭಾರ್ಗವಿ, ಭಾಸ್ಕರ. ಸಿಂಧುವನ್ನು ಸೇಫಾಗಿ ಮನೆ ತಲುಪಿಸಿದ ಸಿದ್ಧಾರ್ಥ್‌.

ಭಾರ್ಗವಿ ಮನೆಗೆ ರೆಬಲ್‌ ಎಂಟ್ರಿ ಕೊಟ್ಟು, ಖಡಕ್‌ ವಾರ್ನಿಂಗ್‌ ನೀಡಿದ ಪುಷ್ಪಾ; ಅಜ್ಜಮ್ಮ ಫುಲ್‌ ಖುಷ್‌
ಭಾರ್ಗವಿ ಮನೆಗೆ ರೆಬಲ್‌ ಎಂಟ್ರಿ ಕೊಟ್ಟು, ಖಡಕ್‌ ವಾರ್ನಿಂಗ್‌ ನೀಡಿದ ಪುಷ್ಪಾ; ಅಜ್ಜಮ್ಮ ಫುಲ್‌ ಖುಷ್‌

ಬೃಂದಾವನ ಧಾರಾವಾಹಿಯ ನಿನ್ನೆಯ (ಏಪ್ರಿಲ್‌ 17) ಸಂಚಿಕೆಯಲ್ಲಿ ಸಿಂಧುವಿನ ವಿಚಾರ ಮುಂದುರಿಸಿಕೊಂಡು ಸುಧಾಮೂರ್ತಿಯನ್ನು ಗೋಳಾಡಿಸುತ್ತಿದ್ದಾರೆ ಭಾರ್ಗವಿ, ಭಾಸ್ಕರ. ʼಸಿಂಧು ಮಾನ ತೆಗೆದು, ನಿಮ್ಮ ಮರ್ಯಾದೆ ಹರಾಜಿಗೆ ಹಾಕುತ್ತೇವೆ, ನಂತರ ನಿಮ್ಮನೆಯವರಲ್ಲಿ ಒಬ್ಬೊರನ್ನೇ ಸಾಯಿಸುತ್ತೇವೆ. ಕೊನೆಯಲ್ಲಿ ನೀನೊಬ್ಬಳೇ ಉಳಿಯಬೇಕು, ನಿನ್ನ ಮನೆಯವರ ಸಾವಿನ ನೋವು ನಿನ್ನನ್ನು ಕಾಡಬೇಕುʼ ಎಂದು ಮತ್ತೆ ಮತ್ತೆ ಹೇಳುವ ಭಾರ್ಗವಿ ಸುಧಾಮೂರ್ತಿ ಅವಳ ಮುಂದೆ ಅಂಗಾಲಾಚಿ ಬೇಡಿಕೊಳ್ಳುವಂತೆ ಮಾಡುತ್ತಾಳೆ. ಸಿಂಧುವನ್ನು ಬಿಟ್ಟು ಬಿಡಿ ಎಂದು ದಯನೀಯವಾಗಿ ಬೇಡಿಕೊಳ್ಳುವ ಸುಧಾಮೂರ್ತಿ ʼಆಯ್ತು ಬಿಡೋಣ, ಆದ್ರೆ ಒಂದು ಕಂಡಿಷನ್‌ʼ ಎನ್ನುತ್ತಾನೆ. ಅದಕ್ಕೆ ಸುಧಾಮೂರ್ತಿ ʼನನ್ನ ಪ್ರಾಣ ಬೇಕಾದ್ರೂ ಕೊಡ್ತೀನಿ ಆದ್ರೆ, ಸಿಂಧುವನ್ನು ಬಿಡಲು ಏನು ಮಾಡಬೇಕು ಹೇಳುʼ ಎಂದು ಭಾಸ್ಕರನನ್ನು ಪ್ರಶ್ನಿಸುತ್ತಾಳೆ. ಆಗ ಭಾಸ್ಕರ ʼನೀನು ಮಂಡಿಯೂರಿ ಅಕ್ಕನ (ಭಾರ್ಗವಿ) ಮುಂದೆ ಬೇಡಿಕೊಳ್ಳಬೇಕು, ಅವಳು ಕನಿಕರ ತೋರಿ ಆಯ್ತು ಬಿಡುತ್ತೇನೆ ಅಂದ್ರೆ ಸಿಂಧುವನ್ನು ಬಿಡುತ್ತೇವೆʼ ಎಂದು ಸವಾಲು ಹಾಕುತ್ತಾನೆ. ಬೇರೆ ದಾರಿ ಕಾಣದ ಸುಧಾಮೂರ್ತಿ ಮೊಮ್ಮಗಳ ಮಾನಕ್ಕಾಗಿ ಭಾರ್ಗವಿ ಮುಂದೆ ಮುಂಡಿಯೂರಿ ಕೂರುತ್ತಾರೆ. ಅಷ್ಟೊತ್ತಿಗೆ ಅಲ್ಲಿಗೆ ಎಂಟ್ರಿ ಕೊಡ್ತಾಳೆ ಪುಷ್ಪಾ.

