ಕನ್ನಡ ಸುದ್ದಿ  /  ಮನರಂಜನೆ  /  Brundavana Serial: ಸಹನಾಗೆ ಬ್ರೈನ್‌ ಟ್ಯೂಮರ್‌ ಎಂದು ಸುಳ್ಳು ಹೇಳುವ ಭಾರ್ಗವಿ, ಆಕಾಶ್‌ನನ್ನು ಟ್ರ್ಯಾಪ್‌ ಮಾಡೇಬಿಟ್ಲಾ?

Brundavana Serial: ಸಹನಾಗೆ ಬ್ರೈನ್‌ ಟ್ಯೂಮರ್‌ ಎಂದು ಸುಳ್ಳು ಹೇಳುವ ಭಾರ್ಗವಿ, ಆಕಾಶ್‌ನನ್ನು ಟ್ರ್ಯಾಪ್‌ ಮಾಡೇಬಿಟ್ಲಾ?

Brindavana Kannada Serial Today Episode April 30th: ʼಬೃಂದಾವನʼ ಧಾರಾವಾಹಿಯ ಮಂಗಳವಾರದ ಎಪಿಸೋಡ್‌ನಲ್ಲಿ ಆಕಾಶ್‌ಗೆ ದಾರಿಯಲ್ಲಿ ಸಿಗುವ ಭಾರ್ಗವಿ ಮಗಳಿಗೆ ಬ್ರೈನ್‌ ಟ್ಯೂಮರ್‌ ಇದೆ ಎಂದು ಸುಳ್ಳು ಹೇಳಿ ನಂಬಿಸುತ್ತಾಳೆ. ಇತ್ತ ಪುಷ್ಪಾ ಮೇಲೆ ಸದಾ ಕೆಂಡ ಕಾರುತ್ತಿದ್ದ ಸತ್ಯಮೂರ್ತಿಗೆ ಅವಳ ನಿಜರೂಪ ಅರ್ಥವಾಗುತ್ತದೆ. ಸುನಾಮಿಗೆ ಗೊಂದಲ ಮೂಡಿಸಿದ ಸಹನಾ ವರ್ತನೆ.

ಸಹನಾಗೆ ಬ್ರೈನ್‌ ಟ್ಯೂಮರ್‌ ಎಂದು ಸುಳ್ಳು ಹೇಳುವ ಭಾರ್ಗವಿ, ಆಕಾಶ್‌ನನ್ನು ಟ್ರ್ಯಾಪ್‌ ಮಾಡೇಬಿಟ್ಲಾ?
ಸಹನಾಗೆ ಬ್ರೈನ್‌ ಟ್ಯೂಮರ್‌ ಎಂದು ಸುಳ್ಳು ಹೇಳುವ ಭಾರ್ಗವಿ, ಆಕಾಶ್‌ನನ್ನು ಟ್ರ್ಯಾಪ್‌ ಮಾಡೇಬಿಟ್ಲಾ?

