ಕನ್ನಡ ಸುದ್ದಿ  /  ಮನರಂಜನೆ  /  Brundavana Serial: ಭಾರ್ಗವಿಯ ಮೋಸದ ಬಲೆಗೆ ಬಿದ್ದ ಆಕಾಶ್‌; ಸಹನಾಗೆ ಪ್ರೀತಿ ಸಕ್ಸಸ್‌ ಆದ ಖುಷಿ, ಸುನಾಮಿಗೆ ಫುಲ್‌ ಕನ್‌ಫ್ಯೂಷನ್‌

Brundavana Serial: ಭಾರ್ಗವಿಯ ಮೋಸದ ಬಲೆಗೆ ಬಿದ್ದ ಆಕಾಶ್‌; ಸಹನಾಗೆ ಪ್ರೀತಿ ಸಕ್ಸಸ್‌ ಆದ ಖುಷಿ, ಸುನಾಮಿಗೆ ಫುಲ್‌ ಕನ್‌ಫ್ಯೂಷನ್‌

Brindavana Kannada Serial Today Episode May 1st: ʼಬೃಂದಾವನʼ ಧಾರಾವಾಹಿಯ ಬುಧವಾರದ ಎಪಿಸೋಡ್‌ನಲ್ಲಿ ಭಾರ್ಗವಿ ಹೇಳಿದ ಸುಳ್ಳಿನ ಕೋಟೆಯಲ್ಲಿ ಬಂಧಿಯಾಗಿದ್ದಾನೆ ಆಕಾಶ್‌. ಮನೆಯಲ್ಲಿ ಹಾಲು ಒಡೆದು ಹೋಗಿ ಪುಷ್ಪಾ ಮನದಲ್ಲಿ ಆತಂಕ. ಸಹನಾ-ಆಕಾಶ್‌ ವರ್ತನೆ ಕಂಡು ಸುನಾಮಿಗಿಲ್ಲ ನೆಮ್ಮದಿ.

ಭಾರ್ಗವಿಯ ಮೋಸದ ಬಲೆಗೆ ಬಿದ್ದ ಆಕಾಶ್‌
ಭಾರ್ಗವಿಯ ಮೋಸದ ಬಲೆಗೆ ಬಿದ್ದ ಆಕಾಶ್‌

ಬೃಂದಾವನ ಧಾರಾವಾಹಿಯ ನಿನ್ನೆಯ (ಮೇ 1)ಸಂಚಿಕೆಯಲ್ಲಿ ಸಹನಾಗೆ ಬ್ರೈನ್‌ ಟ್ಯೂಮರ್‌ ಇದೆ, ಅವಳಿನ್ನು ಬದುಕೋದೇ ಆರು ತಿಂಗಳು, ಹಾಗಾಗಿ ನೀನು ಅಲ್ಲಿಯವರೆಗೆ ಅವಳ ಪ್ರೇಮಿಯಾಗಿರುವ ಎಂದು ಮೊಸಳೆ ಕಣ್ಣೀರು ಸುರಿಸಿದ್ದ, ಭಾರ್ಗವಿಯ ನಾಟಕವನ್ನು ನಂಬುತ್ತಾನೆ ಆಕಾಶ್‌. ಇತ್ತ ಸಹನಾ, ಇತ್ತ ಪುಷ್ಪಾ ಇಬ್ಬರ ನಡುವೆ ಯಾರನ್ನು ಆಯ್ಕೆ ಮಾಡಿಕೊಳ್ಳುವುದು ಏನು ಎಂದು ತಿಳಿಯದ ಆಕಾಶ್‌ ಒಂದು ಕಡೆ ನಿಂತು ಒಬ್ಬನೇ ಯೋಚಿಸುತ್ತಿರುತ್ತಾನೆ. ಸಹನಾಳನ್ನು ಇಷ್ಟಪಟ್ಟಂತೆ ನಾಟಕ ಮಾಡಿದ್ರೂ ಇದ್ರಿಂದ ಪುಷ್ಪಾಳಿಗೆ ಮೋಸ ಮಾಡಿದ ಹಾಗೆ ಆಗುತ್ತದೆ, ಇನ್ನೂ ಸಹನಾ ಬದುಕೋದೇ 6 ತಿಂಗಳು, ಅವಳಿಗೆ ನೋವು ಕೊಡುವುದು ಹೇಗೆ ಚಿಂತಿಸುತ್ತಾ ನಿಂತಿರುತ್ತಾನೆ. ಆಗ ಪುಷ್ಪಾ ಕಾಲ್‌ ಮಾಡುತ್ತಾಳೆ. ಕಳೆದೆರಡು ದಿನಗಳಿಂದ ಖುಷಿಯಿಂದ ಮಾತನಾಡುತ್ತಿದ್ದ ಆಕಾಶ್‌ ಇಂದು ಪುಷ್ಪಾಳ ಬಳಿ ನೀರಸವಾಗಿ ಮಾತನಾಡುತ್ತಾನೆ. ಪುಷ್ಪಾಳ ಏನಾಯ್ತು ಎಂದು ಕೇಳಿದರೂ ಉತ್ತರ ಹೇಳುವುದಿಲ್ಲ. ಎಂದಿನಂತೆ ಪುಷ್ಪಾ ಆಕಾಶ್‌ಗೆ ಬುದ್ಧಿಮಾತು ಹೇಳುತ್ತಾಳೆ. ಯಾವುದೇ ಸಮಸ್ಯೆಗೂ ಪರಿಹಾರ ಎಂಬುದು ಇದ್ದೇ ಇರುತ್ತದೆ, ಆತುರದಲ್ಲಿ ಯಾವ ನಿರ್ಧಾರವನ್ನು ತೆಗೆದುಕೊಳ್ಳಬೇಡಿ ಎಂದು ತಿಳುವಳಿಕೆ ಹೇಳುತ್ತಾಳೆ.