ಟ್ರೆಂಡಿಂಗ್​ ಸುದ್ದಿ

ಪುಷ್ಪಾ ವರಸೆ ಕಂಡು ಅಜ್ಜಮ್ಮನೊಂದಿಗೆ ಪ್ರೇಕ್ಷಕರು ಶಾಕ್‌

ಹೂಕುಂಡವೊಂದನ್ನು ಎಸೆಯುವ ಮೂಲಕ ಮಾಸ್‌ ಎಂಟ್ರಿ ಕೊಡುವ ಪುಷ್ಪಾ ಆರಂಭದಲ್ಲಿ ಭಾರ್ಗವಿ, ಭಾಸ್ಕರನಿಗೆ ಶಾಕ್‌ ಕೊಡ್ತಾಳೆ, ಅಜ್ಜಮ್ಮನನ್ನು ಎಬ್ಬಿಸಿ ಅಲ್ಲೇ ಇರುವ ಸೋಫಾ ಮೇಲೆ ಕೂರಿಸುತ್ತಾಳೆ. ಭಾರ್ಗವಿ ಎದುರು ಸೋಫಾ ಮೇಲೆ ಕೂರಲು ಹಿಂಜರಿಯುವ ಸುಧಾಮೂರ್ತಿಗೆ ʼಅಜ್ಜಮ್ಮನ ದೊಡ್ಡವರ ಎದುರು ತಾವು ಕೂರಬಾರದು ಎಂದು ಅವರೇ ನಿಂತಿದ್ದಾರೆ, ನೀವ್ಯಾಕೆ ಹೆದರ್ತೀರಾ, ಆರಾಮಾಗಿ ಕುತ್ಕೊಳ್ಳಿʼ ಎಂದು ಕೂರಿಸುತ್ತಾಳೆ.

ಸಿಂಧುಗೆ ಬುದ್ಧಿ ಹೇಳುವ ಸಿದ್ಧಾರ್ಥ್‌

ಸಿಂಧುವನ್ನು ಕಿಡ್ನಾಪ್‌ ಮಾಡಿದವರನ್ನು ಪೊಲೀಸರಿಗೆ ಹಿಡಿದು ಕೊಡುವ ಸಿದ್ಧಾರ್ಥ್‌ ಆಕೆಯನ್ನು ಮನೆಗೆ ಕರೆದುಕೊಂಡು ಹೋಗುತ್ತಾನೆ, ದಾರಿಯಲ್ಲಿ ಹೋಗುವಾಗ ಸಿಂಧು ಸಿದ್ಧಾರ್ಥ್‌ನನ್ನು ಮನೆಗೆ ಆಹ್ವಾನಿಸುತ್ತಾಳೆ. ಆದರೆ ಈಗ ನಾನು ಮನೆಗೆ ಬಂದ್ರೆ ಮನೆಯವರೆಲ್ಲರಿಗೂ ಅನುಮಾನ ಬರುತ್ತೆ, ಇನ್ನೊಮ್ಮೆ ಬರುತ್ತೇನೆ ಎಂದು ಹೇಳುವ ಸಿದ್ಧಾರ್ಥ್‌ ಸಿಂಧುವಿಗೆ ಬುದ್ಧಿವಾದ ಹೇಳುತ್ತಾನೆ. ಈ ಕಾಲದಲ್ಲಿ ಮಕ್ಕಳು ಅದರಲ್ಲೂ ಹೆಣ್ಣುಮಕ್ಕಳು ತುಂಬಾ ಹುಷಾರಿಗಬೇಕು, ಯಾರೋ ಕರೆದ ತಕ್ಷಣ ಅವರ ಜೊತೆಗೆ ಹೋಗುವುದಲ್ಲ. ಇನ್ನು ಮುಂದೆ ತುಂಬಾ ಹುಷಾರಾಗಿರು ಎಂದು ಬುದ್ಧಿಮಾತು ಹೇಳುತ್ತಾನೆ. ಅಲ್ಲದೇ ಅವಳನ್ನು ಸೇಫಾಗಿ ಮನೆ ಸೇರಿಸುತ್ತಾನೆ.