ಬೃಂದಾವನ ಧಾರಾವಾಹಿಯ ನಿನ್ನೆಯ (ಏಪ್ರಿಲ್‌ 30)ಸಂಚಿಕೆಯಲ್ಲಿ ದಾರಿಯಲ್ಲಿ ಹೋಗುತ್ತಿರುವ ಆಕಾಶ್‌ಗೆ ಎದುರಾಗುವ ಭಾರ್ಗವಿ, ʼನಾನು ನಿನ್ನ ಜೊತೆ ಸ್ವಲ್ಪ ಮಾತನಾಡಬೇಕುʼ ಎಂದು ಮುಗ್ಧೆಯಂತೆ ಕೇಳಿಕೊಳ್ಳುತ್ತಾಳೆ. ʼನಾನು ಎಲ್ಲವನ್ನೂ ನಿನ್ನೆ ಕ್ಲಿಯರ್‌ ಆಗಿ ಮಾತನಾಡಿದ್ದೇನೆ, ನೀವು ಅದನ್ನೆಲ್ಲಾ ಸಹನಾಗೆ ಹೇಳಿದ್ರಿ ಅಲ್ವಾ ಅಂತʼ ಪ್ರಶ್ನೆ ಮಾಡ್ತಾನೆ. ಅದಕ್ಕೆ ಉತ್ತರಿಸುವ ಭಾರ್ಗವಿ ʼಇಲ್ಲ ಹೇಳಿಲ್ಲʼ ಎನ್ನುತ್ತಾಳೆ. ಆಗ ಆಕಾಶ್‌ ʼಯಾಕೆ ಹೇಳಿಲ್ಲ, ಸರಿ ನಾನೇ ಹೋಗಿ ಸಹನಾ ಮುಂದೆ ಎಲ್ಲಾ ವಿಚಾರವನ್ನೂ ಹೇಳ್ತೀನಿ, ಆರಂಭದಲ್ಲೇ ಹೇಳೋದು ಬೆಸ್ಟ್‌, ಇದು ಮುಂದುವರಿದ್ರೆ ಕಷ್ಟʼ ಎಂದು ಹೇಳಿ ಹೊರಡಲು ಸಿದ್ಧನಾಗುತ್ತಾನೆ. ಆಗ ಅವನನ್ನು ತಡೆಯುವ ಭಾರ್ಗವಿ ಮೊಸಳೆ ಕಣ್ಣೀರು ಶುರು ಮಾಡುತ್ತಾಳೆ. ʼನೀನು ಸಹನಾಗೆ ಈ ವಿಚಾರ ಹೇಳಿದ್ರೆ ಇನ್ನಾರು ತಿಂಗಳಲ್ಲಿ ಸಾಯಬೇಕಿದ್ದ ಅವಳು ಇಂದೇ ಸಾಯುತ್ತಾಳೆʼ ಎಂದು ಹೊಸ ವಿಚಾರ ಹೇಳುತ್ತಾಳೆ. ಇದರಿಂದ ಶಾಕ್‌ ಆಗುವ ಆಕಾಶ್‌ ʼಯಾಕೆ ಸಹನಾಗೆ ಏನಾಯ್ತುʼ ಎಂದು ಪ್ರಶ್ನೆ ಮಾಡುತ್ತಾನೆ. ಆಗ ಭಾರ್ಗವಿ ಮೊದಲೇ ಕಟ್ಟಿಕೊಂಡು ಕಟ್ಟುಕಥೆಯನ್ನು ಸತ್ಯ ಎಂಬಂತೆ ಹೇಳಲು ಶುರು ಮಾಡುತ್ತಾಳೆ. ʼಸಹನಾಗೆ ಬ್ರೈನ್‌ ಟ್ಯೂಮರ್‌ ಇದೆ. ಅವಳು ಇನ್ನು ಬದುಕಿದ್ರೆ ಕೇವಲ 6 ತಿಂಗಳು ಮಾತ್ರ ಎಂದು ಡಾಕ್ಟರ್‌ ಹೇಳಿದ್ದಾರೆ. ನನ್ನ ಮಗಳ ಹಣೆಬರಹವೇ ಸರಿಯಿಲ್ಲ, ಅವಳಿಗೆ ಬದುಕುವ ಯೋಗವೂ ಇಲ್ಲ, ಈಗ ಪ್ರೀತಿ ಕೂಡ ಸಿಗುತ್ತಿಲ್ಲ. ಅವಳಿನ್ನು ಬದುಕುವುದೇ 6 ತಿಂಗಳು. ಅಲ್ಲಿಯವರೆಗೆ ನೀವು ಅವಳನ್ನು ಪ್ರೀತಿ ಮಾಡು, ಆಮೇಲೆ ಪ್ರೀತಿ ಮಾಡ್ತೀನಿ ಅಂದ್ರು ಅವಳು ಸಿಗೊಲ್ಲ ಅಂತೆಲ್ಲಾ ಹೇಳಿ ಕಣ್ಣೀರಧಾರೆ ಹರಿಸುತ್ತಾಳೆ.

ಟ್ರೆಂಡಿಂಗ್​ ಸುದ್ದಿ

ಮೊದಲು ಪುಷ್ಪಾಳೇ ತನ್ನ ಜೀವ, ಜೀವನ, ಸರ್ವಸ್ವ ಎಂದ ಆಕಾಶ್‌ ಭಾರ್ಗವಿಯ ಮೊಸಳೆ ಕಣ್ಣೀರಿಗೆ ಸೋಲುತ್ತಾನೆ. ಅವನಿಗೆ ಇನ್ನಷ್ಟು ನಂಬಿಕೆ ಬರಲಿ ಎಂದು ಫೇಕ್‌ ಮೆಡಿಕಲ್‌ ಸರ್ಟಿಫಿಕೇಟ್‌ ಕೂಡ ತೋರಿಸುತ್ತಾಳೆ. ಭಾರ್ಗವಿ ಹೇಳಿದ ಸುಳ್ಳಿನ ಹಿಂದಿನ ಮರ್ಮ ಅರಿಯದ ಆಕಾಶ್‌ ಆಕೆಯ ಬಲೆಯಲ್ಲಿ ಬಿದ್ದೇ ಬಿಡುತ್ತಾನೆ.