ಟ್ರೆಂಡಿಂಗ್​ ಸುದ್ದಿ

ಹಾಲು ಒಡೆದಿದ್ದಕ್ಕೆ ಪುಷ್ಪಾಳಿಗೆ ಆತಂಕ

ಅಡುಗೆಮನೆಯಲ್ಲಿ ಕಾಯಿಸಲು ಇಟ್ಟ ಹಾಲು ಒಡೆದಿದ್ದು ನೋಡಿ ಪುಷ್ಪಾಳಿಗೆ ಆತಂಕವಾಗುತ್ತದೆ. ಏನೋ ಕೇಡು ಸಂಭವಿಸಬಹುದು ಎಂದು ಅವಳ ಮನಸ್ಸು ಸೂಚನೆ ನೀಡುತ್ತದೆ. ಅವಳ ಗಾಬರಿಯನ್ನು ನೋಡಿದ ದೊಡ್ಡಮ್ಮ ಏನಾಯ್ತು ಎಂದು ಪ್ರಶ್ನಿಸುತ್ತಾಳೆ. ಆಗ ಹಾಲು ಒಡೆದಿರುವುದು, ಅದು ಅಶುಭದ ಸೂಚನೆ ಎಂದು ಪುಷ್ಪಾ ಆತಂಕ ವ್ಯಕ್ತಪಡಿಸುತ್ತಾಳೆ. ಆಗ ಅವಳನ್ನು ಸಮಾಧಾನ ಮಾಡುತ್ತಾರೆ ದೊಡ್ಡಮ್ಮ ಹಾಗೂ ಅನುಪಮಾ. ʼಬೇಸಿಗೆಯಲ್ಲಿ ಹಾಲು ಒಡೆಯುವುದು ಸಹಜ. ಅದರಿಂದ ಬೇಕಾದಷ್ಟು ಸ್ವೀಟ್‌ ಮಾಡಬಹುದು. ನೀನು ಒಡೆದ ಹಾಲಿನಿಂದ ಸ್ವೀಟ್‌ ಮಾಡಿ ಎಲ್ಲರಿಗೂ ಹಂಚು. ಇದರಿಂದ ನಿನಗೂ ನೆಮ್ಮದಿ ಎಂದು ಸಲಹೆ ನೀಡುತ್ತಾರೆ. ಸತ್ಯಮೂರ್ತಿ ಕೂಡ ಪುಷ್ಪಾಳಿಗೆ ಧೈರ್ಯ ಹೇಳುತ್ತಾರೆ.

ಆಕಾಶ್‌ ತಾನು ಬೀಸಿದ ಬಲೆಗೆ ಬಿದ್ದ ಸಂಭ್ರಮದಲ್ಲಿ ಭಾರ್ಗವಿ

ಆಕಾಶ್‌ಗೆ ಸುಳ್ಳು ಹೇಳಿ ನಂಬಿಸಿದ್ದ ಭಾರ್ಗವಿ ಅವನು ನನ್ನ ಬಲೆಗೆ ಬಿದ್ದೇ ಬೀಳುತ್ತಾನೆ, ಅವನ ಮೂಲಕ 6 ತಿಂಗಳಲ್ಲಿ ಬೃಂದಾವನದ ನೆಮ್ಮದಿ ಕೆಡಿಸುತ್ತೇನೆ. ತಾನು ಅನುಭವಿಸಿದ ನೋವು ಅನುಮಾನವನ್ನು ಬೃಂದಾವನದವರೂ ಅನುಭವಿಸಲೇಬೇಕು ಎಂದು ಭಾಸ್ಕರನ ಬಳಿ ಹೇಳುತ್ತಾಳೆ ಭಾರ್ಗವಿ. ಇತ್ತ ಕಾಲೇಜಿನಲ್ಲಿ ಸಹನಾ ಮುಂದೆ ಆಕಾಶ್‌ ಸತ್ಯ ಹೇಳಿಲ್ಲ ಎಂಬುದನ್ನು ತನ್ನ ಚೇಲಾಗಳಿಂದ ಕೇಳಿ ತಿಳಿದುಕೊಳ್ಳುತ್ತಾನೆ.