ಭಾರ್ಗವಿಗೆ ಖಡಕ್‌ ವಾರ್ನಿಂಗ್‌ ನೀಡುವ ಪುಷ್ಪಾ

ತನ್ನ ಮನೆಗೆ ಬಂದು ತನ್ನೆದುರೇ ಸುಧಾಮೂರ್ತಿಯನ್ನು ಸೋಫಾ ಮೇಲೆ ಕುಳ್ಳಿರಿಸಿದ ಪುಷ್ಪಾ ಯಾರು ಎಂಬುದು ತಿಳಿಯದೇ ಗೊಂದಲಕ್ಕೆ ಸಿಲುಕುತ್ತಾಳೆ ಭಾರ್ಗವಿ. ಇತ್ತ ಸಿಂಧುವಿನ ಬಗ್ಗೆ ನೆನೆದು ಅಳುವ ಸುಧಾಮೂರ್ತಿಗೆ ʼಅಜ್ಜಮ್ಮ ಸಿಂಧು ಆರಾಮಾಗಿ ಇದ್ದಾಳೆ, ಸಿಂಧುಗಾಗಿ ಬೃಂದಾವನಕ್ಕಾಗಲಿ ಯಾವಾಗಲೂ ಯಾರಿಂದಲೂ ಏನೇ ತೊಂದರೆ ಬರಲು ಸಾಧ್ಯವಿಲ್ಲ. ತೊಂದರೆ ಆಗೋದಕ್ಕೆ ನಾನು ಬಿಡೋದು ಇಲ್ಲʼ ಎಂದು ಆತ್ಮವಿಶ್ವಾಸದಿಂದ ಹೇಳುತ್ತಾಳೆ. ತಾನ್ಯಾರು ಎಂದು ಭಾರ್ಗವಿ ಹೇಳುವ ಪುಷ್ಪಾ ʼ36 ಜನರ ಮನೆಯಲ್ಲಿ 37ನೇಯವಳಾಗಿ ಬಂದಿದ್ದು ನಾನೇ, ಅಜ್ಜಮ್ಮನ ಆಲೋಚನೆ, ಉದ್ದೇಶ ಒಳ್ಳೆಯದೇ ಆಗಿದ್ದರೆ ಬೃಂದಾವನಕ್ಕೆ ಯಾರೂ ಏನೂ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಅಲ್ಲಿ ಒಬ್ಬರಿಗೆ ಏನಾದ್ರೂ ಎಲ್ಲರೂ ಜೊತೆಯಾಗಿ ನಿಲ್ತಾರೆ, ಒಬ್ಬರ ಪ್ರಾಣ ಹೋಗುವ ಪರಿಸ್ಥಿತಿ ಎದುರಾದ್ರೆ ಎಲ್ಲರೂ ಪ್ರಾಣ ಕೊಡ್ತಾರೆ, ಅದೇ ಬೃಂದಾವನದ ಶಕ್ತಿ. ಬೃಂದಾವನಕ್ಕೆ ಯಾರೂ ಏನೂ ಮಾಡಲು ಸಾಧ್ಯವಿಲ್ಲʼ ಎಂದು ಭಾರ್ಗವಿ ಭಾಸ್ಕರ್‌ಗೆ ವಾರ್ನಿಂಗ್‌ ಕೊಡ್ತಾಳೆ. ಅಲ್ಲದೇ ಸಿದ್ಧಾರ್ಥ್‌ ಬಂದು ಸಿಂಧುವನ್ನು ಕಾಪಾಡಿದ ವಿಚಾರವನ್ನು ಎಲ್ಲರ ಮುಂದೆ ಹೇಳುತ್ತಾಳೆ. ಇದನ್ನು ಕೇಳಿ ಭಾಸ್ಕರ್‌, ಭಾರ್ಗವಿಗೆ ತಲೆ ಕೆಟ್ಟಂತಾಗುತ್ತದೆ. 