ಭಾರ್ಗವಿ ಹೇಳಿದ್ದು ಸುಳ್ಳು ಎಂದು ಅರಿಯುವ ಭಾಸ್ಕರ ಅಕ್ಕಾ ಸಹನಾಗೆ ಬ್ರೈನ್‌ ಟ್ಯೂಮರ್‌ ಇರುವ ವಿಚಾರ ನಂಗ್ಯಾಕೆ ಹೇಳಿಲ್ಲ, ದೇವರು ಅವಳಿಗೆ ಯಾಕಿಂಥ ಶಿಕ್ಷೆ ಕೊಟ್ಟ ಎಂದು ಮರುಗುತ್ತಾನೆ. ಆಗ ತನ್ನ ನಿಜರೂಪಕ್ಕೆ ಬರುವ ಭಾರ್ಗವಿ ತಾನು ಆಡಿದ್ದು ನಾಟಕ, ಸಹನಾಗೆ ಏನೂ ಆಗಿಲ್ಲ. ಇವನು 6 ತಿಂಗಳಲ್ಲಿ ಅವಳ ಪ್ರೀತಿಯಲ್ಲಿ ಬೀಳುತ್ತಾನೆ. ಆಗ ಬೃಂದಾವನದ ಕಥೆ ಏನಾಗುತ್ತದೆ ನೋಡು ಎಂದು ತನ್ನ ದ್ವೇಷದ ಮಾತು ಹೇಳುತ್ತಾಳೆ.

ಪುಷ್ಪಾ ವಿಚಾರದಲ್ಲಿ ಬದಲಾಗುವ ಸತ್ಯಮೂರ್ತಿ

ರಸ್ತೆಯಲ್ಲಿ ಯಾರೋ ಮಹಿಳೆ ಅಡ್ರೆಸ್‌ ಕೇಳಿ ಬಂದಾಗ ಅವರಿಗೆ ಹೆಲ್ಪ್‌ ಮಾಡುವ ಸತ್ಯಮೂರ್ತಿಗೆ ಆಕೆ ಮೋಸ ಮಾಡುತ್ತಾಳೆ. ಈತ ತನ್ನ ಮಾನಭಂಗ ಮಾಡಲು ಬಂದಿದ್ದಾನೆ ಎಂದು ಕೂಗಾಡಿ ಎಲ್ಲರನ್ನೂ ಸೇರಿಸಿ ಸರಿಯಾಗಿ ಹೊಡೆಸುತ್ತಾಳೆ. ಮೈ ತುಂಬಾ ಗಾಯ ಹರಿದ ಬಟ್ಟೆ ಧರಿಸಿ ಮನೆಗೆ ಬರುವ ಸತ್ಯಮೂರ್ತಿಯನ್ನು ನೋಡಿ ಎಲ್ಲರೂ ಗಾಬರಿಯಾಗುತ್ತಾರೆ. ಏನಾಯ್ತು ಎಂದು ಕೇಳಿದಾಗ ವಾಕಿಂಗ್‌ ಹೋದಾಗ ನಾಯಿ ಅಟ್ಟಿಸಿಕೊಂಡು ಬಂದು ಬೇಲಿ ಹಾರಿದೆ, ಆಗ ಬಿದ್ದು ನೋವಾಯ್ತು ಎನ್ನುತ್ತಾರೆ ಸತ್ಯಮೂರ್ತಿ. ಆದರೆ ಮನೆಯವರು ನಂಬುವುದಿಲ್ಲ. ಸತ್ಯಮೂರ್ತಿಗಳ ಹೆಂಡತಿ ಏನಾಯ್ತು ಎಂದು ದಭಾಯಿಸಿ ಕೇಳಿದಾಗ ಇರುವ ಸತ್ಯವನ್ನು ಹೇಳುತ್ತಾರೆ ಸತ್ಯಮೂರ್ತಿ. ಆಗ ಮನೆಯವರೆಲ್ಲರೂ ಬಾಯಿಗೆ ಬಂದಿದ್ದು ಮಾತನಾಡುತ್ತಾರೆ. ಎಲ್ಲರೂ ಸತ್ಯಮೂರ್ತಿಗೆ ಬೈದು ನೀವು ಮಾಡಿದ್ದು ಸರಿಯಲ್ಲ ಎಂದು ಛೀಮಾರಿ ಹಾಕಿದ್ರೆ ಪುಷ್ಪಾ ಮಾತ್ರ ನಾನು ನಿಮ್ಮನ್ನು ನಂಬುತ್ತೇನೆ ದೊಡ್ಡಪ್ಪ ಎಂದು ಹೇಳಿ, ಮನೆಯವರಿಗೆ ಅವರು ತಪ್ಪು ಮಾಡಿಲ್ಲ ಎಂದು ಅರಿವು ಮೂಡಿಸುತ್ತಾಳೆ.