ಕಾಲೇಜಿನಲ್ಲಿ ಎಲ್ಲೆದುರು ಆಕಾಶ್‌ನನ್ನು ತಬ್ಬಿಕೊಳ್ಳುವ ಸಹನಾ

ಆಕಾಶ್‌ ತನ್ನ ಪ್ರೀತಿಯನ್ನು ಒಪ್ಪಿಕೊಂಡಿದ್ದಾನೆ ಎಂದೇ ನಂಬಿರುವ ಸಹನಾ ಆಕಾಶದಲ್ಲಿ ಹಾರಾಡುತ್ತಿರುತ್ತಾಳೆ. ಆಕಾಶ್‌ ಕಾಲೇಜಿಗೆ ಬರುವುದೇ ತಡ ಅವನ ಬಳಿಗೆ ಓಡಿ ಹೋಗುವ ಆಕೆ ಎಲ್ಲರೆದುರು ಅವನನ್ನು ತಬ್ಬಿಕೊಳ್ಳುತ್ತಾಳೆ. ಆಕಾಶ್‌ ಏನು ಮಾಡಬೇಕು ಎಂದು ತಿಳಿಯದೇ ಸುಮ್ಮನೆ ನಿಂತಿರುತ್ತಾನೆ. ಇದನ್ನೆಲ್ಲಾ ನೋಡಿದ ಸುನಾಮಿಗೆ ಆಕಾಶ್‌ ಹೀಗ್ಯಾಕೆ ಮಾಡುತ್ತಿದ್ದಾನೆ, ಇವನು ತನಗೆ ಮದುವೆಯಾಗಿರುವ ವಿಚಾರವನ್ನು ಸಹನಾ ಮನೆಯಲ್ಲಿ ಹೇಳಿದ ಮೇಲೂ ಅವರ ವರ್ತನೆ ಹೀಗೇಕಿದೆ ಎಂದು ತಿಳಿಯದೇ ಗೊಂದಲಕ್ಕೆ ಸಿಲುಕುತ್ತಾನೆ. ಅಲ್ಲದೇ ಆಕಾಶ್‌ನನ್ನು ಬದಿಗೆ ಎಳೆದುಕೊಂಡು ಹೋಗಿ ಹೀಗ್ಯಾಕೆ ಮಾಡುತ್ತಿದ್ದೀರಾ ಎಂದು ಪ್ರಶ್ನೆ ಮಾಡುತ್ತಾನೆ. ಇತ್ತ ಪುಷ್ಪಾಗೆ ಕಾಲ್‌ ಮಾಡುವ ಸಹನಾ ಆಕಾಶ್‌ನನ್ನು ತಬ್ಬಿಕೊಂಡಿದ್ದು ಸೇರಿ ಕಾಲೇಜಿನಲ್ಲಿ ನಡೆದ ಘಟನೆಗಳ ವಿವರವನ್ನು ವರದಿ ಒಪ್ಪಿಸುತ್ತಾಳೆ.

ಡಲ್‌ ಆಗಿ ಮನೆಗೆ ಬರುವ ಆಕಾಶ್‌

ಕಾಲೇಜಿನಿಂದ ಲವಲವಿಕೆಯಿಂದ ಮನೆಗೆ ಬರುವ ಆಕಾಶ್‌ ಇಂದು ಸಖತ್‌ ಡಲ್‌ ಆಗಿರುತ್ತಾನೆ. ಯಾರನ್ನೂ ಮಾತನಾಡಿಸದೇ ನೇರವಾಗಿ ರೂವಿಗೆ ಹೋಗುತ್ತಾನೆ. ಇದನ್ನು ನೋಡಿದ ಪುಷ್ಪಾಳಿಗೆ ಆಕಾಶ್‌ ಬೇಸರದಲ್ಲಿರುವುದು, ಅವನ ಮನಸ್ಸಿನಲ್ಲಿ ಯಾವುದೋ ವಿಚಾರ ಕೊರೆಯುತ್ತಿರುವುದು ಅರ್ಥವಾಗುತ್ತದೆ. ಅವಳು ಆಕಾಶ್‌ ಬಳಿ ಏನಾಯ್ತು ಎಂದು ಕೇಳಿದರೂ ಅವನು ಹೇಳುವುದಿಲ್ಲ.

ಸಹನಾಗೆ ತಾಯಿ ಆಡಿದ ನಾಟಕ ತಿಳಿಯುತ್ತಾ, ಆಕಾಶ್‌ ನಿಜಕ್ಕೂ ಸಹನಾ ಜೊತೆ ಪ್ರೇಮಿಯಂತೆ ಇರುತ್ತಾನಾ, ಭಾರ್ಗವಿ ಅಂದುಕೊಂಡ ಕೆಲಸ ಸಾಧಿಸುತ್ತಾಳಾ ಈ ಎಲ್ಲವನ್ನೂ ಮುಂದಿನ ಸಂಚಿಕೆಗಳಲ್ಲಿ ನಿರೀಕ್ಷಿಸಿ.

IPL_Entry_Point