ʼಹೆಣ್ಣುಮಗು ನೀನು ನಿನ್ನಿಂದ ಏನು ಮಾಡೋಕಾಗುತ್ತೆʼ ಎಂದು ಭಾಸ್ಕರ್‌ ಕಿಚಾಯಿಸಿದ್ದಕ್ಕೆ ಸೀಮೆಎಣ್ಣೆ ತಂದು ಸುರಿಯುವ ಪುಷ್ಪಾ ಬೆಂಕಿಪೊಟ್ಟಣ ಕೂಡ ಜೊತೆಯಾಗಿ ತರುತ್ತಾಳೆ. ಈಗ ಸತ್ತರೆ ನಾವೆಲ್ಲಾ ಒಟ್ಟಿಗೆ ಸಾಯೋಣ, ಅಲ್ಲಿ ನಾನು ಅಜ್ಜಮ್ಮ ಸತ್ರೆ ಮನೆಯಲ್ಲಿ 35 ಜನ ಉಳಿತಾರೆ, ಆದ್ರೆ ಬೃಂದಾವನಕ್ಕೆ ತೊಂದರೆ ಮಾಡಲು ಬಯಸುವ ನೀವು ಕೂಡ ಸಾಯ್ತೀರಾ, ಹಾಗಾಗಿ ಎಲ್ಲರೂ ಸಾಯೋಣʼ ಎಂದು ಬೆಂಕಿ ಹಚ್ಚಲು ನೋಡ್ತಾಳೆ. ಇದರಿಂದ ಗಾಬರಿಯಾಗುವ ಭಾಸ್ಕರ ಪುಷ್ಪಾ, ಅಜ್ಜಮ್ಮನ ಮುಂದೆ ಇನ್ನೆಂದು ಹೀಗಾಗುವುದಿಲ್ಲ ಎಂದು ಬೇಡಿಕೊಳ್ಳುತ್ತಾನೆ. ಪುಷ್ಪಾಳ ವರಸೆ ಕಂಡು ಪುಷ್ಪಾ ಅಚ್ಚರಿಯ ಜೊತೆಗೆ ಖುಷಿ ವ್ಯಕ್ತಪಡಿಸಿದ್ರೆ ಭಾರ್ಗವಿ ಶಾಕ್‌ನಲ್ಲಿ ನಿಲ್ಲುತ್ತಾಳೆ.

ಬೃಂದಾವನಕ್ಕೆ ತೊಂದ್ರೆ ಕೊಟ್ರೆ ಇನ್ನೆಂದು ನಾನು ಸುಮ್ಮನಿರೊಲ್ಲ, ಇದು ಕೊನೇ ಎಚ್ಚರಿಕೆ ಅಂದ್ಕೊಳ್ಳಿ, ನೀವು ಬೃಂದಾವನವನ್ನು ಸೋಂಕಲು ಸಾಧ್ಯವಿಲ್ಲ. ಸುಮ್ಮನೆ ನಿಮ್ಮ ಪಾಡಿಗೆ ನೀವು ಇದ್ರೆ ಒಳ್ಳೇದು, ಹಿಂದೆ ನಿಮ್ಮ ನಡುವೆ ಏನಾಗಿದೆ ನಂಗೆ ಗೊತ್ತಿಲ್ಲ, ಆದ್ರೆ ಮುಂದೆ ಏನೂ ನಡಿಬಾರ್ದುʼ ಎಂದು ವಾರ್ನಿಂಗ್‌ ಕೊಡುವ ಪುಷ್ಪಾ ಸುಧಾಮೂರ್ತಿಯನ್ನು ಭಾರ್ಗವಿ ಮನೆಯಿಂದ ಕರೆದುಕೊಂಡು ಹೊರಡುತ್ತಾಳೆ.

ಪುಷ್ಪಾಳ ಬೆದರಿಕೆಗೆ ಹೆದರಿ ಸುಮ್ಮನಾಗಾಳ್ತಾ ಭಾರ್ಗವಿ, ಸಹನಾ ಪ್ರೀತಿಸುತ್ತಿರುವುದು ಸುಧಾಮೂರ್ತಿ ಮೊಮ್ಮಗನನ್ನು ಅವನಿಗೆ ಈಗಾಗಲೇ ಮದುವೆಯಾಗಿದೆ ಎಂದು ತಿಳಿದ್ರೆ ಆಕೆ ಏನು ಮಾಡ್ತಾಳೆ, ಮನೆಯಲ್ಲಿ ಭಾರ್ಗವಿ ವಿಚಾರ ಮಾತಾಡ್ತಾರಾ ಸುಧಾಮೂರ್ತಿ, ಪುಷ್ಪಾ ಈ ಎಲ್ಲವನ್ನೂ ತಿಳಿಯಲು ಮುಂದಿನ ಸಂಚಿಕೆಗಳನ್ನು ನಿರೀಕ್ಷಿಸಿ.

IPL_Entry_Point