ಕೈ ಹಿಡಿದ ಹೆಂಡತಿ ಕೂಡ ತನ್ನನ್ನು ನಂಬದೇ ಇದ್ದಾಗ ಪುಷ್ಪಾ ತನ್ನ ಪರ ನಿಂತಿದ್ದು ನೋಡಿ ಕಣ್ಣೀರು ಸುರಿಸುವ ಸತ್ಯಮೂರ್ತಿಗೆ ಪುಷ್ಪಾಳ ದೊಡ್ಡತನ ಎಂಥದ್ದು ಎಂಬುದು ಅರಿವಾಗುತ್ತದೆ. ಪುಷ್ಪಾಳ ಮುಂದೆ ಕೈ ಮುಗಿದು ನಿಲ್ಲುವ ಸತ್ಯಮೂರ್ತಿ ತಾನು ಇಷ್ಟುದಿನ ನೋವು ನೀಡಿದ್ದಕ್ಕೆ ಕ್ಷಮೆ ಕೇಳುತ್ತಾರೆ.

ಸುನಾಮಿಗೆ ಗೊಂದಲದ ತಂದ ಸಹನಾ ವರ್ತನೆ

ಆಕಾಶ್‌ ಸಹನಾಗೆ ಮನೆಗೆ ಹೋಗಿ ಎಲ್ಲವನ್ನೂ ಹೇಳಿ ಬಂದ ವಿಚಾರ ತಿಳಿದಿರುವ ಸುನಾಮಿ ಸಹನಾಳನ್ನು ಭೇಟಿ ಮಾಡಿದಾಗ ಆಕೆ ಸಹಜವಾಗಿಯೇ ಇರುವುದು ನೋಡಿ ಗೊಂದಲಕ್ಕೆ ಒಳಗಾಗುತ್ತಾನೆ. ಆಕಾಶ್‌ಗೆ ಮದುವೆಯಾಗಿರುವ ವಿಚಾರವನ್ನು ಇಷ್ಟು ಸಲಿಸಾಗಿ ತೆಗೆದುಕೊಂಡ ಸಹನಾ ಬಗ್ಗೆ ಸುನಾಮಿಗೆ ಅನುಮಾನ ಮೂಡುತ್ತದೆ. ಆದರೆ ಭಾರ್ಗವಿಯ ಮೋಸ, ಸಹನಾಗೆ ವಿಚಾರ ಹೇಳದೇ ಇರುವುದು ಇದ್ಯಾವುದೂ ಸುನಾಮಿಗೆ ತಿಳಿದಿರುವುದಿಲ್ಲ.

ಆಕಾಶ್‌ ನಿಜಕ್ಕೂ ಭಾರ್ಗವಿಯ ಮೋಸದಾಟಕ್ಕೆ ಬಲಿಯಾಗ್ತಾನಾ, ಸತ್ಯ ತಿಳಿಯುವ ಪ್ರಯತ್ನ ಮಾಡ್ತಾನಾ, ಇಡೀ ಮನೆಯವರ ಒಳಿತು ಬಯಸುವ ಪುಷ್ಪಾ ಬಾಳು ಗೋಳಾಗುವುದಾ ಈ ಎಲ್ಲವನ್ನೂ ತಿಳಿಯಲು ಮುಂದಿನ ಸಂಚಿಕೆಯನ್ನು ನಿರೀಕ್ಷಿಸಿ.

IPL_Entry_Point